2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಬಹುಬೇಗ ಗ್ರಾಹಕರ ಗಮನಸೆಳೆದಿದೆ. ಸ್ವಿಫ್ಟ್‌ ಕಾರು ಈಗಾಗಲೇ ಜನಪ್ರಿಯ ಮಾಡೆಲ್ ಆಗಿದ್ದು, ಸುಧಾರಿತ ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ.

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ
2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ

ನವದೆಹಲಿ: ಗ್ರಾಹಕ ವಲಯದಲ್ಲಿ ಬಹುಬೇಡಿಕೆ ಹೊಂದಿರುವ ಮಾರುತಿ ಸುಜುಕಿಯ ಪ್ರಮುಖ ಉತ್ಪನ್ನ ಸ್ವಿಫ್ಟ್‌. ಹೊಸ ಹೊಸ ಐಷಾರಾಮಿ ಎಸ್‌ಯುವಿ ಮಾರುಕಟ್ಟೆ ಪ್ರವೇಶಿಸಿ ಗ್ರಾಹಕರನ್ನು ಸೆಳೆಯುತ್ತಿದ್ದರೂ, ಮಾರುತಿ ಸ್ವಿಫ್ಟ್‌ ಕಾರು ತನ್ನದೇ ಛಾಪು ಹೊಂದಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮುಂದುವರಿದಿದೆ. ಭಾರತೀಯರ ಮಾರುಕಟ್ಟೆಗೆ ಗುರುವಾರ (ಮೇ 9) ಮಾರುತಿ ಸುಜುಕಿ ತನ್ನ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಅನ್ನು ಪರಿಚಯಿಸಿದೆ.

ಮಾರುತಿ ಸುಜುಕಿಯ 2024ರ ಸ್ವಿಫ್ಟ್ ಕಾರು ಮೂರನೇ ತಲೆಮಾರಿನ ಸ್ವಿಫ್ಟ್‌ನ ಸುಧಾರಿತ ರೂಪವಾಗಿದ್ದು, ಹಲವಾರು ಬದಲಾವಣೆಗಳೊಂದಿಗೆ ಬಂದಿದೆ. ಬಾಹ್ಯ ನೋಟ, ಒಳಾಂಗಣ, ಎಂಜಿನ್ ಮತ್ತು ಫೀಚರ್‌ಗಳಲ್ಲೂ ಬದಲಾವಣೆಗಳನ್ನು ಮಾಡಿದೆ. ಇದು ಗ್ರಾಹಕರ ವರ್ಗದ ಮನಗೆಲ್ಲಬಹುದು ಎಂಬ ಆಶಯದಲ್ಲಿದೆ ಮಾರುತಿ ಸುಜುಕಿ. ಸ್ವಿಫ್ಟ್ ಕಾರು ಇದುವರೆಗೂ ಗ್ರಾಹಕ ವರ್ಗದ ಅಚ್ಚುಮೆಚ್ಚಿನ ಕಾರುಗಳಲ್ಲಿ ಒಂದಾಗಿರುವುದು ಇದಕ್ಕೆ ಕಾರಣ.

2024 ಮಾರುತಿ ಸ್ವಿಫ್ಟ್ ಬಗ್ಗೆ ತಿಳಿದುಕೊಳ್ಳಬೇಕಾದ 5 ವಿಷಯ

1) 2024 ಮಾರುತಿ ಸುಜುಕಿ ಸ್ವಿಫ್ಟ್: ಬಾಹ್ಯ ಬದಲಾವಣೆಗಳು

ಮಾರುತಿ ಸುಜುಕಿ ಸ್ವಿಫ್ಟ್‌ನ ಒಟ್ಟು ನೋಟದಲ್ಲಿ, ಛಾಯೆಯಲ್ಲಿ ಬದಲಾವಣೆ ಆಗಿಲ್ಲ. ಅದು ಅಷ್ಟು ಚೆನ್ನಾಗಿರುವ ಕಾರಣ ಅದನ್ನು ಕಂಪನಿ ಉಳಿಸಿಕೊಂಡಿದೆ. ಆದರೆ, ಕಾರಿನ ಮುಂಭಾಗದಲ್ಲಿ, ಎಲ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಸ್ ಮತ್ತು ಪ್ರೊಜೆಕ್ಟರ್ ಸೆಟಪ್ ಹೊಂದಿರುವ ಹೊಸ ಕಪ್ಪು-ಔಟ್ ಹೆಡ್ ಲ್ಯಾಂಪ್ ಗಳಿವೆ. ಹೊಸ ಗ್ರಿಲ್ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೆಲವು ಕಡೆ ಇಲ್ಲದೇ ಇರುವಂತಹ ಫಾಗ್ ಲ್ಯಾಂಪ್‌ಗಳನ್ನು ಸಹ ನೀಡುತ್ತಿದೆ. ಹೊಸ ಅಲಾಯ್ ಚಕ್ರಗಳಿವೆ ಮತ್ತು ಡೋರ್ ಹ್ಯಾಂಡಲ್‌ಗಳನ್ನು ಹಿಂಭಾಗದ ಬಾಗಿಲುಗಳಿಗೂ ಮತ್ತೊಮ್ಮೆ ಜೋಡಿಸಲಾಗಿದೆ.

2) 2024 ಮಾರುತಿ ಸುಜುಕಿ ಸ್ವಿಫ್ಟ್: ಕ್ಯಾಬಿನ್ ಬದಲಾವಣೆಗಳು

ಮಾರುತಿ ಸುಜುಕಿ ತನ್ನ ಎಲ್ಲ ವಾಹನಗಳಲ್ಲಿ ಕ್ಯಾಬಿನ್ ಅನುಭವವನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಿದೆ. ಸ್ವಿಫ್ಟ್‌ನ ಡ್ಯಾಶ್‌ಬೋರ್ಡ್ ವಿನ್ಯಾಸವು ಬಲೆನೊದಲ್ಲಿ ಕಂಡುಬರುವ ವಿನ್ಯಾಸವನ್ನು ಹೋಲುತ್ತದೆ. ಹೊಸ ಅನಲಾಗ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್ ಇದೆ. ಆದರೆ ಎಂಐಡಿ ಇನ್ನೂ ಹಾಗೆಯೇ ಇದೆ. ಹವಾಮಾನ ನಿಯಂತ್ರಣವನ್ನು ಇತರ ಹೊಸ ಮಾರುತಿ ವಾಹನಗಳಂತೆಯೇ ರೂಪಿಸಲಾಗಿದೆ. ಮಾರುತಿ ಸುಜುಕಿ ವೈರ್‌ಲೆಸ್ ಚಾರ್ಜರ್, 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು ಹೆಡ್ಸ್-ಅಪ್ ಡಿಸ್ ಪ್ಲೇಯನ್ನು ಸೇರಿಸಿದೆ.

ಮಾರುತಿ ಸುಜುಕಿ ಸ್ವಿಫ್ಟ್ 2024 ಕಾರಿನ ಬೆಲೆ 6.50 ಲಕ್ಷ ರೂ.

3) 2024 ಮಾರುತಿ ಸುಜುಕಿ ಸ್ವಿಫ್ಟ್: ಹೊಸ ಎಂಜಿನ್

ನಾಲ್ಕು ಸಿಲಿಂಡರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಬದಲು ಈಗ ಹೊಸ ಮೂರು ಸಿಲಿಂಡರ್ ಝಡ್-ಸೀರಿಸ್ ಎಂಜಿನ್‌ ಬಂದಿದೆ. ಇದು ಕಡಿಮೆ-ಮಟ್ಟದ ಟಾರ್ಕ್, ಉತ್ತಮ ಹೊರಸೂಸುವಿಕೆ ಮತ್ತು ಇಂಧನ ಮಿತವ್ಯಯಕ್ಕಾಗಿ ಟ್ಯೂನ್ ಮಾಡಲಾಗಿದೆ ಎಂದು ಮಾರುತಿ ಹೇಳುತ್ತದೆ. ಈ ಎಂಜಿನ್ 80 ಬಿ ಹೆಚ್ ಪಿ ಪವರ್ ಮತ್ತು 112 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಮಾರುತಿ ಸುಜುಕಿ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ 5-ಸ್ಪೀಡ್ ಎಎಂಟಿಯನ್ನು ನೀಡುತ್ತಿದೆ. ತಯಾರಕರು ಸುಮಾರು 25 ಕಿ.ಮೀ ಇಂಧನ ದಕ್ಷತೆಯನ್ನು ಪ್ರತಿಪಾದಿಸುತ್ತಿದ್ದಾರೆ. 

4) 2024 ಮಾರುತಿ ಸುಜುಕಿ ಸ್ವಿಫ್ಟ್: ಸುರಕ್ಷತಾ ಫೀಚರ್‌ಗಳು

2024 ರ ಸ್ವಿಫ್ಟ್‌ನಲ್ಲಿ ಸುರಕ್ಷತಾ ಫೀಚರ್‌ಗಳು ಹೆಚ್ಚಾಗಿವೆ. ಇದು ಈಗ ಆರು ಏರ್ ಬ್ಯಾಗ್ ಗಳು, ಇಬಿಡಿಯೊಂದಿಗೆ ಎಬಿಎಸ್, ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಇದಲ್ಲದೆ, ಹೊಸ ವೈಡ್-ಆಂಗಲ್ ರಿಯರ್ ಕ್ಯಾಮೆರಾ, ಸೆಕ್ಯುರಿಟಿ ಅಲಾರಂ ಸಿಸ್ಟಮ್ ಮತ್ತು ಹೈಸ್ಪೀಡ್ ಅಲರ್ಟ್ ಅನ್ನು ಸಹ ಹೊಂದಿದೆ.

5) 2024 ಮಾರುತಿ ಸುಜುಕಿ ಸ್ವಿಫ್ಟ್: ಬೆಲೆ ಮತ್ತು ರೂಪಾಂತರಗಳು

2024 ಸ್ವಿಫ್ಟ್ ಐದು ರೂಪಾಂತರಗಳಲ್ಲಿ ಅಂದರೆ LXi, VXi, VXi (O), ZXi ಮತ್ತು ZXi+ ಮಾರುಕಟ್ಟೆಗೆ ಬಂದಿವೆ. ಸ್ವಿಫ್ಟ್‌ನ ಬೆಲೆ 6.49 ಲಕ್ಷ ರೂಪಾಯಿಯಿಂದ ಪ್ರಾರಂಭವಾಗಿ 9.65 ಲಕ್ಷ ರೂಪಾಯಿ ತನಕ ಇದೆ. ಈ ಎರಡೂ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.