Discounts on Electric Vehicles: ಎಲೆಕ್ಟ್ರಿಕ್ ವಾಹನಗಳ ಮೇಲೆ 2023 ವರ್ಷಾಂತ್ಯದ ಭಾರಿ ಡಿಸ್ಕೌಂಟ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Discounts On Electric Vehicles: ಎಲೆಕ್ಟ್ರಿಕ್ ವಾಹನಗಳ ಮೇಲೆ 2023 ವರ್ಷಾಂತ್ಯದ ಭಾರಿ ಡಿಸ್ಕೌಂಟ್

Discounts on Electric Vehicles: ಎಲೆಕ್ಟ್ರಿಕ್ ವಾಹನಗಳ ಮೇಲೆ 2023 ವರ್ಷಾಂತ್ಯದ ಭಾರಿ ಡಿಸ್ಕೌಂಟ್

2023 ವರ್ಷಾಂತ್ಯಕ್ಕೆ ಇನ್ನ ಕೆಲವೇ ದಿನಗಳು ಬಾಕಿ ಇದ್ದು, ಡಿಸೆಂಬರ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಇಯರ್ ಎಂಡ್ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಅದರ ವಿವರ ಇಲ್ಲಿದೆ.

ಟಾಟಾ ಇವಿ ಕಾರು
ಟಾಟಾ ಇವಿ ಕಾರು

ಬೆಂಗಳೂರು: 2023 ಇನ್ನೇನು ಮುಗೀತಾ ಬಂತು. 2024ರ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಇಡೀ ಜಗತ್ತು ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ 2023ರ ಕೊನೆಯ ತಿಂಗಳಲ್ಲಿ ಗ್ರಾಹಕರನ್ನು ಸೆಳೆಯಲು ಆಟೋಮೊಬೈಲ್ ಕಂಪನಿಗಳು ಸಖತ್ ಪ್ಲಾನ್ ಮಾಡಿಕೊಂಡಿವೆ. ಎಲೆಕ್ಟ್ರಿಕ್ ವಾಹನಗಳ ಮೇಲೆ ಬರಪೂರ ಇಯರ್ ಎಂಡ್ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿವೆ.

ಇವಿ ಕಾರುಗಳ ವಿವಿಧ ಮಾಡೆಲ್‌ಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಒಂದೇ ಒಂದು ಎಲೆಕ್ಟ್ರಿಕ್ ವಾಹನವನ್ನು ಹೊಂದಿದೆ. ಅದರ ಹೆಸರು ಎಕ್ಸ್‌ಯುವಿ 400 ಇವಿ. ಮಹೀಂದ್ರ ಕಂಪನಿ ಈ ಕಾರಿನ ಮೇಲೆ ಬರೋಬ್ಬರಿ 4.2 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ನೀಡುತ್ತಿದೆ. ಈ ರಿಯಾಯ್ತಿ ಎಕ್ಸ್‌ಯುವಿ 400 ಇಎಲ್‌ ಮಾಡೆಲ್‌ಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಫಷ್ಟಪಡಿಸಿದೆ.

ಎಂಜಿ ಇವಿ ಕಾರುಗಳ ಮೇಲೂ ಭಾರಿ ಡಿಸ್ಕೌಂಟ್

ಭಾರತ ಮಾರುಕಟ್ಟೆಗೆ ಪ್ರವೇಶ ಪಡೆದ ಕೆಲವೇ ಕೆಲವು ವರ್ಷಗಳಲ್ಲಿ ಗ್ರಾಹಕರನ್ನು ಸೆಳೆಯಲುವಲ್ಲಿ ಯಶಸ್ವಿಯಾಗಿರುವ ಎಂಜಿ ಮೋಟಾರ್ ಸಂಸ್ಥೆಯೂ ವರ್ಷಾಂತ್ಯದ ಭಾರಿ ಡಿಸ್ಕೌಂಟ್ ಘೋಷಣೆ ಮಾಡಿದೆ. ಎಂಜಿ ಮೋಟಾರ್‌ನ ಝೆಡ್‌ಎಸ್ ಇವಿ ಮೇಲೆ 50 ಸಾವಿರ ರೂಪಾಯಿ ರಿಯಾಯ್ತಿ ಘೋಷಣೆ ಮಾಡಲಾಗಿದೆ. 50,000 ರೂಪಾಯಿ ಜೊತೆಗೆ ಕಾರ್ಪೊರೇಟ್ ಮತ್ತು ಲಾಯಲ್ಟಿ ಬೋನಸ್‌ಗಳು, ಎಕ್ಸ್‌ಚೇಂಜ್ ಬೋನಸ್ ಸಹ ನೀಡುತ್ತಿದೆ.

ಕೆಲವು ತಿಂಗಳ ಹಿಂದೆ ಈ ಮಾದರಿಯ ಕಾರುಗಳ ಬೆಲೆಯಲ್ಲಿ ಸುಮಾರು 2.2 ಲಕ್ಷ ರೂಪಾಯಿ ಇಳಿಕೆ ಮಾಡಲಾಗಿತ್ತು. ಇದೀಗ ಮತ್ತೆ ಭಾರಿ ಇಯರ್ ಎಂಡಿಂಗ್ ಡಿಸ್ಕೌಂಟ್ ಘೋಷಿಸಿರುವುದು ವಿಶೇಷ. ಎಂಜಿ ಮೋಟರ್‌ನ ಎಲೆಕ್ಟ್ರಿಕ್ ವಾಹನ ಕಾಮೆಟ್ ಇವಿ ಬೆಲೆಯಲ್ಲಿ 20 ಸಾವಿರ ರೂಪಾಯಿ ಲಾಯಲ್ಟಿ ಬೋನಸ್, 50 ಸಾವಿರ ರೂಪಾಯಿ ಕಾರ್ಪೊರೇಟ್ ಬೋನಸ್ ಹಾಗೂ ಮೊದಲ ವರ್ಷದ ಉಚಿತ ವಿಮೆ ಕೂಡ ಲಭ್ಯವಿದೆ.

ಟಾಟಾ ಇವಿಗಳ ಆಫರ್‌ಗಳು ಹೀಗಿವೆ

ಭಾರತೀಯ ಆಟೋಮೊಬೈಲ್ ವಲಯದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಕೂಡ ತನ್ನ ಇವಿ ಕಾರುಗಳ ಮೇಲೆ ವರ್ಷಾಂತ್ಯದ ರಿಯಾಯ್ತಿಯನ್ನು ಘೋಷಣೆ ಮಾಡಿದೆ. ಅದರಲ್ಲೂ ಟಾಟಾ ಟಿಗೊರ್ ಇವಿಯ ಹಲವು ಆಯ್ದ ಮಾಡೆಲ್‌ಗಳ ಮೇಲೆ ಡಿಸ್ಕೌಂಟ್ ನೀಡುತ್ತಿದೆ. ಸ್ಟಾಕ್ ಲಭ್ಯತೆ ಹಾಗೂ ಸ್ಥಳಗಳ ಮೇಲೆ ರಿಯಾಯ್ತಿಗಳು ಅವಲಂಬಿಸಿರುತ್ತವೆ. ಅಂದರೆ ಡಿಸ್ಕೌಂಟ್‌ಗಳು ಎಲ್ಲ ಶೂರೂಂಗಳಲ್ಲಿ ಲಭ್ಯ ಇಲ್ಲ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ.

ರೆನಾಲ್ಟ್ ಇವಿ ಕಾರುಗಳ ಮೇಲೆ ಇಷ್ಟು ಡಿಸ್ಕೌಂಟ್

ರೆನಾಲ್ಟ್ ಇಯರ್ ಎಂಡಿಂಗ್ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದೆ. ರೆನಾಲ್ಟ್ ಖೈಗರ್ ಎಂವೈ2023 ಮಾದರಿಯ ಇವಿ ಕಾರಿನ ಬೆಲೆಯಲ್ಲಿ 50,000 ರೂಪಾಯಿವರೆಗೆ ರಿಯಾಯಿತಿ ಇದೆ. ಇದರಲ್ಲಿ 20 ಸಾವಿರ ರೂಪಾಯಿ ನಗದು ರಿಯಾಯಿತಿ, 20 ಸಾವಿರ ರೂಪಾಯಿ ಎಕ್ಸ್‌ಚೇಂಜ್ ಆಫರ್‌, ನಿಷ್ಠಾವಂತ ಗ್ರಾಹಕರಿಗೆ 10 ಸಾವಿರ ರೂಪಾಯಿ ರಿಯಾಯಿತಿ ಸಿಗುತ್ತದೆ. ಹ್ಯಾಚ್‌ಬ್ಯಾಕ್ ಬೆಲೆ 12 ಸಾವಿರ ರೂಪಾಯಿ ಕಾರ್ಪೊರೇಟ್ ರಿಯಾಯಿತಿ, ಗ್ರಾಮೀಣ ಭಾಗದಲ್ಲಿ ವಾಸಿಸುವ ರೈತರು, ಸರಪಂಚರು ಹಾಗೂ ಗ್ರಾಹ ಪಂಚಾಯಿತಿ ಸದಸ್ಯರಿಗೆ ಹೆಚ್ಚುವರಿಯಾಗಿ 5 ಸಾವಿರ ರೂಪಾಯಿ ಡಿಸ್ಕೌಂಟ್ ಸಿಗುತ್ತೆದ. ಇದೆಲ್ಲಾವೂ ಆಯ್ದೆ ಇವಿಗಳಿಗೆ ಮಾತ್ರ ಎಂಬುದನ್ನು ಗ್ರಾಹಕರು ಗಮನಿಸಬೇಕು.

ರೆನಾಲ್ಟ್ ಟ್ರೈಬರ್ MY2023 ಮಾದರಿಯಲ್ಲಿ 20 ಸಾವಿರ ನಗದು, 20 ಸಾವಿರ ಎಕ್ಸ್‌ಚೇಂಜ್ ಬೋನಸ್ ಜೊತೆಗೆ 10 ಸಾವಿರ ರೂಪಾಯಿ ಹೆಚ್ಚುವರಿ ನಗದು ರಿಯಾಯ್ತಿ ಸಿಗುತ್ತೆ. ಟ್ರೈಬರ್‌ನಲ್ಲಿ 12 ಸಾವಿರ ಕಾರ್ಪೊರೇಟ್ ರಿಯಾಯ್ತಿ, ಗ್ರಾಮೀಣ ಗ್ರಾಹಕರಿಗೆ 5 ಸಾವಿರ ರೂಪಾಯಿಯ ಹೆಚ್ಚುವರಿ ಆಫರ್‌ಗಳಿವೆ. ಈ ಮೇಲಿನ ಎಲ್ಲಾ ಆಫರ್‌ಗಳು 2023ರ ಡಿಸೆಂಬರ್ ಅಂತ್ಯದವರೆಗೆ ಮಾತ್ರ ಲಭ್ಯವಿರುತ್ತವೆ. ನಿಮಗೆ ಎಲೆಕ್ಟ್ರಿಕ್ ಕಾರುಗಳ ಬೆಲೆ, ಆ ಕಾರುಗಳ ಮೇಲೆ ಇಯರ್ ಎಂಡ್ ಡಿಸ್ಕೌಂಟ್ ಬಗ್ಗೆ ಸಂಪೂರ್ಣ ವಿವರಗಳು ಬೇಕಾಗಿದ್ದಲ್ಲಿ ನಿಮ್ಮ ಸಮೀಪದ ಡೀಲರ್‌ಶಿಪ್‌ ಶೋರೂಂಗಳಿಗೆ ಭೇಟಿ ಕೊಡಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.