ಕನ್ನಡ ಸುದ್ದಿ  /  Nation And-world  /  Bjp Slams Opposition Alliance India For Its Decision To Boycott News Anchors Shows Sudhir Chaudhary Arnab Goswami Mgb

'ಇಂಡಿಯಾ'ದಿಂದ ನ್ಯೂಸ್​ ಆಂಕರ್​ಗಳ ಬಹಿಷ್ಕಾರ; ಇದು 'ಘಮಾಂಡಿಯಾ'ದ ಸರ್ವಾಧಿಕಾರಿ ಮನಸ್ಥಿತಿ ಎಂದ ಬಿಜೆಪಿ

INDIA alliance: 14 ಸುದ್ದಿ ನಿರೂಪಕರ ಕಾರ್ಯಕ್ರಮಗಳಲ್ಲಿ ಇಂಡಿಯಾದ ಯಾವುದೇ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಪ್ಯಾನಲಿಸ್ಟ್‌ಗಳಾಗಿ ಭಾಗವಹಿಸಲು ಕಳುಹಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

'ಇಂಡಿಯಾ'ದಿಂದ ನ್ಯೂಸ್​ ಆಂಕರ್​ಗಳ ಬಹಿಷ್ಕಾರ
'ಇಂಡಿಯಾ'ದಿಂದ ನ್ಯೂಸ್​ ಆಂಕರ್​ಗಳ ಬಹಿಷ್ಕಾರ

ನವದೆಹಲಿ: ಕೆಲವು ಸುದ್ದಿ ನಿರೂಪಕರು ನಡೆಸುತ್ತಿರುವ ದೂರದರ್ಶನ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಪ್ರತಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ (I.N.D.I.A.) ತೆಗೆದುಕೊಂಡಿದ್ದು, ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಟ್ರೆಂಡಿಂಗ್​ ಸುದ್ದಿ

ನಿನ್ನೆ (ಸೆ.14, ಗುರುವಾರ) ನಡೆದ ಇಂಡಿಯಾ ಬ್ಲಾಕ್‌ನ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರಂತೆ 14 ಸುದ್ದಿ ನಿರೂಪಕರ ಕಾರ್ಯಕ್ರಮಗಳಲ್ಲಿ ಇಂಡಿಯಾದ ಯಾವುದೇ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಪ್ಯಾನಲಿಸ್ಟ್‌ಗಳಾಗಿ ಭಾಗವಹಿಸಲು ಕಳುಹಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂಡಿಯಾ ಒಕ್ಕೂಟ ಹಂಚಿಕೊಂಡ ಸುದ್ದಿ ನಿರೂಪಕರ ಲಿಸ್ಟ್​ನಲ್ಲಿ ರಿಪಬ್ಲಿಕ್ ನೆಟ್‌ವರ್ಕ್‌ನ ಅರ್ನಾಬ್ ಗೋಸ್ವಾಮಿ, ಆಜ್ ತಕ್‌ನ ಸುಧೀರ್ ಚೌಧರಿ, ನ್ಯೂಸ್ 18 ಹಿಂದಿಯ ಅಮಿಶ್ ದೇವಗನ್, ಟೈಮ್ಸ್‌ ನೌ ನ ನವಿಕ ಕುಮಾರ್, ಇಂಡಿಯಾಟುಡೇ ಗ್ರೂಪ್‌ನ ಗೌರವ್ ಸಾವಂತ್ ಕೂಡ ಸೇರಿದ್ದಾರೆ.

ಆ 14 ಸುದ್ದಿ ನಿರೂಪಕರ ಪಟ್ಟಿ ಇಲ್ಲಿದೆ

1. ಅದಿತಿ ತ್ಯಾಗಿ

2. ಅಮನ್ ಚೋಪ್ರಾ

3. ಅಮೀಶ್ ದೇವಗನ್

4. ಆನಂದ್ ನರಸಿಂಹನ್

5. ಅರ್ನಬ್ ಗೋಸ್ವಾಮಿ

6. ಅಶೋಕ್ ಶ್ರೀವಾಸ್ತವ

7. ಚಿತ್ರ ತ್ರಿಪಾಠಿ

8. ಗೌರವ್ ಸಾವಂತ್

9. ನವಿಕಾ ಕುಮಾರ್

10. ಪ್ರಾಚಿ ಪರಾಶರ್

11. ರುಬಿಕಾ ಲಿಯಾಖತ್

12. ಶಿವ್ ಅರೂರ್

13. ಸುಧೀರ್ ಚೌಧರಿ

14. ಸುಶಾಂತ್ ಸಿನ್ಹಾ

"ಕೆಲವು ಆ್ಯಂಕರ್‌ಗಳು ಪ್ರಚೋದನಕಾರಿ ಚರ್ಚೆಗಳನ್ನು ನಡೆಸುತ್ತಾರೆ. ನಾವು ಅವರ ಪಟ್ಟಿಯನ್ನು ತಯಾರಿಸುತ್ತೇವೆ ಮತ್ತು ಇಂಡಿಯಾ ಮೈತ್ರಿಕೂಟದ ಸದಸ್ಯರು ಅವರ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸುತ್ತಾರೆ" ಎಂದು ಆಮ್​ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಈ ಹಿಂದೆ ಹೇಳಿದ್ದರು.

ಸಮನ್ವಯ ಸಮಿತಿ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ, ರಾಜ್ಯಗಳಲ್ಲಿ ಭಾರತೀಯ ಪಕ್ಷಗಳೊಂದಿಗೆ ಚರ್ಚಿಸಲು ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸುವ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು. ಸಭೆಯಲ್ಲಿ ಹಾಜರಿದ್ದ 12 ಸದಸ್ಯ ಪಕ್ಷಗಳು ಕೂಡ ಒಕ್ಕೂಟದ ಮೊದಲ ಸಾರ್ವಜನಿಕ ಸಭೆಯನ್ನು ಭೋಪಾಲ್‌ನಲ್ಲಿ ನಡೆಸಲು ನಿರ್ಧರಿಸಿವೆ.

ಕಿಡಿಕಾರಿದ ಬಿಜೆಪಿ

ಇಂಡಿಯಾ ಒಕ್ಕೂಟದ ನಿರ್ಧಾರವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಇದು 'ಘಮಾಂಡಿಯಾ' ಒಕ್ಕೂಟದ ಸರ್ವಾಧಿಕಾರಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದೆ. "ಪತ್ರಕರ್ತರ ಬಹಿಷ್ಕಾರವು ಅತ್ಯಂತ ಕೆಟ್ಟ ರಾಜಕೀಯ ಅಸಹಿಷ್ಣುತೆಯಾಗಿದೆ. ಇದು ವಿರೋಧ ಪಕ್ಷಗಳ ಹತಾಶೆಯನ್ನು ಪ್ರದರ್ಶಿಸುತ್ತದೆ. ಭಾರತದ ಜನರು ಅವರನ್ನು I.ND.I.A ಮೈತ್ರಿಯಿಂದ ಬಹಿಷ್ಕರಿಸಿದ ರಾಷ್ಟ್ರೀಯವಾದಿ ನಿರೂಪಕರು ಎಂದು ಕಾಣುತ್ತಾರೆ" ಎಂದು ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಬಹಿಷ್ಕಾರಕ್ಕೆ ಒಳಗಾದ ನವಿಕಾ ಕುಮಾರ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಇಂಡಿಯಾ ನಿರ್ಧಾರಕ್ಕೆ ಸಾಥ್​

ಇನ್ನು ಸೋಷಿಯಲ್​ ಮೀಡಿಯಾದಲ್ಲಿ ಇಂಡಿಯಾ ನಿರ್ಧಾರಕ್ಕೆ ಕೆಲವರು ಸಾಥ್​ ನೀಡಿದ್ದಾರೆ. ಇವರನ್ನು ಬಹಿಷ್ಕರಿಸಿದರೆ ಸಾಕಾಗುವುದಿಲ್ಲ, ಸರ್ಕಾರದಿಂದ ಈ ನ್ಯೂಸ್​ ಚಾನಲ್​ಗಳಿಗೆ ಬರುವ ಜಾಹೀರಾತನ್ನು ತಪ್ಪಿಸಿ ಎಂದು ಕೆಲವರು ಆಗ್ರಹಿಸಿದ್ದಾರೆ.

ವಿಭಾಗ