ಮಹಾರಾಷ್ಟ್ರ ವಿಧಾಸಭೆ ಚುನಾವಣೆ ನವೆಂಬರ್ 20 ಕ್ಕೆ, ಫಲಿತಾಂಶ 23ಕ್ಕೆ; ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ವಿಧಾಸಭೆ ಚುನಾವಣೆ ನವೆಂಬರ್ 20 ಕ್ಕೆ, ಫಲಿತಾಂಶ 23ಕ್ಕೆ; ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ

ಮಹಾರಾಷ್ಟ್ರ ವಿಧಾಸಭೆ ಚುನಾವಣೆ ನವೆಂಬರ್ 20 ಕ್ಕೆ, ಫಲಿತಾಂಶ 23ಕ್ಕೆ; ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ

ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗ ಪ್ರಕಟಿಸಿದ ವೇಳಾಪಟ್ಟಿ ಪ್ರಕಾರ ನವೆಂಬರ್ 20ಕ್ಕೆ ಮತದಾನ ನಡೆಯಲಿದ್ದು, 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಉಳಿದ ವಿವರ ವರದಿಯಲ್ಲಿದೆ.

ಮಹಾರಾಷ್ಟ್ರ ವಿಧಾಸಭೆ ಚುನಾವಣೆ ನವೆಂಬರ್ 20 ಕ್ಕೆ ನಡೆಯಲಿದ್ದು, ಫಲಿತಾಂಶ 23ಕ್ಕೆ ಪ್ರಕಟವಾಗಲಿದೆ. (ಸಾಂಕೇತಿಕ ಚಿತ್ರ)
ಮಹಾರಾಷ್ಟ್ರ ವಿಧಾಸಭೆ ಚುನಾವಣೆ ನವೆಂಬರ್ 20 ಕ್ಕೆ ನಡೆಯಲಿದ್ದು, ಫಲಿತಾಂಶ 23ಕ್ಕೆ ಪ್ರಕಟವಾಗಲಿದೆ. (ಸಾಂಕೇತಿಕ ಚಿತ್ರ) (HT News)

ಮುಂಬಯಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 20ಕ್ಕೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಇಂದು (ಅಕ್ಟೋಬರ್ 15) ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದ್ದು, ನವೆಂಬರ್ 23ಕ್ಕೆ ಮತ ಎಣಿಕೆ, ಫಲಿತಾಂಶ ಎಂದು ಘೋಷಿಸಿದೆ. ಮಹಾರಾಷ್ಟ್ರದಲ್ಲಿ ಸದ್ಯ ಶಿವಸೇನಾ (ಏಕನಾಥ ಶಿಂಧೆ), ಎನ್‌ಸಿಪಿ (ಅಜಿತ್ ಪವಾರ್‌)- ಬಿಜೆಪಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಈ ಸಲದ ಚುನಾವಣೆಯಲ್ಲಿ ಶಿವಸೇನಾ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಕಾಂಗ್ರೆಸ್ ಪಕ್ಷದ ಮಹಾ ವಿಕಾಸ್ ಅಘಾಡಿ ಮೈತ್ರಿ ಹಾಗೂ ಬಿಜೆಪಿ ಮತ್ತು ಶಿವಸೇನಾ (ಏಕನಾಥ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ)ದ ಮಹಾಯುಟಿ ಮೈತ್ರಿ ನಡುವೆ ನೇರ ಸ್ಪರ್ಧೆಯನ್ನು ನಿರೀಕ್ಷಿಸಲಾಗುತ್ತಿದೆ. ಇತ್ತೀಚಿನ ಸಂಸತ್ ಚುನಾವಣೆಯಲ್ಲಿ 48 ಸಂಸತ್ ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಮಹಾಯುಟಿ ಮೈತ್ರಿ 17 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಬಿಜೆಪಿ ಕಳೆದ ಸಲಕ್ಕಿಂತ 9 ಸ್ಥಾನ ಕಡಿಮೆ ಗಳಿಸಿತ್ತು. ಐದು ವರ್ಷ ಹಿಂದೆ ಬಿಜೆಪಿಗೆ 23 ಸ್ಥಾನ ಬಂದಿತ್ತು. ಇನ್ನೊಂದೆಡೆ ಮಹಾ ವಿಕಾಸ ಅಘಾಡಿ 30 ಸ್ಥಾನಗಳಲ್ಲಿ ಗೆಲುವು ಕಂಡಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನ, ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.