Kannada News  /  Nation And-world  /  Bank Jobs Idbi Executive Recruitment 2023: Apply For 1036 Posts At Idbibank.in Employment News In Kannada Pcp
IDBI Bank Jobs: ಐಡಿಬಿಐ ಬ್ಯಾಂಕ್‌ನಲ್ಲಿ 1036 ಎಕ್ಸಿಕ್ಯುಟಿವ್‌ ಹುದ್ದೆಗಳಿವೆ
IDBI Bank Jobs: ಐಡಿಬಿಐ ಬ್ಯಾಂಕ್‌ನಲ್ಲಿ 1036 ಎಕ್ಸಿಕ್ಯುಟಿವ್‌ ಹುದ್ದೆಗಳಿವೆ

IDBI Bank Jobs: ಐಡಿಬಿಐ ಬ್ಯಾಂಕ್‌ನಲ್ಲಿ 1036 ಎಕ್ಸಿಕ್ಯುಟಿವ್‌ ಹುದ್ದೆಗಳಿವೆ, ಪದವಿ ವಿದ್ಯಾರ್ಹತೆ, 29 ರಿಂದ 34 ಸಾವಿರ ರೂ ವೇತನ

26 May 2023, 17:26 ISTPraveen Chandra B
26 May 2023, 17:26 IST

IDBI Executive Recruitment 2023: ಐಡಿಬಿಐ ಬ್ಯಾಂಕ್‌ನಲ್ಲಿ ಎಕ್ಸಿಕ್ಯುಟಿವ್‌ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.

ಐಡಿಬಿಐ ಬ್ಯಾಂಕ್‌ನಲ್ಲಿ ಎಕ್ಸಿಕ್ಯುಟಿವ್‌ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ (idbibank.in) ಅರ್ಜಿ ಸಲ್ಲಿಸಬಹುದು. ಐಡಿಬಿಐ ಬ್ಯಾಂಕ್‌ನಲ್ಲಿರುವ 1036 ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಅಂದರೆ, ಮೇ 24ರಿಂದ ಜೂನ್‌ 7ರವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹುದ್ದೆಗಳ ವಿವರ

ಒಟ್ಟು 1036 ಎಕ್ಸಿಕ್ಯುಟಿವ್‌ ಹುದ್ದೆಗಳಿವೆ. ಇವು ಗುತ್ತಿಗೆ ಆಧರಿತ ಹುದ್ದೆಗಳಾಗಿದ್ದು, ಈ ಹುದ್ದೆಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ 160, ಎಸ್‌ಟಿ- 67, ಒಬಿಸಿ- 255, ಇಡಬ್ಲ್ಯುಎಸ್‌-103, ಸಾಮಾನ್ಯ ಅಭ್ಯರ್ಥಿಗಳಿಗೆ 1036 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸುವಂತೆ ಇಲ್ಲ. idbibank.in ಕರಿಯರ್‌ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಲಿಂಕ್‌ ಇದ್ದು, ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ

ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಡಿಪ್ಲೊಮಾ ಕೋರ್ಸ್‌ ಮಾತ್ರ ಉತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸುವಂತಿಲ್ಲ.

ವಯೋಮಿತಿ ಎಷ್ಟು?

ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಮತ್ತು ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ

ಆನ್‌ಲೈನ್‌ ನೇಮಕಾತಿ ಪರೀಕ್ಷೆ, ದಾಖಲೆ ದೃಢೀಕರಣ ಮತ್ತು ನೇಮಕ ಪೂರ್ವ ವೈದ್ಯಕೀಯ ಪರೀಕ್ಷೆ ಇರುತ್ತದೆ. ಆನ್‌ಲೈನ್‌ ನೇಮಕಾತಿ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತ ಮಾಡಲಾಗುತ್ತದೆ.

ಅರ್ಜಿ ಶುಲ್ಕ

1000 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ ಕೆಟಗರಿಯ ಅಭ್ಯರ್ಥಿಗಳಿಗೆ 200 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ ಪಾವತಿ ವಿಧಾನದ ಮೂಲಕ ಮಾತ್ರ ಅರ್ಜಿ ಶುಲ್ಕ ಪಾವತಿಸಬೇಕು.

ಯುಜಿಸಿ ನೆಟ್‌ ಎಕ್ಸಾಂಗೆ ಮೇ 31ರ ಮೊದಲು ಅರ್ಜಿ ಸಲ್ಲಿಸಿ

ರಾಷ್ಟ್ರೀಯ ಪರೀಕ್ಷಾಏಜೆನ್ಸಿಯು ಯುಜಿಸಿ ನೆಟ್‌ 2023 ಪರೀಕ್ಷೆಗೆ ಕೆಲವು ದಿನಗಳ ಹಿಂದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದೆ. ಮೇ 10ರಿಂದ ನೆಟ್‌ ಎಕ್ಸಾಂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಮೇ 31ರ ಸಂಜೆ 5 ಗಂಟೆಗೆ ಮೊದಲು ugcnet.nta.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೆಟ್‌ ಪರೀಕ್ಷೆಯು ಜೂನ್‌ 13-22 ರಂದು ನಡೆಯಲಿದೆ. ನೆಟ್‌ ಪರೀಕ್ಷೆಯ ಅಡ್ಮಿಟ್‌ ಕಾರ್ಡ್‌ ಜೂನ್‌ ತಿಂಗಳ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ. ಹೆಚ್ಚಿನ ವಿವರ ಇಲ್ಲಿದೆ.

ಆಫ್‌ಕ್ಯಾಟ್‌ ಪರೀಕ್ಷೆಗೆ ಜೂನ್‌ 30ರ ಮೊದಲು ಅರ್ಜಿ ಸಲ್ಲಿಸಿ

ಭಾರತೀಯ ವಾಯುಪಡೆಯಲ್ಲಿ ಗ್ರೂಪ್‌-ಎ ಗೆಜೆಟೆಡ್‌ ಆಫೀಸರ್‌ ಆಗಲು ಬಯಸುವವರಿಗೆ ಇಲ್ಲೊಂದು ಅವಕಾಶವಿದೆ. ಏರ್‌ಫೋರ್ಸ್‌ನಲ್ಲಿ ಗ್ರೂಪ್‌-ಎ ಗೆಜೆಟೆಡ್‌ ಆಫೀಸರ್‌ಗಳನ್ನು ಭರ್ತಿ ಮಾಡುವ ಸಲುವಾಗಿ ವಾಯುಪಡೆಯು ವರ್ಷಕ್ಕೆ ಎರಡು ಬಾರಿ ಭಾರತೀಯ ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ (Air Force Common Admission Test) ನಡೆಸುತ್ತಿದೆ. AFCAT 2 2023 ಪರೀಕ್ಷೆಗೆ ಜೂನ್‌ 1, 2023ರಿಂದ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ವಿವರ ಇಲ್ಲಿದೆ.