ಕನ್ನಡ ಸುದ್ದಿ  /  Nation And-world  /  As Covid-19 Cases Surge, Health Ministry Asks States To Follow 5-fold Strategy

Covid-19 5-fold strategy: ಹೆಚ್ಚಾದ ಕೋವಿಡ್‌ 19 ಪ್ರಕರಣಗಳು, ಮೋದಿ ಸಭೆ ಬಳಿಕ ರಾಜ್ಯಗಳಿಗೆ ಆರೋಗ್ಯ ಸಚಿವಾಲಯದಿಂದ ವಿಶೇಷ ಸೂಚನೆ

"ಪರೀಕ್ಷೆ, ನಿಗಾ, ಚಿಕಿತ್ಸೆ ಮತ್ತು ಕೋವಿಡ್‌ ನಡವಳಿಕೆ ಅನುಸರಿಸುವುದನ್ನು" ಐದು ಪಟ್ಟು ಹೆಚ್ಚಿಸಬೇಕೆಂದು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ.

Covid-19 5-fold strategy: ಹೆಚ್ಚಾದ ಕೋವಿಡ್‌ 19 ಪ್ರಕರಣಗಳು, ಮೋದಿ ಸಭೆ ಬಳಿಕ ರಾಜ್ಯಗಳಿಗೆ ಆರೋಗ್ಯ ಸಚಿವಾಲಯದಿಂದ ವಿಶೇಷ ಸೂಚನೆ (PTI)
Covid-19 5-fold strategy: ಹೆಚ್ಚಾದ ಕೋವಿಡ್‌ 19 ಪ್ರಕರಣಗಳು, ಮೋದಿ ಸಭೆ ಬಳಿಕ ರಾಜ್ಯಗಳಿಗೆ ಆರೋಗ್ಯ ಸಚಿವಾಲಯದಿಂದ ವಿಶೇಷ ಸೂಚನೆ (PTI) (HT_PRINT)

ಬೆಂಗಳೂರು: ದೇಶದಲ್ಲಿ ದೈನಂದಿನ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗಿದೆ ಇದೀಗ ಆರೋಗ್ಯ ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ವಿಶೇಷ ಸೂಚನೆ ನೀಡಿದೆ.

"ಪರೀಕ್ಷೆ, ನಿಗಾ, ಚಿಕಿತ್ಸೆ ಮತ್ತು ಕೋವಿಡ್‌ ನಡವಳಿಕೆ ಅನುಸರಿಸುವುದನ್ನು" ಐದು ಪಟ್ಟು ಹೆಚ್ಚಿಸಬೇಕೆಂದು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ. ಈ ಐದುಪಟ್ಟು ಕಾರ್ಯತಂತ್ರವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಲಹೆ ನೀಡಿದೆ.

"ರಾಜ್ಯಗಳು ಕೊರೊನಾ ಎದುರಿಸಲು ಸನ್ನದ್ಧವಾಗಿರುವುದನ್ನು ಪರೀಕ್ಷಿಸಲು ಇನ್ನೊಂದು ಸುತ್ತಿನ ಮಾಕ್ ಡ್ರಿಲ್‌ ಮಾಡಲಾಗುವುದು. ಶೀಘ್ರದಲ್ಲಿ ಎಲ್ಲಾ ರಾಜ್ಯಗಳಲ್ಲಿ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಣಕು ಡ್ರಿಲ್‌ಗಳನ್ನು ಕೈಗೊಳ್ಳಲಾಗುವುದು" ಎಂದು ಆರೋಗ್ಯ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಸಮಯದಲ್ಲಿ ಕೋವಿಡ್‌ 19 ಮತ್ತು ಇನ್‌ಫ್ಲೂಯೆನ್ಜಾಗಳಿಗೆ ಅಗತ್ಯವಿರುವ ಔಷಧಿಗಳು ಮತ್ತು ಲಾಜಿಸ್ಟಿಕ್‌ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಸಚಿವಾಲಯವು ರಾಜ್ಯಗಳಿಗೆ ತಿಳಿಸಿದೆ. ಇಷ್ಟು ಮಾತ್ರವಲ್ಲದೆ ಸಾಕಷ್ಟು ಹಾಸಿಗೆಗಳ ಲಭ್ಯತೆ, ಆರೋಗ್ಯ ಕಾರ್ಯಕರ್ತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆಯೂ ತಿಳಿಸಲಾಗಿದೆ.

ಹೆಚ್ಚುತ್ತಿರುವ ಇನ್ಫ್ಲುಯೆಂಜಾ ಪ್ರಕರಣಗಳು ಮತ್ತು ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯ ಕುರಿತು ಮತ್ತು ದೇಶವು ಇದನ್ನು ಎದುರಿಸಲು ಹೇಗೆ ಸನ್ನದ್ಧವಾಗಿದೆ ಎಂದು ತಿಳಿದುಕೊಳ್ಳಲು ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಉನ್ನತ ಮಟ್ಟದ ಸಭೆ ನಡೆಸಿದ್ದರು.

ಎಲ್ಲರೂ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತೆ ಸಭೆಯಲ್ಲಿ ಪ್ರಧಾನಿ ಮೋದಿ ಒತ್ತಿ ಹೇಳಿದ್ದರು. ಇದೇ ಸಮಯದಲ್ಲಿ ಲ್ಯಾಬ್‌, ಜಿನೋಮ್‌ ಪರೀಕ್ಷೆ, ಎಲ್ಲಾ ತೀವ್ರವಾದ ಉಸಿರಾಟದ ಪ್ರಕರಣಗಳ ಪರೀಕ್ಷೆಯ ಅಗತ್ಯವನ್ನು ಒತ್ತಿ ಹೇಳಿದ್ದರು.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ನಿರಂತರ ಮೇಲ್ವಿಚಾರಣೆ ಮತ್ತು ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದೆ. ಪ್ರಸ್ತುತ, ಎರಡು ರೀತಿಯ ವೈರಸ್‌ಗಳು ವಾತಾವರಣದಲ್ಲಿವೆ. ಆತಂಕಕಾರಿ ಅಂಶವೆಂದರೆ ಅವುಗಳು ಅಪಾಯಕಾರಿ ರೋಗಲಕ್ಷಣಗಳನ್ನು ಹರಡುತ್ತಿವೆ. ಮೊದಲನೆಯ ವೈರಸ್‌ ಇನ್ಫ್ಲುಯೆನ್ಸ H3N2 ಮತ್ತು ಎರಡನೆಯದು ಹೊಸ COVID ರೂಪಾಂತರ XBB 1.16.

ದೇಶದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದು, ಇವುಗಳಲ್ಲಿ ಹೊಸ ಮಾದರಿಯ ಎಕ್ಸ್‌ಬಿಬಿ.1.16 (COVID-19's XBB.1.16 variant) ಉಪತಳಿ ಪ್ರಕರಣಗಳು ಕೂಡ ಪತ್ತೆಯಾಗಿವೆ. ದೇಶದಲ್ಲಿ ಒಟ್ಟು 76 ಪ್ರಕರಣಗಳಲ್ಲಿ ಹೊಸ ಕೊರೊನಾ ತಳಿ XBB1.16 ಪತ್ತೆಯಾಗಿರುವುದಾಗಿ INSACOG ಮಾಹಿತಿ ನೀಡಿದೆ.

ಈ ಹೊಸ ತಳಿಯು ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಪತ್ತೆಯಾದ ಒಟ್ಟು 76 ಪ್ರಕರಣಗಳಲ್ಲಿ ಕರ್ನಾಟಕದಲ್ಲಿಯೇ 30 ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತ ವರದಿ ಇಲ್ಲಿದೆ ಓದಿ.

IPL_Entry_Point