ಕನ್ನಡ ಸುದ್ದಿ  /  Nation And-world  /  April 1 Changes: From Tomorrow, Jewellery With Only 6-digit Huid Number To Be Sold. Details Here

April 1 Changes: ಚಿನ್ನಾಭರಣ ಖರೀದಿದಾರರೇ ಗಮನಿಸಿ, ನಾಳೆಯಿಂದ ಆರಂಕಿ ಹಾಲ್‌ಮಾರ್ಕ್‌ ಇದ್ರೆ ಮಾತ್ರ ಆಭರಣ ಮಾರಾಟ, ಇಲ್ಲಿದೆ ವಿವರ

HUID 6-digit alphanumeric code: ನಾಳೆಯಿಂದ ಮಾರಾಟವಾಗುವ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳಲ್ಲಿ ಆರಂಕಿಯ ಆಲ್ಪಾನ್ಯೂಮರಿಕ್‌ ಹಾಲ್‌ಮಾರ್ಕ್‌ ಯೂನಿಕ್‌ ಐಡೆಂಟಿಫಿಕೇಷನ್‌ (ಎಚ್‌ಯುಐಡಿ) ಸಂಖ್ಯೆ ಇರುವುದು ಕಡ್ಡಾಯವಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇನ್ನು ಕೆಲವೇ ಗಂಟೆಗಳಲ್ಲಿ ಏಪ್ರಿಲ್‌ 1 ಬರಲಿದ್ದು, ಪ್ರತಿವರ್ಷದಂತೆ ಭಾರತದಲ್ಲಿ ಹಲವು ನಿಯಮಗಳಲ್ಲಿ ಬದಲಾವಣೆಯಾಗಲಿವೆ. ನಾಳೆಯಿಂದ ಆದಾಯ ತೆರಿಗೆ ನಿಯಮಗಳಲ್ಲಿ ಆಗುವ ಮಹತ್ತರ ಬದಲಾವಣೆಗಳ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಮಾಹಿತಿ ನೀಡಿದೆ. ಆಭರಣ ಪ್ರಿಯರು ಗಮನಿಸಬೇಕಾದ ಪ್ರಮುಖ ಬದಲಾವಣೆಯೊಂದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಾಳೆಯಿಂದ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳನ್ನು ಮಾರಾಟ ಮಾಡಲು ಹೊಸ ನಿಯಮವೊಂದು ಜಾರಿಗೆ ಬರಲಿದೆ. ನಾಳೆಯಿಂದ ಮಾರಾಟವಾಗುವ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳಲ್ಲಿ ಆರಂಕಿಯ ಆಲ್ಪಾನ್ಯೂಮರಿಕ್‌ ಹಾಲ್‌ಮಾರ್ಕ್‌ ಯೂನಿಕ್‌ ಐಡೆಂಟಿಫಿಕೇಷನ್‌ (ಎಚ್‌ಯುಐಡಿ) ಸಂಖ್ಯೆ ಇರುವುದು ಕಡ್ಡಾಯವಾಗಿದೆ.

ಈ ಹಿಂದೆ ನಾಲ್ಕು ಅಂಕಿಯ ಹಾಲ್‌ಮಾರ್ಕ್‌ ಇದ್ದರೆ ಸಾಕಾಗುತ್ತಿತ್ತು. ನಾಳೆಯಿಂದ ಆರಂಕಿಯ ಹಾಲ್‌ಮಾರ್ಕ್‌ ಗುರುತು ಇರುವುದು ಕಡ್ಡಾಯವಾಗಿದೆ. ನಾಳೆಯಿಂದ ನಾಲ್ಕು ಅಂಕಿಯ ಹಾಲ್‌ಮಾರ್ಕ್‌ ಗುರುತಿನ ಸಂಖ್ಯೆಯನ್ನು ಬಳಸಲಾಗುವುದಿಲ್ಲ.

ಏನಿದು ಎಚ್‌ಯುಐಡಿ?

ಎಚ್‌ಯುಐಡಿಯನ್ನು ಮೊದಲ ಬಾರಿಗೆ ಜುಲೈ 1, 2021 ರಂದು ಪರಿಚಯಿಸಲಾಗಿತ್ತು. ಇದು ಸಂಖ್ಯೆಗಳು ಮತ್ತು ಅಕ್ಷರಗಳನ್ನು ಹೊಂದಿರುವ 6-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ ಅನ್ನು ಒಳಗೊಂಡಿರುತ್ತದೆ. ಆಭರಣದ ಪ್ರತಿಯೊಂದು ವಸ್ತುವಿನಲ್ಲೂ ಹಾಲ್‌ಮಾರ್ಕಿಂಗ್ ಸಮಯದಲ್ಲಿ HUID ಸಂಖ್ಯೆಯನ್ನು ನೀಡಲಾಗುತ್ತದೆ. ಪ್ರತಿ HUID ವಿಭಿನ್ನವಾಗಿರುತ್ತದೆ.

ಈಗಿನ ನಿಯಮಗಳೇನು?

ಈ ಹೊಸ ಗುರುತಿನ ಸಂಖ್ಯೆಯನ್ನು ಪರಿಚಯಿಸುವ ಮೊದಲು, ಆಭರಣಗಳಿಗೆ ನಾಲ್ಕು ಅಂಕಿಯ ಹಾಲ್‌ಮಾರ್ಕ್‌ ಇರುತ್ತಿತ್ತು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಆಭರಣದ ಶುದ್ಧತೆಗೆ ತಕ್ಕಂತೆ ಈ ಹಾಲ್‌ಮಾರ್ಕ್‌ ನೀಡುತ್ತದೆ. ಮೊದಲು ಬಿಐಎಸ್‌, ವಸ್ತುವಿನ ಶುದ್ಧತೆ, ಚಿನ್ನದ ಲೊಗೊ ಮತ್ತು ಹಾಲ್‌ಮಾರ್ಕಿಂಗ್‌ ಸೆಂಟರ್‌ನ ಲೋಗೊ ಎಂಬ ನಾಲ್ಕು ಅಂಕಿಗಳು ಇದ್ದವು. ಬಳಿಕ ಎಚ್‌ಯುಐಡಿನಲ್ಲಿ ಎಚ್‌ಯುಐಡಿ, ಬಿಐಎಸ್‌ ಲೊಗೊ ಮತ್ತು ಆರ್ಟಿಕಲ್‌ ಪ್ಯೂರಿಟಿ ಎಂಬ ಮೂರು ಅಂಶಗಳನ್ನು ಪರಿಚಯಿಸಲಾಯಿತು.

ಈಗಿನ ನಿಯಮಗಳ ಪ್ರಕಾರ ಎಚ್‌ಯುಐಡಿ ಹಾಲ್‌ಮಾರ್ಕ್‌ ಇರುವ ಮತ್ತು ಹಾಲ್‌ಮಾರ್ಕ್‌ ಇರದ ಆಭರಣಗಳ ಮಾರಾಟಕ್ಕೆ ಅನುಮತಿ ನೀಡಲಾಗುತ್ತಿತ್ತು.

ನಿಯಮದಲ್ಲಿ ಬದಲಾವಣೆ ಏಕೆ?

ಆಭರಣಗಳಲ್ಲಿ ಎರಡು ಬಗೆಯ ಹಾಲ್‌ಮಾರ್ಕ್‌ ಇರುವುದರಿಂದ ಗ್ರಾಹಕರಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ ಎಂದು ಮಾರ್ಚ್‌ 3ರಂದು ಗ್ರಾಹಕ ವ್ಯವಹಾರಗಳ ಸಚಿವಾಲಯವು ತಿಳಿಸಿದೆ. ಈಗಾಗಲೇ ಗ್ರಾಹಕರಲ್ಲಿ ಇರುವ ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳು ವ್ಯಾಲಿಡ್‌ ಆಗಿರುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಹಾಲ್‌ಮಾರ್ಕ್‌ ಪ್ರಮಾಣೀಕರಣ

ಚಿನ್ನಾಭರಣ ಖರೀದಿಸುವ ಗ್ರಾಹಕರು ಬಿಡ್‌ ಕೇರ್‌ ಎಂಬ ಆಪ್‌ನಲ್ಲಿ ವೇರಿಫೈ ಎಚ್‌ಯುಐಡಿ ಆಯ್ಕೆ ಬಳಸಿಕೊಂಡು ನಿಮ್ಮ ಆಭರಣದ ಎಚ್‌ಯುಐಡಿ ಸಂಖ್ಯೆಯನ್ನು ಪರಿಶೀಲನೆ ನಡೆಸಬಹುದು. ಈ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ನೀವು ಹಾಲ್‌ಮಾರ್ಕ್‌ ಸಂಖ್ಯೆಯನ್ನು ನಮೂದಿಸಿದರೆ ಆಭರಣವನ್ನು ಹಾಲ್‌ಮಾರ್ಕ್ ಮಾಡಿದ ಆಭರಣ ವ್ಯಾಪಾರಿ, ಅವರ ನೋಂದಣಿ ಸಂಖ್ಯೆ, ಆಭರಣದ ಶುದ್ಧತೆ, ಆಭರಣದ ಪ್ರಕಾರ ಮತ್ತು ಆಭರಣವನ್ನು ಪರೀಕ್ಷಿಸಿದ ಮತ್ತು ಹಾಲ್‌ಮಾರ್ಕ್ ಮಾಡಿದ ಹಾಲ್‌ಮಾರ್ಕಿಂಗ್ ಕೇಂದ್ರದ ವಿವರ ಇತ್ಯಾದಿ ಮಾಹಿತಿಗಳು ದೊರಕುತ್ತವೆ. ಈ ಮೂಲಕ ಗ್ರಾಹಕರೇ ತಾವು ಖರೀದಿಸಿದ ಚಿನ್ನಾಭರಣಗಳ ಪರಿಶುದ್ಧತೆಯನ್ನು ಖಾತ್ರಿ ಪಡಿಸಿಕೊಳ್ಳಬಹುದು.

IPL_Entry_Point