Bank locker new rule: ಬ್ಯಾಂಕ್‌ ಲಾಕರ್‌ ನವೀಕರಣ ಗೊಂದಲ; ಕಂಗಾಲಾಗಿರುವ ಗ್ರಾಹಕರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bank Locker New Rule: ಬ್ಯಾಂಕ್‌ ಲಾಕರ್‌ ನವೀಕರಣ ಗೊಂದಲ; ಕಂಗಾಲಾಗಿರುವ ಗ್ರಾಹಕರು

Bank locker new rule: ಬ್ಯಾಂಕ್‌ ಲಾಕರ್‌ ನವೀಕರಣ ಗೊಂದಲ; ಕಂಗಾಲಾಗಿರುವ ಗ್ರಾಹಕರು

Bank locker new rule:ಬ್ಯಾಂಕ್‌ ಲಾಕರ್‌ಗಳ ನಿರ್ವಹಣೆಗೆ ಸಂಬಂಧಿಸಿ ಜಾರಿಗೆ ಬಂದಿರುವ ಹೊಸ ನಿಯಮಗಳು ಬಳಕೆದಾರರನ್ನು ಗೊಂದಲಕ್ಕೆ ಸಿಲುಕಿಸಿ ಅವರನ್ನು ಕಂಗಾಲಾಗುವಂತೆ ಮಾಡಿದೆ. ಹೀಗಾಗಿ ಮುಂಬಯಿ ಸೇರಿ ದೇಶದ ಹಲವೆಡೆ ಸ್ಟಾಂಪ್‌ ಪೇಪರ್‌ ಖರೀದಿಗೆ ಜನ ಸರದಿ ನಿಂತಿರುವ ದೃಶ್ಯಗಳು ಕಂಡುಬಂದಿವೆ.

ಬ್ಯಾಂಕ್‌ ವಹಿವಾಟು (ಸಾಂಕೇತಿಕ ಚಿತ್ರ)
ಬ್ಯಾಂಕ್‌ ವಹಿವಾಟು (ಸಾಂಕೇತಿಕ ಚಿತ್ರ) (livemint)

ಬ್ಯಾಂಕ್‌ ಲಾಕರ್‌ಗಳ ನಿರ್ವಹಣೆಗೆ ಸಂಬಂಧಿಸಿ ಜಾರಿಗೆ ಬಂದಿರುವ ಹೊಸ ನಿಯಮಗಳು ಬಳಕೆದಾರರನ್ನು ಗೊಂದಲಕ್ಕೆ ಸಿಲುಕಿಸಿ ಅವರನ್ನು ಕಂಗಾಲಾಗುವಂತೆ ಮಾಡಿದೆ. ಹೀಗಾಗಿ ಮುಂಬಯಿ ಸೇರಿ ದೇಶದ ಹಲವೆಡೆ ಸ್ಟಾಂಪ್‌ ಪೇಪರ್‌ ಖರೀದಿಗೆ ಜನ ಸರದಿ ನಿಂತಿರುವ ದೃಶ್ಯಗಳು ಕಂಡುಬಂದಿವೆ. ಅಲ್ಲದೆ, ಬ್ಯಾಂಕ್‌ ಲಾಕರ್‌ ಅಗ್ರಿಮೆಂಟ್‌ ವಿಚಾರವಾಗಿ ಗೊಂದಲ ಉಂಟಾಗಿರುವುದು ವೇದ್ಯವಾಗಿದೆ ಎಂದು HT ಕನ್ನಡದ ಸೋದರ ತಾಣ ಲೈವ್‌ ಮಿಂಟ್‌ ವರದಿ ಮಾಡಿದೆ.

ಬ್ಯಾಂಕ್‌ ಲಾಕರ್‌ ನಿರ್ವಹಣೆಯ ನಿಯಮ ನಿಬಂಧನೆಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 2021ರ ಆಗಸ್ಟ್‌ ತಿಂಗಳಲ್ಲಿ ಪರಿಷ್ಕರಿಸಿದೆ. ಅದನ್ನು 2022ರ ಜನವರಿಯಿಂದ ಹೊಸ ಗ್ರಾಹಕರ ಮೇಲೆ ಅನ್ವಯವಾಗುವ ರೀತಿಯಲ್ಲಿ ಜಾರಿಗೊಳಿಸಿತ್ತು. ಅದೇ ರೀತಿ ಉಳಿದ ಗ್ರಾಹಕರಿಗೆ 2023ರ ಜನವರಿಯಿಂದ ಅನ್ವಯವಾಗುವುದು ಎಂದು ಘೋಷಿಸಿತ್ತು. ಸೇಫ್‌ ಡೆಪಾಸಿಟ್‌ ಲಾಕರ್‌ ವಿಚಾರದಲ್ಲಿ ಬಳಕೆದಾರರ ಜತೆಗೆ ಬೋರ್ಡ್‌ ಅನುಮೋದಿತ ಒಪ್ಪಂದ ಮಾಡಿಕೊಳ್ಳುವಂತೆ ಆರ್‌ಬಿಯ ಸೂಚಿಸಿದೆ. ಅದೇ ರೀತಿ, ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಷನ್‌ ರೂಪಿಸಿರುವ ಮಾದರಿ ಲಾಕರ್‌ ಒಪ್ಪಂದವನ್ನು ಅಳವಡಿಸಿಕೊಳ್ಳುವುದಕ್ಕೂ ಅವಕಾಶ ನೀಡಿದೆ.

ಸುರಕ್ಷಿತ ಠೇವಣಿ ಲಾಕರ್‌ಗಳಿಗಾಗಿ ಗ್ರಾಹಕರೊಂದಿಗೆ ಬೋರ್ಡ್-ಅನುಮೋದಿತ ಒಪ್ಪಂದಗಳನ್ನು ಹಾಕಲು ಬ್ಯಾಂಕ್‌ಗಳನ್ನು ಕೇಂದ್ರ ಬ್ಯಾಂಕ್ ಕೇಳಿದೆ ಮತ್ತು ಭಾರತೀಯ ಬ್ಯಾಂಕ್‌ಗಳ ಸಂಘ (IBA) ರೂಪಿಸಿದ ಮಾದರಿ ಲಾಕರ್ ಒಪ್ಪಂದವನ್ನು ಅಳವಡಿಸಿಕೊಳ್ಳಲು ಅವರಿಗೆ ಅವಕಾಶ ನೀಡಿತು.

ಕಳೆದ ವರ್ಷ ಜನವರಿಯಲ್ಲಿ ಹೊಸದಾಗಿ ಬ್ಯಾಂಕ್‌ ಲಾಕರ್‌ ಪಡೆದವರಿಗೆ ಈ ಪ್ರಕ್ರಿಯೆ ಸರಳವಾಗಿ ಮುಗಿದುಹೋಗಿತ್ತು. ಆದರೆ, ಚಾಲ್ತಿಯಲ್ಲಿರುವ ಬಳಕೆದಾರರಿಗೆ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಇಲ್ಲ. ವಿಶೇಷವಾಗಿ ಸ್ಟಾಂಪ್‌ ಪೇಪರ್‌ ಬಳಕೆ ವಿಚಾರದಲ್ಲಿ ಈ ಗೊಂದಲ ಉಂಟಾಗಿದೆ ಎಂದು ಹಲವರು ಟ್ವೀಟ್‌ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಆರ್‌ಬಿಐ ನಿಯಮ ಪ್ರಕಾರ, ಬಳಕೆದಾರರಿಗೆ ಲಾಕರ್‌ ಹಂಚಿಕೆ ಮಾಡುವ ಸಂದರ್ಭದಲ್ಲಿ ಅವರ ಜತೆಗೆ ಸ್ಟಾಂಪ್‌ ಪೇಪರ್‌ನಲ್ಲಿ ಒಪ್ಪಂದ ಮಾಡಿಕೊಳ್ಳಬೇಕು. ಹೊಸ ನಿಯಮದ ಆಧಾರದ ಮೇಲೆ ತಮ್ಮ ಒಪ್ಪಂದಗಳನ್ನು ನವೀಕರಿಸಲು ಬ್ಯಾಂಕ್‌ಗಳು ಅಸ್ತಿತ್ವದಲ್ಲಿರುವ ಗ್ರಾಹಕರ ಮೇಲೆ ಕೆಲವು ಸಮಯದಿಂದ ಒತ್ತಡ ಹೇರುತ್ತಿವೆ. ಡೆಡ್‌ಲೈನ್‌ ಸಮೀಪಿಸಿದರೆ ಒತ್ತಡ ಹೆಚ್ಚಾಗುವುದು ಎಂಬ ಕಾರಣವನ್ನೂ ನೀಡಿದ್ದವು ಎಂಬ ಅಂಶದ ಕಡೆಗೆ ಬಳಕೆದಾರರು ಗಮನಸೆಳೆದಿದ್ದಾರೆ.

ಆದರೆ, ಒಪ್ಪಂದಕ್ಕೆ ಅಗತ್ಯವಿರುವ ಸ್ಟಾಂಪ್‌ ಪೇಪರ್‌ನ ಮೌಲ್ಯ ಎಷ್ಟು?, ಬ್ಯಾಂಕ್‌ಗಳು ಇವುಗಳನ್ನು ಒದಗಿಸುತ್ತವೆಯೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಬ್ಯಾಂಕ್‌ಗಳು ಕೋರಿದ ಸ್ಟಾಂಪ್‌ ಪೇಪರ್‌ಗಳ ಮೌಲ್ಯದಲ್ಲಿನ ವ್ಯತ್ಯಾಸವನ್ನು ಸೂಚಿಸುವ ಟ್ವೀಟ್‌ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಉತ್ತರಿಸಿದ್ದು, ಆಯಾ ರಾಜ್ಯಗಳ ಸ್ಟಾಂಪ್‌ ಕಾಯ್ದೆ ಪ್ರಕಾರ ಸ್ಟಾಂಪ್‌ ಪೇಪರ್‌ ಮೌಲ್ಯ ನಿಶ್ಚಯಿಸಲ್ಪಡುತ್ತದೆ ಎಂದು ಹೇಳಿದೆ.

Bank Locker Rule Change: ಬ್ಯಾಂಕ್‌ ಲಾಕರ್‌ ನಿಯಮ ಬದಲಾವಣೆ; ಆರ್‌ಬಿಐ ತಗೊಂಡ ಕ್ರಮ ಏನು?

Bank Locker Rule Change: ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಸೂಚನೆ ಹೊರಡಿಸಿದೆ. ಬ್ಯಾಂಕ್ ಗ್ರಾಹಕರ ಭದ್ರತೆ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ವಿವಿಧ ನಿಯಮಗಳ ಪರಿಷ್ಕರಣೆ ಸಹಜ. ಬೆಲೆ ಬಾಳುವ ವಸ್ತುಗಳು ಲಾಕರ್‌ನಲ್ಲಿದೆಯಾ? ಈ ಸುದ್ದಿ ಗಮನಿಸಲು ಇಲ್ಲಿ ಕ್ಲಿಕ್‌ ಮಾಡಿ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.