Golden Tongue Mummy: ಚಿನ್ನದ ನಾಲಿಗೆಯ ಮಮ್ಮಿ ಪತ್ತೆ: ಈಜಿಪ್ಟ್ ರಹಸ್ಯಗಳನ್ನು ಕೇಳಿ ತಲೆ ತಿರುಗುತ್ತೆ..!
ಈಜಿಪ್ಟ್‌ನಲ್ಲಿ ಮಮ್ಮಿಗಳು ಪತ್ತೆಯಾಗುವುದು ಸರ್ವೇಸಾಮಾನ್ಯವಾದ ವಿಚಾರ. ಈಜಿಪ್ಟ್ ನೆಲವನ್ನು ಅಗೆದಷ್ಟೂ ಪ್ರಾಚೀನ ಮಮ್ಮಿಗಳು ಸಿಗುತ್ತಲೇ ಇರುತ್ತವೆ. ಇತ್ತೀಚಿನ ಅಧ್ಯಯನದಲ್ಲೂ ವಿಶಿಷ್ಟ ಮಮ್ಮಿಗಳು ಪತ್ತೆಯಾಗಿದ್ದು, ಪತ್ತೆಯಾಗಿರುವ ಎಲ್ಲಾ ಮಮ್ಮಿಗಳು ಚಿನ್ನದ ನಾಲಿಗೆಯನ್ನು ಹೊಂದಿವೆ ಎಂದು ವರದಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ಕೈರೋ: ಈಜಿಪ್ಟ್ ನಿಜಕ್ಕೂ ರೋಚಕ ರಹಸ್ಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ನೆಲ. ಪ್ರಾಚೀನ ಈಜಿಪ್ಟ್‌ನ ಮಮ್ಮಿಗಳು ವಿಶ್ವವನ್ನು ಶತಮಾನಗಳಿಂದ ಬೆರಗುಗೊಳಿಸುತ್ತಿವೆ. ಪುರಾತತ್ವಶಾಸ್ತ್ರಜ್ಞರಿಗೆ ನಿತ್ಯವೂ ಇಲ್ಲಿ ವಿಶಿಷ್ಟ ಮಮ್ಮಿಗಳು ಪತ್ತೆಯಾಗುತ್ತವೆ. ಅದರಂತೆ ಈ ಬಾರಿ ಈಜಿಪ್ಟ್‌ನಲ್ಲಿ ಸಂಪೂರ್ಣ ಚಿನ್ನದ ಲೇಪಿತ ನಾಲಿಗೆಯುಳ್ಳ ಮಮ್ಮಿಗಳು ದೊರೆತಿವೆ.
ಹೌದು ಈಜಿಪ್ಟ್‌ನಲ್ಲಿ ಮಮ್ಮಿಗಳು ಪತ್ತೆಯಾಗುವುದು ಸರ್ವೇಸಾಮಾನ್ಯವಾದ ವಿಚಾರ. ಈಜಿಪ್ಟ್ ನೆಲವನ್ನು ಅಗೆದಷ್ಟೂ ಪ್ರಾಚೀನ ಮಮ್ಮಿಗಳು ಸಿಗುತ್ತಲೇ ಇರುತ್ತವೆ. ಇತ್ತೀಚಿನ ಅಧ್ಯಯನದಲ್ಲೂ ವಿಶಿಷ್ಟ ಮಮ್ಮಿಗಳು ಪತ್ತೆಯಾಗಿದ್ದು, ಪತ್ತೆಯಾಗಿರುವ ಎಲ್ಲಾ ಮಮ್ಮಿಗಳು ಚಿನ್ನದ ನಾಲಿಗೆಯನ್ನು ಹೊಂದಿವೆ ಎಂದು ವರದಿಯಾಗಿದೆ.
ಈ ಕುರಿತು ನ್ಯೂಯಾರ್ಕ್ ಪೋಸ್ಟ್‌ನಲ್ಲಿ ವರದಿಯೊಂದು ಪ್ರಕಟವಾಗಿದ್ದು, ಬಾಯಿಯಲ್ಲಿ ಗಟ್ಟಿ ಚಿನ್ನದ ನಾಲಿಗೆ ಆಕಾರದ ಚಿಪ್ ರೀತಿಯ ವಸ್ತುವನ್ನು ಹೊಂದಿರುವ ಅನೇಕ ಪ್ರಾಚೀನ ಮಮ್ಮಿಗಳನ್ನು ಈಜಿಪ್ಟ್‌ನ ಪುರಾತತ್ವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ ಎಂದು ಹೇಳಿದೆ. ಪ್ರಸ್ತುತ ಪತ್ತೆಯಾಗಿರುವ ಮಮ್ಮಿಗಳು ಉತ್ತಮ ಸ್ಥಿತಿಯಲ್ಲಿ ಇಲ್ಲವಾದರೂ, ಅವುಗಳ ಚಿನ್ನದ ನಾಲಿಗೆಯನ್ನು ಸ್ಪಷ್ಟವಾಗಿ ಗುರುತಿಸಬಹುದು ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.
ಈಜಿಪ್ಟ್ ರಾಜಧಾನಿ ಕೈರೋದಿಂದ ಸುಮಾರು 40 ಮೈಲುಗಳಷ್ಟು ಉತ್ತರಕ್ಕೆ ಇರುವ, ನೈಲ್ ಡೆಲ್ಟಾದ ಕ್ವಿಸ್ನಾ ನೆಕ್ರೋಪೊಲಿಸ್‌ನಲ್ಲಿಈ ಮಮ್ಮಿಗಳು ದೊರೆತಿವೆ ಎನ್ನಲಾಗಿದೆ. ಸಂರಕ್ಷಿಸಲ್ಪಟ್ಟ ಶವಗಳು ಕ್ರಿ.ಪೂ 640 ರಿಂದ ಕ್ರಿ.ಪೂ 300ರ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿದೆ.
1989ರಲ್ಲಿ ಪತ್ತೆಯಾದ ಪ್ರಾಚೀನ ಈಜಿಪ್ಟ್‌ನ ಕ್ವಿಸ್ನಾ ನೆಕ್ರೋಪೊಲಿಸ್ ನಗರ, ಸಾವಿರಾರು ಮಮ್ಮಿಗಳ ಆಗರವಾಗಿದೆ. ಹಲವಾರು ಉತ್ಖನನಗಳಿಗೆ ಈ ನಗರ ಸಾಕ್ಷಿಯಾಗಿದ್ದು, ಈ ನಗರ ಪ್ರಾಚೀನ ನಾಗರಿಕತೆಗಳ ಬಗ್ಗೆ ವ್ಯಾಪಕವಾದ ಮಾಹಿತಿಯನ್ನು ಒಳಗೊಂಡಿದೆ ಎಂದು ತಜ್ಞರು ಹೇಳುತ್ತಾರೆ.
ಸದ್ಯ ದೊರೆತಿರುವ ಮಮ್ಮಿಗಳಲ್ಲಿ ಮಾನವ ನಾಲಿಗೆಯ ಆಕಾರದಲ್ಲಿರುವ ಚಿನ್ನದ ಚಿಪ್‌ಗಳು ಪತ್ತೆಯಾಗಿವೆ ಎಂದು ಸುಪ್ರೀಂ ಕೌನ್ಸಿಲ್ ಫಾರ್ ಆರ್ಕಿಯಾಲಜಿಯ ಪ್ರಧಾನ ಕಾರ್ಯದರ್ಶಿ ಡಾ ಮುಸ್ತಫಾ ವಜಿರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪುರಾತತ್ವಶಾಸ್ತ್ರಜ್ಞರು, ಸತ್ತವರ ನಿಜವಾದ ನಾಲಿಗೆಯನ್ನು ತೆಗೆದುಹಾಕಲಾಗಿದ್ದು, ನಾಲಿಗೆಯನ್ನು ಅನುಕರಿಸುವ ಚಿನ್ನದ ತುಂಡನ್ನು ಅಲ್ಲಿ ಇರಿಸಲಾಗಿದೆ. ಸತ್ತವರು ಪ್ರಾಚೀನ ಈಜಿಪ್ಟ್‌ನ "ಲಾರ್ಡ್ ಆಫ್ ದಿ ಅಂಡರ್‌ವರ್ಲ್ಡ್" ಒಸಿರಿಸ್‌ನೊಂದಿಗೆ ಸಂವಹನ ನಡೆಸಲು ಅನುಕೂಲವಾಗುವಂತೆ ಈ ರೀತಿ ಮಾಡಲಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ನಾಲಿಗೆ ಆಕಾರದಲ್ಲಿರುವ ಚಿನ್ನದ ಚಿಪ್‌ಗಳ ಜೊತೆಗೆ ಸ್ಮಶಾನದಲ್ಲಿ ಜೀರುಂಡೆಗಳು ಮತ್ತು ಕಮಲದ ಹೂವುಗಳಂತೆ ವಿನ್ಯಾಸಗೊಳಿಸಲಾದ ಚಿನ್ನದ ಚಿಪ್‌ಗಳು ಸಹ ದೊರೆತಿವೆ. ಇದರ ಜೊತೆಗೆ ಅಂತ್ಯಕ್ರಿಯೆಯ ತಾಯತಗಳು, ಮಣ್ಣಿನ ಪಾತ್ರೆಗಳು, ಮಾನವ ಆಕಾರದ ಮರದ ಶವಪೆಟ್ಟಿಗೆಯ ಅವಶೇಷಗಳು ಕೂಡ ದೊರೆತಿವೆ ಎಂದು ಹೇಳಲಾಗಿದೆ.
ಈ ಕುರಿತು ಮಾತನಾಡಿರುವ ಈಜಿಪ್ಟ್‌ನ ಪುರಾತತ್ವ ವಲಯದ ಅಧ್ಯಕ್ಷರಾದ ಡಾ ಐಮನ್ ಅಶ್ಮಾವಿ, ಪ್ರತಿ ಸಮಾಧಿಯ ಬಳಿಯೂ ವಿಭಿನ್ನ ವಿಧಿಗಳು ಮತ್ತು ವಿಧಾನಗಳನ್ನು ನಡೆಸಿರುವ ಪುರಾವೆಗಳು ದೊರೆತಿವೆ ಎಂದು ಮಾಹಿತಿ ನೀಡಿದ್ದಾರೆ.
ಈಜಿಪ್ಟ್‌ನಲ್ಲಿ ದುಬಾರಿ ಲೋಹದ ಮಮ್ಮಿಗಳು ಪತ್ತೆಯಾಗಿರುವುದು ಇದೇ ಮೊದಲೇನಲ್ಲ. 2021ರಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು 2,000 ವರ್ಷಗಳಷ್ಟು ಹಳೆಯದಾದ ತಲೆಬುರುಡೆಯೊಂದನ್ನು ಪತ್ತೆಹಚ್ಚಿದ್ದರು. ಟಪೊಸಿರಿಸ್ ಮ್ಯಾಗ್ನಾದಲ್ಲಿ ಚಿನ್ನದ ಲೇಪಿತ ನಾಲಿಗೆಯುಳ್ಳ ಮಮ್ಮಿಗಳನ್ನೂ ಪುರಾತತ್ವಶಾಸ್ತ್ರಜ್ಞರು ಪತ್ತೆಹಚ್ಚಿದ್ದರು.
ಇಂದಿನ ಪ್ರಮುಖ ಸುದ್ದಿ
Mysterious Object: ಡೇಟೋನಾ ಬೀಚ್ ಬಳಿ ಪತ್ತೆಯಾದ ನಿಗೂಢ ದೈತ್ಯ ವಸ್ತು: ಹೌಹಾರಿದ ಅಮೆರಿಕ!
ಅಮೆರಿಕದ ಫ್ಲೋರಿಡಾದ ವೊಲುಸಿಯಾ ಕೌಂಟಿಯ ಡೇಟೋನಾ ಬೀಚ್ ಬಳಿ ನಿಗೂಢ ದೈತ್ಯ ವಸ್ತುವೊಂದು ಪತ್ತೆಯಾಗಿದ್ದು,ಸ್ಥಳೀಯರು ಮತ್ತು ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ