ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌; ಏನಿದು, ಗಮನಸೆಳೆದ 5 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌; ಏನಿದು, ಗಮನಸೆಳೆದ 5 ಮುಖ್ಯ ಅಂಶಗಳು

ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌; ಏನಿದು, ಗಮನಸೆಳೆದ 5 ಮುಖ್ಯ ಅಂಶಗಳು

BHARATPOL: ಕೇಂದ್ರೀಯ ತನಿಖಾ ದಳ (ಸಿಬಿಐ) ಅಭಿವೃದ್ಧಿ ಪಡಿಸಿದ ಭಾರತ್‌ಪೋಲ್‌ ಎಂಬ ಡಿಜಿಟಲ್ ಪ್ಲಾಟ್‌ಫಾರಂ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಜನವರಿ 7) ಲೋಕಾರ್ಪಣೆ ಮಾಡಿದರು. ಏನಿದು ಭಾರತ್‌ಪೋಲ್‌, ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಕುರಿತಾಗಿ ಗಮನಸೆಳೆದ 5 ಮುಖ್ಯ ಅಂಶಗಳ ವಿವರ ಹೀಗಿದೆ.

ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌ ಲೋಕಾರ್ಪಣೆ.
ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌ ಲೋಕಾರ್ಪಣೆ.

BHARATPOL: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಜನವರಿ 7) ನವದೆಹಲಿಯ ಭಾರತ್ ಮಂಟಪದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಅಭಿವೃದ್ಧಿ ಪಡಿಸಿದ ಭಾರತ್‌ಪೋಲ್‌ ಎಂಬ ಡಿಜಿಟಲ್ ಪ್ಲಾಟ್‌ಫಾರಂ ಲೋಕಾರ್ಪಣೆ ಮಾಡಿದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಅಪರಾಧಕ್ಕೆ ಸಂಬಂಧಿಸಿ ಇಂಟರ್‌ಪೋಲ್‌ ಜತೆಗೆ ಸಹಭಾಗಿತ್ವ ಹೊಂದುವುದಕ್ಕೆ ನೆರವಾಗಲಿದೆ. ಈ ಪೋರ್ಟಲ್‌ ಮೂಲಕ ಭಾರತವು ಅಂತಾರಾ‍ಷ್ಟ್ರೀಯ ತನಿಖೆಯಲ್ಲಿ ಹೊಸ ಯುಗವನ್ನು ಪ್ರವೇಶಿಸುತ್ತಿದೆ. ಭಾರತದ ಪ್ರತಿಯೊಂದು ತನಿಖಾ ಏಜೆನ್ಸಿ ಹಾಗೂ ಪೊಲೀಸ್ ಪಡೆಗಳು ನೇರವಾಗಿ ಇಂಟರ್‌ಪೋಲ್‌ ಜತೆಗೆ ಸಂಪರ್ಕಸಾಧಿಸಿ ತನಿಖೆಗೆ ವೇಗ ನೀಡುವುದು ಸಾಧ್ಯವಾಗಲಿದೆ ಎಂದು ಗೃಹ ಸಚಿವ ಅಮಿತ್ ಶಾ ಇದೇ ವೇಳೆ ವಿವರಿಸಿದರು.

ಇಂಟರ್‌ಪೋಲ್ ಅನ್ನು ಧ್ವನಿಸುವ ಭಾರತ್‌ಪೋಲ್ ಎಂದರೇನು?

ಭಾರತ್‌ಪೋಲ್ ಎಂಬುದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಹೊಸದಾಗಿ ಅಭಿವೃದ್ಧಿ ಪಡಿಸಿದ ಡಿಜಿಟಲ್‌ ವೇದಿಕೆ. ಇದು ಭಾರತದ ಕಾನೂನು ಜಾರಿ ಸಂಸ್ಥೆಗಳು ಮತ್ತು ಇಂಟರ್‌ಪೋಲ್‌ ನಡುವೆ ಅಂತಾರಾಷ್ಟ್ರೀಯ ಸಹಕಾರದ ಪ್ರಕ್ರಿಯೆಯನ್ನು ಸುಗಮಗೊಳಿಸಲು ನೆರವಾಗುತ್ತದೆ.

ಸಿಬಿಐ ಮೂಲಕ ಈ ಪೋರ್ಟಲ್‌ ಮೂಲಕವೇ ಭಾರತ್‌ಪೋಲ್‌ ಅನ್ನು ಬಳಸಬೇಕು. ಭಾರತ್ ಪೋಲ್ ಎಂಬುದು ಸಿಬಿಐ ಪೋರ್ಟಲ್‌ನ ಸಬ್‌ಡೊಮೇನ್ ಆಗಿ ಕಾರ್ಯಾಚರಿಸುತ್ತದೆ. ಭಾರತವು 1949ರಲ್ಲಿ ಇಂಟರ್‌ಪೋಲ್ ಜತೆಗೆ ಕೈ ಜೋಡಿಸಿದ್ದು, ಅಲ್ಲಿಂದೀಚೆಗೆ ಪರಸ್ಪರ ಸಹಕಾರ ನೀಡುತ್ತಿದೆ. ಈ ಪೋರ್ಟಲ್‌ ಮೂಲಕ ಭಾರತಕ್ಕೆ ವಿವಿಧ ರೀತಿಯ ನೋಟಿಸ್‌ಗಳು ಬೇಗ ಲಭ್ಯವಾಗಲಿದೆ. ಅಂತಾರಾಷ್ಟ್ರೀಯ ಅಪರಾಧಿಗಳ ಪತ್ತೆ ಮತ್ತು ಬಂಧನಕ್ಕೆ ಇಂಟರ್‌ಪೋಲ್‌ನಿಂದಲೂ ಭಾರತದ ತನಿಖಾ ಏಜೆನ್ಸಿಗಳಿಗೆ ಬೇಗ ಸ್ಪಂದನೆ ಸಿಕ್ಕಲಿದೆ ಎಂದು ಭಾರತ ಸರ್ಕಾರ ವಿವರಿಸಿದೆ.

ಭಾರತ್‌ಪೋಲ್‌ ವೆಬ್‌ತಾಣವು ವೇಗವಾದ ಮತ್ತು ಪರಿಣಾಮಕಾರಿ ಡಿಜಿಟಲ್‌ ಸಂವಹನ ವ್ಯವಸ್ಥೆಯನ್ನು ಒದಗಿಸುವ ಮೂಲಕ ಅಂತಾರಾಷ್ಟ್ರೀಯ ಅಪರಾಧ ವಿನಂತಿಗೆ ಸ್ಪಂದಿಸುವ ಮತ್ತು ಪ್ರತಿಕ್ರಿಯಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಗುರಿ ಇದರದ್ದು. ಕೇಂದ್ರೀಕೃತ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ರಾಜ್ಯ ಪೊಲೀಸ್ ಪಡೆಗಳು, ಕೇಂದ್ರ ಏಜೆನ್ಸಿಗಳು ಇಂಟರ್‌ಪೋಲ್ ಅನ್ನು ಸಂಪರ್ಕಿಸುವ ಮೂಲಕ, ನಿರ್ಣಾಯಕ ಅಪರಾಧ ತನಿಖಾ ಡೇಟಾವನ್ನು ಮನಬಂದಂತೆ ಮತ್ತು ನೈಜ ಸಮಯದಲ್ಲಿ ವಿನಿಮಯ ಮಾಡಿಕೊಳ್ಳುವುದನ್ನು ಪೋರ್ಟಲ್ ಖಚಿತಪಡಿಸುತ್ತದೆ.

ಭಾರತ್‌ಪೋಲ್‌ಗೆ ಸಂಬಂಧಿಸಿದ 5 ಮುಖ್ಯ ಅಂಶಗಳಿವು

1) ನೈಜ ಸಮಯದಲ್ಲಿ ಮಾಹಿತಿ ಹಂಚಿಕೆ: ಇಂಟರ್‌ಪೋಲ್‌ ಜತೆಗೆ ಭಾರತದ ಕಾನೂನು ಜಾರಿ ಸಂಸ್ಥೆಗಳು ನೈಜ ಸಮಯದಲ್ಲಿ ಮಾಹಿತಿ ಹಂಚಿಕೆ ಮಾಡಿಕೊಂಡು ಸೈಬರ್‌ ಅಪರಾಧ, ಮಾನವ ಕಳ್ಳಸಾಗಣೆ, ಹಣಕಾಸಿನ ವಂಚನೆ ಮುಂತಾದ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಭಾರತ್‌ಪೋಲ್‌ ಪರಿಣಾಮಕಾರಿಯಾಗಿ ನೆರವಾಗುತ್ತದೆ.

2) ಕೇಂದ್ರೀಕೃತ ಅಂತಾರಾಷ್ಟ್ರೀಯ ನೆರವು ಒದಗಿಸುವ ವೇದಿಕೆ: ಪೋರ್ಟಲ್ ಅಂತಾರಾಷ್ಟ್ರೀಯ ವಿನಂತಿಗಳನ್ನು ನಿರ್ವಹಿಸಲು ಒಂದೇ ವೇದಿಕೆಯನ್ನು ನೀಡುತ್ತದೆ, ಅಪರಾಧಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ರೆಡ್ ನೋಟಿಸ್‌ಗಳನ್ನು ನೀಡುವುದು, ಹಾಗೆಯೇ ಅಂತಾರಾಷ್ಟ್ರೀಯ ತನಿಖೆಗಳಲ್ಲಿ ಸಹಕಾರಕ್ಕಾಗಿ ವಿನಂತಿಗಳು. ಬಹು ನ್ಯಾಯವ್ಯಾಪ್ತಿಗಳನ್ನು ವ್ಯಾಪಿಸಿರುವ ಮತ್ತು ಸಂಘಟಿತ ಪ್ರಯತ್ನಗಳ ಅಗತ್ಯವಿರುವ ಪ್ರಕರಣಗಳಿಗೆ ಇದು ವಿಶೇಷವಾಗಿ ಮುಖ್ಯವಾಗಿದೆ.

3) ಕೇಂದ್ರೀಕೃತ ಅಂತಾರಾಷ್ಟ್ರೀಯ ಸಹಕಾರ: ಭಾರತ್ ಪೋರ್ಟಲ್‌ ಅಂತಾರಾಷ್ಟ್ರೀಯ ವಿನಂತಿ ನಿರ್ವಹಣೆಗೆ ಒಂದೇ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಅಪರಾಧಿಗಳ ಪತ್ತೆಹಚ್ಚಲು, ಬಂಧನಕ್ಕೆ ರೆಡ್‌ ಕಾರ್ನರ್ ನೋಟಿಸ್‌ ನೀಡುವುದು, ಅಂತಾರಾಷ್ಟ್ರೀಯ ತನಿಖಾ ಸಹಕಾರಕ್ಕೆ ವಿನಂತಿಸುವುದು, ಹಲವು ದೇಶಗಳ ನ್ಯಾಯವ್ಯಾಪ್ತಿ ಇದ್ದಾಗ, ಸಂಘಟಿತ ಪ್ರಯತ್ನಗಳ ಮೂಲಕ ಅಪರಾಧಗಳನ್ನು ತಡೆಯಬೇಕಾದ ಸಂದರ್ಭದಲ್ಲಿ ಇದು ನರವಿಗೆ ಬರುತ್ತದೆ.

4) ಕಾನೂನು ಜಾರಿ ಸಂಸ್ಥೆಗಳ ನಡುವೆ ಸುಧಾರಿತ ಸಹಕಾರ: ಪೊಲೀಸ್ ಇಲಾಖೆಗಳಿಂದ ಹಿಡಿದು ಫೆಡರಲ್‌ ಏಜೆನ್ಸಿಗಳ ತನಕ ಹಲವು ಕಾನೂನು ಜಾರಿ ಸಂಸ್ಥೆಗಳ ನಡುವೆ ಒಂದು ಸೇತುವಾಗಿ ಭಾರತ್‌ಪೋಲ್‌ ಕೆಲಸ ಮಾಡುತ್ತದೆ. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಕಾನೂನು ಜಾರಿ ಸಂಸ್ಥೆಗಳು ಒಟ್ಟಾಗಿ ಸುಗಮವಾಗಿ ಕೆಲಸ ಮಾಡುವುದಕ್ಕೆ ಅನುಕೂಲ ಒದಗಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

5) ಸುವ್ಯವಸ್ಥಿತ ಸಂವಹನ ವೇದಿಕೆ: ಇಮೇಲ್‌, ಫ್ಯಾಕ್ಸ್‌ ಮುಂತಾದವುಗಳಿಗೆ ಬದಲಾಗಿ, ಅತ್ಯಾಧುನಿಕ, ಸುಧಾರಿತ ಡಿಜಿಟಲ್‌ ಚಾನೆಲ್‌ಗಳು ಭಾರತ್ ಪೋರ್ಟಲ್‌ನಲ್ಲಿದೆ. ಇಂಟರ್‌ಪೋಲ್ ಮತ್ತು ಇತರ ಅಂತಾರಾಷ್ಟ್ರೀಯ ಏಜೆನ್ಸಿಗಳ ಜತೆಗೆ ಸಂವಹನ ನಡೆಸುವುದಕ್ಕೆ ಭಾರತ್‌ ಪೋಲ್‌ ನೆರವಾಗುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.