Honda Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನಾವರಣ, ಬೆಂಗಳೂರಿನಲ್ಲಿ ಉತ್ಪಾದನೆ; ಈ 2 ಸ್ಕೂಟರ್‌ಗಳ ದರ, ಮೈಲೇಜ್‌ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Honda Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನಾವರಣ, ಬೆಂಗಳೂರಿನಲ್ಲಿ ಉತ್ಪಾದನೆ; ಈ 2 ಸ್ಕೂಟರ್‌ಗಳ ದರ, ಮೈಲೇಜ್‌ ವಿವರ

Honda Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನಾವರಣ, ಬೆಂಗಳೂರಿನಲ್ಲಿ ಉತ್ಪಾದನೆ; ಈ 2 ಸ್ಕೂಟರ್‌ಗಳ ದರ, ಮೈಲೇಜ್‌ ವಿವರ

Honda Electric Scooter: ಭಾರತದ ಸ್ಕೂಟರ್‌ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಗೆ ಭಯ ಹುಟ್ಟಿಸುವಂತೆ ಹೋಂಡಾ ಮೋಟಾರ್‌ಸೈಕಲ್‌ ತನ್ನ ಹೊಸ ಇವಿಯನ್ನು ಅನಾವರಣ ಮಾಡಿದೆ. ಹೋಂಡಾ ಆಕ್ಟಿವಾ ಇವಿ ಮತ್ತು ಕ್ಯೂಸಿ1 ಹೆಸರಿನ ಈ ಸ್ಕೂಟರ್‌ ದೇಶದ ರಸ್ತೆಗೆ ಮುಂದಿನ ವರ್ಷ ಇಳಿಯಲಿದೆ.

Honda Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನಾವರಣ,
Honda Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನಾವರಣ,

ಬೆಂಗಳೂರು: ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಕೊನೆಗೂ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ (Honda Electric Scooter) Activa E ಮತ್ತು QC 1 ಅನಾವರಣ ಮಾಡಿದೆ. ಈ ಮೂಲಕ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸಿದೆ. ಹೋಂಡಾ QC 1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿಶೇಷವಾಗಿ ಭಾರತದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. Activa E ಅನ್ನು ಭಾರತ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.

ಎರಡೂ ಎಲೆಕ್ಟ್ರಿಕ್ ವಾಹನಗಳು 2025ರ ವಸಂತಕಾಲದ ವೇಳೆಗೆ ಹಂತಹಂತವಾಗಿ ಬಿಡುಗಡೆಯಾಗುವ ಸೂಚನೆಯಿದೆ. ಈ ಎರಡು ಎಲೆಕ್ಟ್ರಿಕ್‌ ವಾಹನಗಳ ಬುಕಿಂಗ್‌ಗಳು ಜನವರಿ 1, 2025 ರಿಂದ ಪ್ರಾರಂಭವಾಗುತ್ತವೆ. ಎರಡೂ ಉತ್ಪನ್ನಗಳ ಬೆಲೆಗಳನ್ನು ಜನವರಿ 2025 ರಲ್ಲಿ ಬಹಿರಂಗಪಡಿಸಲಾಗುತ್ತದೆ.

ಹೋಂಡಾ ಇ-ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಗೆ ಹೋಂಡಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಕೊಡುಗೆಯಾಗಿದೆ. ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕರ್ನಾಟಕದಲ್ಲಿರುವ ಬೆಂಗಳೂರಿನ ಘಟಕದಲ್ಲಿ ಉತ್ಪಾದಿಸಲಿದೆ. ಈ ಬೆಂಗಳೂರು ಫ್ಯಾಕ್ಟರಿಯು ದೇಶೀಯ ಮತ್ತು ರಫ್ತು ಬೇಡಿಕೆಯನ್ನು ಪೂರೈಸುತ್ತದೆ. EICMA 2024ನಲ್ಲಿ ಕಂಪನಿಯು ಪ್ರದರ್ಶಿಸಿದ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಹೋಲಿಸಿದರೆ ಈಗ ಅನಾವರಣ ಮಾಡಿರುವ ಸ್ಕೂಟರ್‌ಗಳು ತುಂಬಾ ಡಿಫರೆಂಟ್‌ ಆಗಿವೆ.

ಹೋಂಡಾ ಆಕ್ಟಿವಾ ಇ ಎರಡು ಬದಲಾಯಿಸಬಹುದಾದ ಬ್ಯಾಟರಿಗಳೊಂದಿಗೆ ಹೆಚ್ಚುವರಿ ಚಾರ್ಜಿಂಗ್ ಅನುಕೂಲತೆಯನ್ನು ಹೊಂದಿರಲಿದೆ. ಬ್ಯಾಟರಿಗಳನ್ನು ಸುಲಭವಾಗಿ ಬದಲಾಯಿಸಲು ಅನುಕೂಲವಾಗುವಂತೆ ಹೋಂಡಾ ತನ್ನ ಚಾರ್ಜಿಂಗ್ ಸ್ಟೇಷನ್‌ಗಳನ್ನು ದೇಶಾದ್ಯಂತ ನಿರ್ಮಿಸಲಿದೆ.

ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ವಿನ್ಯಾಸ ಹೇಗಿದೆ ನೋಡೋಣ. ಡಿಸೈನ್‌ ವಿಷಯದಲ್ಲಿ ಈ ಎರಡು ಮಾಡೆಲ್‌ಗಳು ಬಹುತೇಕ ಒಂದೇ ಶೈಲಿ ಹೊಂದಿವೆ. ಆದರೆ, ಇವೆರಡರ ನಡುವೆ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸಬಹುದು. ಹೋಂಡಾ ಆಕ್ಟಿವಾ ಇ ಮುಂಭಾಗ ಮತ್ತು ಹಿಂಭಾಗಕ್ಕೆ ಎಲ್ಇಡಿ ಸಂಯೋಜನೆಯ ಲ್ಯಾಂಪ್‌ಗಳು ಮತ್ತು ಇಂಡಿಕೇಟರ್‌ಗಳು ಇವೆ. ಕ್ಯೂಸಿ 1ನಲ್ಲಿ ಮೌಂಟೆಡ್ ಎಲ್ಇಡಿ ಡಿಆರ್‌ಎಲ್‌, ಟೈಲ್ ಲೈಟ್ ಮುಂತಾದವುಗಳು ಇವೆ. ಆಕ್ಟಿವಾ ಇಯಲ್ಲಿ ಕೆಲವು ಕ್ರೋಮ್‌ ವಿನ್ಯಾಸಗಳು ಮಿಸ್‌ ಆಗಿವೆ. ಆಕ್ಟಿವಾದಲ್ಲಿ ಮುಂಭಾಗದಲ್ಲಿ ಡಿಸ್ಕ್‌ ಬ್ರೇಕ್‌ ಇದೆ. ಕ್ಯೂಸಿ1ನಲ್ಲಿ ಡ್ರಮ್‌ ಬ್ರೇಕ್‌ಗಳು ಇವೆ.

ಫೀಚರ್‌ಗಳು ಮತ್ತು ಮೈಲೇಜ್‌

ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಬ್ಲೂಟೂತ್ ಸಂಪರ್ಕದೊಂದಿಗೆ ಟಿಎಫ್‌ಟಿ ಡಿಜಿಟಲ್‌ ಇನ್‌ಸ್ಟ್ರುಮೆಂಟ್‌ ಕನ್ಸೋಲ್‌ ಹೊಂದಿದೆ. ನ್ಯಾವಿಗೇಷನ್‌ ಜತಗೆ ಮ್ಯೂಸಿಕ್‌ ಕಂಟ್ರೋಲ್‌, ಕಾಲ್, ಎಸ್‌ಎಂಎಸ್‌ ಅಲರ್ಟ್‌ಗಳನ್ನು ಹೊಂದಿದೆ. ಕ್ಯೂಸಿ 1 ತನ್ನ ದರ ಕಡಿಮೆ ಮಾಡುವ ಸಲುವಾಗಿ ಎಲ್‌ಸಿಡಿ ಯೂನಿಟ್‌ ಹೊಂದಿದೆ. ಈ ಸ್ಕೂಟರ್‌ಗಳಲ್ಲಿ ಸ್ಟ್ಯಾಂಡರ್ಡ್‌, ಸ್ಪೋರ್ಟ್‌ ಮತ್ತು ಇಕಾನ್‌ ಎಂಬ ಮೂರು ರೈಡ್‌ ಮೋಡ್‌ಗಳಿವೆ.

ಪವರ್‌ ಮತ್ತು ಮೈಲೇಜ್‌ ವಿಷಯ

ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಪವರ್‌ ಎಷ್ಟಿದೆ ನೋಡೋಣ. ಆಕ್ಟಿವಾ ಇನಲ್ಲಿ ಗರಿಷ್ಠ 8 ಬಿಎಚ್‌ಪಿ ಮತ್ತು ಕ್ಯೂಸಿ 1 ನಲ್ಲಿ 2.4 ಬಿಎಚ್‌ಪಿ ಪವರ್‌ ದೊರಕಲಿದೆ. ಹೋಂಡಾ ಆಕ್ಟಿವಾ ಇ ಒಂದೇ ಚಾರ್ಜ್‌ನಲ್ಲಿ 102 ಕಿಮೀ ವ್ಯಾಪ್ತಿಯನ್ನು ಪಡೆಯುತ್ತದೆ, ಕ್ಯೂಸಿ 1 80 ಕಿಮೀ ವ್ಯಾಪ್ತಿಯನ್ನು ಪಡೆಯುತ್ತದೆ.

ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಪ್ರತಿಸ್ಪರ್ಧಿಗಳು

ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಟಿವಿಎಸ್‌ ಐಕ್ಯೂಬ್‌, ವಿಸಾ ವಿ1, ಬಜಾಜ್‌ ಚೇತಕ್‌, ಅಥೆರ್‌ ರಿಜ್ಟಾ, ಓಲಾ ಎಸ್‌1 ಪ್ರೊ, ಸಿಂಪಲ್‌ ಒನ್‌, ಅಂಪೆರ್‌ ನೆಕ್ಸಾಸ್‌ ಮುಂತಾದ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಲಿವೆ. ಹೋಂಡಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೋಂಡಾ ಡೀಲರ್‌ಶಿಪ್‌ಗಳ ಮೂಲಕ ಭಾರತದಲ್ಲಿ ಮಾರಾಟವಾಗಲಿವೆ. ಇವುಗಳ ಮಾರಾಟವು 2025ರಲ್ಲಿ ಪ್ರಾರಂಭವಾಗಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.