Bird flu: ಕೇರಳದಲ್ಲಿ ಹಕ್ಕಿ ಜ್ವರ, 6 ಸಾವಿರಕ್ಕೂ ಹೆಚ್ಚು ಹಕ್ಕಿಗಳ ಹತ್ಯೆ, ಕೊರೊನಾಂತಕದ ನಡುವೆ ಹಕ್ಕಿ ಜ್ವರದ ಭೀತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bird Flu: ಕೇರಳದಲ್ಲಿ ಹಕ್ಕಿ ಜ್ವರ, 6 ಸಾವಿರಕ್ಕೂ ಹೆಚ್ಚು ಹಕ್ಕಿಗಳ ಹತ್ಯೆ, ಕೊರೊನಾಂತಕದ ನಡುವೆ ಹಕ್ಕಿ ಜ್ವರದ ಭೀತಿ

Bird flu: ಕೇರಳದಲ್ಲಿ ಹಕ್ಕಿ ಜ್ವರ, 6 ಸಾವಿರಕ್ಕೂ ಹೆಚ್ಚು ಹಕ್ಕಿಗಳ ಹತ್ಯೆ, ಕೊರೊನಾಂತಕದ ನಡುವೆ ಹಕ್ಕಿ ಜ್ವರದ ಭೀತಿ

ಕೇರಳದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಕೇರಳದ ಕೊಟ್ಟಾಯಂನಲ್ಲಿ ಹಲವು ದಿನಗಳಿಂದ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ಕೊಲ್ಲಲಾಗಿದೆ.

Bird flu: ಕೇರಳದಲ್ಲಿ ಹಕ್ಕಿ ಜ್ವರ, 6 ಸಾವಿರಕ್ಕೂ ಹೆಚ್ಚು ಹಕ್ಕಿಗಳ ಹತ್ಯೆ
Bird flu: ಕೇರಳದಲ್ಲಿ ಹಕ್ಕಿ ಜ್ವರ, 6 ಸಾವಿರಕ್ಕೂ ಹೆಚ್ಚು ಹಕ್ಕಿಗಳ ಹತ್ಯೆ

ಕೊಟ್ಟಾಯಂ: ಒಂದೆಡೆ ವಿವಿಧ ದೇಶಗಳಲ್ಲಿ ಹೆಚ್ಚಾಗಿರುವ ಕೊರೊನಾ ಸಾಂಕ್ರಾಮಿಕವು ಭಾರತಕ್ಕೆ ಆತಂಕ ತಂದಿದೆ. ಹಲವು ನಿಯಮಗಳು, ಮಾರ್ಗಸೂಚಿಗಳನ್ನು ಸರಕಾರ ಪ್ರಕಟಿಸುತ್ತಿದೆ. ಗಾಯದ ಮೇಲೆ ಬರೆ ಎಂಬಂತೆ ಇದೀಗ ಕೇರಳದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಕೇರಳದ ಕೊಟ್ಟಾಯಂನಲ್ಲಿ ಹಲವು ದಿನಗಳಿಂದ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ಕೊಲ್ಲಲಾಗಿದೆ.

ಕೊಟ್ಟಾಯಂ ಜಿಲ್ಲೆಯ ಮೂರು ಪ್ರತ್ಯೇಕ ಗ್ರಾಮಪಂಚಾಯತ್‌ ವ್ಯಾಪ್ತಿಗಳಲ್ಲಿ ಆರು ಸಾವಿರಕ್ಕೂ ಹೆಚು ಹಕ್ಕಿಗಳನ್ನು ಕೊಲ್ಲಲಾಗಿದೆ. ಕೊಟ್ಟಾಯಂನಲ್ಲಿ ಬಾತುಕೋಳಿಗಳು, ಕೋಳಿಗಳನ್ನು ಸಾಯಿಸಲಾಗಿದೆ. ಸುಮಾರು 6,017 ಪಕ್ಷಿಗಳನ್ನು ಹತ್ಯೆ ಮಾಡಲಾಗಿದ್ದು, ಹಕ್ಕಿ ಜ್ವರ ವ್ಯಾಪಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೊಟ್ಟಾಯಂ ಜಿಲ್ಲೆಯ ವೇಚೂರು, ನೀಂದೂರು ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ 6,017 ಪಕ್ಷಿಗಳು, ಹೆಚ್ಚಾಗಿ ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ.

ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಇದೇ ಸಮಯದಲ್ಲಿ ಕೇರಳದ ಹಕ್ಕಿಜ್ವರದಿಂದಾಗಿ ಲಕ್ಷದ್ವೀಪಕ್ಕೆ ಕೋಳಿಗಳನ್ನು ಸಾಗಿಸುವುದನ್ನು ನಿಷೇಧಿಸಿದೆ.

ಕೇರಳದಲ್ಲಿ ರೈತರು ಕೊಳಗಳಿಗೆ ಇಳಿದು ಬಾತುಕೋಳಿಗಳನ್ನು ಹಿಡಿದು ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ವೇಚೂರಿನಲ್ಲಿ ಸುಮಾರು 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರಿನಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪೂಕರದಲ್ಲಿ 2,975 ಬಾತುಕೋಳಿಗಳು ಸಾವನ್ನಪ್ಪಿವೆ ಎಂದು ಪ್ರಕಟಣೆ ತಿಳಿಸಿದೆ.

ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಇದು ಮನುಷ್ಯರಿಗೆ ಕೂಡ ಹರಡುವಂತಹ ಸಾಧ್ಯತೆಯು ಇರುವ ಕಾರಣದಿಂದಾಗಿ ತುಂಬಾ ಭೀತಿಯ ವಾತಾವರಣವು ನಿರ್ಮಾಣವಾಗಿದೆ. ಈಗಾಗಲೇ ಜನರು ಕೊರೊನಾ ಭೀತಿಯಲ್ಲಿದ್ದು, ಅದರ ನಡುವೆ ಹಕ್ಕಿಗಳಿಂದಲೂ ಜ್ವರ ಹರಡುವ ಕುರಿತು ಭಯವುಂಟಾಗಿದೆ.

ಹಕ್ಕಿಜ್ವರನ್ನು ಹತ್ತಿಕ್ಕುತ ನಿಟ್ಟಿನಲ್ಲಿ ಕೇರಳದಲ್ಲಿ ಈಗ ಸಾಕು ಕೋಳಿಗಳು ಹಾಗೂ ಬಾತುಕೋಳಿಗಳಲ್ಲಿ ಸಾಮೂಹಿಕ ದಫನ ಕಾರ್ಯ ಮಾಡಲಾಗುತ್ತಿದೆ.

ಏನಿದು ಹಕ್ಕಿ ಜ್ವರ?

ಹೆಸರೇ ಹೇಳುವಂತೆ ಇದು ಹಕ್ಕಿಗಳ ಜ್ವರ. ಹಕ್ಕಿಗಳಿಂದ ಮನುಷ್ಯರಿಗೂ ಹರಡುವ ಭೀತಿ ಇರುವ ಜ್ವರ ಇದಾಗಿದೆ. ಹಲವಾರು ರೀತಿಯ ಹಕ್ಕಿ ಜ್ವರದ ಮಾದರಿಗಳನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿ ನಾಲ್ಕು ಮಾದರಿಯಾಗಿರುವಂತಹ H5N1, H7N9, H5N6 ಮತ್ತು H5N8 ಮಾದರಿಯ ಹಕ್ಕಿ ಜ್ವರಗಳು ಹೆಚ್ಚಿನ ಆತಂಕ ಹುಟ್ಟಿಸಿವೆ. ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುತ್ತದೆ. ಹಕ್ಕಿ ಜ್ವರದ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಕ್ಕಿಗಳು ಸಾಯುತ್ತವೆ. ಹೀಗಾಗಿ, ಇದು ಹಕ್ಕಿಗಳ ಪಾಲಿಗೆ ಮರಣ ಮೃದಂಗ ತರುವಂತಹ ಹಕ್ಕಿಯಾಗಿದೆ. ಹಕ್ಕಿ ಜ್ವರವು ಹಕ್ಕಿಯಿಂದ ಹಕ್ಕಿ ಹರಡುತ್ತದೆ. ಹಕ್ಕಿಗಳಿಂದ ಮನುಷ್ಯರಿಗೂ ಹರಡುತ್ತದೆ. ಆದರೆ, ಮನುಷ್ಯರಿಂದ ಮನುಷ್ಯರಿಗೆ ಹರಡುವ ಕುರಿತು ಸ್ಪಷ್ಟತೆಯಿಲ್ಲ.

H5N1, H7N9, H5N6 ಮಾದರಿಯ ಹಕ್ಕಿ ಜ್ವರದ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದ್ದು, ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ತೊಂದರೆ ನೀಡಿದೆ.

ಮನುಷ್ಯರಿಗೆ ಹಕ್ಕಿ ಜ್ವರ ಕಾಣಿಸಿಕೊಂಡರೆ ಹಲವು ರೋಗ ಲಕ್ಷಣಗಳಿಂದ ತಿಳಿಯಬಹುದು. ಕೆಮ್ಮು, ಉಸಿರಾಟದಲ್ಲಿ ತೊಂದರೆ, ತೀವ್ರ ಜ್ವರ, ತಲೆನೋವು, ಸ್ನಾಯುಗಳ ನೋವು, ಮೂಗು ಸೋರುವಿಕೆ, ಗಂಟಲಿನ ಊತ, ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ ಇತ್ಯಾದಿ ಹಲವು ಲಕ್ಷಣಗಳನ್ನು ಹಕ್ಕಿ ಜ್ವರ ಹೊಂದಿದೆ. ಕೆಲವರಲ್ಲಿ ವಾಕರಿಕೆ, ವಾಂತಿ ಮತ್ತು ಬೇಧಿಯು ಕಂಡುಬರುತ್ತದೆ. ಕಣ್ಣು ಕೆಂಪಗಾಗುವುದು ಇತ್ಯಾದಿ ರೋಗ ಲಕ್ಷಣಗಳನ್ನೂ ಇದು ಹೊಂದಿದೆ. ಸೋಂಕು ದೇಹಕ್ಕೆ ತಾಗಿ ಒಂದೆರಡು ದಿನಗಳಲ್ಲಿ ಇಂತಹ ಲಕ್ಷಣಗಳು ಕಾಣಿಸುತ್ತೆ. ತಕ್ಷಣ ಚಿಕಿತ್ಸೆ ಪಡೆದುಕೊಂಡರೆ ಸೋಂಕಿನ ತೀವ್ರತೆ ಕಡಿಮೆಯಾಗುತ್ತದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.