Electric Scooter: ಒಮ್ಮೆ ಚಾರ್ಜ್ ಮಾಡಿದರೆ 165 ಕಿಲೋ ಮೀಟರ್ ಓಡುತ್ತೆ; ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ, ಇತರೆ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Electric Scooter: ಒಮ್ಮೆ ಚಾರ್ಜ್ ಮಾಡಿದರೆ 165 ಕಿಲೋ ಮೀಟರ್ ಓಡುತ್ತೆ; ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ, ಇತರೆ ಮಾಹಿತಿ ಇಲ್ಲಿದೆ

Electric Scooter: ಒಮ್ಮೆ ಚಾರ್ಜ್ ಮಾಡಿದರೆ 165 ಕಿಲೋ ಮೀಟರ್ ಓಡುತ್ತೆ; ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ, ಇತರೆ ಮಾಹಿತಿ ಇಲ್ಲಿದೆ

Vida V2 Electric Scooter: ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ವಿಡಾ ವಿ2 ಕೂಡ ಒಂದು. ಈ ಮಾದರಿಯ ವೇರಿಯಂಟ್, ಶ್ರೇಣಿ, ಬೆಲೆಗಳು ಹಾಗೂ ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ.

 Vida V2 Electric Scooter: ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹಾಗೂ ಇತರೆ ಮಾಹಿತಿಯನ್ನು ತಿಳಿಯಿರಿ
Vida V2 Electric Scooter: ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹಾಗೂ ಇತರೆ ಮಾಹಿತಿಯನ್ನು ತಿಳಿಯಿರಿ

ಭಾರತದ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಗಳ ಹವಾ ಜೋರಾಗಿದೆ. ಪೆಟ್ರೋಲ್ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದ್ದ ಬಹುತೇಕ ಕಂಪನಿಗಳು ನಿಧಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳತ್ತ ವಾಲುತ್ತಿವೆ. ಸಾಕಷ್ಟು ಸ್ಕೂಟರ್ ಗಳು ಈಗಾಗಲೇ ರೋಡ್ ಗೆ ಇಳಿದಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಒಂದು ವೇಳೆ ನೀವೇನಾದರೂ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುತ್ತಿದ್ದರೆ ನಿಮಗಾಗಿ ವಿಡಾ ವಿ2 ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇ-ಸ್ಕೂಟರ್ ಆಯ್ಕೆಗಳಲ್ಲಿ ವಿಡಾ ವಿ2 ಕೂಡ ಒಂದಾಗಿದೆ. ಈ ಮಾದರಿಗೆ ಉತ್ತಮ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ವಿಡಾ ವಿ2 ಮಾದರಿಗಳು, ಬೆಲೆಗಳು, ಶ್ರೇಣಿ ಹಾಗೂ ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್
ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಒಟ್ಟು 3 ರೂಪಾಂತರಗಳಿವೆ. ವಿಡಾ ವಿ2 ಲೈಟ್, ವಿಡಾ ವಿ2 ಪ್ಲಸ್ ಹಾಗೂ ವಿಡಾ ವಿ2 ಪ್ರೊ. ವಿಡಾ ವಿ2 ಲೈಟ್ ಇಡೀ ಸರಣಿಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಗೆ ಸಿಗುತ್ತಿದೆ. ಇದು 2.2 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ ಗಂಟೆಗೆ 94 ಕಿ.ಮೀ (ಐಡಿಸಿ) ವ್ಯಾಪ್ತಿಯನ್ನು ನೀಡುತ್ತದೆ. ಪ್ಲಸ್ ಮತ್ತು ಪ್ರೊ ರೂಪಾಂತರಗಳ ಜೊತೆಗೆ, ವಿಡಾ ವಿ2 ಲೈಟ್ ಸಂಪೂರ್ಣವಾಗಿ ಹೊಸ ರೂಪಾಂತರವಾಗಿದ್ದು, ಗಂಟೆಗೆ ಗರಿಷ್ಠ ವೇಗ 69 ಕಿ.ಮೀ. ಇದು ಎಕೋ ಎಂಬ ಎರಡು ರೈಡಿಂಗ್ ಮೋಡ್ ಗಳೊಂದಿಗೆ ಲಭ್ಯವಿದೆ. ಇ-ಸ್ಕೂಟರ್ 7 ಇಂಚಿನ ಟಿಎಫ್ ಟಿ ಟಚ್ ಸ್ಕ್ರೀನ್ ಸೇರಿದಂತೆ ಅತ್ಯಂತ ದುಬಾರಿ ರೂಪಾಂತರಗಳಿಗೆ ಹೋಲುವ ಹಲವಾರು ವೈಶಿಷ್ಟ್ಯ ಸೆಟ್ ಗಳನ್ನು ಹೊಂದಿದೆ.

ವಿಡಾ ವಿ2 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ 143 ಕಿ.ಮೀ ಮೈಲೇಜ್ ನೀಡುತ್ತದೆ. ಇದು 3.44 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದೆ. 3.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ವಿ 2 ಪ್ರೊ ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 165 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಇದು ಸುಮಾರು ಆರು ಗಂಟೆಗಳಲ್ಲಿ 80 ರಷ್ಟು ಚಾರ್ಜ್ ಆಗುತ್ತದೆ.

ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳು

ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ಸ್ವಿಂಗ್ ಆರ್ಮ್-ಮೌಂಟೆಡ್ ಪಿಎಂಎಸ್ ಮೋಟರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 6 ಕಿಲೋವ್ಯಾಟ್ (8 ಬಿಹೆಚ್ ಪಿ) ಮತ್ತು 26 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿ2 ಪ್ಲಸ್ ಮತ್ತು ಪ್ರೊ ನಾಲ್ಕು ರೈಡಿಂಗ್ ಮೋಡ್ ಗಳನ್ನು ಹೊಂದಿವೆ. ಈ ಎಲೆಕ್ಟ್ರಿಕ್ ಸ್ಕೂಟರ್ 5 ವರ್ಷ ಅಥವಾ 50,000 ಕಿ.ಮೀ ಸ್ಟ್ಯಾಂಡರ್ಡ್ ವಾರಂಟಿಯನ್ನು ಪಡೆಯುತ್ತದೆ. ಬ್ಯಾಟರಿ ಪ್ಯಾಕ್ 3 ವರ್ಷ / 30,000 ಕಿ.ಮೀ ವಾರಂಟಿಯನ್ನು ಪಡೆಯುತ್ತವೆ.

ವಿಡಾ ವಿ2 ನ ಪ್ರಮುಖ ವೈಶಿಷ್ಟ್ಯ ಮತ್ತು ಬೆಲೆಗಳು

ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ, ರಿಜನರೇಟಿವ್ ಬ್ರೇಕಿಂಗ್ ಹಾಗೂ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ವಿ2 ಗ್ರಾಹಕರು, ದೇಶಾದ್ಯಂತ 250 ನಗರಗಳಲ್ಲಿ 3,100 ಚಾರ್ಜಿಂಗ್ ಪಾಯಿಂಟ್ ಗಳನ್ನು ಬಳಸಬಹುದು ಎಂದು ಹೀರೋ ಹೇಳಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ರಿಜ್ಟಾ, ಐಕ್ಯೂಬ್, ಚೇತಕ್ ಜೊತೆಗೆ ಆಂಪಿಯರ್ ನೆಕ್ಸಸ್ ಹಾಗೂ ಹೋಂಡಾ ಆಕ್ಟಿವಾ ಇ ನಂತಹ ಮಾದರಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲಿದೆ.

ವಿಡಾ ವಿ2 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ

ವಿಡಾ ವಿ2 ಲೈಟ್ ಎಕ್ಸ್ ಶೋರೂಂ ಬೆಲೆ 96,000 ರೂಪಾಯಿಗಳಾದರೆ, ವಿ2 ಪ್ಲಸ್ ನ ಎಕ್ಸ್ ಶೋರೂಂ ಬೆಲೆ 1.15 ಲಕ್ಷ ರೂಪಾಯಿ ಇದೆ. ವಿ2 ಪ್ರೊ ಎಕ್ಸ್ ಶೋರೂಂ ಬೆಲೆ 1.35 ಲಕ್ಷ ರೂಪಾಯಿ ಇದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.