Kannada News  /  Nation And-world  /  Automobile Retail Sales Up 14%, Cross 18 Lakh Mark In January: Report
Automobile sales: ಎಲ್ಲರಿಗೂ ಬೇಕು ಕಾರು ಬೈಕು, ದೇಶದಲ್ಲಿ ಭರ್ಜರಿ ವಾಹನ ಮಾರಾಟ
Automobile sales: ಎಲ್ಲರಿಗೂ ಬೇಕು ಕಾರು ಬೈಕು, ದೇಶದಲ್ಲಿ ಭರ್ಜರಿ ವಾಹನ ಮಾರಾಟ

Automobile sales: ಎಲ್ಲರಿಗೂ ಬೇಕು ಕಾರು ಬೈಕು, ದೇಶದಲ್ಲಿ ಭರ್ಜರಿ ವಾಹನ ಮಾರಾಟ, ಇಲ್ಲಿದೆ ಜನವರಿ ಲೆಕ್ಕ

06 February 2023, 14:57 ISTHT Kannada Desk
06 February 2023, 14:57 IST

ಪ್ರಯಾಣಿಕ ವಾಹನಗಳು, ದ್ವಿಚಕ್ರವಾಹನಗಳು ಮತ್ತು ಟ್ರಾಕ್ಟರ್‌ಗಳು ಸೇರಿದಂತೆ ಎಲ್ಲಾ ವಿಭಾಗದಲ್ಲಿ ಜನವರಿ ತಿಂಗಳಲ್ಲಿ 18,26,669 ವಾಹನ ಮಾರಾಟಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16,08,505 ವಾಹನ ಮಾರಾಟವಾಗಿತ್ತು.

ನವದೆಹಲಿ: ಸ್ವಂತ ವಾಹನ ಹೊಂದುವ ಜನರ ಬಯಕೆ ಹೆಚ್ಚಾಗಿದ್ದು, ದೇಶದಲ್ಲಿ ವಾಹನ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಾಣುತ್ತಿದೆ. ಕಳೆದ ತಿಂಗಳು ಅಂದರೆ ಜನವರಿ ತಿಂಗಳಲ್ಲಿ ದೇಶದಲ್ಲಿ ರಿಟೇಲ್‌ ವಾಹನ ಮಾರಾಟವು ಶೇಕಡ 14ರಷ್ಟು ಏರಿಕೆ ದಾಖಲಿಸಿದೆ ಎಂದು ಆಟೋಮೊಬೈಲ್‌ ಡೀಲರ್ಸ್‌ ಅಸೋಸಿಯೇಷನ್‌ ಮಾಹಿತಿ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಯಾಣಿಕ ವಾಹನಗಳು, ದ್ವಿಚಕ್ರವಾಹನಗಳು ಮತ್ತು ಟ್ರಾಕ್ಟರ್‌ಗಳು ಸೇರಿದಂತೆ ಎಲ್ಲಾ ವಿಭಾಗದಲ್ಲಿ ಜನವರಿ ತಿಂಗಳಲ್ಲಿ 18,26,669 ವಾಹನ ಮಾರಾಟಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16,08,505 ವಾಹನ ಮಾರಾಟವಾಗಿತ್ತು.

ಕಳೆದ ತಿಂಗಳು ಪ್ರಯಾಣಿಕ ವಾಹನಗಳ ಮಾರಾಟವು 3,40,220 ಯೂನಿಟ್‌ ಆಗಿತ್ತು. ಕಳೆದ ವರ್ಷದ ಜನವರಿ ತಿಂಗಳ 2,79,050 ಯೂನಿಟ್‌ ಮಾರಾಟಕ್ಕೆ ಹೋಲಿಸಿದರೆ ಪ್ರಯಾಣಿಕ ಕಾರು ಮಾರಾಟದಲ್ಲಿ ಶೇಕಡ 22ರಷ್ಟು ನೆಗೆತ ದಾಖಲಾಗಿದೆ.

ಇದೇ ರೀತಿ ಕಳೆದ ತಿಂಗಳು 65,796 ದ್ವಿಚಕ್ರವಾಹನ ಮಾರಾಟಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 41,487 ಯೂನಿಟ್‌ ದ್ವಿಚಕ್ರ ವಾಹನಗಳು ಮಾರಾಟಗೊಂಡಿದ್ದವು.

ಜನವರಿ ತಿಂಗಳಲ್ಲಿ ವಾಣಿಜ್ಯ ವಾಹನ ಮಾರಾಟಗಳ ಪ್ರಮಾಣ 82,428 ಯೂನಿಟ್‌ಗೆ ತಲುಪಿತ್ತು. ಕಳೆದ ವರ್ಷದ ಜನವರಿಯಲ್ಲಿ 70,853 ವಾಣಿಜ್ಯ ವಾಹನಗಳು ಮಾರಾಟಗೊಂಡಿದ್ದವು.

ಇದೇ ರೀತಿ ಕಳೆದ ತಿಂಗಳು 73,156 ಟ್ರ್ಯಾಕ್ಟರ್‌ಗಳು ಮಾರಾಟಗೊಂಡಿವೆ. ಕಳೆದ ವರ್ಷದ ಜನವರಿಯಲ್ಲಿ 67,764 ಟ್ರ್ಯಾಕ್ಟರ್‌ಗಳು ಮಾರಾಟಗೊಂಡಿದ್ದವು.

"ಒಂದು ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಜನವರಿ ತಿಂಗಳಲ್ಲಿ ಒಟ್ಟಾರೆ ರಿಟೇಲ್‌ ವಾಹನ ಮಾರಾಟವು ಗಮನಾರ್ಹವಾಗಿ ಹೆಚ್ಚಾಗಿದೆ. ಆದರೆ, ಕೋವಿಡ್‌ ಪೂರ್ವದ ಮಟ್ಟಕ್ಕೆ ಹೋಲಿಸಿದರೆ ವಾಹನ ಮಾರಾಟ ಶೇಕಡ 8ರಷ್ಟು ಕೆಳಮಟ್ಟದಲ್ಲಿದೆ" ಎಂದು ಫೆಡರೇಷನ್‌ ಆಫ್‌ ಆಟೋಮೊಬೈಲ್‌ ಡೀಲರ್ಸ್‌ ಅಸೋಸಿಯಷೇನ್‌ನ (ಎಫ್‌ಎಡಿಎ) ಅಧ್ಯಕ್ಷ ಮನೀಶ್‌ ರಾಜ್‌ ಸಿಂಘಾನಿಯಾ ಹೇಳಿದ್ದಾರೆ.

"ಅತ್ಯುತ್ತಮ ಗುಣಮಟ್ಟ, ಆರೋಗ್ಯಕಾರಿ ಬುಕ್ಕಿಂಗ್ಸ್‌, ಹೆಚ್ಚಿನ ಪೂರೈಕೆಯು ರಿಟೇಲ್‌ ವಾಹನಗಳ ಮಾರಾಟ ಹೆಚ್ಚಳಕ್ಕೆ ನೆರವಾಗಿದೆ. ಆದರೆ, ಎಂಟ್ರಿ ಲೆವೆಲ್‌ ವಾಹನಗಳ ಮಾರಾಟ ಈಗಲೂ ಅತ್ಯುತ್ತಮವಾಗಿದೆ" ಎಂದು ಅವರು ಹೇಳಿದ್ದಾರೆ.

"ದ್ವಿಚಕ್ರವಾಹನ ಮಾರಾಟದಲ್ಲಿ ಜನರ ಭಾವನೆ ಉತ್ತಮಗೊಳ್ಳುತ್ತಿದೆ. ಆದರೆ, ದ್ವಿಚಕ್ರ ವಾಹನ ಮಾರಾಟವು ಕೆಲವು ವರ್ಷಗಳ ಹಿಂದಿನ ಮಟ್ಟದಲ್ಲಿಲ್ಲ" ಎಂದು ಅವರು ಹೇಳಿದ್ದಾರೆ.

"ಗ್ರಾಮೀಣ ಮಾರುಕಟ್ಟೆಯಲ್ಲಿ ಈಗಲೂ ಮಾಲಿಕತ್ವದ ವೆಚ್ಚವನ್ನು ಪರಿಗಣಿಸುತ್ತಾರೆ. ಹೀಗಾಗಿ, ಹೆಚ್ಚು ದುಬಾರಿ ವಾಹನಗಳ ಖರೀದಿಯಿಂದ ಹಿಂದೆ ಸರಿಯುತ್ತಾರೆ. ಕಡಿಮೆ ದರದ ಮತ್ತು ಉತ್ತಮ ಬಾಳ್ವಿಕೆಯ ವಾಹನಗಳಿಗೆ ಡಿಮ್ಯಾಂಡ್‌ ಇದೆ" ಎಂದು ಅವರು ಹೇಳಿದ್ದಾರೆ.

ವಾಣಿಜ್ಯ ವಾಹನ ವಲಯಕ್ಕೆ ಮೂಲಸೌಕರ್ಯ ಯೋಜನೆಗಳಿಗೆ ಸರಕಾರವು ನೀಡಿರುವ ಪ್ರೋತ್ಸಾಹವು ವಾಹನ ಮಾರುಕಟ್ಟೆಗೆ ಉತ್ತೇಜನ ನೀಡಿದೆ. ಕೊರೊನಾ ಪೂರ್ವ ಹಂತಕ್ಕೆ ನಿಧಾನವಾಗಿ ದೇಶದ ವಾಹನ ಮಾರುಕಟ್ಟೆ ಸಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಚೀನಾದ ಫ್ಯಾಕ್ಟರಿ ಚಟುವಟಿಕೆಗಳು ಸುಧಾರಿಸಿದರೆ ವಾಹನ ಬಿಡಿಭಾಗಗಳು ಮತ್ತು ಸೆಮಿ ಕಂಡಕ್ಟರ್‌ಗಳು ಜಾಗತಿಕ ಮಾರುಕಟ್ಟೆಯಿಂದ ಪೂರೈಕೆಯಾಗುವುದು ಉತ್ತಮಗೊಳ್ಳಲಿದೆ. ಇದರಿಂದ ವಾಹನಗಳ ಪೂರೈಕೆ ಉತ್ತಮಗೊಳ್ಳಲಿದೆ. ಇದು ಪ್ರಯಾಣಿಕ ವಾಹನಗಳ ಮಾರಾಟವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದರು.