ಕನ್ನಡ ಸುದ್ದಿ  /  Nation And-world  /  Bank Holidays In May 2023 In India Bank Will Shut On These Days In May Rmy

Bank Holidays in May 2023: ಗ್ರಾಹಕರೇ ಗಮನಿಸಿ; ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ; ಸಂಪೂರ್ಣ ಪಟ್ಟಿ ಹೀಗಿದೆ

ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ 12 ದಿನ ರಜೆಗಳಿಗೆ. ನಿಮ್ಮ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗದಿರಲು ಯಾವ್ಯಾವ ದಿನ ರಜೆಗಳಿವೆ ಎಂಬುದನ್ನು ತಿಳಿಯಿರಿ.

ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ 12 ರಜೆಗಳಿವೆ (ಫೋಟೋ-Bloomberg)
ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ 12 ರಜೆಗಳಿವೆ (ಫೋಟೋ-Bloomberg)

ದೆಹಲಿ: ದೇಶದಲ್ಲಿ ಬ್ಯಾಂಕ್‌ಗಳಿಗೆ ಮೇ ತಿಂಗಳಿನಲ್ಲಿ (Bank Holidays in May 2023) 12 ದಿನಗಳ ರಜೆ ಇದೆ. ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡುವವರಿಗೆ ಈ ತಿಂಗಳಲ್ಲಿನ ಯಾವ್ಯಾವ ದಿನ ರಜೆಗಳು ಇರುತ್ತವೆ ಎಂಬುದನ್ನು ತಿಳಿದುಕೊಂಡರೆ ಸುಗಮ ವಹಿವಾಟಿಗೆ ಅನುಕೂಲವಾಗುತ್ತದೆ.

ರಜಾ ದಿನಗಳಂದು ಬ್ಯಾಂಕ್‌ಗಳಿಗೆ (Banks) ಹೋದರೆ ಪ್ರಯೋಜವಿಲ್ಲ. ಸಮಯ ಮತ್ತು ಶ್ರಮ ಎರಡೂ ವ್ಯರ್ಥ. ಅದಕ್ಕಾಗಿಯೇ ಬ್ಯಾಂಕ್‌ಗಳಿಗೆ ಯಾವ್ಯಾವ ದಿನ ರಜೆಗಳಿವೆ ಎಂದು ಮೊದಲೇ ತಿಳಿದುಕೊಂಡರೆ ಅದಕ್ಕೆ ತಕ್ಕಂತೆ ಪ್ಲಾನ್‌ಗಳನ್ನು ಮಾಡಿಕೊಳ್ಳಬಹುದು. ಜೊತೆಗೆ ಸಮಸ್ಯೆಗಳಾಗದಂತೆ ಮೊದಲೇ ವಹಿವಾಟುಗಳನ್ನು ನಡೆಸಬಹುದು.

ದೇಶಾದ್ಯಂತ ಎಲ್ಲಾ ರಜಾದಿನಗಳು ಒಂದೇ ಆಗಿರುವುದಿಲ್ಲ ಎಂಬುದನ್ನೂ ಗಮನಿಸಬೇಕು. ರಾಜ್ಯದಿಂದ ರಾಜ್ಯಕ್ಕೆ ಬದಲಾಗಿರುತ್ತವೆ. ಅಲ್ಲಿನ ಹಬ್ಬ ಹರಿದಿನಗಳು, ಆಚರಣೆಗಳ ಮೇಲೆ ಅವಲಂಬನೆ ಆಗಿರುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ಮೇ ತಿಂಗಳಲ್ಲಿ ಒಟ್ಟು 12 ಬ್ಯಾಂಕ್ ರಜೆಗಳು ಇರುತ್ತವೆ. ಹಬ್ಬಗಳು, ಪ್ರಮುಖ ದಿನಗಳು, ಭಾನುವಾರಗಳು ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರಗಳ ಕಾರಣದಿಂದಾಗಿ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ.

ದೇಶದ ಕೇಂದ್ರೀಯ ಬ್ಯಾಂಕ್ ಆಗಿರುವ ಆರ್‌ಬಿಐ ಬ್ಯಾಂಕ್ ರಜಾದಿನಗಳನ್ನು ರಾಷ್ಟ್ರೀಯ ಮತ್ತು ಪ್ರಾದೇಶಿಕ ಎಂದು ವರ್ಗೀಕರಿಸುತ್ತದೆ. ಈ ವರ್ಗದ ಅಡಿಯಲ್ಲಿ ದೇಶಾದ್ಯಂತ ಬ್ಯಾಂಕ್‌ ಶಾಖೆಗಳನ್ನು ಮುಚ್ಚಲಾಗುತ್ತದೆ. ಆದರೆ ಬ್ಯಾಂಕ್‌ಗಳು ಕೆಲಸ ಮಾಡದ ದಿನಗಳಲ್ಲಿ ಆನ್‌ಲೈನ್ ಹಣಕಾಸು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಮೇ ತಿಂಗಳಲ್ಲಿ ಇರುವ ರಜಾದಿನಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ

ಮೇ 1 (ಸೋಮವಾರ): ಮೇ 1 ರಂದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಗೋವಾದಲ್ಲಿ ಮೇ 1 ರಂದು ಕಾರ್ಮಿಕ ದಿನ ಅಂಗವಾಗಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

ಮೇ 5 (ಶುಕ್ರವಾರ): ಪಶ್ಚಿಮ ಬಂಗಾಳ, ನವದಹೆಲಿ, ಮಹಾರಾಷ್ಟ್ರ, ಛತ್ತೀಸ್‌ಗಢ, ತ್ರಿಪುರಾ, ಮಿಜೋರಾಂ, ಮಧ್ಯಪ್ರದೇಶ, ಚಂಡೀಗಢ, ಉತ್ತರಾಖಂಡ್, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ, ಜಾರ್‌ಗಂಜ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಮೇ 5 ರಂದು ಬ್ಯಾಂಕ್‌ಗಳಿಗೆ ರಜೆ ಇದೆ.

ಮೇ 7 (ಭಾನುವಾರ) : ದೇಶಾದ್ಯಂತ ಮೇ 7 ರಂದು ಭಾನುವಾರ ಇರುವ ಕಾರಣ ಬ್ಯಾಂಕ್ ಗಳು ಕೆಲಸ ಮಾಡುವುದಿಲ್ಲ.

ಮೇ 9 (ಮಂಗಳವಾರ): ರವೀಂದ್ರನಾಥ ಟ್ಯಾಗೋರ್ ಜಯಂತಿ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮೇ 9 ರಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಮೇ 13 (ಎರಡನೇ ಶನಿವಾರ): ಎರಡನೇ ಶನಿವಾರದ ಕಾರಣ ಮೇ 13ಕ್ಕೆ ದೇಶದಾದ್ಯಂತ ಬ್ಯಾಂಕ್‌ಗಳು ಬಂದ್ ಆಗಿರುತ್ತವೆ.

ಮೇ 14: ಭಾನುವಾರದ ಕಾರಣ ಮೇ 14 ರಂದು ಬ್ಯಾಂಕ್‌ಗಳು ಕೆಲಸ ಮಾಡುವುದಿಲ್ಲ.

ಮೇ 16 (ಮಂಗಳವಾರ): ತ್ರಿಪುರಾ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಮೇ 16 ರಂದು ತ್ರಿಪುರಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ.

ಮೇ 21 (ಭಾನುವಾರ): ಭಾನುವಾರದ ಕಾರಣ ಮೇ 21 ರಂದು ಬ್ಯಾಂಕ್‌ಗಳು ಕೆಲಸ ಮಾಡುವುದಿಲ್ಲ.

ಮೇ 22 (ಸೋಮವಾರ): ಹಿಮಾಚಲ ಪ್ರದೇಶದಲ್ಲಿ ಮಹಾರಾಣಾ ಪ್ರತಾಪ್ ಜಯಂತಿ ಹಿನ್ನೆಲೆಯಲ್ಲಿ ಮೇ 22 ರಂದು ಈ ಭಾಗದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಮೇ 24 (ಬುಧವಾರ): ಕಾಜಿ ನಜ್ರುಲ್ ಇಸ್ಲಾಂ ಜಯಂತಿ ಹಿನ್ನೆಲೆಯಲ್ಲಿ ಮೇ 24 ರಂದು ತ್ರಿಪುರಾದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರುತ್ತವೆ.

ಮೇ 27 (ನಾಲ್ಕನೇ ಶನಿವಾರ): ಮೇ 27 ರಂದು ನಾಲ್ಕನೇ ಶನಿವಾರ ಆಗಿರುವುದರಿಂದ ಆ ದಿನವೂ ಬ್ಯಾಂಕ್‌ಗಳು ತೆರೆಯುವುದಿಲ್ಲ.

ಮೇ 28 (ಭಾನುವಾರ): ಮೇ 28 ರಂದು ಭಾನುವಾರ ಇರುವುದರಿಂದ ದೇಶಾದ್ಯಂತ ಅಂದು ಬ್ಯಾಂಕ್‌ಗಳಿಗೆ ಎಂದಿನಂತೆ ರಜೆ ಇರುತ್ತದೆ.

IPL_Entry_Point