Assam specialty tea auction: ಕಳೆದ ವರ್ಷ ಕಿಲೋ ಚಹಾಪುಡಿಗೆ 99,999 ರೂ.; ಈ ವರ್ಷ ಎಷ್ಟಕ್ಕೆ ಮಾರಾಟ? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Assam Specialty Tea Auction: ಕಳೆದ ವರ್ಷ ಕಿಲೋ ಚಹಾಪುಡಿಗೆ 99,999 ರೂ.; ಈ ವರ್ಷ ಎಷ್ಟಕ್ಕೆ ಮಾರಾಟ? ಇಲ್ಲಿದೆ ವಿವರ

Assam specialty tea auction: ಕಳೆದ ವರ್ಷ ಕಿಲೋ ಚಹಾಪುಡಿಗೆ 99,999 ರೂ.; ಈ ವರ್ಷ ಎಷ್ಟಕ್ಕೆ ಮಾರಾಟ? ಇಲ್ಲಿದೆ ವಿವರ

Assam specialty tea auction: ಚಹಾ ಎಲ್ಲರಿಗೂ ಇಷ್ಟದ ಪೇಯ. ಅನೇಕರ ನಿತ್ಯ ಬದುಕು ಶುರುವಾಗುವುದೇ ಒಂದು ಕಪ್‌ ಚಹಾ, ಒಂದೆರಡು ಬಿಸ್ಕಟ್‌ ಅಥವಾ ಒಂದು ಬನ್‌ ಮೂಲಕ. ಚಹಾದಲ್ಲಿ ಅನೇಕ ವೆರೈಟಿಗಳಿವೆ. ನಮ್ಮ ದೇಶದ ಅತಿದುಬಾರಿ ಚಹಾ ಅಸ್ಸಾಂನಲ್ಲಿದೆ. ಕಳೆದ ವರ್ಷ 1ಕಿಲೋ ಚಹಾ ಪುಡಿ 99,999 ರೂ.ಗೆ ಮಾರಾಟ ಆಗಿತ್ತು. ಅದು ಈ ವರ್ಷ ಹೊಸ ದಾಖಲೆ ಬರೆದಿದೆ. ವಿವರ ಇಲ್ಲಿದೆ.

ಮನೋಹರಿ ಗೋಲ್ಡ್‌ ಟೀ
ಮನೋಹರಿ ಗೋಲ್ಡ್‌ ಟೀ (ANI)

ಗುವಾಹಟಿ: ಅಸ್ಸಾಂನ ದಿಬ್ರುಗಢ ಜಿಲ್ಲೆ ಚಹಾಕ್ಕೆ ಫೇಮಸ್‌. ಅದರಲ್ಲೂ ದುಬಾರಿ ಚಹಾಪುಡಿ ಎಂದರೆ ನೆನಪಾಗುವುದೇ ದಿಬ್ರುಗಢ. ಇಲ್ಲಿರುವ ಮನೋಹರಿ ಟೀ ಎಸ್ಟೇಟ್‌ ಜಗದ್ವಿಖ್ಯಾತ. ಕಾರಣ ಅಲ್ಲಿನ ಚಹಾ. ಅದರಲ್ಲೂ ಒಂದು ವೆರೈಟಿ ಬಹಳ ಜನಪ್ರಿಯ. ಅದಕ್ಕೆ ಬೇಡಿಕೆಯೂ ಹೆಚ್ಚು.

ಮನೋಹರಿ ಟೀ ಗಾರ್ಡನ್ ತನ್ನ 'ಮನೋಹರಿ ಗೋಲ್ಡ್ ಟೀ' (manohari gold tea) ಯನ್ನು ಕಳೆದ ವರ್ಷ ಸೌರಭ್ ಟೀ ಟ್ರೇಡರ್ಸ್ ಗೆ 99,999 ರೂಪಾಯಿಗೆ ಮಾರಾಟ ಮಾಡಿತ್ತು. ಈ ಟೀಯನ್ನು ಗೋಲ್ಡನ್ ಬಟರ್ ಫ್ಲೈ ಟೀ ಎಂದೂ ಕರೆಯುತ್ತಾರೆ. ಚಿನ್ನದಂತಹ ಬೆಲೆ ಇರುವ ಕಾರಣಕ್ಕೇ ಮನೋಹರಿ ಟೀ ಎಸ್ಟೇಟ್‌ ಜಗದ್ವಿಖ್ಯಾತ.

ಈ ಟೀ ಪುಡಿ ಯಾಕೆ ಅಷ್ಟು ದುಬಾರಿ?

ಇದನ್ನು ಬಹಳ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಚಿನ್ನದ ಅಥವಾ ಹಳದಿ ಚಹಾ ಎಲೆ ತನ್ನ ವಿಶಿಷ್ಟ ಬಣ್ಣ ಮತ್ತು ಸುವಾಸನೆಗೆ ಪ್ರಸಿದ್ಧವಾಗಿದೆ. ಇದನ್ನು ಚಹಾ ಗಿಡದ ಸಣ್ಣ ಚಿಗುರು ಸಂಗ್ರಹಿಸಿ ತಯಾರಿಸಲಾಗುತ್ತದೆ. ಇದರ ಉತ್ಪಾದನೆಯಲ್ಲಿ ಬಲು ಕಡಿಮೆ. ಹೀಗಾಗಿಯೇ ಇದರ ರುಚಿ, ಪರಿಮಳ ಬಲ್ಲವರು ದುಬಾರಿ ಬೆಲೆ ನೀಡಿ ಖರೀದಿಸುತ್ತಾರೆ. ಇದು ನೇರ ಮಾರುಕಟ್ಟೆಗೆ ಬರಲ್ಲ. ಹರಾಜಿನ ಮೂಲಕ ಮಾರಾಟವಾಗುತ್ತದೆ.

ಈ ವರ್ಷ ಮನೋಹರಿ ಗೋಲ್ಡ್‌ ಟೀ ಹೊಸ ದಾಖಲೆ; ಕಿಲೋಗೆ 1.15 ಲಕ್ಷ ರೂ.

ಅಸ್ಸಾಂನ ದಿಬ್ರುಗಢ ಜಿಲ್ಲೆಯ ಮನೋಹರಿ ಗೋಲ್ಡ್‌ ಟೀ ಈ ಸಲ ಖಾಸಗಿ ಹರಾಜಿನಲ್ಲಿ ಕಿಲೋಗೆ 1.15 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಈ ಹರಾಜು ಪ್ರಕ್ರಿಯೆ ಶುಕ್ರವಾರ ನಡೆಯಿತು ಎಂದು ಮನೋಹರಿ ಟೀ ಎಸ್ಟೇಟ್‌ನ ರಾಜನ್‌ ಲೋಹಿಯಾ ತಿಳಿಸಿದ್ದಾರೆ.

ಖಾಸಗಿ ಪೋರ್ಟಲ್‌ ಟೀ ಇನ್‌ಟೆಕ್‌ ಮೂಲಕ ಈ ಹರಾಜು ನಡೆಯಿತು. ಈ ದರವು ಮನೋಹರಿ ಗೋಲ್ಡ್‌ ಟೀಗೆ ಸಿಕ್ಕ ಇದುವರೆಗಿನ ಗರಿಷ್ಠ ಬೆಲೆ. ಆರ್‌ಕೆ ಟೀ ಸೇಲ್ಸ್‌ ಈ ಒಂದು ಕಿಲೋ ಅಸ್ಸಾಂ ಸ್ಪೆಷಾಲ್ಟಿ ಟೀಯನ್ನು ಖರೀದಿಸಿದೆ ಎಂದು ರಾಜನ್‌ ವಿವರಿಸಿದ್ದಾರೆ.

ಕಳೆದ ವರ್ಷ ಟೀ ಬೋರ್ಡ್‌ ಆಫ್‌ ಇಂಡಿಯಾ ಅದರ ಗುವಾಹಟಿ ಟೀ ಆಕ್ಷನ್‌ ಸೆಂಟರ್‌ನಲ್ಲಿ ಹರಾಜು ಇಟ್ಟಾಗ ಕಿಲೋ ಚಹಾಕ್ಕೆ 1 ಲಕ್ಷ ರೂಪಾಯಿ ಮಿತಿ ಹೇರಿತ್ತು. ಮನೋಹರಿ ಬ್ರ್ಯಾಂಡ್‌ನ ಗೋಲ್ಡ್‌ ವೆರೈಟಿ ಟೀ ಗುವಾಹಟಿ ಟೀ ಆಕ್ಷನ್‌ ಸೆಂಟರ್‌ನಲ್ಲಿ ಕಾಲಾನುಕ್ರಮದಲ್ಲಿ ಗರಿಷ್ಠ ಬೆಲೆಯನ್ನು ಪಡೆಯುತ್ತ ಬಂದಿದೆ. ಪ್ರತಿ ವರ್ಷವೂ ಹೊಸ ದಾಖಲೆಯನ್ನು ನಿರ್ಮಿಸುತ್ತ ಸಾಗಿ ಬಂದಿರುವುದು ಇತಿಹಾಸ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಗುವಾಹಟಿ ಟೀ ಆಕ್ಷನ್‌ ಸೆಂಟರ್‌ನಲ್ಲಿ ಮನೋಹರಿ ಗೋಲ್ಡ್‌ ಒಂದು ಕಿಲೋ ಚಹಾ 99,999 ರೂಪಾಯಿಗೆ ಮಾರಾಟವಾಗಿತ್ತು. ಈ ದಾಖಲೆಯನ್ನು ಎಎಫ್‌ಟಿ ಟೆಕ್ನೋ ಟ್ರೇಡ್‌ನ ʻಗೋಲ್ಡನ್‌ ಪರ್ಲ್‌ʼ ಈ ವರ್ಷ ಫೆಬ್ರವರಿಯಲ್ಲಿ ಗುವಾಹಟಿ ಟೀ ಆಕ್ಷನ್‌ ಸೆಂಟರ್‌ನಲ್ಲಿ ಸಮಗಟ್ಟಿತ್ತು.

ಈ ದರ ದಾಖಲೆಯನ್ನು ಜೂನ್‌ ತಿಂಗಳಲ್ಲಿ ಜೋರ್ಹಾಟ್‌ ಟೀ ಆಕ್ಷನ್‌ ಸೆಂಟರ್‌ನಲ್ಲಿ ಧೂಳೀಪಟವಾಗಿದ್ದು, ಪಭೋಜನ್‌ ಗೋಲ್ಡ್‌ ಟೀ ಒಂದು ಕಿಲೋಕ್ಕೆ 1 ಲಕ್ಷ ರೂಪಾಯಿಗೆ ಮಾರಾಟವಾಗಿ ಹೊಸ ದಾಖಲೆ ಸೃಷ್ಟಿಸಿತ್ತು.

ಗಮನಿಸಬಹುದಾದ ಇತರ ವಿಚಾರಗಳು

How to get blessings of shani dev: ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ; ಶನಿದೇವರ ಅನುಗ್ರಹ ಪಡೆಯವುದು ಹೇಗೆ?

How to get blessings of shani dev: ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ. ಈ ರಾಶಿಯವರು ಈ ದಿನ ಶನಿದೇವರ ಅನುಗ್ರಹಕ್ಕಾಗಿ ಶನಿದೇವರನ್ನು ಪೂಜಿಸಬೇಕು. ಸಾಡೇಸಾತಿ ಶನಿಯಿಂದಲೂ ಪರಿಹಾರಕ್ಕೆ ಇದು ಉತ್ತಮ ಪರಿಹಾರ ಒದಗಿಸಬಹುದು. ಶನಿದೇವರಿಗೆ ಸಂಬಂಧಿಸಿದ ಯಾವ ಸ್ತೋತ್ರ ಇಂದು ಪಠಿಸಬೇಕು? ಇಲ್ಲಿದೆ ಮಾಹಿತಿ.

Sugar for skin care: ಸಕ್ಕರೆ ಬಾಯಿಗಷ್ಟೇ ಅಲ್ಲ ಚರ್ಮಕ್ಕೂ ʻಸಿಹಿʼ!; ಕೇವಲ 1 ಚಮಚ ಸಕ್ಕರೆ, ಚರ್ಮದ ಅನೇಕ ಸಮಸ್ಯೆಗಳಿಗೆ ಔಷಧ!

Sugar for skin care: ಸಕ್ಕರೆ ಕೇವಲ ಬಾಯಿ ರುಚಿಗೆ ಮಾತ್ರ ಸೀಮಿತವಲ್ಲ. ಸೌಂದರ್ಯಕ್ಕೂ ಅದಕ್ಕೂ ಲಿಂಕ್‌ ಇದೆ. ಏನದು ಎಂಬ ಕುತೂಹಲವೇ? ಇಲ್ಲಿದೆ ಆ ವಿವರ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.