ಭಾರತದ ಮಾರುಕಟ್ಟೆಗೆ 2024ರ ಬಜಾಜ್ ಪಲ್ಸರ್ 150 ಆಗಮನ, ಹೊಸ ಫೀಚರ್ಸ್ ಏನೇನಿವೆ, ಬದಲಾವಣೆಗಳೇನು- ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದ ಮಾರುಕಟ್ಟೆಗೆ 2024ರ ಬಜಾಜ್ ಪಲ್ಸರ್ 150 ಆಗಮನ, ಹೊಸ ಫೀಚರ್ಸ್ ಏನೇನಿವೆ, ಬದಲಾವಣೆಗಳೇನು- ಇಲ್ಲಿದೆ ವಿವರ

ಭಾರತದ ಮಾರುಕಟ್ಟೆಗೆ 2024ರ ಬಜಾಜ್ ಪಲ್ಸರ್ 150 ಆಗಮನ, ಹೊಸ ಫೀಚರ್ಸ್ ಏನೇನಿವೆ, ಬದಲಾವಣೆಗಳೇನು- ಇಲ್ಲಿದೆ ವಿವರ

ಭಾರತದ ಮಾರುಕಟ್ಟೆಗೆ 2024ರ ಬಜಾಜ್ ಪಲ್ಸರ್ 150 ಆಗಮನವಾಗಿದ್ದು, ನಿಧಾನವಾಗಿ ದೇಶದೆಲ್ಲೆಡೆ ಈ ಹೊಸ ಬೈಕ್‌ ಸಿಗಲಿದೆ. ಹೊಸ ಪಲ್ಸರ್‌ 150ಯಲ್ಲಿ ಹೊಸ ಫೀಚರ್ಸ್ ಏನೇನಿವೆ, ಬದಲಾವಣೆಗಳೇನು ಎಂಬುದರ ವಿವರ ಇಲ್ಲಿದೆ.

2024ರ ಬಜಾಜ್ ಪಲ್ಸರ್ 150 ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಸಿಗಲಿದೆ.
2024ರ ಬಜಾಜ್ ಪಲ್ಸರ್ 150 ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಸಿಗಲಿದೆ. (Photo courtesy: Youtube/AutoTechInfo)

ನವದೆಹಲಿ/ ಬೆಂಗಳೂರು: ಬಜಾಜ್‌ ಆಟೋ 2024ರ ಪಲ್ಸರ್ ಎನ್‌ 250 ಬೈಕ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಇದರ ನಡುವೆಯೇ, ಪಲ್ಸರ್ 150 ಮಾಡೆಲ್ ಬೈಕ್‌ ಅನ್ನು ಸದ್ದಿಲ್ಲದೇ ಅಪ್ಡೇಟ್ ಮಾಡಿರುವ ಬಜಾಜ್‌, ಅವುಗಳನ್ನೂ ಡೀಲರ್‌ಗಳಿಗೆ ಕಳುಹಿಸತೊಡಗಿದೆ. ಈ ಪಲ್ಸರ್‌ 150 ಬೈಕ್‌ಗಳು ಡೀಲರ್‌ಗಳನ್ನು ತಲಪಲಾರಂಭಿಸಿದೆ. 2024ರ ಹೊಚ್ಚ ಹೊಸ ಪಲ್ಸರ್ ಮಾಡೆಲ್‌ನಲ್ಲಿ ಕೆಲವು ಅಲಂಕಾರಿಕ ಸುಧಾರಣೆಗಳನ್ನು ಮಾಡಿದ್ದು, ಹೊಸ ಫೀಚರ್‌ಗಳನ್ನೂ ಪರಿಚಯಿಸಿದೆ. ಆದಾಗ್ಯೂ, 2024ರ ಪಲ್ಸರ್ 150 ಮಾಡೆಲ್‌ನ ದರವನ್ನು ಏರಿಸಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ಬಜಾಜ್‌ ಪಲ್ಸರ್ 150 ರ ಹೊಸ ಮಾಡೆಲ್‌ನಲ್ಲಿ ಪಲ್ಸರ್ ಎಂಬ 3ಡಿ ಲಾಂಛನ ಇದ್ದು, 150 ಎಂಬುದು ಇಂಧನ ಟ್ಯಾಂಕ್‌ ಉದ್ದಕ್ಕೂ ಹರಡಿಕೊಂಡಿದೆ. ಪ್ರಸಾರವಾಗಿರುವ ವಿಡಿಯೋದಲ್ಲಿ ಕೆಂಪು ಮತ್ತು ಕಪ್ಪು ವರ್ಣದ ಪಲ್ಸರ್ ಬೈಕ್‌ ಕಂಡುಬಂದಿದೆ. ಇದಲ್ಲದೆ, ಪೂರ್ಣ ಕಪ್ಪು ವರ್ಣ, ನೀಲಿ ಮತ್ತು ಕಪ್ಪು ಬಣ್ಣದ ಪಲ್ಸರ್ ಬೈಕ್‌ಗಳೂ ಇವೆ. ಇವಲ್ಲದೇ, ಇನ್ನೂ ಕೆಲವು ವರ್ಣದಲ್ಲಿ ಪಲ್ಸರ್ ಬೈಕ್ ಮಾರುಕಟ್ಟೆಯಲ್ಲಿ ಲಭ್ಯ ಇವೆ ಎಂದು ಎಚ್‌ಟಿ ಆಟೋ ವರದಿ ಹೇಳಿದೆ.

2024ರ ಹೊಸ ಪಲ್ಸರ್ 150 ಬೈಕ್‌ನಲ್ಲಿ ಏನಿವೆ ವಿಶೇಷ

ಬಜಾಜ್‌ ಮಾರುಕಟ್ಟೆಗೆ ಬಿಟ್ಟಿರುವ 2024ರ ಹೊಸ ಪಲ್ಸರ್‌ 150 ಬೈಕ್‌ನಲ್ಲಿ ಕೆಲವು ಅಲಂಕಾರಿಕ ಸುಧಾರಣೆ ಮತ್ತು ಹೊಸ ಫೀಚರ್‌ಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ, ಹೊಸ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್ ರೂಪದಲ್ಲಿ ಬಹುದೊಡ್ಡ ಬದಲಾವಣೆ ಮಾಡಲಾಗಿದೆ.

ಅನಲಾಗ್‌ ಟ್ಯಾಕೋಮೀಟರ್ ಜಾಗದಲ್ಲಿ ಡಿಜಿಟಲ್‌ ಸ್ಪೀಡೋ ಮೀಟರ್‌ ಕಾಣಿಸಿಕೊಂಡಿದೆ. ಈ ಹೊಸ ಡಿಜಿಟಲ್ ಸ್ಪೀಡೋಮೀಟರ್ ಬೈಕ್‌ನ ಒಟ್ಟು ನಿಯಂತ್ರಣದ ಡಿಜಿಟಲ್ ಘಟಕವಾಗಿ ಕಂಡುಬಂದಿದೆ. ಹೊಸ ಡಿಜಿಟಲ್ ಕ್ಲಸ್ಟರ್‌ನಲ್ಲಿ ಬಜಾಜ್‌ನ ರೈಡ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಬ್ಲೂಟೂತ್ ಸಂಪರ್ಕ ಸಾಧಿಸುವುದಕ್ಕೂ ಅವಕಾಶ ನೀಡಲಾಗಿದೆ. ಇದರಲ್ಲಿ ಮೊಬೈಲ್‌ಗೆ ಬರುವ ಸಂದೇಶಗಳನ್ನು ಗಮನಿಸಬಹುದು. ಕರೆಯನ್ನೂ ನಿರ್ವಹಿಸಬಹುದು. ಇದಲ್ಲದೆ, ಮೊಬೈಲ್ ಅನ್ನು ಚಾರ್ಜ್ ಮಾಡಲು ಯುಎಸ್‌ಬಿ ಪೋರ್ಟ್ ಸಹ ಇದೆ. ಹೊಸ ಕ್ಲಸ್ಟರ್ ಇಂಧನ ಬಳಕೆ, ಸರಾಸರಿ ಇಂಧನ ಆರ್ಥಿಕತೆ ಮತ್ತು ಗೇರ್ ಸ್ಥಾನದ ಮೇಲೆ ನೈಜ-ಸಮಯದ ಅಪ್ಡೇಟ್ಸ್‌ ಅನ್ನು ಒದಗಿಸುತ್ತದೆ.

ಹೊಸ ಪಲ್ಸರ್ 150 ಬೈಕ್‌ನ ಇಂಜಿನ್‌ನಲ್ಲಿ ಏನು ಬದಲಾವಣೆ

ಹೊಸ ಪಲ್ಸರ್‌ 150 ಬೈಕ್‌ನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಯನ್ನು ಬಜಾಜ್ ಕಂಪನಿ ಮಾಡಿಲ್ಲ. ಬೈಕ್‌ನ ಎಂಜಿನ್‌ 149.5 ಸಿಸಿ ಸಾಮರ್ಥ್ಯ ಹೊಂದಿದ್ದು, ಸಿಂಗಲ್ ಸಿಲಿಂಡರ್ ಎಂಜಿನ್ ಮುಂದುವರಿದಿದೆ. ಏರ್ ಕೂಲ್‌ ವ್ಯವಸ್ಥೆಯನ್ನು ಹೊಂದಿದೆ. ಈ ಎಂಜಿನ್ f13.8 ಬಿಎಚ್‌ಪಿ ಗರಿಷ್ಠ ಶಕ್ತಿಯಲ್ಲಿ 8500 ಆರ್‌ಪಿಎಂ ಮತ್ತು ಪೀಕ್ ಟಾರ್ಕ್‌ ಫಲಿತಾಂಶವಾಗಿ 13.25 ಎನ್‌ಎಂನಲ್ಲಿ 6500 ಆರ್‌ಪಿಎಂ ಹೊಂದಿದೆ. ಇನ್ನು ಗೇರ್ ಬಾಕ್ಸ್ ವಿಚಾರಕ್ಕೆ ಬಂದರೆ 5 ಸ್ಪೀಡ್ ಗೇರ್ ಅನ್ನು ಹೊಂದಿದೆ.

ಬಜಾಜ್‌ ಕಂಪನಿಯು ಪ್ರಸ್ತು ಮೂರು ಹೊಸ ಮೋಟಾರ್ ಸೈಕಲ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಅದರಲ್ಲಿ ಒಂದು ಬಜಾಜ್ ಪಲ್ಸರ್ ಎನ್‌250. ಈ ಮೋಟಾರ್‌ ಸೈಕಲ್‌ ಸಿಎನ್‌ಜಿ ಚಾಲಿತವಾಗಿದ್ದು, ಇದುವರೆಗಿನ ದೊಡ್ಡ ಪಲ್ಸರ್ ಆಗಿರಲಿದೆ ಎಂದು ಹೆಚ್‌ಟಿ ಆಟೋ ವರದಿ ಮಾಡಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.