ಕನ್ನಡ ಸುದ್ದಿ  /  Nation And-world  /  Bengaluru News Southern Railway To Run Overnight Vande Bharat Train Between Chennai Bengaluru Today Report Uks

Vande Bharat: ಚೆನ್ನೈ - ಬೆಂಗಳೂರು ವಂದೇಭಾರತ್ ಎಕ್ಸ್‌ಪ್ರೆಸ್ ರಾತ್ರಿ ಸಂಚಾರ ಪ್ರಯೋಗ ಇಂದು

ರಜಾದಿನದ ಪ್ರಯಾಣಿಕ ದಟ್ಟಣೆ ನಿರ್ವಹಣೆ ಮಾಡುವುದಕ್ಕಾಗಿ ಭಾರತೀಯ ರೈಲ್ವೆ ಇದೇ ಮೊದಲ ಸಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ರಾತ್ರಿ ಸಂಚಾರಕ್ಕೆ ಬಳಸುತ್ತಿದೆ. ಇಂದು ಪ್ರಾಯೋಗಿಕವಾಗಿ ಚೆನ್ನೈ- ಬೆಂಗಳೂರು ನಡುವೆ ವಂದೇ ಭಾರತ್ ಸಂಚಾರ ನಡೆಯಲಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ (ಕಡತ ಚಿತ್ರ)
ವಂದೇ ಭಾರತ್ ಎಕ್ಸ್‌ಪ್ರೆಸ್ (ಕಡತ ಚಿತ್ರ) (HT News)

ಹಬ್ಬದ ಸೀಸನ್‌ ನಂತರ ಹೆಚ್ಚುವರಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ದಕ್ಷಿಣ ರೈಲ್ವೆ ಇಂದು (ನ.21) ಚೆನ್ನೈನಿಂದ ಬೆಂಗಳೂರಿಗೆ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸುತ್ತಿದೆ. ಎಂಟು ಕೋಚ್‌ಗಳನ್ನು ಹೊಂದಿರುವ ಸೆಮಿ ಹೈಸ್ಪೀಡ್ ರೈಲು ಇಂದು (ನ.21) ರಾತ್ರಿ 11 ಗಂಟೆಗೆ ತಮಿಳುನಾಡು ರಾಜಧಾನಿ ಚೆನ್ನೈನಿಂದ ಹೊರಟು ನಾಳೆ (ನವೆಂಬರ್ 22ರ) ಬೆಳಿಗ್ಗೆ 4:30 ರ ಸುಮಾರಿಗೆ ಬೆಂಗಳೂರು ತಲುಪಲಿದೆ ಎಂದು ವರದಿಯೊಂದು ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಇಲ್ಲಿಯವರೆಗೆ, ಎಲ್ಲ ವಂದೇ ಭಾರತ್ ರೈಲುಗಳು ಹಗಲ್ಲಲೇ ಓಡುತ್ತಿದ್ದವು. ಇದೇ ಮೊದಲ ಸಲ ಎರಡು ನಗರಗಳ ನಡುವೆ ರಾತ್ರಿ ಸಂಚಾರದ ವಂದೇ ಭಾರತ್ ರೈಲು ಓಡುತ್ತಿದೆ. ಈ ರೈಲು ಸೋಮವಾರ ಬೆಂಗಳೂರಿನಿಂದ ಚೆನ್ನೈಗೆ ಪ್ರತ್ಯೇಕ ವಂದೇ ಭಾರತ್ ವಿಶೇಷವನ್ನು ಓಡಿಸಿದ ನಂತರ ಬರುತ್ತಿದೆ.

ಚೆನ್ನೈ- ಬೆಂಗಳೂರು ವಂದೇ ಭಾರತ್ ಪ್ರಯಾಣದ ಅವಧಿ ಐದೂವರೆ ಗಂಟೆ

ವೇಳಾಪಟ್ಟಿ ಪ್ರಕಾರ, ಎರಡು ನಗರಗಳ ನಡುವೆ ಪ್ರಯಾಣಿಸಲು ವಂದೇ ಭಾರತ್ ಎಕ್ಸ್‌ಪ್ರೆಸ್ ಐದೂವರೆ ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಟು ಬುಧವಾರ ಮುಂಜಾನೆ ಕರ್ನಾಟಕ ರಾಜಧಾನಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಆಗಮಿಸುತ್ತದೆ.

ಪ್ರಯಾಣಿಕರ ಪ್ರತಿಕ್ರಿಯೆ ಮತ್ತು ಆಕ್ಯುಪೆನ್ಸಿಯನ್ನು ಅಳೆಯಲು ರಾತ್ರಿ ಸಮಯದಲ್ಲಿ ಎರಡು ಮಹಾನಗರಗಳ ನಡುವೆ ವಂದೇ ಭಾರತ್ ವಿಶೇಷ ರೈಲನ್ನು ನಿಗದಿಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಡರ್‌ಶಿಪ್ ಮೂಲಕ ನಿರ್ಣಯಿಸುವುದು, ಮುಂಬರುವ ರಜಾ ಕಾಲದಲ್ಲಿ ಕ್ರಿಸ್‌ಮಸ್ ಸಮೀಪಿಸುವುದರೊಂದಿಗೆ ರಾತ್ರಿಯಿಡೀ ಹೆಚ್ಚಿನ ವಿಶೇಷ ರೈಲುಗಳನ್ನು ಓಡಿಸಲು ಅಧಿಕಾರಿಗಳು ನಿರ್ಧರಿಸಬಹುದು. ಹೆಚ್ಚಿನ ರಾತ್ರಿಯ ರೈಲುಗಳು ಸ್ಲೀಪರ್ ಮತ್ತು ಎಸಿ ಕೋಚ್‌ಗಳೊಂದಿಗೆ ಸಜ್ಜುಗೊಂಡಿವೆ ಮತ್ತು ರಾತ್ರಿ ಸಂಚಾರದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಯಾಣಿಕರ ಪ್ರತಿಕ್ರಿಯೆ ಹೇಗಿರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಅಧಿಕಾರಿಗಳು.

ಚೆನ್ನೈ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ಟಿಕೆಟ್ ದರ ಎಷ್ಟು

ಬೆಂಗಳೂರು ಮತ್ತು ಚೆನ್ನೈ ನಡುವೆ ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡುತ್ತಿದೆ. ಇದನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಶುರು ಮಾಡಲಾಗಿದೆ. ಈ ರೈಲಿನ ಸರಾಸರಿ ವೇಗ ಗಂಟೆಗೆ 75 ಮತ್ತು 77 ಕಿಲೋಮೀಟರ್‌ಗಳ ನಡುವೆ ಇರುತ್ತದೆ. ಚೆನ್ನೈ-ಮೈಸೂರು ಮಾರ್ಗದಲ್ಲಿ 'ಎಕಾನಮಿ ಕ್ಲಾಸ್' ಟಿಕೆಟ್ ಬೆಲೆ 921 ರೂ ಮತ್ತು 'ಎಕ್ಸಿಕ್ಯೂಟಿವ್ ಕ್ಲಾಸ್' 1,880 ರೂಪಾಯಿ ಇದೆ.