Bank Holidays: ಫೆಬ್ರವರಿ ತಿಂಗಳಲ್ಲಿ ಈ 8 ದಿನ ಬ್ಯಾಂಕ್‌ಗಳಿಗೆ ರಜಾ, ವೀಕೆಂಡ್‌ ರಜೆಗಳು ಬೇರೆ ಇವೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bank Holidays: ಫೆಬ್ರವರಿ ತಿಂಗಳಲ್ಲಿ ಈ 8 ದಿನ ಬ್ಯಾಂಕ್‌ಗಳಿಗೆ ರಜಾ, ವೀಕೆಂಡ್‌ ರಜೆಗಳು ಬೇರೆ ಇವೆ

Bank Holidays: ಫೆಬ್ರವರಿ ತಿಂಗಳಲ್ಲಿ ಈ 8 ದಿನ ಬ್ಯಾಂಕ್‌ಗಳಿಗೆ ರಜಾ, ವೀಕೆಂಡ್‌ ರಜೆಗಳು ಬೇರೆ ಇವೆ

Bank Holidays in February 2025: ಫೆಬ್ರವರಿ ತಿಂಗಳಲ್ಲಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ರಜಾದಿನಗಳ ಕಾರಣ ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟಾರೆ ಎಂಟು ದಿನಗಳು ರಜೆ ಇರುತ್ತವೆ. ಸರಸ್ವತಿ ಪೂಜೆ, ಮಹಾ ಶಿವರಾತ್ರಿ ಮುಂತಾದ ಹಬ್ಬಗಳಿಂದಲೂ ವಿವಿಧ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

Bank Holidays: ಫೆಬ್ರವರಿ ತಿಂಗಳಲ್ಲಿ ಈ 8 ದಿನ ಬ್ಯಾಂಕ್‌ಗಳಿಗೆ ರಜಾ
Bank Holidays: ಫೆಬ್ರವರಿ ತಿಂಗಳಲ್ಲಿ ಈ 8 ದಿನ ಬ್ಯಾಂಕ್‌ಗಳಿಗೆ ರಜಾ

Bank Holidays in February 2025: ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಬ್ಬಗಳು, ರಾಷ್ಟ್ರೀಯ ರಜಾ ದಿನಗಳ ಕಾರಣದಿಂದ ವಾರಾಂತ್ಯ ಹೊರತುಪಡಿಸಿ ಎಂಟು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್‌ ಆಕ್ಟ್ ಪ್ರಕಾರ ಫೆಬ್ರವರಿ 3, 11, 12, 15, 19, 20, 26 ಮತ್ತು 28 ರಂದು ಬ್ಯಾಂಕ್‌ಗಳಿಗೆ ರಜೆ ಘೋಷಿಸಿದೆ. ಕೆಲವೊಂದು ರಜೆಗಳು ಎಲ್ಲಾ ರಾಜ್ಯಗಳಿಗೆ ಅನ್ವಯವಾಗದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ.

ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್‌  ಆಕ್ಟ್ ಎನ್ನುವುದು ಚೆಕ್ ಮತ್ತು ಪ್ರಾಮಿಸರಿ ನೋಟ್‌ಗಳ ವಿತರಣೆಗೆ ಸಂಬಂಧಿಸಿದೆ. ರಜಾದಿನಗಳಲ್ಲಿ ಇವುಗಳನ್ನು ಒಳಗೊಂಡ ವಹಿವಾಟುಗಳು ಲಭ್ಯವಿರುವುದಿಲ್ಲ.

ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್‌ಗೆ ಭೇಟಿ ನೀಡುವಂತಹ ಅವಶ್ಯಕತೆ ಇದ್ದರೆ ಬ್ಯಾಂಕ್‌ ರಜಾ ದಿನಗಳ ಪಟ್ಟಿ ಇಲ್ಲಿದೆ. ಭಾರತದಾದ್ಯಂತ ಪ್ರದೇಶದಿಂದ ಪ್ರದೇಶಕ್ಕೆ ರಜಾದಿನಗಳು ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಅಂದರೆ, ಕೆಲವೊಂದು ಹಬ್ಬಗಳ ರಜೆಗಳು ಕರ್ನಾಟಕದಲ್ಲಿ ಇರದು.

ಫೆಬ್ರವರಿ 3, 2025: ಸರಸ್ವತಿ ಪೂಜೆ

ವಿವಿಧ ರಾಜ್ಯಗಳ ಬ್ಯಾಂಕ್‌ಗಳಲ್ಲಿ ಫೆಬ್ರವರಿ 3ರಂದು ಸರಸ್ವತಿ ಪೂಜೆ ಪ್ರಯುಕ್ತ ರಜೆ ಇರಲಿದೆ. ಸರಸ್ವತಿಯು ಬರವಣಿಗೆ, ಸಂಗೀತ, ನೃತ್ಯ, ಬುದ್ಧಿವಂತಿಕೆ, ಜ್ಞಾನ, ಕಲೆಗಳ ದೇವಿ. ವಸಂತಕಾಲದ ಆಗಮನವನ್ನು ಗುರುತಿಸಲು ಹಿಂದೂಗಳು ಸರಸ್ವತಿ ಪೂಜೆಯನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ವಿದ್ಯೆ, ಬುದ್ಧಿ, ಜ್ಞಾನಕ್ಕಾಗಿ ದೇವಿಯನ್ನು ಬೇಡುತ್ತಾರೆ.

ಫೆಬ್ರವರಿ 11, 2025: ಥಾಯ್ ಪೂಸಂ

ಇದು ತಮಿಳುನಾಡಿನಲ್ಲಿ ಪ್ರಧಾನವಾಗಿ ಆಚರಿಸಲಾಗುವ ಹಿಂದೂ ಹಬ್ಬ. ರಾಕ್ಷಸನಾದ ಸುರಪದ್ಮನ ಮೇಲೆ ಮುರುಗನ್ ದೇವರ ವಿಜಯವನ್ನು ಸ್ಮರಿಸಲು ಈ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬವು ಹೆಚ್ಚಾಗಿ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಬರುತ್ತದೆ. ಇದು ತಮಿಳು ಥಾಯ್ ತಿಂಗಳ ಮೊದಲ ಹುಣ್ಣಿಮೆಯ ದಿನವಾಗಿದೆ.

ಫೆಬ್ರವರಿ 12, 2025: ಗುರು ರವಿದಾಸರ ಜನ್ಮದಿನ

ರವಿದಾಸ್ 15 ರಿಂದ 16 ನೇ ಶತಮಾನದ ಭಕ್ತಿ ಚಳವಳಿಯ ಸಂತ. ಫೆಬ್ರವರಿ 12ರಂದು ಗುರು ರವಿದಾಸರ ಜನ್ಮ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

ಫೆಬ್ರವರಿ 15, 2025: ಲುಯಿ ನ್ಗೈನಿ

ಲುಯಿ ನ್ಗೈನಿ ಮಣಿಪುರದಲ್ಲಿ ವಸಂತ ಋತು ಮತ್ತು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಇದನ್ನು ಬೀಜ ಬಿತ್ತನೆ ಹಬ್ಬ ಎಂದೂ ಕರೆಯಲಾಗುತ್ತದೆ.

ಫೆಬ್ರವರಿ 19, 2025: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ

ಛತ್ರಪತಿ ಶಿವಾಜಿ ಮಹಾರಾಜ ಜಯಂತಿಯು ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ ರಾಜ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯಾಗಿದೆ.

ಫೆಬ್ರವರಿ 20, 2025: ರಾಜ್ಯ ದಿನ

ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಲ್ಲಿ ರಾಜ್ಯತ್ವ ದಿನವನ್ನು ಆಚರಿಸಲಾಗುತ್ತದೆ. ಫೆಬ್ರವರಿ 20, 1987 ರಂದು ಅರುಣಾಚಲ ಪ್ರದೇಶ ಭಾರತದ 24ನೇ ರಾಜ್ಯವಾಯಿತು. ಈ ದಿನವನ್ನು ಅರುಣಾಚಲ ಪ್ರದೇಶ ದಿನ ಅಥವಾ ಸಂಸ್ಥಾಪನಾ ದಿನ ಎಂದೂ ಕರೆಯಲಾಗುತ್ತದೆ ಮತ್ತು ಇದನ್ನು ಸಾಂಸ್ಕೃತಿಕ ಪ್ರದರ್ಶನಗಳು, ಪ್ರದರ್ಶನಗಳು ಮತ್ತು ಇತರ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಮಿಜೋರಾಂ ತನ್ನ ರಾಜ್ಯತ್ವ ದಿನವನ್ನು ಅದೇ ದಿನದಂದು ಆಚರಿಸುತ್ತದೆ.

ಫೆಬ್ರವರಿ 26, 2025: ಮಹಾ ಶಿವರಾತ್ರಿ

ಮಹಾ ಶಿವರಾತ್ರಿಯು ಶಿವನ ಹಬ್ಬ. ಇದನ್ನು ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಬರುವ ಫಾಲ್ಗುಣ ತಿಂಗಳಲ್ಲಿ ಆಚರಿಸಲಾಗುತ್ತದೆ.

ಫೆಬ್ರವರಿ 28, 2025: ಲೋಸರ್

ಲೋಸರ್ ಅಥವಾ ಟಿಬೆಟಿಯನ್ ಹೊಸ ವರ್ಷವು ಟಿಬೆಟಿಯನ್ ಕ್ಯಾಲೆಂಡರ್ ವರ್ಷದ ಆರಂಭವನ್ನು ಸೂಚಿಸುತ್ತದೆ. ಇದನ್ನು ಸಾಂಸ್ಕೃತಿಕ ಹಬ್ಬಗಳು ಮತ್ತು ಕುಟುಂಬ ಕೂಟಗಳೊಂದಿಗೆ ಆಚರಿಸಲಾಗುತ್ತದೆ.

Whats_app_banner

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.