Tirupati Temple: ಟಿಟಿಡಿ ಆಸ್ತಿ ಸಂರಕ್ಷಣೆಗೆ ಸಮಿತಿ ರಚನೆ: ಆಡಳಿತ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tirupati Temple: ಟಿಟಿಡಿ ಆಸ್ತಿ ಸಂರಕ್ಷಣೆಗೆ ಸಮಿತಿ ರಚನೆ: ಆಡಳಿತ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ

Tirupati Temple: ಟಿಟಿಡಿ ಆಸ್ತಿ ಸಂರಕ್ಷಣೆಗೆ ಸಮಿತಿ ರಚನೆ: ಆಡಳಿತ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ

ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಆಡಳಿತ ಮಂಡಳಿಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ ಟಿಟಿಡಿ ಆಸ್ತಿ ಸಂರಕ್ಷಣೆಗೆ ಸಮಿತಿ ರಚನೆ ಕೂಡ ಒಂದು.

ಟಿಟಿಡಿ ಆಸ್ತಿ ಸಂರಕ್ಷಣೆಗೆ ಸಮಿತಿ ರಚನೆ: ಆಡಳಿತ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ
ಟಿಟಿಡಿ ಆಸ್ತಿ ಸಂರಕ್ಷಣೆಗೆ ಸಮಿತಿ ರಚನೆ: ಆಡಳಿತ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಸಭೆ ಇತ್ತೀಚೆಗೆ ನಡೆದಿದ್ದು, ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಟಿಟಿಡಿ ಉದ್ಯೋಗಗಳಿಗೆ ಈ ಬಾರಿ ಬಜೆಟ್‌ನಲ್ಲಿ 5 ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಮೀಸಲಿಡಲಾಗಿದೆ. ಅಲ್ಲದೇ ಟಿಟಿಡಿ ಉದ್ಯೋಗಿಗಳಿಗೆ ಹಲವು ಅನುಕೂಲಕರ ಯೋಜನೆಗಳನ್ನು ಕೂಡ ಜಾರಿಗೆ ತರಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನವು ಪ್ರತಿ ಮೂರು ತಿಂಗಳಿಗೊಮ್ಮೆ ಖಾಯಂ ಉದ್ಯೋಗಿಗಳಿಗೆ ಸುಪಥ ದರ್ಶನವನ್ನು ಒದಗಿಸಲಿದೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹೇಳಿದ್ದಾರೆ. ಅಲ್ಲದೇ ಉದ್ಯೋಗಿಗಳಿಗೆ ಟಿಕೆಟ್ ನೀಡಿ ಶ್ರೀವಾರಿ ದರ್ಶನ ಒದಗಿಸುವುದಾಗಿ ಅವರು ಹೇಳಿದ್ದಾರೆ. ತಿರುಮಲದಲ್ಲಿ ಪರವಾನಗಿ ಇಲ್ಲದ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಕೂಡ ಅವರು ಸಭೆಯಲ್ಲಿ ಹೇಳಿದ್ದಾರೆ. ತಿತಿಡೆ ಟ್ರಸ್ಟಿಗಳ ಮಂಡಳಿಯ ಸಭೆಯ ನಂತರ ಇಒ ಶ್ಯಾಮಲಾ ರಾವ್ ಅವರ ಜೊತೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಬಿ.ಆರ್.ನಾಯ್ಡು ಈ ವಿಚಾರಗಳನ್ನು ತಿಳಿಸಿದರು. ಆಡಳಿತ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಅವರು ವಿವರಣೆ ನೀಡಿದರು.

ಟಿಟಿಡಿ ಆಡಳಿತ ಮಂಡಳಿಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ‌

  • ಬೇರೆ ಬೇರೆ ದೇಶ, ರಾಜ್ಯಗಳಲ್ಲಿ ಟಿಟಿಡಿ ದೇವಾಲಯ ನಿರ್ಮಾಣಕ್ಕೆ ವಿಶೇಷ ಟ್ರಸ್ಟ್
  • ಟಿಟಿಡಿ ಆಸ್ತಿಗಳ ಸಂರಕ್ಷಣೆಗೆ ವಿಶೇಷ ಟ್ರಸ್ಟ್‌
  • ಟಿಟಿಡಿಗೆ ಸೇರಿದ ಜಮೀನುಗಳ ಕಾನೂನು ವಿವಾದಗಳ ಪರಿಹಾರಕ್ಕೆ ವಿಶೇಷ ಕ್ರಮ
  • ಟಿಟಿಡಿಯಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರ ನೌಕರರನ್ನು ವಜಾಗೊಳಿಸುವ ಬಗ್ಗೆ ನಿರ್ಣಯ
  • ಮುಂದಿನ ವರ್ಷದಲ್ಲಿ ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ ಶ್ರೀವಾರಿ ದೇವಾಲಯಗಳ ನಿರ್ಮಾಣಕ್ಕಾಗಿ ತೆಗೆದುಕೊಳ್ಳಬೇಕಾದ ವಿಶೇಷ ಕ್ರಮಗಳು

ಇದನ್ನೂ ಓದಿ: Tirumala Darshana Tickets: ತಿರುಮಲ ಭಕ್ತರಿಗೆ ಇಲ್ಲಿದೆ ಮುಖ್ಯ ಮಾಹಿತಿ; ಮೇ ತಿಂಗಳ ದರ್ಶನ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ

  • ಹಳ್ಳಿಗಳಲ್ಲಿ ಸ್ಥಗಿತಗೊಂಡಿರುವ ದೇವಾಲಯಗಳ ನಿರ್ಮಾಣಕ್ಕೆ ಆರ್ಥಿಕ ನೆರವು
  • ಶ್ರೀನಿವಾಸ ಸೇವಾ ಸಮಿತಿಯ ಹೆಸರಿನಲ್ಲಿ ಭಗವಂತನ ಕೈಂಕರ್ಯಗಳಿಗೆ ಸಲಕರಣೆಗಳ ಪೂರೈಕೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆಗೆ ಆದೇಶ
  • ಟಿಟಿಡಿ ಬೇರುಗಳನ್ನು ಹೊಂದಿರುವ ವಿವಿಧ ಪ್ರದೇಶಗಳಲ್ಲಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ನಿರ್ಣಯ
  • ತಿರುಮಲದಲ್ಲಿ ಅನಧಿಕೃತ ವ್ಯಾಪಾರಿಗಳನ್ನು ತೆಗೆದುಹಾಕಲು ಸೂಚನೆ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಸೇರಿ ಸಮಿತಿ ರಚನೆ
  • ವೃದ್ಧರು ಮತ್ತು ಅಂಗವಿಕಲರಿಗೆ ದರ್ಶನ ಟಿಕೆಟ್‌ಗಳ ಆಫ್‌ಲೈನ್ ಹಂಚಿಕೆ. ಹಿಂದಿನ ನೀತಿಯನ್ನು ಪ್ರಾಯೋಗಿಕ ಆಧಾರದ ಮೇಲೆ ಜಾರಿಗೆ ತರಲು ನಿರ್ಧಾರ.
  • 5,258.68 ಕೋಟಿ ಬಜೆಟ್ ಅನುಮೋದನೆ
  • 772 ಕೋಟಿ ರೂ.ಗಳಲ್ಲಿ ಕೊಠಡಿಗಳನ್ನು ಆಧುನೀಕರಿಸಲು ನಿರ್ಧಾರ.

ಇದನ್ನೂ ಓದಿ: Tirupati Temple: ಪ್ರತಿ ರಾಜ್ಯದಲ್ಲಿ ತಿರುಪತಿ ಬಾಲಾಜಿ ದೇಗುಲ, ಯಾವ್ಯಾವ ರಾಜ್ಯಗಳಲ್ಲಿ ಟಿಟಿಡಿ ಯೋಜನೆ; ವಿವರ ಇಲ್ಲಿದೆ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.