ರಾಯಲ್ ಎನ್‌ಫೀಲ್ಡ್ ಬುಲೆಟ್ ಪ್ರಿಯರಿಗೆ ಸಿಹಿ ಸುದ್ದಿ, ಹೊಸ ಸ್ಕ್ರಾಮ್ 440 ಆಗಮನ, ದರ 2.08 ಲಕ್ಷ ರೂಪಾಯಿ
Royal Enfield Scram 440: ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 440 ಭಾರತದಲ್ಲಿ ಬಿಡುಗಡೆಯಾಗಿದೆ. ಇದು ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಬದಲಿಯಾಗಿ ಆಗಮಿಸಿದ ಹೊಸ ಬುಲೆಟ್ ಬೈಕಾಗಿದೆ. ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ನೂತನ ಸ್ಕ್ರಾಮ್ 440 ಕುರಿತು ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 440 ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಆರಂಭಿಕ ಎಕ್ಸ್‌ಶೋರೂ ದರ 2.08 ಲಕ್ಷ ರೂಪಾಯಿ. ಇದು ಜನಪ್ರಿಯ ಹಿಮಾಲಯನ್ ಅನ್ನು ಆಧರಿಸಿದ ಸ್ಕ್ರಾಮ್ 411 ರ ಉತ್ತರಾಧಿಕಾರಿ. ರಾಯಲ್ ಎನ್‌ಫೀಲ್ಡ್ ಕಂಪನಿಯು ಕಳೆದ ವರ್ಷ ಮೋಟೋವರ್ಸ್‌ನಲ್ಲಿ ಸ್ಕ್ರಾಮ್ 440 ಅನ್ನು ಅನಾವರಣಗೊಳಿಸಿತ್ತು. ಸ್ಕ್ರಾಮ್ 411 ಗೆ ಹೋಲಿಸಿದರೆ, ಸ್ಕ್ರಾಮ್ 440 ದೊಡ್ಡ ಎಂಜಿನ್, ಹೆಚ್ಚಿನ ಶಕ್ತಿ, ಹೆಚ್ಚಿನ ಫೀಚರ್‌ಗಳನ್ನು ಹೊಂದಿದೆ.
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 440: ಪವರ್
ಇದರಲ್ಲಿ ನವೀಕರಿಸಿದ 443 ಸಿಸಿ, ಏರ್ ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಇದೆ.ದು 25.4 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 34 ಎನ್‌ಎಂ ಗರಿಷ್ಠ ಟಾರ್ಕ್ ನೀಡುತ್ತದೆ. ಇದು 6-ಸ್ಪೀಡ್ ಗಿಯರ್ ಬಾಕ್ಸ್ ಹೊಂದಿದೆ. ಹೊಸ ಎಂಜಿನ್ 3 ಎಂಎಂ ದೊಡ್ಡ ಬೋರ್ ಹೊಂದಿದ್ದು, ಶೇಕಡಾ 4.5 ಹೆಚ್ಚಿನ ಶಕ್ತಿ ಮತ್ತು ಶೇಕಡಾ 6.5 ಹೆಚ್ಚಿನ ಟಾರ್ಕ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಆರನೇ ಗೇರ್ ಕಂಪನವನ್ನು ಕಡಿಮೆ ಮಾಡಲು ಸಹಯಾ ಮಾಡುತ್ತದೆ. ಹೊಸ ಪುಲ್ ಟೈಪ್ ಕ್ಲಚ್ ಕೂಡ ಅಳವಡಿಸಲಾಗಿದೆ.
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 440 : ಫೀಚರ್‌ಗಳು
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 440 ಬೈಕ್‌ನಲ್ಲಿ ಸ್ಪೋಕ್ಡ್ ರಿಮ್‌ಗಳು ಮತ್ತು ಅಲಾಯ್ ವೀಲ್‌ಗಳು ಇವೆ. ಇದಕ್ಕೆ ತಕ್ಕಂತೆ ಟ್ಯೂಬ್‌ಲೆಸ್ ಟೈರ್‌ಗಳ ಆಯ್ಕೆ ನೀಡಲಾಗಿದೆ. ಈ ಬೈಕ್‌ನಲ್ಲಿ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ ಇದೆ. ಇದು ಬ್ರೈಟ್‌ನೆಸ್ ವಿಷಯದಲ್ಲಿ ಬೆಸ್ಟ್ ಎಂದು ಹೇಳುವಂತೆ ಇಲ್ಲ. ಬದಲಾಯಿಸಬಹುದಾದ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಮೊಬೈಲ್ ಸಾಧನಗಳನ್ನು ಚಾರ್ಜ್ ಮಾಡಲು ಯುಎಸ್‌ಬಿ ಚಾರ್ಜರ್ ಇದೆ. ಹಿಂದಿನ ಮಾದರಿಯಲ್ಲಿ ಇದ್ದಂತಹ ಡಿಜಿಟಲ್-ಅನಲಾಗ್ ಕ್ಲಸ್ಟರ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್ ಇದೆ.
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 440: ಹಾರ್ಡ್‌ವೇರ್
ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ 190 ಎಂಎಂ ಮತ್ತು 180 ಎಂಎಂ ಮೊನೊಶಾಕ್‌ನೊಂದಿಗೆ ಸಸ್ಪೆನ್ಷನ್ ಸೆಟಪ್ ಇದೆ. ಬ್ರೇಕಿಂಗ್‌ಗಾಗಿ 300 ಎಂಎಂ ಫ್ರಂಟ್ ಡಿಸ್ಕ್ ಮತ್ತು 240 ಎಂಎಂ ಹಿಂಭಾಗದ ಡಿಸ್ಕ್‌ಗೆ ಅಪ್‌ಗ್ರೇಡ್ ಮಾಡಲಾಗಿದೆ. ಸ್ಕ್ರಾಮ್ 440 ಕರ್ಬ್ ತೂಕವು 187 ಕೆಜಿಯಷ್ಟಿದ್ದು, ಅದರ ಹಿಂದಿನ ಆವೃತ್ತಿಗೆ ಹೋಲಿಸಿದರೆ ತೂಕ 2 ಕೆಜಿ ಹೆಚ್ಚಳವಾಗಿದೆ. ಬೈಕ್ ಈಗ ಸೆಂಟರ್ ಸ್ಟ್ಯಾಂಡ್ ಜತೆಗೆ ಆಗಮಿಸಿದೆ. 10 ಕೆಜಿ ಪೇಲೋಡ್ ಸಾಮರ್ಥ್ಯವಿರುವ ಟಾಪ್ ಬಾಕ್ಸ್ ಅಳವಡಿಸಲು ಅವಕಾಶವಿದೆ.
ಯಾವ ಬಣ್ಣಗಳಲ್ಲಿ ದೊರಕುತ್ತದೆ?
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 440 ಟ್ರಯಲ್ ರೂಪಾಂತರವನ್ನು ನೀಲಿ ಮತ್ತು ಹಸಿರು ಬಣ್ಣಗಳಲ್ಲಿ ನೀಡಲಾಗುತ್ತದೆ. ಫೋರ್ಸ್ ರೂಪಾಂತರವು ನೀಲಿ, ಹಸಿರು ಮತ್ತು ಟೀಲ್ ಬಣ್ಣಗಳನ್ನು ಹೊಂದಿರಲಿದೆ. ಪಡೆಯುತ್ತದೆ.
ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 440ರ ಬೆಲೆ ಎಷ್ಟು?
ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 440 ಟ್ರಯಲ್ ಮತ್ತು ಫೋರ್ಸ್ ಎಂಬ ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ಇವುಗಳ ದರ 2.08 ಲಕ್ಷ ಮತ್ತು 2.15 ಲಕ್ಷ ರೂಪಾಯಿ ಇದೆ. ಇವೆರಡೂ ಎಕ್ಸ್‌ಶೋರೂಂ ದರವಾಗಿದೆ.
