ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್ ಬುಕ್ಕಿಂಗ್ ಮುಂದಿನ ತಿಂಗಳು ಆರಂಭ, ಮಾರ್ಚ್‌ನಲ್ಲಿ ಡೆಲಿವರಿ, ಹೊಸ ಬೈಕ್ ಹೀಗಿದೆ ನೋಡಿ
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ವಾಹನ ಪ್ರದರ್ಶನದಲ್ಲಿ ಹೊಸ ಹೀರೋ ಎಕ್ಸ್‌ಟ್ರೀಮ್ 250ಆರ್ ಬಿಡುಗಡೆ ಮಾಡಲಾಗಿದೆ. ಫೆಬ್ರವರಿಯಲ್ಲಿ ಈ ಬೈಕ್‌ನ ಬುಕ್ಕಿಂಗ್ ಆರಂಭವಾಗಲಿದೆ. ಮಾರ್ಚ್‌ನಲ್ಲಿ ಗ್ರಾಹಕರಿಗ ಡೆಲಿವರಿಯಾಗಲಿದೆ. ಈ ಬೈಕ್‌ಗೆ ಹೀರೋ ಮೊಟೊಕಾರ್ಪ್ ಕಂಪನಿಯು ಹೊಸ ಎಂಜಿನ್ ಅಭಿವೃದ್ಧಿಪಡಿಸಿದೆ.

ಭಾರತ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಹೊಸ ಹೀರೋ ಎಕ್ಸ್‌ಟ್ರೀಮ್ 250ಆರ್ ಬಿಡುಗಡೆಯಾಗಿದೆ. ಇದರ ಎಕ್ಸ್‌ಶೋರೂಂ ಆರಂಭಿಕ ದರ 1.80 ಲಕ್ಷ ರೂಪಾಯಿ. ಈ ಬೈಕ್ ಶೀಘ್ರದಲ್ಲಿ ಭಾರತದಾದ್ಯಂತ ಇರುವ ಡೀಲರ್‌ಶಿಪ್ ಮಳಿಗೆಗಳಿಗೆ ಪ್ರಯಾಣ ಬೆಳೆಸಲಿದೆ. ಫೆಬ್ರವರಿ 2025ರಿಂದ ಈ ಬೈಕ್‌ನ ಬುಕ್ಕಿಂಗ್ ಆರಂಭಿಸುತ್ತೇವೆ ಎಂದು ಹೀರೋ ಮೊಟೊಕಾರ್ಪ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಮಾರ್ಚ ತಿಂಗಳಲ್ಲಿ ಈ ಬೈಕನ್ನು ಗ್ರಾಹಕರಿಗೆ ಡೆಲಿವರಿ ಮಾಡಲು ಆರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಹೀರೋ ಎಕ್ಸ್‌ಟ್ರೀಮ್ 250ಆರ್ ಒಂದೇ ಒಂದು ಫುಲ್ ಲೋಡೆಡ್ ಆವೃತ್ತಿಯಲ್ಲಿ, ಮೂರು ಬಣ್ಣಗಳ ಆಯ್ಕೆಯಲ್ಲಿ ದೊರಕಲಿದೆ.
ಇದು ಇಐಸಿಎಂಎ 2023ರಲ್ಲಿ ಅನಾವರಣ ಮಾಡಲಾದ ಎಕ್ಸ್‌ಟಂಟ್ 2.5ಆರ್ ಆಧರಿತ ಬೈಕಾಗಿದೆ. ಹೀರೋ ಎಕ್ಸ್‌ಟ್ರೀಮ್ 250ಆರ್ ಎನ್ನುವುದು ಕರಿಜ್ಮಾ ಎಕ್ಸ್‌ಎಂಆರ್ 250ನ ಸ್ಟ್ರೀಟ್ ಆವೃತ್ತಿಯಾಗಿದೆ. ಆಕರ್ಷಕ ಇಂಧನ ಟ್ಯಾಂಕ್ ಹೊಂದಿರುವ ಬೋಲ್ಡ್ ಡಿಸೈನ್ ಅನ್ನು ನೂತನ ಬೈಕ್ ಹೊಂದಿದೆ. ಈ ಬೈಕ್ ಮೂಲಕ ಕ್ವಾರ್ಟರ್ ಮೋಟರ್‌ಸೈಕಲ್ ಸೆಗ್ಮೆಂಟ್‌ಗೆ ಕಂಪನಿಯು ಪ್ರವೇಶಿಸಿದೆ.
ಹೀರೋ ಎಕ್ಸ್‌ಟ್ರೀಮ್ 250ಆರ್: ಫೀಚರ್‌ಗಳು
ಆಲ್ ನ್ಯೂ ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್‌ನಲ್ಲಿ ಆಟೋ ಇಲ್ಯುಮಿನೇಷನ್ ಕ್ಲಾಸ್ ಡಿಯ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಂಪ್‌ಗಳು ಇವೆ. ಇದರಲ್ಲಿ ಡಿಆರ್‌ಎಲ್‌ಗಳೂ ಇವೆ. ಸ್ಪ್ಲಿಟ್ ಸೀಟ್ ಕಾನ್ಫಿಗರೇಷನ್ ಇದೆ. ಹೀರೋ ಎಕ್ಸ್‌ಟ್ರೀಮ್ 250ಆರ್‌ನಲ್ಲಿ ಬದಲಾಯಿಸಬಹುದಾದ ಎಬಿಎಸ್, ಲ್ಯಾಪ್ ಟೈಮರ್, ಡ್ರಾಗ್ ಟೈಮರ್‌ಗಳೂ ಇವೆ. ಈ ಬೈಕ್‌ನಲ್ಲಿ ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕನ್ಸೋಲ್ ಇದೆ. ಇದು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದೆ. ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಮತ್ತು ಮೀಡಿಯಾ ಕಂಟ್ರೋಲ್‌ಗಳನ್ನೂ ಒಳಗೊಂಡಿದೆ.
ಈ ಬೈಕ್‌ನ ಮುಂಭಾಗದಲ್ಲಿ 43 ಎಂಎಂ ಯುಎಸ್‌ಡಿ ಫೋರ್ಕ್‌ಗಳಿರುವ ಆರು ಹಂತದ ಹೊಂದಾಣಿಕೆ ಮಾಡಬಹುದಾದ ಪ್ರಿಲೋಡ್ ಹೊಂದಿರುವ ಹಿಂಭಾಗದ ಮೊನೊಶಾಕ್ ಅಳವಡಿಸಲಾಗಿದೆ. ಇದೇ ರೀತಿ, ಟ್ಯೂಬ್‌ಲೆಸ್ ಟೈರ್ ಮತ್ತು 17 ಇಂಚಿನ ಅಲಾಯ್ ವೀಲ್‌ಗಳು ಇವೆ. ಹಿಂಭಾಗದಲ್ಲಿ ರೇಡಿಯಲ್ ಟೈರ್ ಇದೆ. ಡ್ಯುಯಲ್-ಚಾನೆಲ್ ಎಬಿಎಸ್ ಹ್ಯಾಂಡಲ್ ಬ್ರೇಕಿಂಗ್ ವ್ಯವಸ್ಥೆಗಳಿವೆ. ಇದರೊಂದಿಗೆ ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್‌ಗಳೂ ಇವೆ.
ಈ ಬೈಕ್‌ನಲ್ಲಿ ಹೊಸ 25 ಸಿಸಿ ಡಿಒಹೆಚ್‌ಸಿ, ನಾಲ್ಕು ಕವಾಟದ, ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದೆ. ಆರು ಹಂತದ ಗಿಯರ್ ಬಾಕ್ಸ್ ಇದೆ. ಈ ಲಿಕ್ವಿಡ್-ಕೂಲ್ಡ್ ಯೂನಿಟ್ ಕರಿಜ್ಮಾ ಎಕ್ಸ್‌ಎಂಆರ್ 250ನಲ್ಲಿಯೂ ಇದೆ. ಇದು 9,250 ಆವರ್ತನಕ್ಕೆ 29.5 ಬಿಎಚ್‌ಪಿ ಮತ್ತು 7,250 ಆರ್‌ಪಿಎಂನಲ್ಲಿ 25 ಎನ್‌ಎಂ ಗರಿಷ್ಠ ಟಾರ್ಕ್ ಬಿಡುಗಡೆ ಮಾಡುತ್ತದೆ. ಹೊಸ ಎಕ್ಸ್‌ಕಿಟ್ರೀಮ್ 250ಆರ್ 3.25 ಸೆಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮೀ. ವೇಗವನ್ನು ಪಡೆಯುತ್ತದೆ.
