ಕನ್ನಡ ಸುದ್ದಿ  /  Nation And-world  /  Ayodhya Ram Mandir Sun Rays: Scientists Oppose Involvement In Sunrays To Forehead Of The Ram Idol

Ayodhya Ram Mandir Sun Rays: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹಕ್ಕೆ ಸೂರ್ಯ ಕಿರಣ ಸ್ಪರ್ಶಿಸುವ ಯೋಜನೆಗೆ ವಿಜ್ಞಾನಿಗಳ ವಿರೋಧ

ಪ್ರತಿವರ್ಷ ರಾಮನವಮಿಯಂದು ರಾಮನ ವಿಗ್ರಹದ ಹಣೆಯ ಭಾಗಕ್ಕೆ ಸೂರ್ಯನ ಬೆಳಕನ್ನು ಹರಿಸುವ ಆಪ್ಟೋ ಮೆಕಾನಿಕಲ್‌ ವ್ಯವಸ್ಥೆಯು ತಾಂತ್ರಿಕವಾಗಿ ಕಾರ್ಯಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Ayodhya Ram Mandir Sun Rays: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹಕ್ಕೆ ಸೂರ್ಯ ಕಿರಣ ಸ್ಪರ್ಶಿಸುವ ಯೋಜನೆಗೆ ವಿಜ್ಞಾನಿಗಳ ವಿರೋಧ
Ayodhya Ram Mandir Sun Rays: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹಕ್ಕೆ ಸೂರ್ಯ ಕಿರಣ ಸ್ಪರ್ಶಿಸುವ ಯೋಜನೆಗೆ ವಿಜ್ಞಾನಿಗಳ ವಿರೋಧ

ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರದಲ್ಲಿ ಶ್ರೀರಾಮಚಂದ್ರನ ವಿಗ್ರಹದ ಹಣೆಗೆ ಸೂರ್ಯರಶ್ಮಿ ಬೀಳುವಂತಹ ವೈಜ್ಞಾನಿಕ ಯೋಜನೆಗೆ ಸರಕಾರದ ವಿಜ್ಞಾನ ಸಂಪನ್ಮೂಲ ಬಳಕೆ ಮಾಡುವುದನ್ನು ಇನ್ನೂರಕ್ಕೂ ಹೆಚ್ಚು ವಿಜ್ಞಾನಿಗಳು ವಿರೋಧಿಸಿದ್ದಾರೆ.

"ಈ ಯೋಜನೆಯು ಯಾವುದೇ ವೈಜ್ಞಾನಿಕ ಆವಿಷ್ಕಾರ ಅಥವಾ ಒಳನೋಟಕ್ಕೆ ಕಾರಣವಾಗುವುದಿಲ್ಲʼʼ ಎಂದು ವಿಜ್ಞಾನಿಗಳ ಅಭಿಪ್ರಾಯ ಉಲ್ಲೇಖಿಸಿ ಟೆಲಿಗ್ರಾಫ್‌ಇಂಡಿಯಾ ವರದಿ ಮಾಡಿದೆ.

"ಪ್ರತಿವರ್ಷ ರಾಮನವಮಿಯಂದು ರಾಮನ ವಿಗ್ರಹದ ಹಣೆಯ ಭಾಗಕ್ಕೆ ಸೂರ್ಯನ ಬೆಳಕನ್ನು ಹರಿಸುವ ಆಪ್ಟೋ ಮೆಕಾನಿಕಲ್‌ ವ್ಯವಸ್ಥೆಯು ತಾಂತ್ರಿಕವಾಗಿ ಕಾರ್ಯಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಈ ರೀತಿ ಮಾಡುವುದು ವೈಜ್ಞಾನಿಕ ಪ್ರಕ್ರಿಯೆಯ ಮನೋಭಾವಕ್ಕೆ ವಿರುದ್ಧವಾಗಿದೆ" ಎಂದು ದೇಶದ ವಿವಿಧ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ರಾಮನವಮಿಯ ದಿನದಂದು ರಾಮನ ಹಣೆಗೆ ಸೂರ್ಯರಶ್ಮಿಯನ್ನು ಬೀಳುವಂತೆ ಮಾಡುವ ಯೋಜನೆಯಲ್ಲಿ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ) , ರೂರ್ಕೆ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ (ಐಐಎ), ಬೆಂಗಳೂರು, ಇಂಟರ್‌ ಯೂನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರೋನಮಿ ಆಂಡ್‌ ಆಸ್ಟ್ರೋಫಿಸಿಕ್ಸ್‌ (ಐಯುಸಿಎಎ),ಪುಣೆಯ ವಿಜ್ಞಾನಿಗಳು ಕೆಲಸ ಮಾಡಲಿದ್ದಾರೆ.

ಆಪ್ಟೊ ಮೆಕ್ಯಾನಿಕಲ್‌ ಸಿಸ್ಟಮ್‌ ಮೂಲಕ ಸೂರ್ಯನ ಬೆಳಕು ರಾಮನವಮಿಯಂದು ರಾಮನ ವಿಗ್ರಹದ ಹಣೆಗೆ ಬೀಳುವಂತೆ ಮಾಡಬಹುದು. ಇದಕ್ಕಾಗಿ ಮಸೂರಗಳು, ಕನ್ನಡಿಗಳು ಮತ್ತು ಮೈಕ್ರೊ ಕಂಟ್ರೋಲರ್‌ಗಳ ಬಳಕೆ ಮಾಡಬೇಕು. ಪ್ರತಿವರ್ಷ ನಿಗದಿತ ದಿನದಂದು ಸೂರ್ಯನ ಚಲನೆ, ಸೂರ್ಯನ ಬೆಳಕಿನ ಚಲನೆ ಇತ್ಯಾದಿಗಳನ್ನು ಅರ್ಥಮಾಡಿಕೊಂಡು ಇಂತಹ ವ್ಯವಸ್ಥೆ ರೂಪಿಸಬಹುದು.

ಆದರೆ, ಈ ರೀತಿ ಮಾಡಲು ವಿಜ್ಞಾನಿಗಳ ಬಳಕೆ ಎಷ್ಟು ಸರಿ ಎಂಬ ಪ್ರಶ್ನೆಯೆದ್ದಿದೆ. ಇದು ಯಾವುದೇ ಹೊಸ ವೈಜ್ಞಾನಿಕ ಶೋಧನೆಗೆ ಕಾರಣವಾಗುವುದಿಲ್ಲ. ಯಾವುದೇ ತಾಂತ್ರಿಕ ಆವಿಷ್ಕಾರಕ್ಕೂ ಕಾರಣವಾಗುವುದಿಲ್ಲ. ವಿಜ್ಞಾನಿಗಳಾಗಿ ನಮ್ಮ ಕೆಲಸವೇನು ಎಂಬ ಪ್ರಶ್ನೆಯನ್ನಿಟ್ಟುಕೊಂಡು ರಾಮನ ವಿಗ್ರಹದ ಹಣೆಗೆ ಸೂರ್ಯನ ಬೆಳಕು ಬೀಳುವಂತೆ ಮಾಡುವ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸುಮಾರು ಇನ್ನೂರಕ್ಕೂ ಹೆಚ್ಚು ಫ್ಯಾಕಲ್ಟಿ ಸದಸ್ಯರು, ಸಂಶೋಧಕರು, ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ.

ಗರ್ಭಗುಡಿಯಲ್ಲಿರುವ ವಿಗ್ರಹಕ್ಕೆ ಸೂರ್ಯನ ಬೆಳಕು ಬೀಳುವಂತೆ ಮಾಡಲು ನಿರ್ದಿಷ್ಟ ಬಾಗಿಲು ಅಥವಾ ಕಿಟಕಿಗಳನ್ನು ರಚಿಸುವುದು ಹೊಸ ಅನ್ವೇಷಣೆಯಲ್ಲ. ಈಗಾಗಲೇ ಬೌದ್ಧರ ಗುಹಾ ದೇಗುಲಗಳಲ್ಲಿ ಇಂತಹ ಕಿಟಕಿಗಳು ಮತ್ತು ಬಾಗಿಲುಗಳನ್ನು ನೋಡಬಹುದು ಎಂದು ಈ ಓಪನ್‌ ಲೆಟರ್‌ನಲ್ಲಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ರಾಮನವಮಿಯನ್ನು ಚಂದ್ರನ ಕ್ಯಾಲೆಂಡರ್‌ (ಲೂನರ್‌ ಕ್ಯಾಲೆಂಡರ್‌) ಮೂಲಕ ನಿರ್ಧರಿಸಲಾಗುತ್ತದೆ. ಸೌರ ಕ್ಯಾಲೆಂಡರ್‌ನ ನಿಗದಿತ ದಿನಾಂಕಕ್ಕೆ ರಾಮನವಮಿಯ ದಿನವು ಹೊಂದಾಣಿಕೆಯಾಗುವುದಿಲ್ಲ. ಹೀಗಾಗಿ, ಸ್ಥಿರ ಫಲಿತಾಂಶ ಪಡೆಯುವುದು ಕಷ್ಟ. ಹೀಗಿದ್ದರೂ, ಆಪ್ಟೋ ಮೆಕ್ಯಾನಿಕಲ್‌ ಸಿಸ್ಟಮ್‌ ಬಳಕೆಯು ಇದನ್ನು ಇನ್ನಷ್ಟು ಸಂಕೀರ್ಣಗೊಳಿಸಲಿದೆ ಎಂದು ವಿಜ್ಞಾನಿಗಳು ಸಹಿ ಹಾಕಿರುವ ಪತ್ರದಲ್ಲಿ ತಿಳಿಸಲಾಗಿದೆ.

IPL_Entry_Point