ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ ಮೇ 16 ರಂದು ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ 86 ಭಾರತೀಯರಿದ್ದು, ಅವರ ಪೈಕಿ ಐವರು ಬೆಂಗಳೂರಿಗರು. ಈ ಯುವ ಸಾಧಕರ ವಿವರ ಹೀಗಿದೆ ನೋಡಿ.

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ಪರಿಚಯಿಸುವುದಾದರೆ 1)ಪಿಯೂಷ್‌ ಶ್ರೀವಾತ್ಸವ 2) ಅನುಜ್ ಶ್ರೀವಾತ್ಸವ 3) ಅಕ್ಷಿತ್ ಬನ್ಸಲ್ 4) ರಾಘವ್ ಅರೋರಾ 5) ಕುಶ್ ಜೈನ್.
ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ಪರಿಚಯಿಸುವುದಾದರೆ 1)ಪಿಯೂಷ್‌ ಶ್ರೀವಾತ್ಸವ 2) ಅನುಜ್ ಶ್ರೀವಾತ್ಸವ 3) ಅಕ್ಷಿತ್ ಬನ್ಸಲ್ 4) ರಾಘವ್ ಅರೋರಾ 5) ಕುಶ್ ಜೈನ್.

ಬೆಂಗಳೂರು: ಫೋರ್ಬ್ಸ್‌ ತನ್ನ 30 ಅಂಡರ್ 30 ಏಷ್ಯಾ ಲಿಸ್ಟ್‌ 2024 ಅನ್ನು ಬಿಡುಗಡೆ ಮಾಡಿದ್ದು, 300ರಷ್ಟು ಯುವ ಸಾಧಕರ ಪಟ್ಟಿಯಲ್ಲಿ 86 ಭಾರತೀಯರಿದ್ದಾರೆ. ಇವರಲ್ಲಿ ಐವರು ಬೆಂಗಳೂರಿಗರು ಎಂಬ ವಿಷಯ ಗಮನಸೆಳೆದಿದೆ. ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ ಮೇ 16 ರಂದು ಬಿಡುಗಡೆಯಾಗಿದೆ. ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿನ 10 ವಿವಿಧ ಕ್ಷೇತ್ರಗಳ ಅಂದರೆ, ಕಲೆ, ಮನರಂಜನೆ, ಕ್ರೀಡೆ, ಹಣಕಾಸು ಮತ್ತು ಸಾಹಸೋದ್ಯಮ ಬಂಡವಾಳ, ಮಾರುಕಟ್ಟೆ ಮತ್ತು ಜಾಹೀರಾತು, ಚಿಲ್ಲರೆ ಮತ್ತು ಇ-ಕಾಮರ್ಸ್, ಉದ್ಯಮ ತಂತ್ರಜ್ಞಾನ, ಉದ್ಯಮ, ಉತ್ಪಾದನೆ ಮತ್ತು ಶಕ್ತಿ, ಆರೋಗ್ಯ ಮತ್ತು ವಿಜ್ಞಾನ, ಸಾಮಾಜಿಕ ಪರಿಣಾಮ ಮತ್ತು ಗ್ರಾಹಕ ತಂತ್ರಜ್ಞಾನ ಕ್ಷೇತ್ರಗಳ ಸಾಧಕರನ್ನು ಈ ಪಟ್ಟಿಗೆ ಸೇರಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಸ್ಥಾನ ಪಡೆದಿರುವ ಬೆಂಗಳೂರಿಗರು (ಬೆಂಗಳೂರು ನಂಟು ಹೊಂದಿವರನ್ನು ಒಳಗೊಂಡು) ಯಾರೆಂದು ಗಮನಿಸುವುದಾದರೆ, ಆನ್‌ಫೈನಾನ್ಸ್ ಎಐ ಎಂಬ ಸ್ಟಾರ್ಟಪ್ ಕಂಪನಿಯ ಅನುಜ್ ಶ್ರೀವಾತ್ಸವ, ಪ್ರಿಯೇಶ್ ಶ್ರೀವಾತ್ಸವ, ಬೆಂಗಳೂರಿನ ಸಂಚಾರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸ್ಟಾಟಿಕ್ ಎಂಬ ಕಂಪನಿ ಸ್ಥಾಪಿಸಿದ ಅಕ್ಷಿತ್ ಬನ್ಸಲ್, ರಾಘವ್ ಅರೋರಾ, ದೃಷ್ಟಿಹೀನರು ಬ್ರೈಲ್ ಲಿಪಿ ಓದುವಂತಹ ಗ್ಲೋವ್ ಅಭಿವೃದ್ಧಿಪಡಿಸಿದ ಕುಶ್ ಜೈನ್ ಈ ಸಾಧಕರು.

'ಆನ್ ಫೈನಾನ್ಸ್ ಎಐ'ನ ಸಂಸ್ಥಾಪಕರಾದ ಅನುಜ್ ಶ್ರೀವಾತ್ಸವ ಹಾಗೂ ಪ್ರಿಯೇಶ್ ಶ್ರೀವಾತ್ಸವ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ 'ಆನ್ ಫೈನಾನ್ಸ್ ಎಐ'ನ ಸಂಸ್ಥಾಪಕರಾದ ಅನುಜ್ ಶ್ರೀವಾತ್ಸವ ಹಾಗೂ ಪ್ರಿಯೇಶ್ ಶ್ರೀವಾತ್ಸವ ಇದ್ದಾರೆ. ಇವರು ಹಣಕಾಸು ಸೇವಾ ಉದ್ಯಮದ ಅನುಕೂಲಕ್ಕಾಗಿ ಚಾಟ್‌ ಜಿಪಿಟಿ ಮಾದರಿಯಲ್ಲೇ ಕೆಲಸ ಮಾಡುವ ನಿಯೋಜಿಪಿಟಿ ಅಭಿವೃದ್ಧಿಪಡಿಸಿದ್ದು ಇದೇ 'ಆನ್ ಫೈನಾನ್ಸ್ ಎಐ' ಕಂಪನಿ. ಇದು ಬೆಂಗಳೂರಿನ ಪ್ರಮುಖ ಸ್ಟಾರ್ಟಪ್ ಕಂಪನಿ. ಹೀಗಾಗಿ ಅವರಿಬ್ಬರ ಹೆಸರನ್ನು ಫೋರ್ಬ್ ಪರಿಗಣಿಸಿದೆ.

ಅಂದ ಹಾಗೆ, ಈ ಇಬ್ಬರೂ ಸಂಬಂಧಿಕರಲ್ಲ. ಆದರೆ, ಏನಾದರೂ ಮಾಡಬೇಕು ಎಂದು ಒಗ್ಗೂಡಿದವರು, ನಿಯೋಜಿಪಿಟಿ ಅಭಿವೃದ್ಧಿಪಡಿಸಿದರು. ಈ ಸೇವೆಯು ದತ್ತಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಮುನ್ನೋಟಗಳನ್ನು ಒದಗಿಸುತ್ತ, ಹಣಕಾಸು ಮಾರುಕಟ್ಟೆಯ ಸಂಶೋಧನೆ ನಡೆಸಲು ನೆರವಾಗುತ್ತಿದೆ.

ಸ್ಟಾಟಿಕ್ ಕಂಪನಿಯ ಸಂಸ್ಥಾಪಕರಾದ ಅಕ್ಷಿತ್ ಬನ್ಸಲ್ ಹಾಗೂ ರಾಘವ್ ಅರೋರಾ

ಸ್ಟಾಟಿಕ್ ಕಂಪನಿಯ ಅಕ್ಷಿತ್ ಬನ್ಸಲ್ ಹಾಗೂ ರಾಘವ್ ಅರೋರಾ ಕೂಡ ಪೋರ್ಬ್ ಸಾಧಕರ ಪಟ್ಟಿಯಲ್ಲಿದ್ದಾರೆ. ಬೆಂಗಳೂರಿನ ಮಲಿನ ರಸ್ತೆಗಳಲ್ಲಿ ಬೈಕ್‌ನಲ್ಲಿ ಓಡಾಡುವಾಗ ಹಸಿರು ಸಾರಿಗೆಗೆ ಆದ್ಯತೆ ನೀಡಬೇಕು ಎಂಬ ಆಲೋಚನೆಯೊಂದಿಗೆ ಗುಡಗಾಂವ್‌ನಲ್ಲಿ ಸ್ಟಾಟಿಕ್ ಎಂಬ ಕಂಪನಿಯನ್ನು ಹುಟ್ಟುಹಾಕಿದವರು. ಈ ಕಂಪನಿ ಈಗ ದೇಶಾದ್ಯಂತ ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸುತ್ತಿದೆ. ಎಲೆಕ್ನಿಕ್ ಕಾರು, ಬಸ್, ಟ್ರಕ್ ಹಾಗೂ ತ್ರಿಚಕ್ರ ವಾಹನಗಳಿಗೆ ಈ ಕಂಪನಿಯ ಸೇವೆ ಸಿಗುತ್ತಿದೆ. ಈ ಇಬ್ಬರೂ ಕಾ‌ರ್‌ ಶೇರಿಂಗ್ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರಲ್ಲಿ ವೈಫಲ್ಯ ಅನುಭವಿಸಿದ್ದರು.

ಓರಾಮ ಎಐ ಕಂಪನಿಯ ಕುಶ್ ಜೈನ್

ಓರಾಮ ಎಐ ಕಂಪನಿಯ ಕುಶ್ ಜೈನ್ ಕೂಡ ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿದ್ದಾರೆ. ಕುಶ್ ಜೈನ್ ಅವರು ಬೆಂಗಳೂರಿನಲ್ಲಿದ್ದಾಗ ದೃಷ್ಟಿಹೀನರು ಎದುರಿಸುತ್ತಿದ್ದ ಸವಾಲುಗಳನ್ನು ಮನಗಂಡರು. ಬಳಿಕ 2018ರಲ್ಲಿ ಓರಾಮ ಎಐ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿಯ ಉತ್ಪನ್ನ ಸ್ಮಾರ್ಟ್ ಗ್ಲೋವ್. ಇದು ದೃಷ್ಟಿ ಹೀನರು ಬ್ರೈಲ್‌ ಕಲಿಯಲು ಸಹಕಾರಿ. ಗ್ಲೋವ್‌ನಲ್ಲಿ ಕ್ಯಾಮೆರಾ ಹಾಗೂ ಸ್ಪೀಕರ್‌ ಇದ್ದು, ಬೈಲ್ ಅಕ್ಷರ ಮುಟ್ಟುತ್ತಿದ್ದಂತೆ ಅದನ್ನು ಗುರುತಿಸಿ ಓದುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024