Bihar Youtuber Case: ವಲಸಿಗರ ಮೇಲೆ ಹಲ್ಲೆ ವಿಡಿಯೋ, ಬಿಹಾರದ ಯೂಟ್ಯೂಬರ್‌ನನ್ನು ತಮಿಳುನಾಡು ಪೊಲೀಸರ ಕೈಗೆ ಒಪ್ಪಿಸಿದ ಕೋರ್ಟ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bihar Youtuber Case: ವಲಸಿಗರ ಮೇಲೆ ಹಲ್ಲೆ ವಿಡಿಯೋ, ಬಿಹಾರದ ಯೂಟ್ಯೂಬರ್‌ನನ್ನು ತಮಿಳುನಾಡು ಪೊಲೀಸರ ಕೈಗೆ ಒಪ್ಪಿಸಿದ ಕೋರ್ಟ್‌

Bihar Youtuber Case: ವಲಸಿಗರ ಮೇಲೆ ಹಲ್ಲೆ ವಿಡಿಯೋ, ಬಿಹಾರದ ಯೂಟ್ಯೂಬರ್‌ನನ್ನು ತಮಿಳುನಾಡು ಪೊಲೀಸರ ಕೈಗೆ ಒಪ್ಪಿಸಿದ ಕೋರ್ಟ್‌

ತಮಿಳುನಾಡಿನಲ್ಲಿ ವಲಸಿಗರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಫೇಕ್‌ ವಿಡಿಯೋ ಪ್ರಕಟಿಸಿದ ಆರೋಪದ ಮೇರೆಗೆ ಬಿಹಾರದ ಯೂಟ್ಯೂಬರ್‌ನನ್ನು ಮೂರು ದಿನಗಳ ಕಾಲ ತಮಿಳುನಾಡು ಪೊಲೀಸರ ಕಸ್ಟಡಿಗೆ ಮಧುರೈ ಕೋರ್ಟ್‌ ಒಪ್ಪಿಸಿದೆ.

ಯೂಟ್ಯೂಬರ್‌ ಮನೀಶ್‌ ಕಶ್ಯಪ್‌ (HT Photo)
ಯೂಟ್ಯೂಬರ್‌ ಮನೀಶ್‌ ಕಶ್ಯಪ್‌ (HT Photo)

ಮಧುರೈ : ತಮಿಳುನಾಡಿನಲ್ಲಿ ವಲಸಿಗರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಫೇಕ್‌ ವಿಡಿಯೋ ಪ್ರಕಟಿಸಿದ ಆರೋಪದ ಮೇರೆಗೆ ಬಿಹಾರದ ಯೂಟ್ಯೂಬರ್‌ನನ್ನು ಮೂರು ದಿನಗಳ ಕಾಲ ತಮಿಳುನಾಡು ಪೊಲೀಸರ ಕಸ್ಟಡಿಗೆ ಮಧುರೈ ಕೋರ್ಟ್‌ ಒಪ್ಪಿಸಿದೆ. ವಲಸಿಗರ ಮೇಲೆ ತಮಿಳುನಾಡಿನಲ್ಲಿ ಆಕ್ರಮಣಗಳು ನಡೆಯುತ್ತಿವೆ ಎಂದು ಸುಳ್ಸುದ್ದಿ ಹಬ್ಬಿಸಿದ ಆರೋಪದಡಿ ಯೂಟ್ಯೂಬರ್‌ ಮನೀಶ್‌ ಕಶ್ಯಪ್‌ನನ್ನು ಇದೇ ಮಾರ್ಚ್‌ 18ರಂದು ಪೊಲೀಸರು ಬಂಧಿಸಿದ್ದರು. ಮಧುರೈನ ಸ್ಥಳೀಯ ನ್ಯಾಯಾಲಯ ಕಶ್ಯಪ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

ಮನೀಶ್ ಕಶ್ಯಪ್ ಅಲಿಯಾಸ್ ತ್ರಿಪುರಾರಿ ಕುಮಾರ್ ತಿವಾರಿ ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದು, ಕಸ್ಟಡಿಗೆ ಪಡೆಯಲು ಕಾಯುತ್ತಿದ್ದರು. ಮಧುರೈನ ನ್ಯಾಯಾಲಯವು ಈತನ ವಿರುದ್ಧ ಪ್ರೊಡಕ್ಷನ್ ವಾರಂಟ್ (ಹಾಜಾರುಪಡಿಸಬೇಕಾದ ವಾರೆಂಟ್‌) ಹೊರಡಿಸಿತ್ತು.

ಆರೋಪಿಯನ್ನು ಸಂಪೂರ್ಣ ಭದ್ರತೆ ಮತ್ತು ರಕ್ಷಣೆಯಲ್ಲಿ ಮಧುರೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಮಿಳುನಾಡು ಪೊಲೀಸ್ ಅಧಿಕಾರಿಯೊಬ್ಬರು ಅಫಿಡವಿಟ್ ಸಲ್ಲಿಸಲಾಗಿತ್ತು. ಇದಾದ ಬಳಿಕ ಪಟನಾದ ಹೆಚ್ಚುವರಿ ಚೀಫ್‌ ಜುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಆಗಿರುವ ಆದಿ ದೇವ್‌ ಅವರು ಈ ಆರೋಪಿಯನ್ನು ಕಳುಹಿಸಲು ಅನುಮತಿ ನೀಡಿದೆ ಎಂದು ಕಶ್ಯಪ್ ಅವರ ವಕೀಲ ಕೆಕೆ ಪ್ರಭಾಕರ್ ಹೇಳಿದ್ದಾರೆ.

ಪಟನಾದ ಮನೆಯೊಂದರಲ್ಲಿ ಕುಳಿತು ಅಲ್ಲೇ "ತಮಿಳುನಾಡಿನಲ್ಲಿ ವಲಸಿಗರ ಮೇಲೆ ದಾಳಿ ನಡೆಸಲಾಗುತ್ತಿದೆ" ಎಂದು ನಕಲಿ ವಿಡಿಯೋವನ್ನು ತಯಾರಿಸಲಾಗಿತ್ತು. ಈ ವಿಡಿಯೋವನ್ನು ಚಿತ್ರಿಕರಿಸಿದ ಆರೋಪದ ಮೇರೆಗೆ ಬಿಹಾರ ಪೊಲೀಸರು ಗೋಪಾಲಗಂಜ್ ಜಿಲ್ಲೆಯ ರಾಕೇಶ್ ರಂಜನ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.

ಕಶ್ಯಪ್ ಮೇಲೆ 2019 ರಿಂದ ಪಾಟ್ನಾ ಮತ್ತು ಬೆಟ್ಟಿಯಾದಲ್ಲಿ 10 ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಿನ ಪ್ರಕರಣದಲ್ಲಿ ಈತನ ಮತ್ತು ಇತರೆ ಮೂವರ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಕಶ್ಯಪ್‌ನ ನಾಲ್ಕು ದಿನದ ಪೊಲೀಸ್‌ ಕಸ್ಟಡಿಯು ಬಿಹಾರದ ಎಕಾನಮಿಕ್‌ ಅಫೆನ್ಸ್‌ ಯೂನಿಟ್‌ನಲ್ಲಿ ಸೋಮವಾರ ಕೊನೆಗೊಂಡಿತ್ತು.

ತಮಿಳುನಾಡಿನಲ್ಲಿ ವಲಸಿಗರ ಮೇಲೆ ದಾಳಿ ನಡೆಯುತ್ತಿದೆ ಎಂಬ ವಿಡಿಯೋ ಹರಿದಾಡಿದ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ಆರೋಪಗಳು ಕೇಳಿಬಂದಿದ್ದವು. ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಹಲವರ ಮೇಲೆ ಕೇಸ್‌ ಹಾಕಿದ್ದಾರೆ. ಕಶ್ಯಪ್‌ನನ್ನು ಪೊಲೀಸರು ಬಂಧಿಸಲು ಯತ್ನಿಸಿದರೂ ಆತ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಆತನ ಆಸ್ತಿ ಜಪ್ತಿ ಮಾಡಲು ಮುಂದಾದಗ ಮೇ 18ರಂದು ಬಿಹಾರ ಪೊಲೀಸರ ಮುಂದೆ ಶರಣಾಗತನಾಗಿದ್ದ.

ಮಜೌಲಿಯಾದಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ನೇತೃತ್ವದಲ್ಲಿ ಮಾರ್ಚ್‌ 18ರಂದು ಬೆಳಗ್ಗೆ ಯೂಟ್ಯೂಬರ್‌ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆಗೆ ಮುಂದಾದಗ ಯೂಟ್ಯೂಬರ್‌ ಜಗದೀಶ್‌ಪುರ ಪೊಲೀಸ್‌ ಠಾಣೆಯಲ್ಲಿ ಶರಣಾದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಈ ಹಿಂದೆ, ಹಿರಿಯ ಅಧಿಕಾರಿಗಳನ್ನೊಳಗೊಂಡ ಬಿಹಾರ ಸರ್ಕಾರದ ಸತ್ಯಶೋಧನಾ ತಂಡವು ತಮಿಳುನಾಡಿನ ವಲಸೆ ಕಾರ್ಮಿಕರ ಮೇಲಿನ ದಾಳಿಯ ಆರೋಪಗಳನ್ನು ನಿರಾಕರಿಸಿತ್ತು.

ಕಶ್ಯಪ್ ಮತ್ತು ಮತ್ತೊಬ್ಬ ಆರೋಪಿ ಯುವರಾಜ್ ಸಿಂಗ್ ರಜಪೂತ್ ವಿರುದ್ಧ ಪೊಲೀಸರು ಅರೆಸ್ಟ್‌ ವಾರೆಂಟ್‌ ಹೊರಡಿಸಿದ್ದರು. ಶರಣಾಗತಿಗಾಗಿ ಅವರ ಮೇಲೆ ಒತ್ತಡ ಹೇರಲು ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದರು. ಇಒಯು ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಆರು ತಂಡಗಳು ಪಟಣಾ ಮತ್ತು ಚಂಪಾರಣ್ ಪೊಲೀಸರೊಂದಿಗೆ ಕಶ್ಯಪ್‌ನನ್ನು ಹುಡುಕುತ್ತಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.