ಕನ್ನಡ ಸುದ್ದಿ  /  Nation And-world  /  B V R Subrahmanyam Appointed Niti Aayog Ceo, Replaces Parameswaran Lyer

BVR Subrahmanyam: ನೀತಿ ಆಯೋಗದ ಸಿಇಒ ಆಗಿ ನಿವೃತ್ತ ಐಎಎಸ್‌ ಅಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯನ್‌ ನೇಮಕ, ಅಯ್ಯರ್‌ ವಿಶ್ವಬ್ಯಾಂಕ್‌ಗೆ ಆಯ್ಕೆ

ಭಾರತದ ನೀತಿ ಆಯೋಗದ (Niti Aayog) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ನಿವೃತ್ತ ಐಎಎಸ್‌ ಅಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯನ್‌ ನೇಮಕಗೊಂಡಿದ್ದಾರೆ.

ನೀತಿ ಆಯೋಗದ ಸಿಇಒ ಆಗಿ ನಿವೃತ್ತ ಐಎಎಸ್‌ ಅಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯನ್‌ ನೇಮಕ
ನೀತಿ ಆಯೋಗದ ಸಿಇಒ ಆಗಿ ನಿವೃತ್ತ ಐಎಎಸ್‌ ಅಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯನ್‌ ನೇಮಕ (PTI)

ನವದೆಹಲಿ: ಭಾರತದ ನೀತಿ ಆಯೋಗದ (Niti Aayog) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ನಿವೃತ್ತ ಐಎಎಸ್‌ ಅಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯನ್‌ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು ಪರಮೇಶ್ವರನ್‌ ಅಯ್ಯರ್‌ ಅವರು ಸಿಇಒ ಆಗಿದ್ದರು. ವಿಶ್ವಬ್ಯಾಂಕ್‌ನ ಎಕ್ಸಿಕ್ಯುಟಿವ್‌ ನಿರ್ದೇಶಕರಾಗಿ ಅಯ್ಯರ್‌ ಅವರು ನೇಮಕಗೊಂಡಿರುವುದರಿಂದ ತೆರವಾದ ಅವರ ಸ್ಥಾನಕ್ಕೆ ಬಿವಿಆರ್‌ ಸುಬ್ರಹ್ಮಣ್ಯನ್‌ ಅವರನ್ನು ನೇಮಕ ಮಾಡಲಾಗಿದೆ.

ಹುದ್ದೆಗೆ ನೇಮಕವಾದ ದಿನಾಂಕದಿಂದ ಎರಡು ವರ್ಷಗಳ ಅವಧಿಗೆ ಸುಬ್ರಹ್ಮಣ್ಯ ನೇಮಕಾತಿಯನ್ನು ಸಚಿವ ಸಂಪುಟದ ನೇಮಕಾತಿ ಸಮಿತಿಯು ಅನುಮೋದಿಸಿದೆ ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ.

ನೀತಿ ಆಯೋಗದ ಸಿಇಒ ಆಗಿ ಕೆಲಸ ಮಾಡುತ್ತಿದ್ದ ಪರಮೇಶ್ವರನ್‌ ಅಯ್ಯರ್‌ ಅವರು, ಮೂರು ವರ್ಷಗಳ ಅವಧಿಗೆ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ವಿಶ್ವಬ್ಯಾಂಕ್ ಪ್ರಧಾನ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಅಯ್ಯರ್ ಅವರು 2009 ರಲ್ಲಿ ಭಾರತೀಯ ಆಡಳಿತ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅವರು ವಿಶ್ವಸಂಸ್ಥೆಯಲ್ಲಿ ಹಿರಿಯ ಗ್ರಾಮೀಣ ನೀರು ನೈರ್ಮಲ್ಯ ತಜ್ಞರಾಗಿಯೂ ಕೆಲಸ ಮಾಡಿದ್ದರು. ಇದೀಗ ಪ್ರಮುಖ ಹುದ್ದೆಗೆ ನೇಮಕಗೊಂಡಿದ್ದಾರೆ.

1988ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ರಾಜೇಶ್ ಖುಲ್ಲರ್ ಅವರು ಇಲ್ಲಿಯವರೆಗೆ ವಿಶ್ವಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಖುಲ್ಲರ್‌ ಅವರು ಅವರ ಕೇಡರ್‌ ರಾಜ್ಯ ಹರಿಯಾಣಕ್ಕೆ ಹಿಂತುರುಗಿದ್ದಾರೆ.

ನೀತಿ ಆಯೋಗದ ಕುರಿತು

  • ಭಾರತದ ಯೋಜನಾ ಆಯೋಗವನ್ನು ನೀತಿ ಆಯೋಗ ಅಥವಾ ನ್ಯಾಷನಲ್ ಇನ್ಸ್ಟಿಟ್ಯೂಟಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ (ನೀತಿ) ಆಯೋಗವಾಗಿ 2015ರ ಜನವರಿ 2ರಂದು ಸ್ಥಾಪಿಸಲಾಯಿತು.
  • ಇದು ಮುಖ್ಯವಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ರೂಪಣೆಯಲ್ಲಿ ಬೌದ್ಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
  • ನೀತಿ ಆಯೋಗಕ್ಕೆ ಪ್ರಧಾನಮಂತ್ರಿ ಅಧ್ಯಕ್ಷರಾಗಿರುತ್ತಾರೆ.
  • ನೀತಿ ಆಯೋಗದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳು ಇರುತ್ತಾರೆ.
  • ಒಬ್ಬ ಉಪಾಧ್ಯಕ್ಷ, ಓರ್ವ ಕಾರ್ಯನಿರ್ವಹಣಾಧಿಕಾರಿ ಜತೆಗೆ,ವಿವಿಧ ಕ್ಷೇತ್ರಗಳಲ್ಲಿ ತಜ್ಞರಾಗಿರುವ ಐದು ಜನ ಖಾಯಂ ಸದಸ್ಯರು, ಇಬ್ಬರು ಅರೆಕಾಲಿಕ ಸದಸ್ಯರು ಹಾಗೂ ನಾಲ್ವರು ಕೇಂದ್ರ ಸಚಿವರು ಇರುತ್ತಾರೆ.
  • ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿ ಅರ್ಥ ಶಾಸ್ತ್ರಜ್ಞ ಅರವಿಂದ್ ಪನಗಾರಿಯಾ ಅವರನ್ನು ನೇಮಕ ಮಾಡಲಾಗಿತ್ತು. ಈಗ ಸುಮನ್‌ ಬೆರಿ ಅವರು ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದಾರೆ.

ರಾಷ್ಟ್ರಪತಿಗಳಿಂದ 12 ಗವರ್ನರ್‌ಗಳ ನೇಮಕ

ಇದೇ ಫೆಬ್ರವರಿ 12ರಂದು ವಿವಿಧ ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಲಾಗಿತ್ತು. ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯಾರಿ ಮತ್ತು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಇವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದರು. ಇದರ ಬೆನ್ನಲ್ಲೇ 12 ರಾಜ್ಯಗಳಿಗೆ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ಗೆ ಒಬ್ಬ ಲೆಫ್ಟಿನೆಂಟ್ ಗವರ್ನರ್ ಅನ್ನು ನೇಮಕ ಮಾಡಿದ್ದರು.

IPL_Entry_Point