Kannada News  /  Nation And-world  /  Bjp Muslim Outreach: What Is Bjp Muslim Outreach Program When It Will Start
ಏನಿದು ʻಮುಸಲ್ಮಾನರನ್ನು ತಲುಪುವʼ ಬಿಜೆಪಿಯ ಕಾರ್ಯಕ್ರಮ? ಯಾವಾಗ ಶುರು?
ಏನಿದು ʻಮುಸಲ್ಮಾನರನ್ನು ತಲುಪುವʼ ಬಿಜೆಪಿಯ ಕಾರ್ಯಕ್ರಮ? ಯಾವಾಗ ಶುರು?

BJP muslim outreach: ಏನಿದು ʻಮುಸಲ್ಮಾನರನ್ನು ತಲುಪುವʼ ಬಿಜೆಪಿಯ ಕಾರ್ಯಕ್ರಮ? ಯಾವಾಗ ಶುರು?

24 January 2023, 13:37 ISTHT Kannada Desk
24 January 2023, 13:37 IST

BJP muslim outreach: ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾ ಫೆ.10ರಿಂದ ಅಲ್ಪಸಂಖ್ಯಾತರನ್ನು ವಿಶೇಷವಾಗಿ ಮುಸಲ್ಮಾನರನ್ನು ತಲುಪುವ ಕೆಲಸ ಮಾಡಲಿದೆ. ಇದಕ್ಕಾಗಿ 60 ಲೋಕಸಭಾ ಕ್ಷೇತ್ರಗಳಲ್ಲಿ 5,000 ಅಲ್ಪಸಂಖ್ಯಾತರನ್ನು ಗುರುತಿಸಿ ಅವರನ್ನು ಪಕ್ಷದ ನಾಯಕರ ಜತೆಗೆ ಜೋಡಿಸಲು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕೆಲಸ ಮಾಡಲಿದೆ.

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಸ್ಲಿಂ ವಿರೋಧಿ ಪಕ್ಷ ಎಂಬ ಪ್ರತಿಪಕ್ಷಗಳ ಟೀಕೆಯ ತೀವ್ರತೆಯನ್ನು ಕಡಿಮೆ ಮಾಡಲು ಪಕ್ಷ ತೀರ್ಮಾನಿಸಿದೆ. ಇದರಂತೆ, ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾ ಫೆ.10ರಿಂದ ಅಲ್ಪಸಂಖ್ಯಾತರನ್ನು ವಿಶೇಷವಾಗಿ ಮುಸಲ್ಮಾನರನ್ನು ತಲುಪುವ ಕೆಲಸ ಮಾಡಲಿದೆ. ಇದಕ್ಕಾಗಿ 60 ಲೋಕಸಭಾ ಕ್ಷೇತ್ರಗಳಲ್ಲಿ 5,000 ಅಲ್ಪಸಂಖ್ಯಾತರನ್ನು ಗುರುತಿಸಿ ಅವರನ್ನು ಪಕ್ಷದ ನಾಯಕರ ಜತೆಗೆ ಜೋಡಿಸಲು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕೆಲಸ ಮಾಡಲಿದೆ.

ಟ್ರೆಂಡಿಂಗ್​ ಸುದ್ದಿ

ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್‌ ಸಿದ್ದಿಖಿ ಈ ಕುರಿತು ಮಾತನಾಡಿದ್ದು, ಶೇಕಡ 30 ಮತ್ತು ಅದಕ್ಕಿಂತ ಹೆಚ್ಚಿನ ಮುಸ್ಲಿಮರ ಜನಸಂಖ್ಯೆ ಇರುವ 60 ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದೇವೆ. ಆವಾಸ್ ಯೋಜನೆಯಿಂದ ಹಿಡಿದು ಹರ್ ಘರ್ ನಳ್‌ ವರೆಗೆ, ಸ್ಕಾಲರ್‌ಶಿಪ್‌ಗಳು ಮತ್ತು ಆಯುಷ್ಮಾನ್ ಭಾರತ್ ವರೆಗೆ ವಿವಿಧ ಕೇಂದ್ರೀಯ ಯೋಜನೆಗಳ ಫಲಾನುಭವಿಗಳಾಗಿ ಮುಸ್ಲಿಮರು ಹೇಗೆ ಇದ್ದಾರೆ ಎಂಬುದನ್ನು ನಾವು ಸತ್ಯ ಮತ್ತು ಅಂಕಿಅಂಶಗಳೊಂದಿಗೆ ಅವರನ್ನು ತಲುಪುತ್ತೇವೆ. ಪ್ರಧಾನಿಯವರು ರಾಜಕೀಯವನ್ನು ಹೇಗೆ ಬದಲಾಯಿಸಿದ್ದಾರೆ ಮತ್ತು ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕಾರಣದ ನಿರೂಪಣೆಯನ್ನು ಹೇಗೆ ಬದಲಾಯಿಸಿದ್ದಾರೆ ಎಂಬುದನ್ನು ನಾವು ಎತ್ತಿ ತೋರಿಸುತ್ತೇವೆ ಎಂದು ವಿವರಿಸಿದ್ದಾರೆ.

ಬಿಜೆಪಿಗೆ ಮತ ಹಾಕುವ ವಿಚಾರದಲ್ಲಿರುವ ತಮ್ಮ ಹಿಂಜರಿಕೆಯನ್ನು ನಿವಾರಿಸಲು ಆ ಸಮುದಾಯವನ್ನು ಉತ್ತೇಜಿಸುವ ಕೆಲಸವೂ ನಡೆಯಲಿದೆ. ಈ ಮೂಲಕ ಚುನಾವಣಾ ಆದ್ಯತೆಗಳ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದುವರಿಯಲು ಈ ಕಾರ್ಯಕ್ರಮ ನೆರವಾಗಲಿದೆ.

ಇದಕ್ಕಾಗಿ, ಪಕ್ಷವು ಮೊದಲ ಹಂತದಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಉತ್ತರ ಪ್ರದೇಶ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳಂತಹ ರಾಜ್ಯಗಳಲ್ಲಿ ವಿಶ್ವಾಸ ವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಲ್ಪಸಂಖ್ಯಾತ ಮೋರ್ಚಾ ಯೋಜಿಸಿದೆ; ಇದನ್ನು ನಂತರ ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಸಿದ್ಧಿಖಿ ವಿವರಿಸಿದ್ದಾರೆ.

ಪಸ್ಮಾಂಡ ಮುಸ್ಲಿಂ ನಾಯಕರು ಏನು ಹೇಳ್ತಾರೆ?

ಬಿಜೆಪಿಯ ಈ ಪ್ರಯತ್ನದ ನಡುವೆ, ಅಖಿಲ ಭಾರತ ಪಸ್ಮಾಂಡ ಮುಸ್ಲಿಂ ಮಹಾಜ್‌ನ ಸಂಸ್ಥಾಪಕ ಅಧ್ಯಕ್ಷ ಮತ್ತು ಮಾಜಿ ರಾಜ್ಯಸಭಾ ಸಂಸದ ಅಲಿ ಅನ್ವರ್ ಅನ್ಸಾರಿ, ಬಿಜೆಪಿಯ ಈ ಪ್ರಯತ್ನ ಬೂಟಾಟಿಕೆ ಬಿಟ್ಟು ಬೇರೇನೂ ಅಲ್ಲ ಎಂದು ಬಣ್ಣಿಸಿದ್ದಾರೆ.

"ನಾನು ಪ್ರಧಾನಿಗೆ (ಹೈದರಾಬಾದ್ ಎನ್ಇಸಿ ನಂತರ) ಪತ್ರ ಬರೆದಿದ್ದೇನೆ, ಒಂದು ಕಡೆ ಅವರು ಪಾಸ್ಮಾಂಡ ಮುಸ್ಲಿಮರನ್ನು ತಲುಪುವ ಬಗ್ಗೆ ಮಾತನಾಡುತ್ತಾರೆ. ಮತ್ತೊಂದೆಡೆ ಗುಂಪು ಹತ್ಯೆಯ ನಿದರ್ಶನಗಳು, 'ಲವ್ ಜಿಹಾದ್' ಆರೋಪಗಳು ಮತ್ತು 'ಘರ್ ವಾಪ್ಸಿ' ಬಗ್ಗೆ ಮಾತನಾಡುತ್ತಾರೆ. ಇದು ನಮ್ಮ ಭರವಸೆಯನ್ನು ಛಿದ್ರಗೊಳಿಸುತ್ತದೆ. ಒಳಗೊಳ್ಳುವಿಕೆಯ ಬಗ್ಗೆ ಮಾತನಾಡುವ ಅವಶ್ಯಕತೆಯಿದೆ. ಪಸ್ಮಾಂಡದ ಬಗ್ಗೆ ಮಾತನಾಡುವ ಸರ್ಕಾರವು ಬಿಲ್ಕಿಸ್ ಬಾನೋ (ಅತ್ಯಾಚಾರಿಗಳನ್ನು ಗುಜರಾತ್‌ನಲ್ಲಿ ನ್ಯಾಯಾಲಯದಿಂದ ಬಿಡುಗಡೆಗೊಳಿಸಿದೆ) ಕೂಡ ಪಸ್ಮಾಂಡ ಎಂದು ನೆನಪಿಸಿಕೊಳ್ಳಬೇಕಲ್ಲವೇ ಎಂದು ಅನ್ಸಾರಿ ಪ್ರಶ್ನಿಸಿದ್ದಾರೆ.

ಅನ್ಸಾರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ಧಿಖಿ, ಮುಸ್ಲಿಮರ ವಿರುದ್ಧದ ಹಿಂಸಾಚಾರವನ್ನು ಸರ್ಕಾರ ಕ್ಷಮಿಸುವುದಿಲ್ಲ ಮತ್ತು ಅಗತ್ಯವಿರುವಲ್ಲೆಲ್ಲ "ಕಾನೂನು ಕ್ರಮ ತೆಗೆದುಕೊಳ್ಳುತ್ತದೆ" ಎಂದು ಹೇಳಿದರು.

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಎಂದ ಕೂಡಲೇ ಅಲ್ಪಸಂ‍ಖ್ಯಾತ ವಿಶೇಷವಾಗಿ ಮುಸಲ್ಮಾನ ವಿರೋಧಿ ಪಕ್ಷ ಎಂಬ ಇಮೇಜ್‌ ಸಾಮಾನ್ಯ ಆಲೋಚನೆಯ ಮನಸ್ಸಿನವರಲ್ಲಿ ಮೂಡುವಂಥದ್ದು. ಈ ಇಮೇಜ್‌ನಿಂದ ಹೊರಬರಬೇಕು ಎಂಬ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಇದೆ. ಇದಕ್ಕೆ ಪೂರಕ ವಿವರ ಒಂದು ಬಹಿರಂಗವಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ