ಕನ್ನಡ ಸುದ್ದಿ  /  Nation And-world  /  Bjp National Executive Meeting In Delhi On Jan 16-17; Extension For Nadda As Party Prez Likely Check Details Here

BJP national executive meeting: ದೆಹಲಿಯಲ್ಲಿ ಜ.16-17ಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ; ಜೆ.ಪಿ.ನಡ್ಡಾಗೆ ಮತ್ತೊಂದು ಅವಧಿ?

BJP national executive meeting: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜನವರಿ 16 ಮತ್ತು 17ರಂದು ದೆಹಲಿಯಲ್ಲಿ ನಡೆಯಲಿದೆ. ಬಿಜೆಪಿಯ ರಾಷ್ಟ್ರೀಯ ಅ‍ಧ್ಯಕ್ಷರಾಗಿ ಜೆ.ಪಿ.ನಡ್ಡಾ ಮತ್ತೊಂದು ಅವಧಿಗೆ ಮುಂದುವರಿಯುವ ನಿರೀಕ್ಷೆ ಇದೆ. ಕಾರ್ಯಕಾರಿಣಿ ಸಭೆಯ ಅಜೆಂಡಾ ಮತ್ತು ಇತರೆ ವಿವರಕ್ಕೆ ವರದಿ ಗಮನಿಸಿ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (Pappi Sharma /ANI)

ನವದೆಹಲಿ: ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜನವರಿ 16 ಮತ್ತು 17ರಂದು ದೆಹಲಿಯಲ್ಲಿ ನಡೆಯಲಿದೆ. ಈ ಕಾರ್ಯಕಾರಿಣಿ ಸಭೆಯಲ್ಲೇ ಜೆ.ಪಿ. ನಡ್ಡಾ ಅವರಿಗೆ ಮತ್ತೊಂದು ಅವಧಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಹೊಣೆಗಾರಿಕೆಯನ್ನು ವಹಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ಮಂಗಳವಾರ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಸದ್ಯದಲ್ಲೇ ಎದುರಾಗುತ್ತಿರುವ ಅಸೆಂಬ್ಲಿ ಚುನಾವಣೆ ಮತ್ತು ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷದ ಪ್ರಮುಖ ಸಂಘಟನಾ ಸಮಿತಿ ಸಭೆ ನಡೆಯುತ್ತಿದೆ. ಇದರಲ್ಲಿ ಪಕ್ಷದ ಚುನಾವಣಾ ತಂತ್ರಗಾರಿಕೆ ಮತ್ತು ಇತರೆ ಪ್ರಮುಖ ವಿಚಾರಗಳು ಚರ್ಚೆಗೆ ಒಳಗಾಗಲಿವೆ.

ಜೆ.ಪಿ.ನಡ್ಡಾ ಅವರ ಮೂರು ವರ್ಷದ ರಾಷ್ಟ್ರೀಯ ಅಧ್ಯಕ್ಷರ ಅವಧಿ ಈ ತಿಂಗಳ ಕೊನೆಗೆ ಮುಕ್ತಾಯವಾಗುತ್ತಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಈ ಹೊಣೆಗಾರಿಕೆ ಮುಂದುವರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜಿ-20 ರ ಭಾರತದ ಅಧ್ಯಕ್ಷತೆಯನ್ನು ಗುರುತಿಸಲು ಸರ್ಕಾರವು ಯೋಜಿಸಿರುವ ದೇಶವ್ಯಾಪಿ ಕಾರ್ಯಕ್ರಮಗಳ ಕುರಿತಾದ ಚರ್ಚೆಯು ಸಭೆಯ ಪ್ರಮುಖ ಅಂಶಗಳಲ್ಲಿ ಒಂದಾಗಿರಬಹುದು. ಈ ನಿಟ್ಟಿನಲ್ಲಿ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳನ್ನು ಶ್ಲಾಘಿಸಲು ಮತ್ತು ತೊಡಗಿಸಿಕೊಳ್ಳಲು ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯವೈಖರಿ ಕೂಡ ಸಭೆಯಲ್ಲಿ ಚರ್ಚೆಗೆ ಬರಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಏಪ್ರಿಲ್-ಮೇ 2024 ರಲ್ಲಿ ಲೋಕಸಭೆ ಚುನಾವಣೆ ಮುಗಿದ ನಂತರ ಪಕ್ಷದ ಆಂತರಿಕ ಚುನಾವಣೆಯ ಪ್ರಕ್ರಿಯೆಯು ಪ್ರಾರಂಭವಾಗಬಹುದು. ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಮತ್ತು 2024ರಲ್ಲಿ ನಡೆಯುವ ಎಲ್ಲ ಪ್ರಮುಖ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಾಂಸ್ಥಿಕ ಚುನಾವಣೆಯನ್ನು ಮುಂದೂಡುವುದು ಕೂಡ ಸಭೆಯಲ್ಲಿ ಚರ್ಚೆಗೆ ಬರಬಹುದು.

ಪಕ್ಷದ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೂ 2019ರ ಚುನಾವಣೆ ವೇಳೆ ಅಧಿಕಾರಾವಧಿ ವಿಸ್ತರಣೆ ಸಿಕ್ಕಿತ್ತು. ಅವರು ಲೋಕಸಭೆ ಚುನಾವಣೆಗೆ ಪಕ್ಷವನ್ನು ಮುನ್ನಡೆಸುವ ಸಿದ್ಧತೆಯನ್ನು ಮಾಡಿದ್ದರು. ಆ ಸಂದರ್ಭದಲ್ಲಿ ಲೋಕಸಭೆಯ ಚುನಾವಣೆಯ ನಂತರವೇ, ಬಿಜೆಪಿಯ ಸಾಂಸ್ಥಿಕ ಚುನಾವಣೆಗಳು ನಡೆದವು. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಎರಡನೇ ಅವಧಿಯಲ್ಲಿ ಕೇಂದ್ರ ಸಂಪುಟಕ್ಕೆ ಶಾ ಸೇರ್ಪಡೆಗೊಳ್ಳುವುದರೊಂದಿಗೆ ನಡ್ಡಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ನಡ್ಡಾ, ಅನುಭವಿ ಸಾಂಸ್ಥಿಕ ವ್ಯಕ್ತಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ನಾಯಕತ್ವದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸವನ್ನು ಹೊಂದಿರುವುದು ಪ್ಲಸ್‌ ಪಾಯಿಂಟ್.‌ ಹಿಂದಿನ ಅವಧಿಯಲ್ಲಿ ಬಿಜೆಪಿಯಲ್ಲಿ ಅವರು ತುಂಬಿದ್ದ ಸಂಘಟನಾ ಗತಿ ಮತ್ತು ಕ್ರಿಯಾಶೀಲತೆಯನ್ನು ನಡ್ಡಾ ಉಳಿಸಿಕೊಂಡಿದ್ದಾರೆ ಎಂಬುದು ಪಕ್ಷದ ಹಲವು ನಾಯಕರು ಬಲವಾದ ನಂಬಿಕೆ ಎಂದು ಮೂಲಗಳು ಹೇಳಿವೆ.

ಗಮನಾರ್ಹ ಸುದ್ದಿ

Refrigerator price hike?: ರೆಫ್ರಿಜರೇಟರ್‌ ಬೆಲೆ ಏರಿಕೆ ಆಗುತ್ತಾ- ಎಷ್ಟಾಗಬಹುದು?; ಫ್ರಿಜ್, ಫ್ರೀಜರ್‌ಗೆ ಪ್ರತ್ಯೇಕ ಸ್ಟಾರ್‌ ಲೇಬಲ್‌?

Refrigerator price hike?: ರೆಫ್ರಿಜರೇಟರ್‌, ಫ್ರಿಜ್‌, ‍ಫ್ರೀಜರ್‌ಗಳ ಬೆಲೆ ಏರಿಕೆಯನ್ನು ನಿರೀಕ್ಷಿಸಬಹುದು. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಯ ಪರಿಷ್ಕೃತ ಮಾನದಂಡಗಳು ಈ ವರ್ಷದ ಜನವರಿ 1 ರಿಂದ ಅನ್ವಯವಾಗಿದ್ದು, ರೆಫ್ರಿಜರೇಟರ್‌ ಬೆಲೆ ಶೇಕಡ 5 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ವಿವರ ವರದಿ ಇಲ್ಲಿದೆ ಕ್ಲಿಕ್‌ ಮಾಡಿ.

IPL_Entry_Point