Electric Scooter: ಟಿವಿಎಸ್ ಐಕ್ಯೂಬ್ ಇವಿ ಮೇಲೆ ವರ್ಷಾಂತ್ಯದ ಆಫರ್ ಗಳ ಘೋಷಣೆ; ಓರ್ವ ಲಕ್ಕಿ ಗ್ರಾಹಕನಿಗೆ ಉಚಿತವಾಗಿ ಸಿಗಲಿದೆ ಸ್ಕೂಟರ್
'ಟಿವಿಎಸ್ ಐಕ್ಯೂಬ್ ಇವಿ: ಟಿವಿಎಸ್ ಮೋಟಾರ್ ಕಂಪನಿಯಲ್ಲಿ ಹೆಚ್ಚು ಮಾರಾಟವಾಗುವ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಶೇಕಡಾ 100 ರಷ್ಟು ಕ್ಯಾಷ್ ಬ್ಯಾಕ್ ಸೇರಿದಂತೆ ಹಲವು ಆಫರ್ ಗಳಿವೆ. ಕಂಪನಿಯು 'ಮಿಡ್‌ನೈಟ್ ಕಾರ್ನಿವಲ್' ಹೆಸರಿನಲ್ಲಿ ರಿಯಾಯಿತಿ ಮತ್ತು ಕೊಡುಗೆಗಳನ್ನು ನೀಡುತ್ತಿದೆ. ಸಂಪೂರ್ಣ ವಿವರ ಇಲ್ಲಿದೆ.
ಟಿವಿಎಸ್ ಐಕ್ಯೂಬ್ ಇವಿ: ಆಟೋಮೊಬೈಲ್ ಕಂಪನಿಗಳು ಸಾಮಾನ್ಯವಾಗಿ ವರ್ಷಾಂತ್ಯದ ಆಫರ್ ಗಳನ್ನು ಘೋಷಣೆ ಮಾಡುತ್ತವೆ. ಟಿವಿಎಸ್ ಮೋಟಾರ್ ಇತ್ತೀಚೆಗೆ ಈ ಪಟ್ಟಿಗೆ ಸೇರಿಕೊಂಡಿದೆ. ಕಂಪನಿಯು ತನ್ನ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಐಕ್ಯೂಬ್ ಮೇಲೆ ಭಾರಿ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಪ್ರಕಟಿಸಿದೆ. "ಮಿಡ್‌ನೈಟ್ ಕಾರ್ನಿವಲ್" ಹೆಸರಿನಲ್ಲಿ ಟಿವಿಎಸ್ ಐಕ್ಯೂಬ್ ಮೇಲೆ ಆಫರ್ ಗಳನ್ನು ಪ್ರಕಟಿಸಿದೆ. 2024ರ ಡಿಸೆಂಬರ್ 12ರ ರಾತ್ರಿ 12:00 ರಿಂದ ಡಿಸೆಂಬರ್ 22ರ ಶನಿವಾರದ ವರಿಗೆ 10 ದಿನಗಳ ವರಿಗೆ ಗ್ರಾಹಕರು ಈ ಆಫರ್ ಗಳ ಪ್ರಯೋಜನೆಗಳನ್ನು ಪಡೆಯಬಹುದಾಗಿದೆ. ಶೇಕಡಾ 100 ರಷ್ಟು ಕ್ಯಾಶ್‌ಬ್ಯಾಕ್‌ನಿಂದ ಹಿಡಿದು ಉಚಿತವಾಗಿ ಎಲೆಕ್ಟ್ರಿಕ್ ಸ್ಕೂಟರ್ ಪಡೆಯುವವರಿಗೆ ಆಫರ್ ಗಳನ್ನು ಟಿವಿಎಸ್ ಮೋಟಾರ್ ನೀಡಿದೆ. ಅದರ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಟಿವಿಎಸ್ ಐಕ್ಯೂಬ್ ಮಿಡ್‌ನೈಟ್ ಕಾರ್ನಿವಲ್ ಕೊಡುಗೆಗಳು
ಟಿವಿಎಸ್ ಐಕ್ಯೂಬ್ ಮಿಡ್‌ನೈಟ್ ಕಾರ್ನಿವಲ್‌ನ ಭಾಗವಾಗಿ, ನೀವು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ಗೆಲ್ಲಬಹುದು! ಈ ವೇಳೆ ಸ್ಕೂಟರ್ ಖರೀದಿಸಿದವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಉಚಿತವಾಗಿ ಸ್ಕೂಟರ್ ನೀಡಲಾಗುವುದು ಎಂದು ಟಿವಿಎಸ್ ಮೋಟಾರ್ ಸಂಸ್ಥೆ ಹೇಳಿಕೊಂಡಿದೆ. ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಡೀಲರ್‌ಶಿಪ್ ಮೂಲಕ ಖರೀದಿಸಬೇಕು. ಇದಲ್ಲದೆ, ಈ ಕಾರ್ನಿವಲ್ ಸಮಯದಲ್ಲಿ ಆಯ್ದ ಡೀಲರ್‌ಶಿಪ್‌ಗಳು ಮಧ್ಯರಾತ್ರಿಯವರೆಗೆ ತೆರೆದಿರುತ್ತವೆ.
ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡುವ ಗ್ರಾಹಕರು ಐಕ್ಯೂಬ್ 3.4 ಕಿಲೋವ್ಯಾಟ್ ನಲ್ಲಿ 5 ವರ್ಷಗಳು / 70,000 ಕಿಲೋ ಮೀಟರ್ ಉಚಿತ ವಿಸ್ತೃತ ವಾರಂಟಿ, ಐಕ್ಯೂಬ್ 2.2 ಕಿಲೋ ವ್ಯಾಟ್ ರೂಪಾಂತರಗಳಲ್ಲಿ 5 ವರ್ಷಗಳು / 50,000 ಕಿಲೋ ಮೀಟರ್ ಉಚಿತ ವಿಸ್ತೃತ ವಾರಂಟಿ ಸೇರಿದಂತೆ 30,000 ರೂಪಾಯಿಗಳವರಿಗೆ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಮಿಡ್‌ನೈಟ್ ಕಾರ್ನಿವಲ್ ಕೊಡುಗೆಗಳ ಲಾಭ ಪಡೆಯುವಂತೆ ಟಿಪಿಎಸ್ ಮೋಟಾರ್ ಗ್ರಾಹಕರಿಗೆ ಕರೆ ನೀಡಿದೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ
ವಿವಿಧ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ರೂಪಾಂತರಗಳಿವೆ. ಐಕ್ಯೂಬ್ ಶ್ರೇಣಿಯು ಪ್ರಸ್ತುತ 89,999 ರೂಪಾಯಿಯಿಂದ ಪ್ರಾರಂಭವಾಗಿ 1.85 ಲಕ್ಷ (ಎಕ್ಸ್ ಶೋ ರೂಂ) ವರೆಗೆ ಇರುತ್ತದೆ. ಸ್ಟ್ಯಾಂಡರ್ಡ್, ಎಸ್ ಮತ್ತು ಎಸ್ ಟಿ ರೂಪಾಂತರಗಳು ಕ್ರಮವಾಗಿ 2.2 ಕಿಲೋ ವ್ಯಾಟ್, 3.4 ಕಿಲೋ ವ್ಯಾಟ್ ಮತ್ತು 5.1ಕಿಲೋ ವ್ಯಾಟ್ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಲಭ್ಯವಿದೆ. ಪ್ರತಿ ಆವೃತ್ತಿಯಲ್ಲಿ 75 ಕಿಲೋ ಮೀಟರ್ (2.2 kW) ನಿಂದ 150 ಕಿಲೋ ಮಟೀರ್ (5.1 kW) ವರೆಗೆ ಶ್ರೇಣಿಯು ಬದಲಾಗುತ್ತದೆ. ಗರಿಷ್ಠ ವೇಗ ಗಂಟೆಗೆ 78 ಕಿಮೀ ಇರುತ್ತದೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಎಥೆರ್ ರಿಜ್ಟಾ, ಓಲಾ ಎಸ್1 ಏರ್, ಅಂಪೇರೆ ನೆಕ್ಸಸ್, ಬಜಾಜ್ ಚೇತಕ್ ಹಾಗೂ ಇತರೆ ಮಾದರಿಯ ಸ್ಕೂಟರ್ ಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಡಿಸೆಂಬರ್ 20 ರಂದು ಬಜಾಜ್ ಚೇತಕ್ ಹೊಸ ತಲೆಮಾರಿನ ಆವೃತ್ತಿಯು ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತಿದೆ. ಇದು ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸ್ಪರ್ಧೆಗಳನ್ನು ಮತ್ತಷ್ಟು ಕಠಿಣಗೊಳಿಸುತ್ತದೆ.