ಬ್ಯಾಂಕ್ ರಜಾದಿನಗಳು 2025; ಯಾವ ತಿಂಗಳು ಎಷ್ಟು ರಜೆ, ಆರ್‌ಬಿಐ ರಜಾ ಪಟ್ಟಿಯ ಪೂರ್ಣ ವಿವರ ಇಲ್ಲಿದೆ
Bank Holidays 2025: ಹೊಸ ವರ್ಷವನ್ನು ಬರಮಾಡಿಕೊಳ್ಳಲು ದೇಶ ಸಜ್ಜಾಗತೊಡಗಿದೆ. ವ್ಯಾವಹಾರಿಕವಾಗಿ ಗಮನಿಸುವವರು ಬ್ಯಾಂಕ್ ರಜಾದಿನಗಳ ಪಟ್ಟಿ ಹುಡುಕಾಡುತ್ತಿದ್ದಾರೆ. ಬ್ಯಾಂಕ್ ರಜಾದಿನಗಳು 2025ರಲ್ಲಿ ಯಾವ ತಿಂಗಳು ಎಷ್ಟು ರಜೆ ಇದೆ ಎಂಬ ಕುತೂಹಲವಿದೆ. ಅದನ್ನು ತಣಿಸುವಂತೆ, ಆರ್‌ಬಿಐ ರಜಾ ಪಟ್ಟಿಯ ಪೂರ್ಣ ವಿವರ ಇಲ್ಲಿದೆ
Bank Holidays 2025: ಕ್ಯಾಲೆಂಡರ್ ವರ್ಷದ ಕೊನೆಯ ಘಟ್ಟದಲ್ಲಿದ್ದೇವೆ. 2024ರ ಕ್ಯಾಲೆಂಡರ್ ವರ್ಷ ಮುಗಿಯಲು ಬೆರಳೆಣಿಕೆ ದಿನ ಬಾಕಿ. 2025 ಶುರುವಾಗುವ ಹೊತ್ತಿನಲ್ಲಿ ಇಡೀ ವರ್ಷದ ಬ್ಯಾಂಕ್ ರಜಾದಿನಗಳ ಕಡೆಗೆ ಗಮನ ಹರಿಸುವುದು ವಾಡಿಕೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈಗ್ಗೆ ಕೆಲವು ದಿನಗಳ ಹಿಂದೆ 2025ರ ಕ್ಯಾಲೆಂಡರ್ ವರ್ಷದ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಬ್ಯಾಂಕ್ ವಹಿವಾಟುಗಳನ್ನು ಮುಂಚಿತವಾಗಿ ಯೋಜಿಸಿ ಕೊಳ್ಳುವುದಕ್ಕಾಗಿ ರಜಾದಿನಗಳ ಬಗ್ಗೆಯೂ ಮುಂಚಿತವಾಗಿಯೆ ತಿಳಿದುಕೊಂಡಿರಬೇಕಾದ್ದು ಅವಶ್ಯ. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕೇಂದ್ರ ಬ್ಯಾಂಕ್. ಅದರ ಅಧೀನದಲ್ಲಿ, ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್‌ಆರ್‌ಬಿ), ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು (ಎಸ್‌ಎಫ್‌ಬಿ) ನಂತಹ ವಿವಿಧ ರೀತಿಯ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ .
ಬ್ಯಾಂಕ್ ರಜಾದಿನಗಳ ಪೈಕಿ ಎರಡು ವಿಧ
ಭಾರತದಲ್ಲಿ ಚಾಲ್ತಿಯಲ್ಲಿರುವ ಬ್ಯಾಂಕ್ ರಜಾದಿನಗಳನ್ನು ಮುಖ್ಯವಾಗಿ ಎರಡು ವರ್ಗಗಳಾಗಿ ವಿಂಗಡಿಸಬಹುದು. ಮೊದಲನೇಯದಾಗಿ ರಾಷ್ಟ್ರೀಯ ರಜಾದಿನಗಳು (ಗೆಜೆಟೆಡ್ ರಜಾದಿನಗಳು). ಇವುಗಳು ದೇಶದಾದ್ಯಂತ ಸಮಾನವಾಗಿ ಮಾನ್ಯವಾಗಿರುತ್ತವೆ. ಇನ್ನು, ಸರ್ಕಾರಿ ರಜಾದಿನಗಳು, ಇವುಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಘೋಷಿಸಿದ ರಜಾದಿನಗಳು ಸೇರಿವೆ. ರಾಜ್ಯ ಸರ್ಕಾರಿ ರಜಾದಿನಗಳು ನಿರ್ದಿಷ್ಟ ರಾಜ್ಯವನ್ನು ಅವಲಂಬಿಸಿರುತ್ತವೆ. ಆದರೆ ಕೇಂದ್ರ ಸರ್ಕಾರದ ರಜಾದಿನಗಳು ಇಡೀ ದೇಶಕ್ಕೆ ಅನ್ವಯಿಸುತ್ತವೆ. ಇದಲ್ಲದೆ, ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಭಾರತೀಯ ಬ್ಯಾಂಕುಗಳಿಗೆ ರಜೆ ಇದೆ.
ಬ್ಯಾಂಕ್ ರಜಾದಿನಗಳು 2025; ಯಾವ ತಿಂಗಳು ಎಷ್ಟು ರಜೆ, ಆರ್‌ಬಿಐ ರಜಾ ಪಟ್ಟಿಯ ಪೂರ್ಣ ವಿವರ
01 ಜನವರಿ 2025 ಹೊಸ ವರ್ಷದ ದಿನ
06 ಜನವರಿ 2025 ಗುರು ಗೋಬಿಂದ್ ಸಿಂಗ್ ಜಯಂತಿ
12 ಜನವರಿ 2025 ಸ್ವಾಮಿ ವಿವೇಕಾನಂದ ಜಯಂತಿ
14 ಜನವರಿ 2025 ಮಕರ ಸಂಕ್ರಾಂತಿ / ಪೊಂಗಲ್
14 ಜನವರಿ 2025 ಮೊಹಮ್ಮದ್ ಹಜರತ್ ಅಲಿ/ಲೂಯಿಸ್-ನ್ಗೈ-ನಿ ಅವರ ಜನ್ಮದಿನ
26 ಜನವರಿ 2025 ಗಣರಾಜ್ಯೋತ್ಸವ
02 ಫೆಬ್ರವರಿ 2025 ಬಸಂತ್ ಪಂಚಮಿ
12 ಫೆಬ್ರವರಿ 2025 ಗುರು ರವಿದಾಸ್ ಜಿ ಜಯಂತಿ
26 ಫೆಬ್ರವರಿ 2025 ಮಹಾಶಿವರಾತ್ರಿ
14 ಮಾರ್ಚ್ 2025 ಹೋಳಿ
01 ಏಪ್ರಿಲ್ 2025 ಬ್ಯಾಂಕ್ ಖಾತೆಗಳ ವಾರ್ಷಿಕ ಮುಚ್ಚುವಿಕೆ
05 ಏಪ್ರಿಲ್ 2025 ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ
10 ಏಪ್ರಿಲ್ 2025 ಮಹಾವೀರ ಜಯಂತಿ
14 ಏಪ್ರಿಲ್ 2025 ತಮಿಳು ಹೊಸ ವರ್ಷ
07 ಮೇ 2025 ಗುರು ರವೀಂದ್ರನಾಥ ಠಾಕೂರರ ಜನ್ಮದಿನ
07 ಜೂನ್ 2025 ಈದ್-ಉಲ್-ಜುಹಾ (ಬಕ್ರೀದ್)
12 ಮೇ 2025 ಬುದ್ಧ ಪೂರ್ಣಿಮೆ
10 ಜೂನ್ 2025 ಶ್ರೀ ಗುರು ಅರ್ಜುನ್ ದೇವ್ ಜಿಯವರ ಹುತಾತ್ಮ ದಿನ
27 ಜೂನ್ 2025 ರಥಯಾತ್ರೆ
06 ಜುಲೈ 2025 ಮೊಹರಂ
09 ಆಗಸ್ಟ್ 2025 ರಕ್ಷಾ ಬಂಧನ
15 ಆಗಸ್ಟ್ 2025 ಸ್ವಾತಂತ್ರ್ಯ ದಿನಾಚರಣೆ
15 ಆಗಸ್ಟ್ 2025 ಜನ್ಮಾಷ್ಟಮಿ (ವೈಷ್ಣವ)
25 ಆಗಸ್ಟ್ 2025 ಶ್ರೀಮಂತ ಶಂಕರದೇವ ತಿಥಿ
26 ಆಗಸ್ಟ್ 2025 ವಿನಾಯಕ ಚತುರ್ಥಿ
05 ಸೆಪ್ಟೆಂಬರ್ 2025 ತಿರುವೋಣಂ
01 ಅಕ್ಟೋಬರ್ 2025 ಬ್ಯಾಂಕ್ ಖಾತೆಗಳ ಅರ್ಧ-ವಾರ್ಷಿಕ ಮುಚ್ಚುವಿಕೆ
02 ಅಕ್ಟೋಬರ್ 2025 ಮಹಾತ್ಮ ಗಾಂಧಿಯವರ ಜನ್ಮದಿನ
02 ಅಕ್ಟೋಬರ್ 2025 ದಸರಾ
20 ಅಕ್ಟೋಬರ್ 2025 ದೀಪಾವಳಿ
22 ಅಕ್ಟೋಬರ್ 2025 ಗೋವರ್ಧನ ಪೂಜೆ
28 ಅಕ್ಟೋಬರ್ 2025 ಛತ್ ಪೂಜೆ
05 ನವೆಂಬರ್ 2025 ಗುರುನಾನಕ್ ಜಯಂತಿ
25 ಡಿಸೆಂಬರ್ 2025 ಕ್ರಿಸ್ಮಸ್ ದಿನ