Ola S1X: ಆಗಸ್ಟ್‌ 15ರಂದು ಓಲಾ ಎಸ್‌1ಎಕ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್‌, ದರ 1 ಲಕ್ಷ ರೂಗಿಂತ ಕಡಿಮೆ, ಇಲ್ಲಿದೆ ಹೆಚ್ಚಿನ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ola S1x: ಆಗಸ್ಟ್‌ 15ರಂದು ಓಲಾ ಎಸ್‌1ಎಕ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್‌, ದರ 1 ಲಕ್ಷ ರೂಗಿಂತ ಕಡಿಮೆ, ಇಲ್ಲಿದೆ ಹೆಚ್ಚಿನ ವಿವರ

Ola S1X: ಆಗಸ್ಟ್‌ 15ರಂದು ಓಲಾ ಎಸ್‌1ಎಕ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್‌, ದರ 1 ಲಕ್ಷ ರೂಗಿಂತ ಕಡಿಮೆ, ಇಲ್ಲಿದೆ ಹೆಚ್ಚಿನ ವಿವರ

Ola S1X: ಓಲಾ ಎಲೆಕ್ಟ್ರಿಕ್‌ ಕಂಪನಿಯ ಎಂಟ್ರಿ ಲೆವೆಲ್‌ ಸ್ಕೂಟರ್‌ ಆಗಿರಲಿದೆ. ಇದರ ದರ 1 ಲಕ್ಷ ರೂಪಾಯಿಗಿಂತ ಕಡಿಮೆ ಇರಲಿದೆ. ಈ ಸ್ಕೂಟರ್‌ ಆಗಸ್ಟ್‌ 15ರಂದು ಲಾಂಚ್‌ ಆಗಲಿದೆ.

Ola S1X: ಆಗಸ್ಟ್‌ 15ರಂದು ಓಲಾ ಎಸ್‌1ಎಕ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್‌, ದರ 1 ಲಕ್ಷ ರೂಗಿಂತ ಕಡಿಮೆ
Ola S1X: ಆಗಸ್ಟ್‌ 15ರಂದು ಓಲಾ ಎಸ್‌1ಎಕ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್‌, ದರ 1 ಲಕ್ಷ ರೂಗಿಂತ ಕಡಿಮೆ

ಓಲಾ ಎಲೆಕ್ಟ್ರಿಕ್‌ ಕಂಪನಿಯು ಇತ್ತೀಚೆಗೆ ಎಸ್‌1 ಏರ್‌ ಎಂಬ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಪರಿಚಯಿಸಿತ್ತು. ಅದರ ಎಕ್ಸ್‌ಶೋರೂಂ ದರ 1.10 ಲಕ್ಷ ರೂಪಾಯಿ ಇತ್ತು. ಇದೀಗ ಓಲಾ ಎಲೆಕ್ಟ್ರಿಕ್‌ ಕಂಪನಿಯು ಮತ್ತೊಂದು ಎಲೆಕ್ಟ್ರಿಕ್‌ ಸ್ಕೂಟರ್‌ ಪರಿಚಯಿಸಲು ಮುಂದಾಗಿದೆ. ಇದರ ದರ ಎಸ್‌1 ಏರ್‌ಗಿಂತ ಕಡಿಮೆ ಇರಲಿದೆ. ಈ ನೂತನ ಸ್ಕೂಟರ್‌ಗೆ Ola S1X ಎಂದು ಹೆಸರು ಇರಲಿದೆ. ಇದು ಓಲಾ ಎಲೆಕ್ಟ್ರಿಕ್‌ ಕಂಪನಿಯ ಎಂಟ್ರಿ ಲೆವೆಲ್‌ ಸ್ಕೂಟರ್‌ ಆಗಿರಲಿದೆ. ಇದರ ದರ 1 ಲಕ್ಷ ರೂಪಾಯಿಗಿಂತ ಕಡಿಮೆ ಇರಲಿದೆ. ಈ ಸ್ಕೂಟರ್‌ ಆಗಸ್ಟ್‌ 15ರಂದು ಲಾಂಚ್‌ ಆಗಲಿದೆ. ಅಂದರೆ, ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ರಸ್ತೆಗೆ ನೂತನ ಓಲಾ ಎಸ್‌1ಎಕ್ಸ್‌ ಆಗಮಿಸಲಿದೆ.

ನೂತನ ಓಲಾ S1Xನಲ್ಲಿ S1 Air ಸ್ಕೂಟರ್‌ನಲ್ಲಿರುವ ಬಹುತೇಕ ಫೀಚರ್‌ಗಳು ಇರುವ ನಿರೀಕ್ಷೆಯಿದೆ. ಆದರೆ, ವೀಲ್‌, ಸಸ್ಪೆನ್ಷನ್‌, ಬಿಡಿಭಾಗಗಳು, ಹಾರ್ಡ್‌ವೇರ್‌ ಇತ್ಯಾದಿಗಳಲ್ಲಿ ಯಾವುದೇ ಬದಲಾವಣೆಗಳು ಇರುವ ನಿರೀಕ್ಷೆಗಳು ಇಲ್ಲ. ಇದರಿಂದ ಕಂಪನಿಗೆ ಇಂತಹ ಬಿಡಿಭಾಗಗಳ ನಿರ್ಮಾಣದ ವೆಚ್ಚ ಕಡಿಮೆಯಾಗಲಿದೆ. ನೂತನ ಓಲಾ ಸ್ಕೂಟರ್‌ನಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್‌ ಫೋರ್ಕ್ಸ್‌ ಮತ್ತು ಹಿಂಭಾಗದಲ್ಲಿ ಟ್ವಿನ್‌ ಗ್ಯಾಸ್‌ ಚಾರ್ಜಡ್‌ ಶಾಕ್‌ ಅಬ್ಸರ್ಬರ್‌ಗಳು ಇರಲಿವೆ. ಅಲಾಯ್‌ ವಿಲ್‌ ಬದಲು ಸ್ಟೀಲ್‌ ವಿಲ್ಸ್‌ ಇರುವ ನಿರೀಕ್ಷೆಯಿದೆ.

ಇದರಲ್ಲಿ ಓಲಾ ಎಲೆಕ್ಟ್ರಿಕ್‌ನ ಈ ಹಿಂದಿನ ಎಲ್‌ಇಡಿ ಡೇಟೈಮ್‌ ರನ್ನಿಂಗ್‌ ಲ್ಯಾಂಪ್‌ ಮತ್ತು ಪ್ರಾಜೆಕ್ಟರ್‌ ಸೆಟಪ್‌ ಹೆಡ್‌ಲ್ಯಾಪ್‌ ಇರುವ ನಿರೀಕ್ಷೆಯಿದೆ. ಹಿಂಬದಿ ಟೇಲ್‌ ಲ್ಯಾಂಪ್‌ ವಿನ್ಯಾಸವೂ ಇರಲಿದೆ. ವಿನ್ಯಾಸದಲ್ಲಿಯೂ ಹೆಚ್ಚು ಬದಲಾವಣೆ ಇರುವ ನಿರೀಕ್ಷೆಗಳು ಇಲ್ಲ. ಆದರೆ, ಎಸ್‌1 ಪ್ರೊ ಸ್ಕೂಟರ್‌ಗೆ ಹೋಲಿಸಿದರೆ ಡಿಸ್‌ಪ್ಲೇ ರೆಸಲ್ಯೂಷನ್‌ ಕಡಿಮೆ ಇರುವ ಸಾಧ್ಯತೆಗಳಿವೆ. ಸ್ಕೂಟರ್‌ನ ಡಿಸ್‌ಪ್ಲೇಯಲ್ಲಿ ಪೂರ್ಣ ಮಾಹಿತಿ ಇಲ್ಲದೆ ಬೇಸಿಕ್‌ ಮಾಹಿತಿಗಳು ಮಾತ್ರ ದೊರಕುವ ಸಾಧ್ಯತೆಯಿದೆ. ನ್ಯಾವಿಗೇಷನ್‌, ಬ್ಲೂಟೂಥ್‌ ಕನೆಕ್ಟಿವಿಟಿ, ಇಂಟರ್‌ನೆಟ್‌ ಕನೆಕ್ಟಿವಿಟಿ ಇತ್ಯಾದಿ ಫೀಚರ್‌ಗಳು ಇರುವುದೇ ಕಾದು ನೋಡಬೇಕಿದೆ.

ಓಲಾ ಕಂಪನಿಯು ಇತ್ತೀಚೆಗೆ Ola S1 Air ಹೆಸರಿನ ಸ್ಕೂಟರ್‌ ಲಾಂಚ್‌ ಮಾಡಿತ್ತು. ಈ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಗಂಟೆಗೆ ಗರಿಷ್ಠ 85 ಕಿ.ಮೀ. ಸಾಗುವ ಅವಕಾಶವಿದೆ. ಒಂದು ಫುಲ್‌ ಚಾರ್ಜ್‌ಗೆ 165 ಕಿ.ಮೀ. ಸಾಗಬಹುದು. ಇದು ಐದು ಬಣ್ಣಗಳಲ್ಲಿ ದೊರಕುತ್ತದೆ. ಅಂದರೆ, ಕೋರಲ್‌ ಗ್ಲಾಮ್‌, ನಿಯೋ ಮಿಂಟ್‌, ಪೊರ್ಸೆಲಿನ್‌ ವೈಟ್‌, ಜೆಟ್‌ ಬ್ಲಾಕ್‌ ಮತ್ತು ಲಿಕ್ವಿಡ್‌ ಸಿಲ್ವರ್‌ ಬಣ್ಣಗಳಲ್ಲಿ ದೊರಕುತ್ತದೆ.

la S1 Air ಸ್ಕೂಟರ್‌ನಲ್ಲಿ 2.5KWh ಲಿಥಿಯಂ-ಐಯಾನ್ ಬ್ಯಾಟರಿ ಇದೆ. ಪೂರ್ತಿ ಚಾರ್ಜ್‌ ಆಗಲು ಸುಮಾರು 4.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. Ola S1 Air ಸ್ಕೂಟರ್‌ 4.3 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಈ ಸ್ಕೂಟರ್‌ನಲ್ಲಿ ಗಂಟೆಗೆ ಗರೀಷ್ಠ 85 ಕಿಮೀ ವೇಗದಲ್ಲಿ ಸಾಗಬಹುದು. ಇಕೋ, ಸ್ಪೋರ್ಟ್‌ ಮತ್ತು ರಿವರ್ಸ್‌ ಎಂಬ ಮೂರು ಆಯ್ಕೆಗಳನ್ನು ಈ ಸ್ಕೂಟರ್‌ ಹೊಂದಿದೆ. ಇಕೋ ಮೋಡ್‌ನಲ್ಲಿ ಸುಮಾರು 100 ಕಿ.ಮೀ. ಪ್ರಯಾಣಿಸಬಹುದು.

ಒಟ್ಟಾರೆ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಬಳಗಕ್ಕೆ ಹಲವು ಸ್ಕೂಟರ್‌ಗಳು ಸೇರ್ಪಡೆಯಾಗುತ್ತಿದ್ದು, ದೇಶದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರದೊಳಗೆ ಪ್ರಯಾಣಕ್ಕೆ ಅಥವಾ ಗ್ರಾಮೀಣ ಪ್ರದೇಶದ ಪ್ರಯಾಣಕ್ಕೆ ಎಲೆಕ್ಟ್ರಿಕ್‌ ಸ್ಕೂಟರ್‌ ಬಳಕೆ ಹೆಚ್ಚುತ್ತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.