ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಿಜೆಪಿ ಈಗ ಆರ್‌ಎಸ್‌ಎಸ್‌ ಅವಲಂಬನೆ ಮೀರಿ ಬೆಳೆದಿದೆ: ಸಂಘದ ಕಾರ್ಯಕರ್ತರ ಹುಬ್ಬೇರುವಂತೆ ಮಾಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾತು

ಬಿಜೆಪಿ ಈಗ ಆರ್‌ಎಸ್‌ಎಸ್‌ ಅವಲಂಬನೆ ಮೀರಿ ಬೆಳೆದಿದೆ: ಸಂಘದ ಕಾರ್ಯಕರ್ತರ ಹುಬ್ಬೇರುವಂತೆ ಮಾಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾತು

ವಾಜಪೇಯಿ ಅವರ ಕಾಲದಲ್ಲಿ ಬಿಜೆಪಿಗೆ ಆರ್‌ಎಸ್‌ಎಸ್‌ ಅಗತ್ಯವಾಗಿತ್ತು. ಏಕೆಂದರೆ ಆಗ ಪಕ್ಷ ಕಡಿಮೆ ಸಾಮರ್ಥ್ಯ ಹಾಗೂ ಚಿಕ್ಕದಾಗಿತ್ತು ಎಂದು ಜೆಪಿ ನಡ್ಡಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಿಜೆಪಿ ಈಗ ಆರ್‌ಎಸ್‌ಎಸ್‌ ಅವಲಂಬನೆ ಮೀರಿ ಬೆಳೆದಿದೆ ಎಂಬ ಜೆಪಿ ನಡ್ಡಾ ಅವರ ಹೇಳಿಕೆ ಸಂಘದ ಕಾರ್ಯಕರ್ತರನ್ನು ಹುಬ್ಬೇರುವಂತೆ ಮಾಡಿದೆ.
ಬಿಜೆಪಿ ಈಗ ಆರ್‌ಎಸ್‌ಎಸ್‌ ಅವಲಂಬನೆ ಮೀರಿ ಬೆಳೆದಿದೆ ಎಂಬ ಜೆಪಿ ನಡ್ಡಾ ಅವರ ಹೇಳಿಕೆ ಸಂಘದ ಕಾರ್ಯಕರ್ತರನ್ನು ಹುಬ್ಬೇರುವಂತೆ ಮಾಡಿದೆ. (JP Nadda- X)

ದೆಹಲಿ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್‌ಎಸ್‌ಎಸ್‌)ದ ಮೇಲಿನ ಅವಲಂಬನೆಯನ್ನು ಮೀರಿ ಬೆಳೆದಿದೆ. ಪಕ್ಷದ ರಚನೆ ಬಲಗೊಂಡಿದೆ. ಈಗ ಅದು ಸ್ವತಃ ಶಕ್ತಿಯ ಮೇಲೆ ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿರುವ ಸಂದರ್ಶನದಲ್ಲಿ ಜೆಪಿ ನಡ್ಡಾ, ಆರ್‌ಎಸ್‌ಎಸ್‌ ಬಿಜೆಪಿಯ ಸೈದ್ಧಾಂತಿಕ ರಂಗವಾಗಿದೆ ಎಂದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಕ್ಕೆ ಹೋಲಿಸಿದರೆ ಬಿಜೆಪಿಯೊಳಗೆ ಆರ್‌ಎಸ್‌ಎಸ್‌ನ ಉಪಸ್ಥಿತಿ ಹೇಗೆ ಬದಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಜೆ.ಪಿ.ನಡ್ಡಾ, ಬಿಜೆಪಿಯ ರಚನೆಯು ಬಲಗೊಂಡಿದೆ ಮತ್ತು ಈಗ ಅದು ತನ್ನಿಂದ ತಾನೇ ನಡೆಯುತ್ತಿದೆ. ವಾಜಪೇಯಿ ಅವರ ಕಾಲದಲ್ಲಿ ಬಿಜೆಪಿಗೆ ಆರ್‌ಎಸ್‌ಎಸ್‌ ಅಗತ್ಯವಾಗಿತ್ತು. ಏಕೆಂದರೆ ಅದು ಕಡಿಮೆ ಸಾಮರ್ಥ್ಯ ಮತ್ತು ಚಿಕ್ಕದಾಗಿತ್ತು ಎಂದು ಎಂದಿದ್ದಾರೆ.

ಶುರರು ಮೇ ಹಮ್ ಅಕ್ಷಂ ಹೊಂಗೆ, ಥೋರಾ ಕುಮ್ ಹೊಂಗೆ, ಆರ್‌ಎಸ್‌ಎಸ್‌ ಕಿ ಜರೂರತ್ ಪಡ್ತಿ ಥೀ… ಆಜ್ ಹಮ್ ಬಾದ್ ಗಯೇ ಹೈ, ಸಕ್ಷಮ್ ಹೈ… ಆರಂಭದಲ್ಲಿ ನಾವು ಕಡಿಮೆ ಸಾಮರ್ಥ್ಯ ಹೊಂದಿದ್ದೇವೆ, ಪಕ್ಷ ಸಣ್ಣದಾಗಿತ್ತು. ಆರ್‌ಎಸ್‌ಎಸ್‌ ಅಗತ್ಯವಿತ್ತು. ಇಂದು, ನಾವು ಬೆಳೆದಿದ್ದೇವೆ. ಸಮರ್ಥರಾಗಿದ್ದೇವೆ. ಬಿಜೆಪಿ ತನ್ನಷ್ಟಕ್ಕೆ ತಾನೇ ಆಡಳಿತ ನಡೆಸುತ್ತದೆ. ವಾಜಪೇಯಿ ಅವರ ಕಾಲಕ್ಕೂ ಈಗಿನ ಪಕ್ಷಕ್ಕೂ ಇದೇ ವ್ಯತ್ಯಾಸ ಎಂದು ಹೇಳಿದ್ದಾರೆ.

ಬಿಜೆಪಿಗೆ ಆರ್‌ಎಸ್‌ಎಸ್‌ನ ಬೆಂಬಲ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರು ಜೆಪಿ ನಡ್ಡಾ ಅವರು, ಪಕ್ಷ ಬೆಳೆದಿದೆ ಮತ್ತು ಅದರ ನಾಯಕರು ತಮ್ಮದೇ ಆದ ಕರ್ತವ್ಯಗಳು ಮತ್ತು ಪಾತ್ರಗಳನ್ನು ನಿರ್ವಹಿಸುತ್ತಿದ್ದಾೆರೆ. ಆರ್‌ಎಸ್‌ಎಸ್‌ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಯಾಗಿದೆ. ಬಿಜೆಪಿ ರಾಜಕೀಯ ಪಕ್ಷವಾಗಿದೆ. ಆರ್‌ಎಸ್‌ಎಸ್‌ ಸೈದ್ಧಾಂತಿಕವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಮಥುರಾ, ವಾರಣಾಸಿಯ ವಿವಾದಿತ ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ಮಿಸುವ ಯೋಜನೆ ಬಿಜೆಪಿಗಿಲ್ಲ - ಜೆಪಿ ನಡ್ಡಾ

"ನಾವು ನಮ್ಮ ವ್ಯವಹಾರಗಳನ್ನು ನಮ್ಮದೇ ಆದ ರೀತಿಯಲ್ಲಿ ನಿರ್ವಹಿಸುತ್ತಿದ್ದೇವೆ. ಮತ್ತು ರಾಜಕೀಯ ಪಕ್ಷಗಳು ಅದನ್ನೇ ಮಾಡಬೇಕು" ಎಂದಿದ್ದು, ಇದೇ ವೇಳೆ ಮಥುರಾ ಮತ್ತು ವಾರಣಾಸಿಯ ವಿವಾದಿತ ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ಮಿಸುವ ಯಾವುದೇ ಯೋಜನೆಯನ್ನು ಬಿಜೆಪಿ ಹೊಂದಿಲ್ಲ."ಬಿಜೆಪಿಗೆ ಇಂತಹ ಯಾವುದೇ ಆಲೋಚನೆ, ಯೋಜನೆ ಅಥವಾ ಬಯಕೆ ಇಲ್ಲ. ಯಾವುದೇ ಚರ್ಚೆಗಳು ನಡೆದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಆರ್‌ಎಸ್‌ಎಸ್‌ 1925ರ ಸೆಪ್ಟೆಂಬರ್ 27ರಂದು ಸ್ಥಾಪನೆಯಾಯಿತು. ಇದು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾಗಿದ್ದು, ಕೇಸರಿ ಪಕ್ಷವು ಲೋಕಸಭಾಯಲ್ಲಿ 2 ಸ್ಥಾನಗಳಿಂದ 303 ಸ್ಥಾನಗಳ ಜಯದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಆರ್‌ಎಸ್‌ಎಸ್‌ ಬಹುದೊಡ್ಡ ಪಾತ್ರವನ್ನು ವಹಿಸಿದೆ. ಸಂಘಟನೆಯಿಂದಾಗಿಯೇ ಬಿಜೆಪಿ ಇಷ್ಟೊಂದು ಬೃಹತ್ತಾಗಿ ಬೆಳೆಯಲು ಸಹಾಯವಾಗಿದೆ ಅನ್ನೋದ ಹಲವರ ವಾದವಾಗಿದೆ.

ಬಿಜೆಪಿಯ ಅನೇಕ ಹಿರಿಯ ನಾಯಕರು ಆರ್‌ಎಸ್‌ಎಸ್‌ನಿಂದ ಬಂದಿದ್ದಾರೆ. ಇವರು ಪಕ್ಷಕ್ಕೆ ಬರುವುದಕ್ಕೂ ಮುನ್ನ ಸಂಘದ ಕಾರ್ಯಕರ್ತರು ಮತ್ತು ಸದಸ್ಯರಾಗಿದ್ದಾರೆ. ಪ್ರಸ್ತುತ ಮೋಹನ್ ಭಾಗವತ್ ಈ ಸಂಘಟನೆಯ ನೇತೃತ್ವ ವಹಿಸಿದ್ದಾರೆ. ಸದ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷ ಆರ್‌ಎಸ್‌ಎಸ್‌ ಅವಲಂಬನೆಯನ್ನು ಮೀರಿ ನಿಂತಿದೆ ಎಂದು ಹೇಳಿರುವುದನ್ನು ಸಂಘದ ಕಾರ್ಯಕರ್ತರು ಹೇಗೆ ಸ್ವೀಕರಿಸುತ್ತಾರೋ ನೋಡಬೇಕು. ಲೋಕಸಭಾ ಚುನಾಣೆಯ ಇನ್ನೂ 2 ಹಂತದ ಮತದಾನ ಬಾಕಿ ಇದೆ. ಈ ಮತದಾನದ ಮೇಲೆ ನಡ್ಡಾ ಅವರ ಹೇಳಿಕೆ ಪರಿಣಾಮ ಬೀರುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

18ನೇ ಲೋಕಸಭಾ ಚುನಾವಣೆ ಒಟ್ಟು 7 ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ 5 ಹಂತಗಳು ಪೂರ್ಣಗೊಂಡಿವೆ. ಮೇ 26 ಮತ್ತು ಜೂನ್ 1 ರಂದು ಕ್ರಮವಾಗಿ 5 ಮತ್ತು 6ನೇ ಹಂತದ ಮತದಾನ ನಡೆಯಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024