Atiq Ahmed convicted: ಉಮೇಶ್ ಪಾಲ್ ಕಿಡ್ನಾಪ್ ಪ್ರಕರಣದಲ್ಲಿ ಅತೀಕ್ ಅಹ್ಮದ್ ದೋಷಿಯೆಂದು ತೀರ್ಪು ನೀಡಿದ ನ್ಯಾಯಾಲಯ
ಬಹುಜನ ಸಮಾಜವಾದಿ ಪಕ್ಷದ ಮಾಜಿ ಶಾಸಕ ರಾಜು ಪಾಲ್ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮಾಜಿ ಶಾಸಕ ಮತ್ತು ಸಂಸದ ಅತೀಕ್ ಅಹ್ಮದ್ ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದೆ.
ಅಲಹಾಬಾದ್: ಬಹುಜನ ಸಮಾಜವಾದಿ ಪಕ್ಷದ ಮಾಜಿ ಶಾಸಕ ರಾಜು ಪಾಲ್ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮಾಜಿ ಶಾಸಕ ಮತ್ತು ಸಂಸದ ಅತೀಕ್ ಅಹ್ಮದ್ ದೋಷಿಯೆಂದು ನ್ಯಾಯಾಲಯ ಘೋಷಿಸಿದೆ. ಈ ಪ್ರಕರಣದಲ್ಲಿ ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಇತರ ಮೂವರನ್ನು ತಪ್ಪಿತಸ್ಥರೆಂದು ಪ್ರಯಾಗರಾಜ್‌ನ ಎಂಪಿ-ಎಂಎಲ್‌ಎ ಕೋರ್ಟ್ ತೀರ್ಪು ನೀಡಿದೆ.
ಅತೀಕ್ ಅಹ್ಮದ್ ಮತ್ತು ಮಾಜಿ ಕಾರ್ಪೊರೇಟರ್ ದಿನೇಶ್ ಪಾಸಿ ಅವರು ಐಪಿಸಿಯ ಸೆಕ್ಷನ್ 364 ಎ (ಒಬ್ಬ ವ್ಯಕ್ತಿಯನ್ನು ಅಪಹರಿಸುವುದು ಮತ್ತು ವ್ಯಕ್ತಿಯನ್ನು ಕೊಲೆ ಮಾಡುವ ಅಪಾಯವನ್ನುಂಟುಮಾಡುವುದು) ನಡಿ ಅಪರಾಧಿಗಳೆಂದು ಘೋಷಿಸಲಾಗಿದೆ.
45 ಸದಸ್ಯರ ಉತ್ತರ ಪ್ರದೇಶ ಪೊಲೀಸ್ ತಂಡವು ಅತೀಕ್ ಅಹ್ಮದ್‌ನನ್ನು ನಿನ್ನೆ ಗುಜರಾತ್‌ನಿಂದ ಪ್ರಯಾಗ್‌ರಾಜ್‌ಗೆ ಕರೆತಂದಿದೆ. ಈತನನ್ನು ನೈನಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದ್ದು, ಮಹಿಳಾ ಜೈಲಿನ ಪಕ್ಕದಲ್ಲಿರುವ ಬ್ಯಾರಕ್‌ನಲ್ಲಿ ಹೆಚ್ಚಿನ ಭದ್ರತೆಯಲ್ಲಿ ಸೆರೆಮನೆಯಲ್ಲಿ ಇರಿಸಲಾಗಿತ್ತು.
ಉತ್ತರ ಪ್ರದೇಶ ಪೊಲೀಸರು ಅತೀಕ್ ಅಹ್ಮದ್ ಅನ್ನು ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಿಂದ ಪ್ರಯಾಗ್‌ರಾಜ್‌ಗೆ ಕರೆದೊಯ್ಯಲು ಬಂದ ಸಮಯದಲ್ಲಿ ಆತ ಭಯದಿಂದ ಕಿರುಚಿದ್ದ. ಜೈಲಿನಿಂದ ಹೊರಬಂದ ತಕ್ಷಣ ಅಲ್ಲಿದ್ದ ಪತ್ರಕರ್ತರಿಗೆ "ನನ್ನನ್ನು ಕೊಲೆ ಮಾಡುತ್ತಾರೆ" ಎಂದು ಕೂಗಿ ಹೇಳಿದ್ದ.
ಅತೀಕ್ ಅಹ್ಮದ್ ಫೆಬ್ರವರಿ 24 ರಂದು ಪ್ರಯಾಗ್‌ರಾಜ್‌ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ವಕೀಲ ಉಮೇಶ್ ಪಾಲ್ ಅವರ ಹತ್ಯೆಯ ಪ್ರಮುಖ ಆರೋಪಿ ಎಂದು ಕೋರ್ಟ್ ತೀರ್ಪು ನೀಡಿದೆ. ಇನ್ನೊಂದು ಪ್ರಮುಖ ಬೆಳವಣಿಗೆಯಲ್ಲಿ ಉತ್ತರ ಪ್ರದೇಶದ ಪೊಲೀಸರ ಕಸ್ಟಡಿಯಲ್ಲಿರುವ ನನಗೆ ರಕ್ಷಣೆ ನೀಡಬೇಕೆಂದು ಅಹ್ಮದ್ ನೀಡಿದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನಾನು ಹಿಂದೆ ಡಾನ್ ಆಗಿದ್ದು, ಬಳಿಕ ರಾಜಕಾರಣಿಯಾಗಿರುವುದರಿಂದ ಜೀವಬೆದರಿಕೆ ಇದೆ. ಹೀಗಾಗಿ ನನಗೆ ರಕ್ಷಣೆ ಬೇಕೆಂದು ಅರ್ಜಿ ಸಲ್ಲಿಸಿದ್ದರು. ರಕ್ಷಣೆಗಾಗಿ ಅಲಹಾಬಾದ್ ಹೈಕೋರ್ಟ್ ನೆರವು ಪಡೆಯುವಂತೆ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠವು ಸೂಚಿಸಿದೆ ಎಂದು ಸುದ್ದಿಸಂಸ್ಥೆ ಪಿಟಿಐ ತಿಳಿಸಿದೆ.
ಉತ್ತರ ಪ್ರದೇಶ ಪೊಲೀಸರು ಸೋಮವಾರ ಸಂಜೆ ಅತೀಕ್ ಅಹ್ಮದ್ ನನ್ನು ಬಿಗಿ ಭದ್ರತೆಯ ನಡುವೆ ಪ್ರಯಾಗ್‌ರಾಜ್‌ನಲ್ಲಿರುವ ನೈನಿ ಕೇಂದ್ರ ಕಾರಾಗೃಹಕ್ಕೆ ಸುರಕ್ಷಿತವಾಗಿ ಕರೆತಂದಿದ್ದರು. ಸುಮಾರು ಅರುವತ್ತಕ್ಕೂ ಹೆಚ್ಚು ಪೊಲೀಸರ ಬಿಗಿಭದ್ರತೆಯಲ್ಲಿ ಕರೆತರಲಾಗಿತ್ತು.
ರಾಜಕಾರಣಿಯಾಗಿ ಬದಲಾಗಿದ್ದ ದರೋಡೆಕೋರ ಅತೀಕ್‌ನನ್ನು ಗುಜರಾತ್‌ನ ಸಬರಮತಿ ಜೈಲಿನಿಂದ ಕರೆತರಲಾಗಿತ್ತು. ಇಂದು ಪ್ರಯಾಗರಾಜ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇತ್ತೀಚಿನ ಉಮೇಶ್ ಪಾಲ್ ಹತ್ಯೆ ಪ್ರಕರಣ ಸೇರಿದಂತೆ 100 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಅತೀಕ್ ಅಹ್ಮದ್ ಹೆಸರಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಮೋಹಿತ್ ಜೈಸ್ವಾಲ್ ಅಪಹರಣ ಮತ್ತು ಹಲ್ಲೆ ನಡೆಸಿದ ಆರೋಪವೂ ಅತೀಕ್ ಅಹ್ಮದ್ ಮೇಲಿದೆ. ಜೂನ್ 2019ರಿಂದ ಅತೀಕ್ ಅಹ್ಮದ್‌ನನ್ನು ಸಬರಮತಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು.