Vespa Scooter: ಎರಡು ಹೊಸ ವೆಸ್ಪಾ ಸ್ಕೂಟರ್‌ ಪರಿಚಯಿಸಿದ ಪಿಯಾಜಿಯೊ, ಆರಂಭಿಕ ದರ 1.32 ಲಕ್ಷ ರೂ, ಇಲ್ಲಿದೆ ಹೆಚ್ಚಿನ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Vespa Scooter: ಎರಡು ಹೊಸ ವೆಸ್ಪಾ ಸ್ಕೂಟರ್‌ ಪರಿಚಯಿಸಿದ ಪಿಯಾಜಿಯೊ, ಆರಂಭಿಕ ದರ 1.32 ಲಕ್ಷ ರೂ, ಇಲ್ಲಿದೆ ಹೆಚ್ಚಿನ ವಿವರ

Vespa Scooter: ಎರಡು ಹೊಸ ವೆಸ್ಪಾ ಸ್ಕೂಟರ್‌ ಪರಿಚಯಿಸಿದ ಪಿಯಾಜಿಯೊ, ಆರಂಭಿಕ ದರ 1.32 ಲಕ್ಷ ರೂ, ಇಲ್ಲಿದೆ ಹೆಚ್ಚಿನ ವಿವರ

ಪಿಯಾಜಿಯೊ ಕಂಪನಿಯು ಬಿಎಸ್‌6 ಫೇಸ್‌ 2 ನಿಯಮಗಳಿಗೆ ತಕ್ಕಂತೆ ಎರಡು ಹೊಸ ವೆಸ್ಪಾ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಕಂಪನಿಯು Vespa Dual 125 ಮತ್ತು Vespa Dual 150 ಎಂಬೆರಡು ಸ್ಕೂಟರ್‌ಗಳನ್ನು ಡ್ಯೂಯೆಲ್‌ ಟೋನ್‌ ಮಾದರಿಯಲ್ಲಿ ಪರಿಚಯಿಸಿದೆ.

Vespa Scooter: ಹೊಸ ಎರಡು ವೆಸ್ಪಾ ಸ್ಕೂಟರ್‌ ಪರಿಚಯಿಸಿದ ಪಿಯಾಜಿಯೊ
Vespa Scooter: ಹೊಸ ಎರಡು ವೆಸ್ಪಾ ಸ್ಕೂಟರ್‌ ಪರಿಚಯಿಸಿದ ಪಿಯಾಜಿಯೊ

ವೆಸ್ಪಾ ಸ್ಕೂಟರ್‌ ಪ್ರಿಯರಿಗೆ ಸಿಹಿಸುದ್ದಿ. ಪಿಯಾಜಿಯೊ ಕಂಪನಿಯು ಬಿಎಸ್‌6 ಫೇಸ್‌ 2 ನಿಯಮಗಳಿಗೆ ತಕ್ಕಂತೆ ಎರಡು ಹೊಸ ವೆಸ್ಪಾ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಕಂಪನಿಯು Vespa Dual 125 ಮತ್ತು Vespa Dual 150 ಎಂಬೆರಡು ಸ್ಕೂಟರ್‌ಗಳನ್ನು ಡ್ಯೂಯೆಲ್‌ ಟೋನ್‌ ಮಾದರಿಯಲ್ಲಿ ಪರಿಚಯಿಸಿದೆ.

ಈ ಹಿಂದಿನ ವೆಸ್ಪಾ ಸ್ಕೂಟರ್‌ಗಳಿಗೆ ಹೋಲಿಸಿದರೆ ನೂತನ ವೆಸ್ಪಾ ಸ್ಕೂಟರ್‌ ಹೆಚ್ಚು ವರ್ಣರಂಜಿತವಾಗಿದೆ. ಡ್ಯೂಯೆಲ್‌ ಟೋನ್‌ ಸಂಯೋಜನೆ ಮಾತ್ರವಲ್ಲದೆ ಹಿಂಬದಿ ಸವಾರರಿಗೂ ಸೂಕ್ತವಾದ ಸೌಕರ್ಯಗಳನ್ನು ಹೊಂದಿದೆ. 2023 ವೆಸ್ಪಾ ಡ್ಯುಯಲ್ 125 ವಿಎಕ್ಸ್‌ಎಲ್‌ನ ಆರಂಭಿಕ ದರ 1.32 ಲಕ್ಷ ರೂ. ಇದೆ. 2023 ವೆಸ್ಪಾ ಡ್ಯುಯಲ್ 150 ವಿಎಕ್ಸ್‌ಎಲ್‌ ಆರಂಭಿಕ ದರ 1.49 ಲಕ್ಷ ರೂಪಾಯಿ ಇದೆ.

ವೆಸ್ಪಾ ಡ್ಯುಯಲ್ ಶ್ರೇಣಿಯು ಹೊಸ ಬಣ್ಣದ ಆಯ್ಕೆಗಳು, ಆರಾಮದಾಯಕವಾದ ಬ್ಯಾಕ್‌ರೆಸ್ಟ್ ಹೊಂದಿದೆ. ಹಿಂಬದಿ ಸವಾರರಿಗೆ ಇದರಿಂದ ಹೆಚ್ಚು ಆರಾಮದಾಯಕವೆನಿಸಬಹುದು. ಇದರೊಂದಿಗೆ ಬಾಡಿ ಪ್ಯಾನೆಲ್‌ಗಳಲ್ಲಿ ಹೊಸ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದ್ದು, ವೆಸ್ಪಾ ಸೌಂದರ್ಯ ಇನ್ನಷ್ಟು ಹೆಚ್ಚಾಗಿದೆ.

ನೂತನ ವೆಸ್ಪಾದ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಅಥವಾ ಮಾರ್ಪಾಡಾಗಿಲ್ಲ. ಈ ಹಿಂದೆ ಇದ್ದಂತೆ ವಿಎಕ್ಸ್‌ಎಲ್‌ 125 ಮತ್ತು 150ನಲ್ಲಿ ವೃತ್ತಾಕಾರದ ಹೆಡ್‌ಲ್ಯಾಂಪ್‌ ಇದೆ. ಇದೇ ರೀತಿ ವೆಸ್ಪಾ ಎಸ್‌ಎಕ್ಸ್‌ಎಲ್‌ 125 ಮತ್ತು 150ನಲ್ಲಿ ಆಯತಾಕಾರದ ಹೆಡ್‌ಲ್ಯಾಂಪ್‌ ಇದೆ.

ಹೊಸ ಎರಡು ವೆಸ್ಪಾ ಸ್ಕೂಟರ್‌ ಪರಿಚಯಿಸಿದ ಪಿಯಾಜಿಯೊ
ಹೊಸ ಎರಡು ವೆಸ್ಪಾ ಸ್ಕೂಟರ್‌ ಪರಿಚಯಿಸಿದ ಪಿಯಾಜಿಯೊ

"ಇಟಲಿ ಜೀವನಶೈಲಿಯ ವೆಸ್ಪಾವು ಹಲವು ತಲೆಮಾರುಗಳನ್ನು ಗೆದ್ದಿದೆ. ಇದೀಗ ವೆಸ್ಪಾ ಡ್ಯೂಯೆಲ್‌ ಜತೆಗೆ ಮುಂದಿನ ತಲೆಮಾರಿಗೆ ಹೊಸ ಕೊಡುಗೆ ನೀಡುತ್ತಿದ್ದೇವೆ. ಯುವ ಜನತೆಗೆ, ಧೈರ್ಯಶಾಲಿಗಳಾಗಿ ಬದುಕಲು ಬಯಸುವವರಿಗೆ, ಐಷಾರಾಮಿ ಸ್ಕೂಟರ್‌ ಬಯಸುವವರಿಗೆ ನೂತನ ಡ್ಯೂಯೆಲ್‌ ಸ್ಕೂಟರ್‌ಗಳು ಸೂಕ್ತವಾಗಿದೆ. ನಮ್ಮ ಸವಾರರು ಈ ಸ್ಕೂಟರ್‌ನ ಸಂಪೂರ್ಣ ಆನಂದ ಪಡೆಯುವ ವಿಶ್ವಾಸ ನನಗಿದೆ" ಎಂದು ನೂತನ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಪಿಯಾಜಿಯೊ ವೆಹಿಕಲ್ಸ್ ಪ್ರೈ. ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಿಯಾಗೋ ಗ್ರಾಫಿ ಹೇಳಿದ್ದಾರೆ.

"ಯೂತ್‌, ವೈಲ್ಡ್‌ ಮತ್ತು ಫ್ರಿ ಸಂಭ್ರಮದೊಂದಿಗೆ ನೂತನ ವೆಸ್ಪಾ ಡ್ಯೂಯೆಲ್‌ ಪರಿಚಯಿಸಿದ್ದೇವೆ. ಇದು ಸಾಂಪ್ರದಾಯಿಕ ಸ್ಕೂಟರ್‌ಗಳಿಗಿಂತ ಭಿನ್ನ ಸೌಂದರ್ಯ ಹೊಂದಿದ್ದು, ಆಕರ್ಷಕ ಬಣ್ಣದಿಂದ ಗಮನ ಸೆಳೆಯುತ್ತದೆ. ಖಂಡಿತವಾಗಿಯೂ ಇದು ವಾಹನ ಪ್ರಿಯರ ಕಣ್ಮನ ಸೆಳೆಯಲಿದೆ. ಸವಾರರಿಗೆ ಮಾತ್ರವಲ್ಲದೆ ಹಿಂಬದಿ ಸವಾರರಿಗೂ ಆರಾಮದಾಯಕತೆ ನೀಡುವ ಅಂಶಗಳನ್ನು ಸೇರಿಸಿದ್ದೇವೆ. ಎಲ್ಲೇ ಇದ್ದರೂ ಗುಂಪಿನಲ್ಲಿ ಎದ್ದುಕಾಣುವಂತಹ ಸುಂದರವಾದ ವೆಸ್ಪಾ ಸ್ಕೂಟರ್‌ ಎಲ್ಲರಿಗೂ ಇಷ್ಟವಾಗುವ ನಂಬಿಕೆಯಿದೆ" ಎಂದು ಪಿಯಾಜಿಯೊ ವೆಹಿಕಲ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಜಯ್ ರಘುವಂಶಿ ಹೇಳಿದ್ದಾರೆ.

ಹೊಸ ಎರಡು ವೆಸ್ಪಾ ಸ್ಕೂಟರ್‌ ಪರಿಚಯಿಸಿದ ಪಿಯಾಜಿಯೊ
ಹೊಸ ಎರಡು ವೆಸ್ಪಾ ಸ್ಕೂಟರ್‌ ಪರಿಚಯಿಸಿದ ಪಿಯಾಜಿಯೊ

2023 Vespa Dual VXL 125 ಮತ್ತು 2023 Vespa Dual VXL 150 ಸ್ಕೂಟರ್‌ಗಳು ಪೆರ್ಲ್‌ ವೈಟ್‌ ಮತ್ತು ಪರ್ಲ್‌, ವೈಟ್‌ ಮತ್ತು ಬಿಯೇಜ್‌ ಸಮಿಶ್ರ ಬಣ್ಣಗಳಲ್ಲಿ, ಪರ್ಲ್‌ ವೈಟ್‌ ಮತ್ತು ಮ್ಯಾಟ್‌ ಬ್ಲ್ಯಾಕ್‌ ಬಣ್ಣಗಳಲ್ಲಿ ದೊರಕುತ್ತದೆ. ಆದರೆ, Vespa Dual SXL 125 ಮತ್ತು 150 ಸ್ಕೂಟರ್‌ಗಳು ಕೇವಲ ಪರ್ಲ್‌ ವೈಟ್‌ ಮತ್ತು ಮ್ಯಾಟ್‌ ರೆಡ್‌ ಶೇಡ್‌ ಬಣ್ಣಗಳಲ್ಲಿ ದೊರಕುತ್ತದೆ. ಭಾರತದ ಎಲ್ಲಾ 250ಕ್ಕೂ ಹೆಚ್ಚು ಪಿಯಾಜಿಯೊ ಡೀಲರ್‌ಶೀಪ್‌ ಮಳಿಗೆಗಳಲ್ಲಿ ವೆಸ್ಪಾ ಖರೀದಿಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.