ಟಾಟಾ ಟಿಯಾಗೊ ಇವಿ ಖರೀದಿದಾರರಿಗೆ 75 ಸಾವಿರ ರೂ ಉಳಿಸುವ ಅವಕಾಶ, ಡಿಸ್ಕೌಂಟ್ ಜತೆಗೆ ಹೆಚ್ಚುವರಿ ಪ್ರಯೋಜನದ ವಿವರ
ಟಾಟಾ ಟಿಯಾಗೊ ಎಲೆಕ್ಟ್ರಿಕ್ ವೆಹಿಕಲ್ ಎರಡು ಬ್ಯಾರಿ ಪ್ಯಾಕ್ ಮತ್ತು ನಾಲ್ಕು ಆವೃತ್ತಿಗಳಲ್ಲಿ ಲಭ್ಯವಿದೆ. ಇದೀಗ ಟಾಟಾ ಕಂಪನಿಯು ಟಿಯಾಗೊ ಇವಿ ಖರೀದಿದಾರರಿಗ 75 ಸಾವಿರ ರೂವರೆಗೆ ಉಳಿತಾಯ ಮಾಡುವಂತಹ ಪ್ರಯೋಜನಗಳನ್ನು ನೀಡಿದೆ.

ಟಾಟಾ ಮೋಟಾರ್ಸ್‌ಕಂಪನಿಯು ಟಾಟಾ ಟಿಯಾಗೊ ಇವಿ ಖರೀದಿದಾರರಿಗೆ 75 ಸಾವಿರ ರೂವರೆಗೆ ಪ್ರಯೋಜನಗಳನ್ನು ಮತ್ತು ಟಾಟಾ ಪವರ್ ಸ್ಟೇಷನ್‌ಗಳಲ್ಲಿ 6 ತಿಂಗಳವರೆಗೆ ಉಚಿತ ವಿದ್ಯುತ್ ಕೊಡುಗೆಯನ್ನು ಘೋಷಿಸಿದೆ. ಆದರೆ, ಈ ಪ್ರಯೋಜನಗಳು ಅಥವಾ ಆಫರ್ ಅಕ್ಟೋಬರ್ 31ಕ್ಕೆ ಕೊನೆಗೊಳ್ಳಲಿದೆ. ಟಿಯಾಗೊ ಖರೀದಿಸಲು ಆಲೋಚಿಸುವವರು ಈ ತಿಂಗಳೊಳಗೆ ಖರೀದಿಸಿದರೆ ಈ ಹೆಚ್ಚುವರಿ ಪ್ರಯೋಜನಗಳನ್ನು ತಮ್ಮದಾಗಿಸಿಕೊಳ್ಳಬಹುದು.
ಟಾಟಾ ಟಿಯಾಗೊ ಇವಿಯ ಬ್ಯಾಟರಿ ಪ್ಯಾಕ್ ಗಾತ್ರವೇನು?
ಟಾಟಾ ಟಿಯಾಗೊ ಇವಿಯು ಎರಡು ಪ್ಯಾಟರಿ ಪ್ಯಾಕ್ ಗಾತ್ರಗಳಲ್ಲ ದೊರಕುತ್ತದೆ. ಅಂದರೆ, 19.2 ಕಿಲೋವ್ಯಾಟ್ ಯೂನಿಟ್ ಮತ್ತು 24 ಕಿಲೋವ್ಯಾಟ್ ಯೂನಿಟ್‌ಗಳಲ್ಲಿ ದೊರಕುತ್ತದೆ. ಇವೆರಡು ಲಿಕ್ವಿಡ್ ಕೂಲ್ಡ್ ಎಂಜಿನ್‌ಗಳಾಗಿವೆ. ಇವುಗಳಲ್ಲಿ ಮಲ್ಟಿ ಮೋಡ್‌ರಿಜನರೇಷನ್ ಬ್ರೇಕಿಂಗ್ ವ್ಯವಸ್ಥೆಯೂ ಇದೆ. ಇದರಲ್ಲಿ ನಾಲ್ಕು ಲೆವೆಲ್‌ಗಳು ಇರುತ್ತವೆ. 0ಯಲ್ಲಿ ರಿಜನರೇಷನ್ ಇರೋದಿಲ್ಲ 3 ಗರಿಷ್ಠ ರಿಜನರೇಷನ್ ಆಗಿರುತ್ತದೆ.
ಟಾಟಾ ಟಿಯಾಗೊ ಇವಿ ರೇಂಜ್ ಎಷ್ಟಿದೆ?
ಒಂದು ಫುಲ್ ಚಾರ್ಜ್‌ನಲ್ಲಿ ಎಲೆಕ್ಟ್ರಿಕ್ ವಾಹನ ಎಷ್ಟು ದೂರ ಸಾಗುತ್ತದೆಯೋ ಅದನ್ನು ರೇಂಜ್ ಎನ್ನುತ್ತಾರೆ. ಮಧ್ಯಮ ಶ್ರೇಣಿಯ ಟಿಯಾಗೊ ಆವೃತ್ತಿಯು ಫುಲ್ ಚಾರ್ಜ್‌ಗೆ 221 ಕಿ.ಮೀ. ರೇಂಜ್ ನೀಡುತ್ತದೆ. ಲಾಂಗ್ ರೇಂಜ್ ಆವೃತ್ತಿಯು ಒಂದು ಫುಲ್ ಚಾರ್ಜ್‌ಗೆ 275 ಕಿಮೀ ಸಾಗುತ್ತದೆ.
ಯಾವೆಲ್ಲ ಬಣ್ಣಗಳಲ್ಲಿ ಟಿಯಾಗೊ ಇವಿ ಲಭ್ಯ?
ಟಿಯಾಗೊ ಇವಿಯು ಐದು ಬಣ್ಣಗಳಲ್ಲಿ ದೊರಕುತ್ತದೆ. ಸಿಗ್ನೇಚರ್ ಟಿಲ್ ಬ್ಲೂ, ಡೆಟೊನಾ ಗ್ರೇ, ಟ್ರೊಪಿಕಲ್ ಮಿಸ್ಟ್, ಪ್ರಿಸ್ಟೈನ್ ವೈಟ್ ಮತ್ತು ಮಿಡ್‌ನೈಟ್ ಪ್ಲಮ್ ಬಣ್ಣಗಳಲ್ಲಿ ದೊರಕುತ್ತದೆ.
ಟಿಯಾಗೊ ಇವಿಗೆ ವ್ಯಾರೆಂಟಿ ಎಷ್ಟು?
ಟಿಯಾಗೊ ಇವಿಯ ಬ್ಯಾಟರಿ ಪ್ಯಾಕ್‌ಗೆ 8 ವರ್ಷಗಳ ವಾರೆಂಟಿ ಇರುತ್ತದೆ ಅಥವಾ 1.6 ಲಕ್ಷ ಕಿಮೀ ಮತ್ತು 3 ವರ್ಷ ಅಥವಾ 1.25 ಲಕ್ಷ ಕಿ.ಮೀ. ವಾರೆಂಟಿ ಇರುತ್ತೆ.
ಟಿಯಾಗೊ ಇವಿಯ ಆಕ್ಸಿಲರೇಷನ್ ಎಷ್ಟಿದೆ?
ಮೀಡಿಯಂ ರೇಂಜ್‌ನ ಇವಿಯು 6.2 ಸೆಕೆಂಡ್‌ನಲ್ಲಿ 0-60 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಲಾಂಗ್ ರೇಂಜ್ ಆವೃತ್ತಿಯು 5.7 ಸೆಕೆಂಡ್‌ನಲ್ಲಿ 0-60 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ.
ಟಿಯಾಗೊ ಇವಿಯ ಪವರ್ ಮತ್ತು ಟಾರ್ಕ್ ಎಷ್ಟಿದೆ?
ಮೀಡಿಯಂ ರೇಂಜ್‌ನ ಆವೃತ್ತಿಯು 60 ಬಿಎಚ್‌ಪಿ ಮತ್ತು 10 ಎನ್‌ಎಂ ಟಾರ್ಕ್ ಒದಗಿಸುತ್ತದೆ. ಲಾಂಗ್ ರೇಂಜ್ ಆವೃತ್ತಿಯು 73 ಬಿಎಚ್‌ಪಿ ಮತ್ತು 114 ಎನ್‌ಎಂ ಟಾರ್ಕ್ ಒದಗಿಸುತ್ತದೆ.
