Aston Martin DB12: ಆಸ್ಟನ್ ಮಾರ್ಟಿನ್‌ನಿಂದ ಜಗತ್ತಿನ ಮೊದಲ ಸೂಪರ್ ಟೂರರ್, 4.8 ಕೋಟಿ ರೂಪಾಯಿಯ ಬೊಂಬಾಟ್ ಕಾರನ್ನು ಕಣ್ತುಂಬಿಕೊಳ್ಳೋಣ
- Aston Martin DB12: ಆಸ್ಟನ್ ಮಾರ್ಟಿನ್ ಡಿಬಿ12 ಎನ್ನುವುದು ಜಗತ್ತಿನ ಮೊದಲ ಸೂಪರ್ ಟೂರರ್. ಇದನ್ನು ಇಂಗ್ಲೆಂಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಆಸ್ಟನ್ ಮಾರ್ಟಿನ್ ತನ್ನ 110ನೇ ಅನಿವರ್ಸರಿಯ ಸಂದರ್ಭದಲ್ಲಿ ಮತ್ತು ಡಿಬಿ ಮಾಡೆಲ್ ಪರಿಚಯಿಸಿದ 75 ವರ್ಷವಾದ ಖುಷಿಯ ಸಂದರ್ಭದಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ.
- Aston Martin DB12: ಆಸ್ಟನ್ ಮಾರ್ಟಿನ್ ಡಿಬಿ12 ಎನ್ನುವುದು ಜಗತ್ತಿನ ಮೊದಲ ಸೂಪರ್ ಟೂರರ್. ಇದನ್ನು ಇಂಗ್ಲೆಂಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಆಸ್ಟನ್ ಮಾರ್ಟಿನ್ ತನ್ನ 110ನೇ ಅನಿವರ್ಸರಿಯ ಸಂದರ್ಭದಲ್ಲಿ ಮತ್ತು ಡಿಬಿ ಮಾಡೆಲ್ ಪರಿಚಯಿಸಿದ 75 ವರ್ಷವಾದ ಖುಷಿಯ ಸಂದರ್ಭದಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ.
(1 / 7)
Aston Martin DB12: ಆಸ್ಟನ್ ಮಾರ್ಟಿನ್ ಡಿಬಿ12 ಎನ್ನುವುದು ಜಗತ್ತಿನ ಮೊದಲ ಸೂಪರ್ ಟೂರರ್. ಇದನ್ನು ಇಂಗ್ಲೆಂಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಆಸ್ಟನ್ ಮಾರ್ಟಿನ್ ತನ್ನ 110ನೇ ಅನಿವರ್ಸರಿಯ ಸಂದರ್ಭದಲ್ಲಿ ಮತ್ತು ಡಿಬಿ ಮಾಡೆಲ್ ಪರಿಚಯಿಸಿದ 75 ವರ್ಷವಾದ ಖುಷಿಯ ಸಂದರ್ಭದಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ. ಈ ಕಾರಿನ ಆರಂಭಿಕ ದರ 4.8 ಕೋಟಿ ರೂ. ಇದೆ. (Aston Martin)
(2 / 7)
ಈ ಸೂಪರ್ ಕಾರು 3.5 ಸೆಕೆಂಡಿನಲ್ಲಿ 0-60 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 202 ವೇಗದಲ್ಲಿ ಸಾಗಬಹುದು. ಇದರ ಎಂಜಿನ್ 6000 ಆವರ್ತನಕ್ಕೆ 680PS/671bhp ಬಿಡುಗಡೆ ಮಾಡುತ್ತದೆ. 2750-6000 ಆರ್‌ಪಿಎಂಗೆ 800Nm/590lb ft ಬಿಡುಗಡೆ ಮಾಡುತ್ತದೆ. ಡಿಬಿ11ಗೆ ಹೋಲಿಸಿದರೆ ಇದರ ಶಕ್ತಿ ಶೇಕಡ 34ರಷ್ಟು ಹೆಚ್ಚಾಗಿದೆ. (Aston Martin)
(3 / 7)
ಇದರಲ್ಲಿ ಕಾರ್ಬೊನ್ ಸೆರಾಮಿಕ್ ಬ್ರೇಕ್ ಆಯ್ಕೆಯಿದೆ. ಇದಕ್ಕೆ ಹೊಸ ಮೆಕ್‌ಲಿನ್ ಪೈಲಟ್ ಸ್ಪೋರ್ಟ್ 5ಎಸ್ ಟೈರ್‌ಗಳನ್ನು ಹೊಂದಿದೆ. ಅಂದರೆ ಮುಂಭಾಗದಲ್ಲಿ 275/35 R21 103Y ಟೈರ್ ಇದೆ. ಹಿಂಭಾಗದಲ್ಲಿ 315/30 R21 108Y ಟೈರಿದೆ. (Aston Martin)
(4 / 7)
ಕಾರಿನೊಳಗೆ ಇಣುಕಿ ನೋಡಿದಾಗಲೂ ಆಸ್ಟನ್ ಮಾರ್ಟಿನ್ ಬೆರಗು ಹುಟ್ಟಿಸುತ್ತದೆ. ಮುಂದಿನ ತಲೆಮಾರಿನ ಬೆಸ್ಪೋಕ್ ಇನ್‌ಫೋಟೇನ್‌ಮೆಂಟ್ ಸಿಸ್ಟಮ್ ಇದೆ. ಕನೆಕ್ಟೆಡ್ ಟೆಕ್ನಾಲಜಿ ಇದೆ. ಬೋವೆರ್ಸ್ ಮತ್ತು ವಿಕಿನ್ಸ್ ಜತೆ ಆಡಿಯೋ ಸಿಸ್ಟಮ್‌ಗೆ ಪಾಲುದಾರಿಕೆ ಮಾಡಿಕೊಂಡಿರುವುದರಿಂದ ಹೊಸ ಸೌಂಡ್ ಸಿಸ್ಟಮ್ ಕಿವಿಯನ್ನು ಇನ್ನಷ್ಟು ಇಂಪಾಗಿಸುತ್ತದೆ. (Aston Martin)
(5 / 7)
ನೂತನ ಸಿಸ್ಟಮ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಬೆಂಬಲ ನೀಡುತ್ತದೆ. ಇದು 1970x720 ರೆಸಲ್ಯೂಷನ್‌ನ 10.25 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅತ್ಯುತ್ತಮ ಟಚ್ ಸ್ಕ್ರೀನ್ ಇದಾಗಿದೆ. (Aston Martin)
(6 / 7)
Martin DB12 ಎಂಜಿನ್‌ಗೆ ಎಂಟು ಸ್ಪೀಡ್‌ನ ಆಟೋಮ್ಯಾಟಿಕ್ ಗಿಯರ್‌ಬಾಕ್ಸ್ ಜತೆಯಾಗಿದೆ. ಇದೇ ಮೊದಲ ಬಾರಿಗೆ ಡಿಬಿ ಮಾಡೆಲ್‌ಗೆ ಈ ಟ್ರಾನ್ಸ್‌ಮಿಷನ್ ಅಳವಡಿಸಿದೆ. ಎಲೆಕ್ಟ್ರಾನಿಕ್ ರಿಯರ್ ಡಿಫೆರೆನ್ಷಿಯಲ್ ಎಂಬ ಫೀಚರ್ ಅಳವಡಿಸಿದೆ. ಇದು ಕಾರಿನ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ವ್ಯವಸ್ಥೆಗೆ ಸಂಪರ್ಕಗೊಂಡಿರುತ್ತದೆ. (Aston Martin)
(7 / 7)
21 ಇಂಚಿನ ಅಲಾಯ್ ವೀಲ್‌ಗಳು ಸ್ಟಾಂಡರ್ಡ್ ಫೀಚರ್. ಐದು ಸ್ಪೋಕ್, ಮಲ್ಟಿ ಸ್ಪೋಕ್, ವೈ ಸ್ಪೋಕ್ ಇತ್ಯಾದಿ ವಿನ್ಯಾಸದ ಅಲಾಯ್ ವೀಲ್‌ಗಳಲ್ಲಿ ಖರೀದಿದಾರರು ತಮಗೆ ಇಷ್ಟವಾಗುವ ಅಲಾಯ್ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕಾರಿನ ಎಕ್ಸ್‌ಶೋರೂಂ ಆರಂಭಿಕ ದರ 4.8 ಕೋಟಿ ರೂ ಇದೆ. (Aston Martin)
ಇತರ ಗ್ಯಾಲರಿಗಳು