ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಗನ್​ಮೋಹನ್ ರೆಡ್ಡಿಗೆ ಭಾರಿ ಮುಖಭಂಗ, ಟಿಡಿಪಿ-ಜೆಎಸ್​ಪಿ ಮೈತ್ರಿಕೂಟ ಜಯಭೇರಿ; ಆಂಧ್ರ ಸಿಎಂ ಗಾದಿಗೆ ಚಂದ್ರಬಾಬು ನಾಯ್ಡು

ಜಗನ್​ಮೋಹನ್ ರೆಡ್ಡಿಗೆ ಭಾರಿ ಮುಖಭಂಗ, ಟಿಡಿಪಿ-ಜೆಎಸ್​ಪಿ ಮೈತ್ರಿಕೂಟ ಜಯಭೇರಿ; ಆಂಧ್ರ ಸಿಎಂ ಗಾದಿಗೆ ಚಂದ್ರಬಾಬು ನಾಯ್ಡು

Andhra Pradesh Election Results: ಆಂಧ್ರ ಪ್ರದೇಶದಲ್ಲಿ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಯಲ್ಲೂ ಟಿಡಿಪಿ ಮತ್ತು ಜೆಎಸ್ಪಿ ಮೈತ್ರಿಕೂಟವೇ ಗೆದ್ದು ಬೀಗಿದೆ. ಚಂದ್ರಬಾಬು ನಾಯ್ಡು ಮತ್ತೊಮ್ಮೆ ಮುಖ್ಯಮಂತ್ರಿ ಆಗಲು ಸಜ್ಜಾಗಿದ್ದಾರೆ.

ಜಗನ್​ಮೋಹನ್ ರೆಡ್ಡಿಗೆ ಭಾರಿ ಮುಖಭಂಗ, ಟಿಡಿಪಿ-ಜೆಎಸ್​ಪಿ ಮೈತ್ರಿಕೂಟ ಜಯಭೇರಿ; ಆಂಧ್ರ ಸಿಎಂ ಗಾದಿಗೆ ಚಂದ್ರಬಾಬು ನಾಯ್ಡು
ಜಗನ್​ಮೋಹನ್ ರೆಡ್ಡಿಗೆ ಭಾರಿ ಮುಖಭಂಗ, ಟಿಡಿಪಿ-ಜೆಎಸ್​ಪಿ ಮೈತ್ರಿಕೂಟ ಜಯಭೇರಿ; ಆಂಧ್ರ ಸಿಎಂ ಗಾದಿಗೆ ಚಂದ್ರಬಾಬು ನಾಯ್ಡು

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ಜನಸೇನಾ ಪಕ್ಷ (ಜೆಎಸ್‌ಪಿ) ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಟಿಡಿಪಿ ಮತ್ತು ಜೆಎಸ್​ಪಿ ಅಬ್ಬರಕ್ಕೆ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್ ಕೊಚ್ಚಿ ಹೋಗಿದೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಜೂನ್ 9ರಂದು 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ಆಂಧ್ರ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಟಿಡಿಪಿ 130+ ಸ್ಥಾನ ಮತ್ತು ಜೆಎಸ್​ಪಿ 20, ವೈಸ್​ಆರ್​​ಸಿಪಿ ಕೇವಲ 16 ಸೀಟ್​​ಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಫಲಿತಾಂಶ ಬಹುತೇಕ ಅಂತಿಮಗೊಂಡಿದ್ದು, ಇದೇ ಅಂಕಿ-ಸಂಖ್ಯೆಗಳು ಖಚಿತ ಎಂದು ಹೇಳಲಾಗುತ್ತಿದೆ. 175 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಟಿಡಿಪಿ ನೇತೃತ್ವದ ಮೈತ್ರಿಕೂಟವು 161 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಕೆಲವು ಸಮೀಕ್ಷೆಗಳು ಹೇಳಿದ್ದವು. ಇಲ್ಲಿ ಮ್ಯಾಜಿಕ್ ನಂಬರ್​ 88.

ಕಳೆದ ಬಾರಿಯ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಜಗನ್​ಮೋಹನ್ ರೆಡ್ಡಿ ನೇತೃತ್ವದ ವೈಎಸ್​ಆರ್​ಸಿಪಿ 151 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ತೆಲುಗು ದೇಶಂ ಪಾರ್ಟಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಾರ್ಟಿ 1ರಲ್ಲಿ ಗೆದ್ದಿತ್ತು. ಜಗನ್​​ ಪಕ್ಷವನ್ನು ಸೋಲಿಸಲೇಬೇಕೆಂಬ ಹಠದಲ್ಲಿ ಈ ಬಾರಿ ಟಿಡಿಪಿ ಮತ್ತು ಜೆಎಸ್​ಪಿ ಮೈತ್ರಿಯಾಗಿ ಕಣಕ್ಕಿಳಿದಿವೆ.

ಆಂಧ್ರ ಪ್ರದೇಶದಲ್ಲಿ ಟಿಡಿಪಿ), ಬಿಜೆಪಿ ಮತ್ತು ಜೆಎಸ್‌ಪಿ ಮೈತ್ರಿಕೂಟ ಕೇವಲ ವಿಧಾನಸಭೆ ಮಾತ್ರವಲ್ಲ, ಲೋಕಸಭೆ ಚುನಾವಣೆಯಲ್ಲೂ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲುಣಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ದಾಖಲೆಯ 22 ಸಂಸದ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೀಗ ಈ ಸಲ 3 ಸ್ಥಾನಗಳಲ್ಲಷ್ಟೇ ಗೆದ್ದಿದೆ.

 

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಅಂಕಿ- ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಟಿ20 ವರ್ಲ್ಡ್‌ಕಪ್ 2024