ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬ್ಯಾಂಕ್ ರಜಾದಿನಗಳು ಜುಲೈ 2024; ಜುಲೈ ತಿಂಗಳಲ್ಲಿ ಭಾರತದ ಬ್ಯಾಂಕುಗಳಿಗೆ ಇವೆ ಒಟ್ಟು 12 ರಜಾದಿನಗಳು- ಯಾವಾಗ, ಇಲ್ಲಿದೆ ಪೂರ್ಣ ವಿವರ

ಬ್ಯಾಂಕ್ ರಜಾದಿನಗಳು ಜುಲೈ 2024; ಜುಲೈ ತಿಂಗಳಲ್ಲಿ ಭಾರತದ ಬ್ಯಾಂಕುಗಳಿಗೆ ಇವೆ ಒಟ್ಟು 12 ರಜಾದಿನಗಳು- ಯಾವಾಗ, ಇಲ್ಲಿದೆ ಪೂರ್ಣ ವಿವರ

ಬ್ಯಾಂಕ್ ರಜಾದಿನಗಳು ಜುಲೈ 2024; ಬ್ಯಾಂಕಿಂಗ್‌ ವಹಿವಾಟಿಗೆ ಸಂಬಂಧಿಸಿದ ಮಹತ್ವದ ಸುದ್ದಿ ಇದು. ಜುಲೈ ತಿಂಗಳಲ್ಲಿ ಭಾರತದ ಬ್ಯಾಂಕುಗಳಿಗೆ ಇವೆ ಒಟ್ಟು 12 ರಜಾದಿನಗಳು- ಯಾವಾಗ ಎಂಬ ಪೂರ್ಣ ವಿವರ ಇಲ್ಲಿದೆ.

ಬ್ಯಾಂಕ್ ರಜಾದಿನಗಳು ಜುಲೈ 2024; ಜುಲೈ ತಿಂಗಳಲ್ಲಿ ಭಾರತದ ಬ್ಯಾಂಕುಗಳಿಗೆ ಇವೆ ಒಟ್ಟು 12 ರಜಾದಿನಗಳು- ಯಾವಾಗ, ಇಲ್ಲಿದೆ ಪೂರ್ಣ ವಿವರ
ಬ್ಯಾಂಕ್ ರಜಾದಿನಗಳು ಜುಲೈ 2024; ಜುಲೈ ತಿಂಗಳಲ್ಲಿ ಭಾರತದ ಬ್ಯಾಂಕುಗಳಿಗೆ ಇವೆ ಒಟ್ಟು 12 ರಜಾದಿನಗಳು- ಯಾವಾಗ, ಇಲ್ಲಿದೆ ಪೂರ್ಣ ವಿವರ (Live Mint / Canva)

ನವದೆಹಲಿ: ಮುಂದಿನ ತಿಂಗಳು ಅಂದರೆ ಜುಲೈ 2024ರಲ್ಲಿ ಬ್ಯಾಂಕ್ ರಜಾ ದಿನಗಳು ಎಷ್ಟು, ಎಷ್ಟು ದಿನ ಬ್ಯಾಂಕ್‌ ವಹಿವಾಟು ನಡೆಯುತ್ತದೆ ಎಂಬುದನ್ನು ಗ್ರಾಹಕರು ಮೊದಲೇ ತಿಳಿದುಕೊಳ್ಳ ಬಯಸುವುದು ಸಹಜ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೂಡ ಮುಂಚಿತವಾಗಿಯೇ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದರಂತೆ, ಜುಲೈ 2024ರ ರಜಾದಿನಗಳ ಪಟ್ಟಿ ಪ್ರಕಾರ, ಪ್ರಾದೇಶಿಕ ರಜಾದಿನಗಳೂ ಸೇರಿ ಒಟ್ಟು 12 ರಜಾದಿನಗಳಿವೆ. ಇದರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳೂ ಸೇರಿಕೊಂಡಿವೆ.

ಬ್ಯಾಂಕ್‌ಗಳು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಕಾರ್ಯನಿರ್ವಹಿಸುತ್ತವೆ. ಆದರೆ ಭಾನುವಾರದಂದು ಮುಚ್ಚಿರುತ್ತವೆ. ಆದಾಗ್ಯೂ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸುತ್ತವೆ ಮತ್ತು ಗ್ರಾಹಕರಿಗೆ ಮೊಬೈಲ್ ಅಪ್ಲಿಕೇಶನ್‌ಗಳು, ಆನ್‌ಲೈನ್ ಬ್ಯಾಂಕ್ ವೆಬ್‌ಸೈಟ್‌ಗಳು ಅಥವಾ ಎಟಿಎಂಗಳ ಮೂಲಕ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ. ಜುಲೈ ತಿಂಗಳಲ್ಲಿ ಬ್ಯಾಂಕ್ ವಹಿವಾಟು ನಡೆಸುವ ಯೋಜನೆ ಇದ್ದರೆ, ಈ ರಜಾದಿನಗಳ ಪಟ್ಟಿ ಗಮನಿಸಿ ಮುಂಚಿತವಾಗಿಯೇ ಯೋಜಿಸಿಕೊಳ್ಳಬಹುದು.

2024 ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ರಾಜ್ಯವಾರು ಸಂಪೂರ್ಣ ಪಟ್ಟಿ

ಬ್ಯಾಂಕ್ ರಜಾದಿನಗಳ ವಿವರ ರಾಜ್ಯವಾರು - ಜುಲೈ 2024

ಟ್ರೆಂಡಿಂಗ್​ ಸುದ್ದಿ

ಜುಲೈ 3 (ಬುಧವಾರ) ಬೆಹ್ ಡೀಂಕ್ಲಾಮ್ (ಮೇಘಾಲಯ)

ಜುಲೈ 6 (ಶನಿವಾರ) ಎಂಎಚ್‌ಐಪಿ ದಿನ (ಮಿಜೋರಾಂ)

ಜುಲೈ 7 (ಭಾನುವಾರ) ವಾರಾಂತ್ಯದ ಮುಚ್ಚುವಿಕೆ (ಭಾರತದಾದ್ಯಂತ)

ಜುಲೈ 8 (ಸೋಮವಾರ) ಕಾಂಗ್ (ರಥಜಾತ್ರಾ) (ಮಣಿಪುರ)

ಜುಲೈ 9 (ಮಂಗಳವಾರ) ದ್ರುಕ್ಪಾ ತ್ಶೆ-ಜಿ (ಸಿಕ್ಕಿಂ)

ಜುಲೈ 13 (ಶನಿವಾರ) ವಾರಾಂತ್ಯದ ಮುಚ್ಚುವಿಕೆ (ಭಾರತದಾದ್ಯಂತ)

ಜುಲೈ 14 (ಭಾನುವಾರ) ವಾರಾಂತ್ಯದ ಮುಚ್ಚುವಿಕೆ (ಭಾರತದಾದ್ಯಂತ)

ಜುಲೈ 16 (ಮಂಗಳವಾರ) ಹರೇಲಾ ( ಉತ್ತರಾಖಂಡ)

ಜುಲೈ 17 (ಬುಧವಾರ) ಮೊಹರಂ/ಅಶೂರ/ಯು ಟಿರೋಟ್ ಸಿಂಗ್ ಡೇ (ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ನವದೆಹಲಿ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ರಾಜಸ್ಥಾನ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಿಜೋರಾಂ, ಕರ್ನಾಟಕ, ಮಧ್ಯಪ್ರದೇಶ, ತ್ರಿಪುರ)

ಜುಲೈ 21 (ಭಾನುವಾರ) ವಾರಾಂತ್ಯದ ಮುಚ್ಚುವಿಕೆ (ಭಾರತದಾದ್ಯಂತ)

ಜುಲೈ 27 (ಶನಿವಾರ) ವಾರಾಂತ್ಯದ ಮುಚ್ಚುವಿಕೆ (ಭಾರತದಾದ್ಯಂತ)

ಜುಲೈ 28 (ಭಾನುವಾರ) ವಾರಾಂತ್ಯದ ಮುಚ್ಚುವಿಕೆ (ಭಾರತದಾದ್ಯಂತ)

ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆಯಾ ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ ಅನ್ನು ರಾಷ್ಟ್ರೀಯ/ರಾಜ್ಯ ರಜಾದಿನಗಳು, ಸಾಂಸ್ಕೃತಿಕ ಅಥವಾ ಧಾರ್ಮಿಕ ಆಚರಣೆಗಳು ಮತ್ತು ಕಾರ್ಯಾಚರಣೆಯ ಅಗತ್ಯಗಳನ್ನು ಲೆಕ್ಕಹಾಕಿ ಪ್ರಕಟಿಸುತ್ತದೆ. ವರ್ಷದ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತ ಚಾನಲ್‌ಗಳ ಮೂಲಕ ಪ್ರಸಾರ ಮಾಡುತ್ತದೆ. ಹಣಕಾಸು ಸಂಸ್ಥೆಗಳಾದ್ಯಂತ ಪಾರದರ್ಶಕತೆ ಮತ್ತು ಸಮನ್ವಯವನ್ನು ಖಾತ್ರಿಪಡಿಸುತ್ತದೆ.

ಭಾರತದಲ್ಲಿ ಮೂರು ವಿಧದ ಬ್ಯಾಂಕ್ ರಜಾದಿನಗಳಿವೆ. ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಆಕ್ಟ್‌ನ ರಜಾದಿನಗಳು. ಇವು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ರಜಾದಿನಗಳು ಮತ್ತು ಬ್ಯಾಂಕ್‌ಗಳ ಕಾಲುವಾರ್ಷಿಕ, ಅರೆವಾರ್ಷಿಕ, ವಾರ್ಷಿಕ ವಹಿವಾಟು ಲೆಕ್ಕಗಳನ್ನು ಮುಚ್ಚುವ ರಜೆಗಳು. ಆದಾಗ್ಯೂ, ಪ್ರಾದೇಶಿಕ ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಮತ್ತು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗಬಹುದು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.