ಕನ್ನಡ ಸುದ್ದಿ  /  Nation And-world  /  Automobile News Dubai To Launch World First Air Taxi Service In 2025 Says Joby Aviation Rmy

Flying Taxi: ಜಗತ್ತಿನ ಮೊದಲ ಫ್ಲೈಯಿಂಗ್ ಟ್ಯಾಕ್ಸಿ ಆರಂಭಿಸಲು ದುಬೈ ಸಜ್ಜು; ಮುಂದಿನ ವರ್ಷವೇ ಸೇವೆ ಲಭ್ಯ ಎಂದ ಜಾಬಿ ಏವಿಯೇಷನ್

Flying Taxi: ತನ್ನ ತವರು ನೆಲ ಯುಎಸ್‌ಗಿಂತ ಮೊದಲು ದುಬೈನಲ್ಲಿ ಫ್ಲೈಯಿಂಗ್ ಟ್ಯಾಕ್ಸಿ ಸೇವೆೆ ಆರಂಭಿಸಲು ಜಾಬಿ ಏವಿಯೇಷನ್ ಇಂಕ್ ಮುಂದಾಗಿದೆ. 2025ಕ್ಕೆ ಈ ಸೇವೆ ಲಭ್ಯವಾಗಲಿದೆ.

ಅಮೆರಿಕಾ ಮೂಲದ ಜಾಬಿ ಏವಿಯೇಷನ್ ಅಭಿವೃದ್ಧಿ ಪಡಿಸಿರುವ ಎಸ್‌ಕೆ ಟೆಲಿಕಾಂ ಏರ್ ಟ್ಯಾಕ್ಸಿಯನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಲಾಗಿದೆ.
ಅಮೆರಿಕಾ ಮೂಲದ ಜಾಬಿ ಏವಿಯೇಷನ್ ಅಭಿವೃದ್ಧಿ ಪಡಿಸಿರುವ ಎಸ್‌ಕೆ ಟೆಲಿಕಾಂ ಏರ್ ಟ್ಯಾಕ್ಸಿಯನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಲಾಗಿದೆ. ( AFP)

ವಿಶ್ವದ ಮೊದಲ ಫ್ಲೈಯಿಂಗ್ ಟ್ಯಾಕ್ಸಿ (Flying Taxi) ಸೇವೆಯನ್ನು ಆರಂಭಿಸಲು ದುಬೈ ಮುಂದಾಗಿದೆ. ಈ ಸಂಬಂಧ ಜಾಬಿ ಏವಿಯೇಷನ್ ಇಂಕ್ ಕಂಪನಿಯೊಂದಿಗೆ ಮಾತುಕತೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2025ರ ವೇಳೆ ದುಬೈನಲ್ಲಿ ಏರ್ ಟ್ಯಾಕ್ಸಿ ಸೇವೆ ಆರಂಭವಾಗುತ್ತದೆ. ಅಮೆರಿಕಾ ಮೂಲದ ಜಾಬಿ ಏವಿಷೇಯನ್ ತನ್ನ ಸ್ವದೇಶಕ್ಕಿಂತ ಮೊದಲು ಅರಬ್ ರಾಷ್ಟ್ರದಲ್ಲಿ ಫ್ಲೈಯಿಂಗ್ ಟ್ಯಾಕ್ಸಿಯನ್ನು ಹಾರಿಸಲು ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ಮಾಡುತ್ತಿದೆ.

ಈ ವರ್ಷದ ಆರಂಭದಲ್ಲಿ ಘೋಷಿಸಲಾದ ಗಲ್ಫ್ ಎಮಿರೇಟ್‌ನೊಂದಿಗೆ ಸಹಭಾಗಿತ್ವದಲ್ಲಿ ಏರ್ ಟ್ಯಾಕ್ಸಿಯ ಕೆಲಸವು ಇತರೆ ಕಾರ್ಯಗಳಿಂದ ಸ್ವಲ್ಪ ವೇಗವಾಗಿ ಮುಂದುವರಿದಿದೆ ಎಂದು ಜಾಬಿ ಏವಿಯೇಷನ್ ಕಾರ್ಯಾಚರಣೆಗಳ ಅಧ್ಯಕ್ಷ ಬೊನ್ನಿ ಸಿಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮೊದಲು ನಾವು ದುಬೈನಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.

ದುಬೈನಲ್ಲಿ 2025 ರ ವೇಳೆಗೆ ಆರಂಭಿಕ ಕಾರ್ಯಾಚರಣೆಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. 2026 ರ ಆರಂಭದಲ್ಲಿ ಎಲೆಕ್ಟ್ರಿಕ್ ಏರ್-ಟ್ಯಾಕ್ಸಿ ಸೇವೆಗಳು ಮತ್ತು ವಾಣಿಜ್ಯ ಸೇವೆಗಳನ್ನು ನಿರ್ವಹಿಸಲು ‘ಆರು ವರ್ಷಗಳ ವಿಶೇಷ ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಈ ಮೈಲಿಗಲ್ಲನ್ನು ಈಗ 2025 ರ ಅಂತ್ಯದ ವೇಳೆಗೆ ತಲುಪಬಹುದು ಎಂದು ಬೊನ್ನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದುಬೈ ಸರ್ಕಾರವು ಆರ್ಥಿಕ ಬೆಂಬಲವನ್ನು ಒದಗಿಸಿದೆ. ವಿಶೇಷವಾಗಿ ಜಾಬಿಗೆ ಸಂಪನ್ಮೂಲಗಳನ್ನೂ ಮೀಸಲಿಟ್ಟಿದ್ದಾರೆ. ಇದು"ಸಾಧ್ಯವಾದಷ್ಟು ಬೇಗ ಮತ್ತು ಸುರಕ್ಷಿತವಾಗಿ ಚಲಿಸಲು ಸಾಧ್ಯವಾದಷ್ಟು ಅಡೆತಡೆಗಳನ್ನು ತೆಗೆದುಹಾಕಲು" ಸಹಾಯ ಮಾಡುತ್ತದೆ. ಈ ಬೆಂಬಲವು ಆರ್ಥಿಕವಾಗಿ "ನಮಗೆ ಆರಂಭಿಕ ಉಡಾವಣೆಯ ಅಪಾಯವನ್ನು ಕಡಿಮೆ ಮಾಡಲು" ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಫ್ಲೈಯಿಂಗ್ ಟ್ಯಾಕ್ಸಿ ಹಾರಾಟಕ್ಕೆ ಹೇಗಿದೆ ಸಿದ್ಧತೆಗಳು?

ಜಾಬಿ ಏವಿಯೇಷನ್ ಆರಂಭದಲ್ಲಿ ತನ್ನ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವಾಹನಗಳಿಗಾಗಿ ದುಬೈನಾದ್ಯಂತ ನಾಲ್ಕು ವರ್ಟಿಪೋರ್ಟ್‌ಗಳನ್ನು ಸ್ಥಾಪಿಸಲು ಯೋಜಿಸಿದೆ. ಉಡಾವಣಾ ತಾಣಗಳಲ್ಲಿ ವಿಮಾನ ಪ್ರಯಾಣದ ಜಾಗತಿಕ ಕೇಂದ್ರವಾದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದೆ. ಮಾನವ ನಿರ್ಮಿತ ದ್ವೀಪವಾದ ಪಾಮ್ ಜುಮೇರಾ, ಬುರ್ಜ್ ಖಲೀಫಾ ಗೋಪುರದ ಬಳಿಯ ದುಬೈ ಡೌನ್ಟೌನ್ ಮತ್ತು ನಗರದ ಮರೀನಾದಲ್ಲಿ ಉಡಾವಣಾ ತಾಣಗಳಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಪ್ರತಿಸ್ಪರ್ಧಿ ಆರ್ಚರ್ ಏವಿಯೇಷನ್ ಇಂಕ್ ಕಳೆದ ವರ್ಷ ಅಬುಧಾಬಿ ಸರ್ಕಾರದೊಂದಿಗೆ ಪ್ರಾಥಮಿಕ ಒಪ್ಪಂದವನ್ನು ಮಾಡಿಕೊಂಡಿದ್ದು, 2026 ರ ವೇಳೆಗೆ ಏರ್ ಟ್ಯಾಕ್ಸಿಗಳನ್ನು ಉತ್ಪಾದನೆ ಮತ್ತು ಉಡಾವಣೆಯನ್ನು ಗುರಿಯಾಗಿಸಿಕೊಂಡಿದೆ. ಜಾಬಿ ದುಬೈನೊಳಗಿನ ವಿಮಾನಗಳಿಗೆ ಪ್ರತ್ಯೇಕತೆಯನ್ನು ಹೊಂದಿದ್ದರೆ, ಆರ್ಚರ್ ಅಬುಧಾಬಿ ಮತ್ತು ದುಬೈ ನಡುವೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನೊಂದಿಗೆ ವಿಮಾನಗಳನ್ನು ನಿರ್ವಹಿಸಲು ಯೋಜಿಸಿದ್ದಾರೆ.

eVTOL ಮಾರುಕಟ್ಟೆ ಆಕಾಂಕ್ಷಿಗಳು ತೈಲ ಸಮೃದ್ಧ ಕೊಲ್ಲಿ ರಾಷ್ಟ್ರಗಳತ್ತ ಧಾವಿಸುತ್ತಿದ್ದಾರೆ. ಲಿಲಿಯಂ ಎನ್ವಿ, ಎಂಬ್ರೇರ್ ಎಸ್ಎಯ ಈವ್ ಏರ್ ಮೊಬಿಲಿಟಿ ಮತ್ತು ವೊಲೊಕಾಪ್ಟರ್ ಜಿಎಂಬಿಎಚ್ ಎಲ್ಲವೂ ಸೌದಿ ಅರೇಬಿಯಾ, ಯುಎಇ ಸರ್ಕಾರಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿವೆ.

ವಿಭಾಗ