ಕನ್ನಡ ಸುದ್ದಿ  /  Nation And-world  /  Army To Kick Off 2nd Round Of Agniveer Recruitment Soon

Agniveer recruitment: ಸೇನೆಯಿಂದ ಎರಡನೇ ಹಂತದ ಅಗ್ನಿವೀರರ ನೇಮಕಾತಿ, ಈ ಬಾರಿ ಆರಂಭದಲ್ಲಿ ಆನ್‌ಲೈನ್‌ ಪರೀಕ್ಷೆ, ಇಲ್ಲಿದೆ ಹೆಚ್ಚಿನ ಮಾಹಿತಿ

Agniveer recruitment: ಇದೀಗ ಮತ್ತೊಂದು ಹಂತದಲ್ಲಿ ನೇಮಕಾತಿ ಆರಂಭವಾಗಲಿದ್ದು, ಸಾವಿರಾರು ಜನರಿಗೆ ಭಾರತೀಯ ಸೇನೆಗೆ ಅಗ್ನಿವೀರರಾಗಿ ಸೇರುವ ಅವಕಾಶ ದೊರಕಲಿದೆ. ಎರಡನೇ ಹಂತದ ನೇಮಕಾತಿಯಲ್ಲಿ ನೇಮಕ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿಯಲ್ಲಿ ಅಗ್ನಿವೀರರಿಗೆ ತರಬೇತಿ
ಬೆಳಗಾವಿಯಲ್ಲಿ ಅಗ್ನಿವೀರರಿಗೆ ತರಬೇತಿ (Indian Air Force twitter)

ನವದೆಹಲಿ: ಭಾರತೀಯ ಸೇನೆಯು ಅಗ್ನಿಪಥ ಯೋಜನೆಯಡಿ ಎರಡನೇ ಹಂತದ ಅಗ್ನಿವೀರರ ನೇಮಕಾತಿಯನ್ನು ಇದೇ ಫೆಬ್ರವರಿ ತಿಂಗಳ ಮಧ್ಯೆ ಆರಂಭಿಸಲಿದೆ. ಸುಮಾರು ಒಂದು ತಿಂಗಳ ಕಾಲ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಬಲ್ಲಮೂಲಗಳು ತಿಳಿಸಿವೆ.

ಕಳೆದ ವರ್ಷ ಭಾರತೀಯ ಸೇನೆಯು ಅಗ್ನಿವೀರರ ನೇಮಕಾತಿ ರಾಲಿ ಕೈಗೊಂಡಿತ್ತು. ಸುಮಾರು 19 ಸಾವಿರ ಅಗ್ನಿವೀರರಿಗೆ ಜನವರಿ ತಿಂಗಳಲ್ಲಿ ತರಬೇತಿಯೂ ಆರಂಭವಾಗಿದೆ. ಸುಮಾರು 21 ಸಾವಿರ ಅಗ್ನಿವೀರರು ಮಾರ್ಚ್‌ ತಿಂಗಳಲ್ಲಿ ಸೇನೆಗೆ ಸೇರಲಿದ್ದಾರೆ.

ಇದೀಗ ಮತ್ತೊಂದು ಹಂತದಲ್ಲಿ ನೇಮಕಾತಿ ಆರಂಭವಾಗಲಿದ್ದು, ಸಾವಿರಾರು ಜನರಿಗೆ ಭಾರತೀಯ ಸೇನೆಗೆ ಅಗ್ನಿವೀರರಾಗಿ ಸೇರುವ ಅವಕಾಶ ದೊರಕಲಿದೆ. ಎರಡನೇ ಹಂತದ ನೇಮಕಾತಿಯಲ್ಲಿ ನೇಮಕ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ನೇಮಕಾತಿ ರಾಲಿಗೆ ಮೊದಲು ಆನ್‌ಲೈನ್‌ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ಇರಲಿದೆ ಎಂದು ಹೆಸರು ಹೇಳಲು ಬಯಸದ ಮೂಲಗಳು ಮಾಹಿತಿ ನೀಡಿವೆ. ಮೊದಲ ಹಂತದಲ್ಲಿ ಆನ್‌ಲೈನ್‌ ಪರೀಕ್ಷೆ ಇರದೆ ಇದ್ದರೂ ಮೊದಲ ಹಂತದ ನೇಮಕಾತಿ ನಡೆದ ಬಳಿಕ, ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯ ಬಳಿಕ ಲಿಖಿತ ಪರೀಕ್ಷೆ ನಡೆಸಲಾಗಿತ್ತು.

"ಈ ಬಾರಿ ನೇಮಕ ಪ್ರಕ್ರಿಯೆಯಲ್ಲಿ ಕೊಂಚ ಬದಲಾವಣೆ ಇರಲಿದೆ. ಆರಂಭದಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಸುವುದರಿಂದ ದೇಶಾದ್ಯಂತ ನೇಮಕಾತಿ ಸಮಯದಲ್ಲಿ ದೊಡ್ಡ ಮಟ್ಟದ ಅಭ್ಯರ್ಥಿಗಳ ದಟ್ಟಣೆ ಇರುವುದು ತಪ್ಪಲಿದೆ. ಇದರಿಂದ ನೇಮಕಾತಿ ಪ್ರಕ್ರಿಯೆ ಸುಸೂತ್ರವಾಗಲಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಮೊದಲ ಹಂತದಲ್ಲಿ ಕರ್ನಾಟಕದ ಬೀದರ್‌ನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಈ ಸೇನಾ ನೇಮಕಾತಿ ರಾಲಿಯಲ್ಲಿ 46,442 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಡಿಸೆಂಬರ್‌ ಚಳಿಯನ್ನೂ ಲೆಕ್ಕಿಸದೆ ಸೇನೆಯು ನಡೆಸುವ ವಿವಿಧ ಅರ್ಹತಾ ಪರೀಕ್ಷೆಗಳಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ಇದೀಗ 3007 ಅಭ್ಯರ್ಥಿಗಳು ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಲಿಖಿತ ಪರೀಕ್ಷೆ ಹಂತಕ್ಕೆ ತಲುಪಿದ್ದರು.

ಅಗ್ನಿಪಥ್ ಯೋಜನೆಗೆ ಅರ್ಹರಾಗಲು ವಯಸ್ಸು 17 ವರ್ಷದಿಂದ 21 ವರ್ಷಗಳ ನಡುವೆ ಇರಬೇಕು. ಈ ನೇಮಕಾತಿಯಲ್ಲಿ ಸೇನೆಯಂತೆಯೇ ಅದೇ ಪ್ರಕ್ರಿಯೆಯಿಂದ ಆಯ್ಕೆ ಮಾಡಲಾಗುತ್ತದೆ. ಅಂದರೆ ಸೇನೆ ನಿಗದಿಪಡಿಸಿದ ನಿಯಮಗಳ ಪ್ರಕಾರವೇ ನೇಮಕಾತಿ ನಡೆಯಲಿದೆ. ಇದರಲ್ಲಿ ನೇಮಕಾತಿಯ ನಂತರ ತರಬೇತಿ ಅವಧಿ ಸೇರಿದಂತೆ ಒಟ್ಟು 4 ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಬಹುದು.

ಈ ಯೋಜನೆಯ ಮತ್ತೊಂದು ಅನುಕೂಲವೆಂದರೆ, 'ಅಗ್ನಿಪಥ್' ಯೋಜನೆಯಡಿ ನೇಮಕಗೊಂಡು ಸೇವೆ ಪೂರೈಸಿದವರಿಗೆ ಸಾರ್ವಜನಿಕ ವಲಯ ಸಂಸ್ಥೆಗಳು ಮತ್ತು ಕೈಗಾರಿಕೆಗಳಲ್ಲಿನ ಉದ್ಯೋಗಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು. ಅಲ್ಲದೆ ಅಗ್ನಿವೀರರಾಗಿ ನಾಲ್ಕು ವರ್ಷ ಸೇವೆ ಪೂರೈಸಿದ ನಂತರ ಸಾಮಾನ್ಯ ಕೇಡರ್‌ಗೆ ಅರ್ಜಿ ಸಲ್ಲಿಸಬಹುದು. ಒಂದು ಬ್ಯಾಚ್‌ನಲ್ಲಿ ಗರಿಷ್ಠ ಶೇ.25ರಷ್ಟು ಅಗ್ನಿವೀರರಿಗೆ ಸೇನೆಯು ಶಾಶ್ವತ ಸೇವೆ ನೀಡಲಿದೆ.ಈ ಯೋಜನೆಯ ಮತ್ತೊಂದು ಅನುಕೂಲವೆಂದರೆ, 'ಅಗ್ನಿಪಥ್' ಯೋಜನೆಯಡಿ ನೇಮಕಗೊಂಡು ಸೇವೆ ಪೂರೈಸಿದವರಿಗೆ ಸಾರ್ವಜನಿಕ ವಲಯ ಸಂಸ್ಥೆಗಳು ಮತ್ತು ಕೈಗಾರಿಕೆಗಳಲ್ಲಿನ ಉದ್ಯೋಗಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು. ಅಲ್ಲದೆ ಅಗ್ನಿವೀರರಾಗಿ ನಾಲ್ಕು ವರ್ಷ ಸೇವೆ ಪೂರೈಸಿದ ನಂತರ ಸಾಮಾನ್ಯ ಕೇಡರ್‌ಗೆ ಅರ್ಜಿ ಸಲ್ಲಿಸಬಹುದು. ಒಂದು ಬ್ಯಾಚ್‌ನಲ್ಲಿ ಗರಿಷ್ಠ ಶೇ.25ರಷ್ಟು ಅಗ್ನಿವೀರರಿಗೆ ಸೇನೆಯು ಶಾಶ್ವತ ಸೇವೆ ನೀಡಲಿದೆ.

ಅಗ್ನಿವೀರರಿಗೆ ಮೊದಲ ವರ್ಷದಲ್ಲಿ ಸುಮಾರು 4.76 ಲಕ್ಷ ರೂಪಾಯಿ ಸಂಬಳದ ಪ್ಯಾಕೇಜ್ ಪಡೆಯುತ್ತಾರೆ. ಅಂದರೆ, ಆರಂಭದಲ್ಲಿ ಮಾಸಿಕ 30,000 ರೂಪಾಯಿ ವೇತನ ಸಿಗಲಿದೆ. ಇದು ಪ್ರತಿ ವರ್ಷ ಹೆಚ್ಚಾಗಲಿದ್ದು, ನಾಲ್ಕನೇ ವರ್ಷದಲ್ಲಿ ಇವರ ವೇತನ ಸುಮಾರು 6.92 ಲಕ್ಷ ರೂ.ಗೆ ಏರಿಕೆಯಾಗಲಿದೆ. ಅಗ್ನಿವೀರರಾಗಿ ನಾಲ್ಕು ವರ್ಷ ಸೇವೆ ಪೂರ್ಣಗೊಳಿಸಿದ ನಂತರವೂ ಸಾಮಾನ್ಯ ಕೇಡರ್‌ಗೆ ಅರ್ಜಿ ಸಲ್ಲಿಸಬಹುದು. ಆರ್ಮಿ ಒನ್ ಬ್ಯಾಚ್‌ನ ಗರಿಷ್ಠ ಶೇ.25ರಷ್ಟು ಅಗ್ನಿವೀರರಿಗೆ ಶಾಶ್ವತ ಸೇವೆ ನೀಡಲಾಗುತ್ತದೆ.

IPL_Entry_Point