JaGUar: ಜಾಗ್ವಾರ್ ಲೋಗೊ ಬದಲಾವಣೆ, ಜೆಜಿಯು ದೊಡ್ಡಕ್ಷರ, ಎಎಆರ್ ಸಣ್ಣಕ್ಷರ, ಈ ಬದಲಾವಣೆ ಯಾಕೆಂದು ಕೇಳುವಿರಾ
Jaguar Logo Change: ಬ್ರಿಟನ್‌ನ ಜನಪ್ರಿಯ ವಾಹನ ತಯಾರಿಕಾ ಕಂಪನಿ ಜಾಗ್ವಾರ್ ತನ್ನ ಬ್ರ್ಯಾಂಡಿಂಗ್‌ನಲ್ಲಿ ತುಸು ಬದಲಾವಣೆ ಮಾಡಿದೆ. ಕಂಪನಿಯು ತನ್ನ ಎಲ್ಲಾ ಹೊಸ ಕಾರುಗಳನ್ನು ಎಲೆಕ್ಟ್ರಿಕ್ ಮಯವಾಗಿಸುವ ಪರ್ವಕಾಲದಲ್ಲಿ ತನ್ನ ಲೋಗೊವನ್ನೂ ಬದಲಾಯಿಸುತ್ತಿದೆ.
Jaguar Logo Change: ಬ್ರಿಟನ್‌ನ ವಾಹನ ತಯಾರಿಕಾ ಕಂಪನಿ ಜಾಗ್ವಾರ್ ತನ್ನ ಬ್ರಾಂಡಿಂಗ್ ಅನ್ನು ಬದಲಾಯಿಸುತ್ತಿದೆ. ಇದನ್ನು ಹೊಸ ಶಖೆ ಎಂದು ಕರೆಯುತ್ತಿದೆ. 2026ರಲ್ಲಿ ಕಂಪನಿಯು ಮೊದಲ ಎಲೆಕ್ಟ್ರಿಕ್ ಲಗ್ಷುರಿ ಕಾರನ್ನು ಪರಿಚಯಿಸಲಿದೆ. ಇನ್ಮುಂದೆ ಕಂಪನಿಯ ಎಲ್ಲಾ ಹೊಸ ಕಾರುಗಳು ಎಲೆಕ್ಟ್ರಿಕ್ ಆಗಿರಲಿದೆ. ಪೆಟ್ರೋಲ್, ಡೀಸೆಲ್‌ನಿಂದ ಎಲೆಕ್ಟ್ರಿಕ್‌ಗೆ ಪರಿವರ್ತನೆಯಾಗುವ ಈ ಬದಲಾವಣೆಯ ಕಾಲಘಟ್ಟದಲ್ಲಿ ಕಂಪನಿಯು ತನ್ನ ಲೋಗೊವನ್ನೂ ಬದಲಾಯಿಸುತ್ತಿದೆ.
ಜಾಗ್ವಾರ್ ಕಂಪನಿಯ ಹೊಸ ಲೋಗೊ
ಅಕ್ಷರವನ್ನು ಓದುವಾಗ ಲೊಗೊದಲ್ಲಿ ಯಾವುದೇ ಬದಲಾವಣೆ ಕಾಣಿಸದು. ಮೊದಲಿನಂತೆ ಜೆ ಎ ಜಿ ಯು ಎ ಆರ್ ಸ್ಪೆಲ್ಲಿಂಗ್ ಹೊಂದಿದೆ. ಆದರೆ, ಲೋಗೊ ಮತ್ತು ಫಾಂಟ್ ವಿನ್ಯಾಸದಲ್ಲಿ ಕಂಪನಿಯು ಬದಲಾವಣೆ ಮಾಡಿದೆ. ಜೆ ಜಿ ಯು ಅಕ್ಷರಗಳನ್ನು ದೊಡ್ಡ ಅಕ್ಷರಗಳಲ್ಲಿ ಮತ್ತು ಎ ಎ ಆರ್ ಅಕ್ಷರಗಳನ್ನು ಚಿಕ್ಕ ಅಕ್ಷರಗಳಲ್ಲಿ ವಿನ್ಯಾಸ ಮಾಡಲಾಗಿದೆ. ಫಾಂಟ್, ಫಾಂಟ್‌ಗಳ ನಡುವಿನ ಸ್ಪೇಸ್‌ನಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.
"ಇದು ಜಾಗ್ವಾರ್‌ನ ಹೊಸತನದ ಮರುಕಲ್ಪನೆಯಾಗಿದೆ. ಒಂದೊಮ್ಮೆ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಈ ಕಂಪನಿಯು ಮತ್ತೆ ಇನ್ನಷ್ಟು ಪ್ರೀತಿ ಪಡೆಯುವಂತೆ ಮಾಡಲಾಗಿದೆ. ಭವಿಷ್ಯದ ಅವಶ್ಯಕತೆ ಗಮನದಲ್ಲಿಟ್ಟುಕೊಂಡು ಹೊಸತನದಿಂದ ರೂಪಿಸಲಾಗಿದೆ" ಎಂದು ಜಾಗ್ವಾರ್ ಲ್ಯಾಂಡ್ ರೋವರ್‌ನ ಮುಖ್ಯ ಕ್ರಿಯೆಟಿವ್ ಅಧಿಕಾರಿ ಮೆಕ್‌ಗವರ್ನ್ ಹೇಳಿದ್ದಾರೆ ಎಂದು ಕಾರ್ ಡೀಲರ್ ಮ್ಯಾಗಜೀನ್ ವರದಿ ಮಾಡಿದೆ.
ವರ್ಣರಂಜಿತ ಉಡುಪುಗಳನ್ನು ಧರಿಸಿರುವ ಅತ್ಯಂತ ಗಂಭೀರವಾದ (ಅಥವಾ ದುಃಖದ?) ಮಾದರಿಗಳನ್ನು ಒಳಗೊಂಡಿರುವ ಪಾಪ್ ಆರ್ಟ್ ಕಾಲದ ಜಾಹೀರಾತಿಗೆ ಬದಲು ಈಗಿನ ಆಧುನಿಕ, ಉತ್ಸಾಹದ ಬ್ರ್ಯಾಂಡ್ ಆಗಿ ಜಾಗ್ವಾರ್ ಅನ್ನು ಬದಲಾಯಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಜಾಗ್ವಾರ್ ತನ್ನ ಬ್ರ್ಯಾಂಡಿಂಗ್‌ಗಾಗಿ ಕಂಪನಿಯ ಸಂಸ್ಥಾಪಕ ಸರ್ ವಿಲಿಯಂ ಲಿಯಾನ್ಸ್ ಅವರ ನುಡಿಮುತ್ತಿನ ಮೇಲೆ ಗಮನ ಹರಿಸಿದೆ. "ಜಾಗ್ವಾರ್ ನಂಥಿಂಗ್‌ನ ನಕಲು ಆಗಿರಬೇಕು. “A Jaguar should be a copy of nothing.” ಎಂಬ ಕೋಟ್‌ಗೆ ತಕ್ಕಂತೆ ಯಾವುದೇ ನಕಲು ಇಲ್ಲದ ಟ್ಯಾಗ್‌ಲೈನ್‌ಗಳನ್ನು ಹೊಂದಿದೆ. "ಕಾಪಿ ನಥಿಂಗ್, ವಿವಿದ್" ಮುಂತಾದ ಮಾರ್ಕೆಟಿಂಗ್ ಲೈನ್‌ಗಳನ್ನು ಮುದ್ರಿಸುತ್ತಿದೆ.
2026ರ ಜಾಗ್ವಾರ್ ಸೂಪರ್-ಜಿಟಿಯಂತಹ ಮುಂಬರುವ ಕಾರುಗಳು ಸಂಪೂರ್ಣವಾಗಿ ಹೊಸ ವಿನ್ಯಾಸದ ಅಂಶಗಳನ್ನು ಹೊಂದಿರಬಹುದು ಎಂಬ ಸೂಚನೆಯೂ ಈ ಹೊಸ ಬ್ರಾಂಡಿಂಗ್‌ನಲ್ಲಿದೆ. ಕಂಪನಿಯು ಶೂನ್ಯ ಇಂಗಾಲ ಪರಿಕಲ್ಪನೆಯಡಿ ತನ್ನ ಎಲ್ಲಾ ಹೊಸ ಕಾರುಗಳನ್ನು ಎಲೆಕ್ಟ್ರಿಕ್ ಮೋಟಾರ್‌ನಲ್ಲಿ ಬಿಡುಗಡೆ ಮಾಡಲಿದೆ. ಈ ಮೂಲಕ ಜಗತ್ತಿನಲ್ಲಿ ಪಳೆಯುಳಿಕೆ ಇಂಧನಗಳ ಬಳಕೆ ತಗ್ಗಿಸಲು ಮುಂದಾಗಿದೆ.