Xiaomi Car: ರಸ್ತೆಗಿಳಿಯಲು ಸಜ್ಜಾದ ಶಿಯೋಮಿ ಎಲೆಕ್ಟ್ರಿಕ್‌ ಕಾರು, ಟೆಸ್ಲಾಗೆ ಪೈಪೋಟಿ ನೀಡಲಿದೆ ಹೊಸ ಶಿಯೋಮಿ ಮೊಡೆನಾ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Xiaomi Car: ರಸ್ತೆಗಿಳಿಯಲು ಸಜ್ಜಾದ ಶಿಯೋಮಿ ಎಲೆಕ್ಟ್ರಿಕ್‌ ಕಾರು, ಟೆಸ್ಲಾಗೆ ಪೈಪೋಟಿ ನೀಡಲಿದೆ ಹೊಸ ಶಿಯೋಮಿ ಮೊಡೆನಾ

Xiaomi Car: ರಸ್ತೆಗಿಳಿಯಲು ಸಜ್ಜಾದ ಶಿಯೋಮಿ ಎಲೆಕ್ಟ್ರಿಕ್‌ ಕಾರು, ಟೆಸ್ಲಾಗೆ ಪೈಪೋಟಿ ನೀಡಲಿದೆ ಹೊಸ ಶಿಯೋಮಿ ಮೊಡೆನಾ

Xiaomi electric car: ಶಿಯೋಮಿ ಕಂಪನಿಗೆ ಎಲೆಕ್ಟ್ರಿಕ್‌ ಕಾರಿನ ಉತ್ಪಾದನೆಗೆ ಚೀನಾ ಸರಕಾರ ಕಳೆದ ತಿಂಗಳು ಅನುಮತಿ ನೀಡಿದೆ. ಚೀನಾದ ಬೃಹತ್‌ ಟೆಕ್‌ ಕಂಪನಿ ಶಿಯೋಮಿಯು ಈ ವರ್ಷದ ಅಂತ್ಯದೊಳಗೆ ಮೊದಲ ಎಲೆಕ್ಟ್ರಿಕ್‌ ಕಾರನ್ನು ಮಾರಾಟ ಮಾಡಲು ಉದ್ದೇಶಿಸಿದೆ.

ಶಿಯೋಮಿ ಕಾರು
ಶಿಯೋಮಿ ಕಾರು

ಈಗಾಗಲೇ ಭಾರತದಲ್ಲಿ ಸಾಕಷ್ಟು ಜನರು ಶಿಯೋಮಿ ಮೊಬೈಲ್‌ ಫೋನ್‌ಗಳನ್ನು ಬಳಸುತ್ತಿದ್ದಾರೆ. ಶಿಯೋಮಿ ಟಿವಿಗಳೂ ನಮ್ಮಲ್ಲಿ ಜನಪ್ರಿಯ. ಮುಂದಿನ ದಿನಗಳಲ್ಲಿ ನಮ್ಮ ರಸ್ತೆಗಳಲ್ಲಿ ಮೊಡೆನಾ ಎಂಬ ಶಿಯೋಮಿ ಕಾರು ಕಾಣಿಸಿದರೆ ಅಚ್ಚರಿಯಿಲ್ಲ. ಏಕೆಂದರೆ, ಚೀನಾದ ಬೃಹತ್‌ ಟೆಕ್‌ ಕಂಪನಿ ಶಿಯೋಮಿಯು ಈ ವರ್ಷದ ಅಂತ್ಯದೊಳಗೆ ಮೊದಲ ಎಲೆಕ್ಟ್ರಿಕ್‌ ಕಾರನ್ನು ಪರಿಚಯಿಸಲು ಯೋಜಿಸಿದೆ.

ಶಿಯೋಮಿ ಕಂಪನಿಗೆ ಎಲೆಕ್ಟ್ರಿಕ್‌ ಕಾರಿನ ಉತ್ಪಾದನೆಗೆ ಚೀನಾ ಸರಕಾರ ಕಳೆದ ತಿಂಗಳು ಅನುಮತಿ ನೀಡಿದೆ. ಈ ವರ್ಷದ ಶಿಯೋಮಿಯ ಜನವರಿ ತಿಂಗಳಲ್ಲಿಯೇ ಎಲೆಕ್ಟ್ರಿಕ್‌ ಕಾರಿನ ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡಿದ್ದವು. ಎರಡು ವರ್ಷದ ಹಿಂದೆಯೇ ಕಂಪನಿಯು ಎಲೆಕ್ಟ್ರಿಕ್‌ ಕಾರು ಉತ್ಪಾದಿಸುವುದಾಗಿ ಘೋಷಿಸಿತ್ತು.

ಈ ಎಲೆಕ್ಟ್ರಿಕ್‌ ಕಾರಿಗೆ ಎಂಎಸ್‌11 ಎಂದು ಕೋಡ್‌ ನೇಮ್‌ ಇಡಲಾಗಿದೆ. ಅಲ್ಲಿನ ಸ್ಥಳೀಯ ಮಾಧ್ಯಮಗಳು ಈ ಕಾರನ್ನು ಈಗಾಗಲೇ ಶಿಯೋಮಿ ಮೊಡೆನಾ ಎಂದು ಕರೆದಿವೆ. ಚೀನಾದ ಕಾರ್‌ ನ್ಯೂಸ್‌ ಮ್ಯಾಗಜಿನ್‌ ಪ್ರಕಾರ ಈ ಕಾರಿನ ಟ್ರಯಲ್‌ ಆವೃತ್ತಿಯ ಉತ್ಪಾದನೆ ಕಳೆದ ತಿಂಗಳೇ ಆರಂಭವಾಗಿದೆ. ಚೀನಾದ ಉದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಒಂದೆರಡು ತಿಂಗಳಲ್ಲಿ ಈ ಕಾರಿಗೆ ಅನುಮತಿ ದೊರಕುವ ನಿರೀಕ್ಷೆಯಿದೆ. ಅನುಮತಿ ದೊರಕಿದ ತಕ್ಷಣ ಮಾರಾಟ ಆರಂಭಿಸುವುದಾಗಿ ಕಂಪನಿ ತಿಳಿಸಿದೆ.

ಶಿಯೋಮಿ ಕಂಪನಿಯ ನೂತನ ಎಲೆಕ್ಟ್ರಿಕ್‌ ಕಾರು ಲಾಂಚ್‌ ಆದ ಬಳಿಕ ಇದು ಟೆಲ್ಸಾ ಮತ್ತು ಬಿವೈಡಿ ಸೀಲ್‌ನಂತಹ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಈ ಕಾರುಗಳು ಅಲ್ಲಿ ಸುಮಾರು 2 ಲಕ್ಷ ಯೆನ್‌ಗೆ ಅಂದರೆ ಸುಮಾರು 27,400 ಡಾಲರ್‌ಗೆ ಮಾರಾಟವಾಗುತ್ತಿವೆ.

ಈಗ ಲೀಕ್‌ ಆಗಿರುವ ಕಾರಿನ ಚಿತ್ರ ನೋಡಿದರೆ ಇದು ಕ್ಯೂಟ್‌ ವಿನ್ಯಾಸ ಹೊಂದಿದೆ. ದೊಡ್ಡ ಎಲ್‌ಇಡಿ ಹೆಡ್‌ಲೈಟ್‌ಗಳು, ಸರಳವಾದ ಮುಂಭಾಗದ ಬಂಪರ್‌ ಇತ್ಯಾದಿಗಳನ್ನು ಗಮನಿಸಬಹುದು. ಈ ಕಾರು ಪನೋರಾಮಿಕ್‌ ಗ್ಲಾಸ್‌ ರೂಫ್‌ ಹೊಂದಿರುವ ಸಾಧ್ಯತೆಯಿದೆ.

ಈ ಕಖಾರಿನಲ್ಲಿ 101 ಕಿಲೋವ್ಯಾಟ್‌ನ ಟರ್ನರಿ ಬ್ಯಾಟರಿ ಇರುವ ನಿರೀಕ್ಷೆಯಿದೆ. ಒಂದು ಪೂರ್ತಿ ಚಾರ್ಜ್‌ಗೆ 800 ಕಿಲೋಮೀಟರ್‌ ದೂರ ಸಾಗಲು ಅವಕಾಶ ನೀಡುವ ನಿರೀಕ್ಷೆಯಿದೆ. ಕಳೆದ ವರ್ಷದವರೆಗೆ ಶಿಯೋಮಿ ಕಂಪನಿಯು ಸುಮಾರು 433 ಡಾಲರ್‌ನಷ್ಟು ಮೊತ್ತವನ್ನು ತನ್ನ ವಾಹನ ವಿಭಾಗಕ್ಕೆ ಹೂಡಿಕೆ ಮಾಡಿದೆ. ಸುಮಾರು 2300 ಉದ್ಯೋಗಿಗಳು ಅದರ ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.