ಮನೆ-ಮನಗಳಲ್ಲೂ ವಿರಾಜಮಾನನಾದ ಬಾಲರಾಮ; ಶ್ರೀರಾಮನನ್ನು ಭಾರತ ಸ್ವಾಗತಿಸಿ ಸಂಭ್ರಮಿಸಿದ್ದು ಹೀಗೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮನೆ-ಮನಗಳಲ್ಲೂ ವಿರಾಜಮಾನನಾದ ಬಾಲರಾಮ; ಶ್ರೀರಾಮನನ್ನು ಭಾರತ ಸ್ವಾಗತಿಸಿ ಸಂಭ್ರಮಿಸಿದ್ದು ಹೀಗೆ

ಮನೆ-ಮನಗಳಲ್ಲೂ ವಿರಾಜಮಾನನಾದ ಬಾಲರಾಮ; ಶ್ರೀರಾಮನನ್ನು ಭಾರತ ಸ್ವಾಗತಿಸಿ ಸಂಭ್ರಮಿಸಿದ್ದು ಹೀಗೆ

Ram Lalla: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯುತ್ತಿದ್ದಂತೆಯೇ ಜನರು ಶ್ರೀ ರಾಮನನ್ನು ಆದರದಿಂದ ಸ್ವಾಗತಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ತಮ್ಮ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದು, ಶ್ರೀರಾಮನಿಗೆ ಜೈಕಾರ ಹಾಕುತ್ತಿದ್ದಾರೆ.

ರಾಮಮಂದಿರದಲ್ಲಿ ವಿರಾಜಮಾನನಾದ ಬಾಲರಾಮ
ರಾಮಮಂದಿರದಲ್ಲಿ ವಿರಾಜಮಾನನಾದ ಬಾಲರಾಮ

ಭಾರತ ಮಾತ್ರವಲ್ಲದೇ ಸಂಪೂರ್ಣ ಜಗತ್ತೇ ಕಾತರದಿಂದ ನಿರೀಕ್ಷಿಸುತ್ತಿದ್ದ ಬಾಲರಾಮನ ಪ್ರಾಣ ಪ್ರತಿಷ್ಠೆ ಸಂಪನ್ನಗೊಂಡಿದೆ. ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಭು ಶ್ರೀರಾಮನು ಬಾಲರಾಮನಾಗಿ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಕನ್ನಡಿಗ ಅರುಣ್ ಯೋಗಿರಾಜ್ ಕೈಚಳಕದಿಂದ ಮೂಡಿ ಬಂದ ಬಾಲರಾಮನ ಸುಂದರ ಪ್ರತಿಮೆಯ ಪ್ರಾಣ ಪ್ರತಿಷ್ಠಾ ಮಹೋತ್ಸವ ಜನವರಿ 22ರ ಸೋಮವಾರ ಮಧ್ಯಾಹ್ನ 12.29 ರಿಂದ 12.30ರ ನಡುವಿನ 84 ಸೆಕೆಂಡ್‌ಗಳ ಅವಧಿಯಲ್ಲಿ ನೆರವೇರಿತು.

ಭಾರತವು ಸರಿಸುಮಾರು 500 ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾದಾಗಿನಿಂದ ದೇಶದ ಜನರು ಪ್ರಭು ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಇದೀಗ ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮ ನಿಂತಿದ್ದಾನೆ. ಈ ಸಂಭ್ರಮ ಅಯೋಧ್ಯೆಗೆ ಮಾತ್ರ ಸೀಮಿತವಾಗಿರದೆ, ಸಂಪೂರ್ಣ ದೇಶವೇ ಸಂಭ್ರಮಿಸುತ್ತಿದೆ. ದೇಶದ ಮನೆ-ಮನಗಳಲ್ಲಿ ರಾಮನಾಮ ಜಪವಾಗುತ್ತಿದೆ. ಬಹುತೇಕ ರಾಮಭಕ್ತರು ರಾಮನನ್ನು ತಮ್ಮ ತಮ್ಮ ಮನೆಗಳಲ್ಲಿ ಆರಾಧಿಸುತ್ತಿದ್ದಾರೆ.

ಅತ್ತ ಇಂದು ಮಧ್ಯಾಹ್ನದ ಶುಭ ಮುಹೂರ್ತದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯುತ್ತಿದ್ದಂತೆಯೇ ಜನರು ರಾಮನನ್ನು ಆದರದಿಂದ ಸ್ವಾಗತಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ತಮ್ಮ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದು, ಶ್ರೀರಾಮನಿಗೆ ಜೈಕಾರ ಹಾಕುತ್ತಿದ್ದಾರೆ.

ಶ್ರೀರಾಮನ ಪ್ರಾಣ ಪ್ರತಿಷ್ಠೆಯು ಸಂಪನ್ನಗೊಂಡಿರುವುದು ರಾಮಭಕ್ತರ ಖುಷಿಯನ್ನು ಇಮ್ಮಡಿಗೊಳಿಸಿದೆ. ಸದ್ಯ ರಾಮಮಂದಿರದ ನಿರ್ಮಾಣ ಕಾರ್ಯ ಮತ್ತೆ ಮುಂದುವರೆಯಲಿದ್ದು, ಮಂದಿರವು ಸಂಪೂರ್ಣವಾಗಿ ಎದ್ದು ನಿಂತ ಮೇಲೆ ಅಯೋಧ್ಯೆಗೆ ತೀರ್ಥಯಾತ್ರೆ ಕೈಗೊಳ್ಳಲು ಜನರು ಕಾಯುತ್ತಿದ್ದಾರೆ. ಆ ದಿನವು ಆದಷ್ಟು ಬೇಗನೆ ಹತ್ತಿರ ಬರಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.