Viral News: 15 ವರ್ಷದ ಬಾಲಕನನ್ನು ಮದುವೆಯಾದ 30 ವರ್ಷದ ಮೂವರು ಮಕ್ಕಳ ತಾಯಿ; ಬಿಹಾರದ ಅಪ್ರಾಪ್ತ ಪ್ರೇಮ ವಿವಾಹ ವಿಡಿಯೋ ವೈರಲ್
Viral News: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಮೂರು ಮಕ್ಕಳ ತಾಯಿ 15 ವರ್ಷದ ಬಾಲಕನನ್ನು ವಿವಾಹವಾಗಿರುವುದು, ಇದು ತಪ್ಪೇ ಎಂದು ಕೇಳಿರುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
ಪಾಟ್ನಾ: ಆಕೆ ಮೂರು ಮಕ್ಕಳ ತಾಯಿ. ವಯಸ್ಸು 30 ವರ್ಷ. ಎಲ್ಲರಂತೆಯೇ ಮದುವೆಯಾಗಿ ಕುಟುಂಬ ನಿರ್ವಹಣೆಯಲ್ಲಿ ತೊಡಗಿದ್ದಳು. ಮಕ್ಕಳ ಲಾಲನೆ ಪಾಲನೆಯೂ ನಡೆದಿತ್ತು. ಎರಡು ದಿನದ ಹಿಂದೆ ಆಕೆಯ ಬದುಕಿನಲ್ಲಿ ಘಟನೆಯೊಂದು ನಡೆದು ಹೋಯಿತು. ಆಗಲೇ ಮದುವೆಯಾಗಿ ಮಕ್ಕಳೊಂದಿಗೆ ಇದ್ದ ಆಕೆ ಮರು ಮದುವೆಯಾದಳು. ಅದೂ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ 15 ವರ್ಷದ ಹುಡುಗನನ್ನು ವರಿಸಿದಳು. ಇದು ಮನೆಯವರಿಗೂ ಅಚ್ಚರಿ. ಕುಟುಂಬದವರಿಗೂ ಆಶ್ಚರ್ಯ. ಊರವರಿಗೂ ಇನ್ನಿಲ್ಲದ ಕುತೂಹಲ. ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿರುವ ಈ ಮದುವೆ ಸಾಮಾಜಿಕ ಮಾಧ್ಯಮದಲ್ಲೂ ಭಾರೀ ಚರ್ಚೆ ಹುಟ್ಟು ಹಾಕಿದೆ. ಅಲ್ಲದೇ ಮದುವೆಯನ್ನು ಸಮರ್ಥಿಸಿಕೊಂಡಿರುವ ಮಹಿಳೆ ಬಗ್ಗೆಯು ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಪ್ರೀತಿ ಮಾಯೆ ಹುಷಾರು
ಬಿಹಾರದ ವೈಶಾಲಿ ಜಿಲ್ಲೆಯ ಈಕೆಯ ಹೆಸರು ಸೀಮಾ. ವಯಸ್ಸು 30 ವರ್ಷ. ಆಕೆಗೆ ಮದುವೆಯಾಗಿ ಸಂಸಾರ ನಡೆದಿತ್ತು.ಅದರ ಕುರುಹಾಗಿ ಮೂರು ಮಕ್ಕಳೂ ಜನಿಸಿದ್ದವು. ಮಕ್ಕಳೊಂದಿಗೆ ಆಕೆಯ ಸಂಸಾರ ನಡೆದಿತ್ತು. ಎರಡು ದಿನದ ಹಿಂದೆ ಆಕೆ ನವವಧುವಿನಂತೆ ನಿಂತಿದ್ದಳು. ಜತೆಗೆ ಪಕ್ಕದಲ್ಲಿ ಪುಟ್ಟ ವರ. ಆತನನ್ನು ನೋಡಿದರೆ ಇನ್ನೂ ಚಿಗುರು ಮೀಸೆಯೂ ಬಂದಿಲ್ಲ. ವಯಸ್ಸು 15. ಆತ ಇನ್ನೂ ಪ್ರೌಢಶಾಲೆಯ ವಿದ್ಯಾರ್ಥಿ. ಇದೇನು ಎಂದು ವಿಚಾರಿಸಿದರೆ ಅದರ ಹಿಂದೆ ಇದ್ದುದು ಪ್ರೀತಿ. ನಾನು ಅವನನ್ನು ಪ್ರೀತಿಸಿದೆ. ಮದುವೆಯಾದೆ. ಅದರಲ್ಲಿ ತಪ್ಪೇನಿದೆ ಎಂದು ಸೀಮಾ ಸ್ಥಳೀಯರನ್ನು ಕೇಳಿದರು. ಅದಕ್ಕೆ ಅವರಿಂದ ಉತ್ತರವಿಲ್ಲ. ಪ್ರೀತಿಯ ಮಾಯೆಯೇ ಹೀಗೆ ಎಂದು ಮಾತನಾಡಿಕೊಂಡರು.
ಮಕ್ಕಳು ಹಾಗೂ ಪತಿ ಇದ್ದರೂ ಅವರನ್ನು ಬಿಟ್ಟು ಆಕೆ ತನ್ನದೇ ಊರಿನ ಬಾಲಕನನ್ನು ಕೆಲ ದಿನಗಳಿಂದ ಪ್ರೀತಿ ಮದುವೆಯೂ ಆಗಿದ್ದಾಳೆ ಸೀಮಾ. ಇದೊಂದು ರೀತಿಯಲ್ಲಿ ಸೋಪ್ ಒಪೆರಾ ಎನ್ನುವ ನಾಟಕದ ಕಥಾವಸ್ತುವನ್ನು ಹೋಲುವಂತಿದೆ. ಆರೇಳು ದಶಕ ಹಿಂದಿನ ಸೋಪ್ ಒಪೆರಾ ನಾಟಕದ ನಾಯಕಿಯಂತೆಯೇ ಸೀಮಾ ಎಂಬ ಮಹಿಳೆ ಮತ್ತೆ ಮದುವೆವಾಗಿ ಕಿರಿಯನೊಂದಿಗೆ ವಿವಾಹವಾಗಿದ್ದು, ಅದನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಅಪ್ರಾಪ್ತ ಮದುವೆ ಚರ್ಚೆ
ಬಾಲಕನೊಂದಿಗೆ ವಧುವಾಗಿ ನಿಂತಿರುವ ಸೀಮಾ ಅವರ ಮದುವೆಯ ಕ್ಷಣಗಳು, ಅವರ ಮಾತುಗಳಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದು, ವ್ಯಾಪಕ ಚರ್ಚೆ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ.
ಮದುವೆ ಮುಗಿಸಿಕೊಂಡು ಬಂದು ನಿಂತಿದ್ದ ಸೀಮಾ ಅವರಿಗೆ ಈ ಮದುವೆ ಸರಿಯೇ ಎನ್ನುವ ಪ್ರಶ್ನೆ ಎದುರಾಯಿತು."ಪ್ಯಾರ್ ಕರ್ತೆ ದಿ, ಕರ್ ಲಿಯೆ ಶಾದಿ, ಇಸ್ಮೆ ಗಲಾತ್ ಕ್ಯಾ ಹೈ?(ನಾವು ಪ್ರೀತಿಸುತ್ತಿದ್ದೆವು, ಆದ್ದರಿಂದ ನಾವು ವಿವಾಹವಾದೆವು. ಅದರಲ್ಲಿ ತಪ್ಪೇನಿದೆ?) " ಎಂದು ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಿದರು ಸೀಮಾ. ಅಲ್ಲದೇ ಇದನ್ನು ಪ್ರಶ್ನಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದೂ ನಡೆದಿದೆ.
ಕಾನೂನು ಏನು ಹೇಳುತ್ತದೆ
ಸೀಮಾ ಕುಟುಂಬದಲ್ಲಿ ಇದಕ್ಕೆ ವಿರೋಧ ವ್ಯಕ್ತವಾದರೂ ಅದಕ್ಕೆ ಆಕೆ ಸೊಪ್ಪು ಹಾಕಿಲ್ಲ. ಬಾಲಕನ ಕುಟುಂಬದಿಂದಲೂ ಬಲವಾದ ವಿರೋಧ ವ್ಯಕ್ತವಾಗಿದೆ. ಕಾನೂನು ಪ್ರಕಾರ ಬಾಲ್ಯ ವಿವಾಹಕ್ಕೆ ಅವಕಾಶವಿಲ್ಲ. ಮದುವೆಗೆ ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ಆಗಿರಬೇಕು. ಇಲ್ಲಿ ಬಾಲಕನ ವಯಸ್ಸು ಸಣ್ಣದು. ಈ ಕಾರಣದಿಂದ ಇದಕ್ಕೆ ಕಾನೂನಿನಲ್ಲಿ ಮಾನ್ಯತೆ ಇರುವುದಿಲ್ಲ. ಮದುವೆ ಮಾಡಿಕೊಂಡವರ ಮೇಲೆ ಕಾನೂನು ಕ್ರಮವೂ ಆಗಬಹುದು. ಸೀಮಾ ಕಾನೂನು ಕ್ರಮ ಎದುರಿಸಬಹುದು ಎನ್ನುತ್ತಾರೆ ಸ್ಥಳೀಯರು.
ಮದುವೆ, ಪ್ರೀತಿ ತಪ್ಪೇ ಎಂದು ಸೀಮಾ ಕೇಳಿರುವುದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಗಿದೆ. ಬಾಲಕನ ವಯಸ್ಸು, ಶಿಕ್ಷಣ, ಹಿನ್ನಲೆ ಕುರಿತು ಚರ್ಚೆಗಳು ನಡೆದಿವೆ. ನೆಟ್ಟಿಗರೊಬ್ಬರು, ಆನ್ ಲೈನ್ ನಲ್ಲಿ ಕಪಾಳಮೋಕ್ಷ ಮಾಡುವ ವ್ಯವಸ್ಥೆ ಇರಬೇಕೆಂದು ನಾನು ಬಯಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದು ಸಂಪೂರ್ಣವಾಗಿ ತಪ್ಪು. ಮಕ್ಕಳೊಂದಿಗೆ ಇಂತಹ ಕೆಲಸಗಳನ್ನು ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಮತ್ತೊಬ್ಬರು ಖಾರವಾಗಿಯೇ ಕೇಳಿದ್ದಾರೆ.