ಇಸ್ರೋದಿಂದ ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 320 ಜಾಬ್‌ಗೆ ಅರ್ಹತೆ, ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಸ್ರೋದಿಂದ ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 320 ಜಾಬ್‌ಗೆ ಅರ್ಹತೆ, ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ

ಇಸ್ರೋದಿಂದ ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 320 ಜಾಬ್‌ಗೆ ಅರ್ಹತೆ, ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ

ಇಸ್ರೋದ ಕೇಂದ್ರೀಕೃತ ನೇಮಕಾತಿ ಮಂಡಳಿಯು 320 ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಆಯ್ಕೆ ಪ್ರಕ್ರಿಯೆ ಸೇರಿ ಇತರ ವಿವರಗಳು ಇಲ್ಲಿದೆ.

ಇಸ್ರೋದಿಂದ ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ (ಸಾಂಕೇತಿಕ ಚಿತ್ರ)
ಇಸ್ರೋದಿಂದ ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ (ಸಾಂಕೇತಿಕ ಚಿತ್ರ) (REUTERS)

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಕೇಂದ್ರೀಕೃತ ನೇಮಕಾತಿ ಮಂಡಳಿ (ಇಸ್ರೋ-ಐಸಿಆರ್‌ಬಿ) ವಿಜ್ಞಾನಿ / ಎಂಜಿನಿಯರ್ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಇಸ್ರೋದ ಅಧಿಕೃತ ವೆಬ್‌ಸೈಟ್ isro.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆ ಮೂಲಕ ಸಂಸ್ಥೆಯಲ್ಲಿ 320 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು 2025ರ ಜೂನ್ 16 ಕೊನೆಯ ದಿನ. ಅರ್ಹತಾ ಮಾನದಂಡ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳು ಇಲ್ಲಿವೆ.

ಖಾಲಿ ಹುದ್ದೆಗಳ ವಿವರ

1. ಸೈಂಟಿಸ್ಟ್/ಎಂಜಿನಿಯರ್ 'ಎಸ್‌ಸಿ' (ಎಲೆಕ್ಟ್ರಾನಿಕ್ಸ್): 113 ಹುದ್ದೆಗಳು

2. ಸೈಂಟಿಸ್ಟ್/ಎಂಜಿನಿಯರ್ 'ಎಸ್‌ಸಿ' (ಮೆಕ್ಯಾನಿಕಲ್): 160 ಹುದ್ದೆಗಳು

3. ಸೈಂಟಿಸ್ಟ್/ಎಂಜಿನಿಯರ್ 'ಎಸ್‌ಸಿ' (ಕಂಪ್ಯೂಟರ್ ಸೈನ್ಸ್): 44 ಹುದ್ದೆಗಳು

4. ಸೈಂಟಿಸ್ಟ್/ಎಂಜಿನಿಯರ್ 'ಎಸ್‌ಸಿ' (ಎಲೆಕ್ಟ್ರಾನಿಕ್ಸ್)- ಪಿಆರ್‌ಎಲ್: 2 ಹುದ್ದೆಗಳು

5. ಸೈಂಟಿಸ್ಟ್/ಎಂಜಿನಿಯರ್ 'ಎಸ್‌ಸಿ' (ಕಂಪ್ಯೂಟರ್ ಸೈನ್ಸ್) -ಪಿಆರ್‌ಎಲ್: 1 ಹುದ್ದೆ

ಅರ್ಹತಾ ಮಾನದಂಡಗಳು

ವಿಶ್ವವಿದ್ಯಾಲಯವು ಸೂಚಿಸಿದ ಕೋರ್ಸ್‌ನ ನಿಗದಿತ ಅವಧಿಯೊಳಗೆ ಪದವಿ ಪೂರ್ಣಗೊಳಿಸಿರಬೇಕು. ಅಂತಿಮ ಪದವಿ 31.08.2025ರೊಳಗೆ ಮುಗಿಯುವಂತಿದ್ದರೆ, 2024-25ರ ಶೈಕ್ಷಣಿಕ ವರ್ಷದಲ್ಲಿ ಮೇಲಿನ ಕೋರ್ಸ್ ಅನ್ನು ಪೂರ್ಣಗೊಳಿಸಲಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಒಟ್ಟು 65 ಶೇ. ಅಂಕಗಳನ್ನು ಪಡೆಯಬೇಕು. ಎಲ್ಲಾ ಸೆಮಿಸ್ಟರ್‌ಗಳ ಸರಾಸರಿಸಿಜಿಪಿಎ 10ರಲ್ಲಿ 6.84 ಫಲಿತಾಂಶ ಇರಬೇಕು.

ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ಎರಡು ಭಾಗಗಳನ್ನು ಒಳಗೊಂಡಿರುವ ಒಂದೇ ವಸ್ತುನಿಷ್ಠ ಮಾದರಿಯ ಪತ್ರಿಕೆಯನ್ನು ಹೊಂದಿರುತ್ತದೆ. ಪರೀಕ್ಷೆಯ ಅವಧಿ 120 ನಿಮಿಷಗಳು. ಲಿಖಿತ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ, ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.

ಅರ್ಜಿ ಶುಲ್ಕ ವಿವರ

ಎಲ್ಲಾ ಹುದ್ದೆಗಳಿಗೆ ಅರ್ಜಿ ಶುಲ್ಕ 250 ರೂ. ನಿಗದಿಪಡಿಸಲಾಗಿದೆ. ಆದರೆ, ಆರಂಭದಲ್ಲಿ ಎಲ್ಲಾ ಅಭ್ಯರ್ಥಿಗಳು ಪ್ರತಿ ಅರ್ಜಿಗೆ 750 ರೂ.ಗಳನ್ನು ಸಂಸ್ಕರಣಾ ಶುಲ್ಕವಾಗಿ ಏಕರೂಪವಾಗಿ ಪಾವತಿಸಬೇಕಾಗುತ್ತದೆ. ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಸಂಸ್ಕರಣಾ ಶುಲ್ಕ ಮರುಪಾವತಿಸಲಾಗುತ್ತದೆ. ಮಹಿಳೆಯರು, ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ, ಮಾಜಿ ಸೈನಿಕರಿಗೆ ಪೂರ್ಣ ಮರುಪಾವತಿ ಇರಲಿದೆ. ಅಂದರೆ 750 ರೂ ಮರುಪಾವತಿ. ಇತರ ಎಲ್ಲಾ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅರ್ಜಿ ಶುಲ್ಕವನ್ನು ಕಡಿತಗೊಳಿಸಿದ ನಂತರ 500 ರೂ ಮರುಪಾವತಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಇಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಿ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.