ಕನ್ನಡ ಸುದ್ದಿ  /  Nation And-world  /  Bjp Takes Massive Lead In Gujarat And Himachal Pradesh Witnesses Neck To Neck Fight In Early Trends

Assembly Elections 2022 Results: ಗುಜರಾತ್‌ನಲ್ಲಿ ಬಿಜೆಪಿ ನಾಗಾಲೋಟ: ಹಿಮಾಚಲದಲ್ಲಿ ಬಿರುಸಿನ ಸ್ಪರ್ಧೆ: ಹೇಗಿದೆ ಟ್ರೆಂಡ್?‌

ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕಾಗಿ ಇಡೀ ದೇಶ ಕಾಯುತ್ತಿದ್ದು, ಎರಡೂ ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಭವಿಷ್ಯದ ದಿಕ್ಸೂಚಿಯಾಗಬಹುದಾದ ಉಭಯ ರಾಜ್ಯಗಳ ಫಲಿತಾಂಶದತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಆರಂಭಿಕ ಟ್ರೆಂಡ್‌ ಹೇಗಿದೆ ಎಂಬುದನ್ನು ಗಮನಿಸುವುದಾದರೆ...

ಮತ ಎಣಿಕೆ
ಮತ ಎಣಿಕೆ (HT_PRINT)

ನವದೆಹಲಿ: ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕಾಗಿ ಇಡೀ ದೇಶ ಕಾಯುತ್ತಿದ್ದು, ಎರಡೂ ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಭವಿಷ್ಯದ ದಿಕ್ಸೂಚಿಯಾಗಬಹುದಾದ ಉಭಯ ರಾಜ್ಯಗಳ ಫಲಿತಾಂಶದತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಆರಂಭಿಕ ಟ್ರೆಂಡ್‌ ಹೇಗಿದೆ ಎಂಬುದನ್ನು ಗಮನಿಸುವುದಾದರೆ...

ಗುಜರಾತ್:‌

ಗುಜರಾತ್‌ನಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ, ಆರಂಭದಿಂದಲೇ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಸದ್ಯದ ಅಂಕಿ ಅಂಶಗಳ ಪ್ರಕಾರ ಬಿಜೆಪಿ ಸ್ಥಾನಗಳಲ್ಲಿ 153 ಮುನ್ನಡೆ ಸಾಧಿಸಿದೆ. ಇದು ಕಳೆದ ಬಾರಿಗಿಂತ 54 ಅಧಿಕ ಎಂಬುದು ವಿಶೇಷ.

ಗುಜರಾತ್‌ ಬಿಜೆಪಿ ಘಟಕದಲ್ಲಿ ಈಗಾಗಲೇ ಸಂತಸದ ಹೊನಲು ಹರಿಯುತ್ತಿದ್ದು, ಅಲ್ಲಲ್ಲಿ ಸಂಭ್ರಮಾಚರಣೆಗಳು ಕಂಡುಬರುತ್ತಿವೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದ್ದು, ಆ ಬಳಿಕ ಬಿಜೆಪಿ ಸಂಭ್ರಮಾಚರಣೆ ಅಧಿಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್‌ ಕೇವಲ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇದು ಕಳೆದ ಬಾರಿಗಿಂತ 59 ಕಡಿಮೆ ಎಂಬುದು ಇಲ್ಲಿ ಉಲ್ಲೇಖನೀಯ. ಕಾಂಗ್ರೆಸ್‌ ಪಾಳೆಯದಲ್ಲಿ ನಿರಾಶೆಯ ಕಾರ್ಮೋಡ ಕವಿದಿದ್ದು, ಸೋಲಿನ ಕಾರಣಗಳ ಬಗ್ಗೆ ಈಗಿನಿಂದಲೇ ವಿಮರ್ಶೆಗಳು ಶುರುವಾಗುವ ಲಕ್ಷಣಗಳು ಇವೆ.

ಅದೇ ರೀತಿ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಆಮ್‌ ಆದ್ಮಿ ಪಕ್ಷ(ಆಪ್) 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ಬಾರಿ ಶೂನ್ಯ ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಆಪ್‌, ಈ ಬಾರಿ ಎಷ್ಟೇ ಸೀಟುಗಳನ್ನು ಗೆದ್ದರೂ ಅದು ಪಕ್ಷಕ್ಕೆ ಅನುಕೂಲವೇ ಆಗಲಿದೆ.

ಹಿಮಾಚಲ ಪ್ರದೇಶ:

ಹಿಮಾಚಲ ಪ್ರದೇಶದಲ್ಲಿ ಪರಿಸ್ಥಿತಿ ಕೊಂಚ ಭಿನ್ನವಾಗಿದ್ದು, ಕಾಂಗ್ರೆಸ್‌ ಕ್ಷೇತ್ರಗಳಲ್ಲಿ 34 ಮುನ್ನಡೆ ಸಾಧಿಸಿದೆ. ಇದು ಕಳೆದ ಬಾರಿಗಿಂತ 13 ಅಧಿಕ ಎಂಬುದು ವಿಶೇಷ.

ಅದೇ ರೀತಿ ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸ್ಥಾನಗಳಲ್ಲಿ 30 ಮುನ್ನಡೆ ಸಾಧಿಸಿದೆ. ಇದು ಕಳೆದ ಬಾರಿಗಿಂತ 14

ಕಡಿಮೆ ಎಂಬುದು ಇಲ್ಲಿ ಉಲ್ಲೇಖನೀಯ. ಎರಡನೇ ಬಾರಿ ಅಧಿಕಾರದ ಗದ್ದುಗೆಗೆ ಏರಿ ಇತಿಹಾಸ ನಿರ್ಮಿಸುವ ಬಿಜೆಪಿ ಕನಸು, ಹಿಮಾಚಲ ಪ್ರದೇಶದಲ್ಲಿ ಬಹುತೇಕ ಈಡೇರದು ಎನ್ನಲಾಗುತ್ತಿದೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ಅಷ್ಟಾಗಿ ಸದ್ದು ಮಾಡದ ಆಪ್‌, ಇದುವರೆಗೂ ಒಂದೂ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿಲ್ಲ. ಬಹುಶ: ಆಪ್‌ಗೆ ಪ್ರಸ್ತುತವಾಗಿ ಹಿಮಾಚಲ ಪ್ರದೇಶದ ಬಾಗಿಲು ಮುಚ್ಚಲಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ಸದ್ಯ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆ ಇದೆ. ಗುಜರಾತ್‌ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಗಳು ದೇಶದಲ್ಲಿ ನಡೆಯಲಿರುವ ಭವಿಷ್ಯದ ವಿವಿಧ ರಾಜ್ಯಗಳ ವಿಧಾನಸಭೆ ಚುನಾಔನೆ ಮತ್ತು ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇಂದಿನ ಪ್ರಮುಖ ಸುದ್ದಿಗಳು

Gujarat Assembly election 2022 results: ಗುಜರಾತ್‌ ಚುನಾವಣಾ ಫಲಿತಾಂಶವನ್ನು ಇಸಿಐ ವೆಬ್‌ನಲ್ಲಿ ನಿಖರವಾಗಿ ಗಮನಿಸುವುದು ಹೇಗೆ?

ಈ ದಿನವೇ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ. ಸಂಜೆಯೊಳಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಆಯೋಗದ ವೆಬ್‌ನಲ್ಲಿ ಮತ ಎಣಿಕೆಯನ್ನು ನಿಖರವಾಗಿ ಟ್ರ್ಯಾಕ್‌ ಮಾಡುವುದು ಹೇಗೆ (How to track accurate Gujarat Election 2022 cote counting updates) ಎಂಬುದರ ವಿವರ ಇಲ್ಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Himachal Election 2022 vote counting: ಹಿಮಾಚಲದ ಚುನಾವಣಾ ಫಲಿತಾಂಶ ಇಂದು; ಇಸಿಐ ವೆಬ್‌ನಲ್ಲಿ ಮತ ಎಣಿಕೆ ಟ್ರ್ಯಾಕ್‌ ಮಾಡುವುದು ಹೇಗೆ?

ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಧಿಕೃತ ವೆಬ್‌ಸೈಟ್‌ನಲ್ಲಿ ಹಿಮಾಚಲ ಪ್ರದೇಶ ಚುನಾವಣೆ 2022ರ ಫಲಿತಾಂಶ ಮತ್ತು ನಿಖರ ಮತ ಎಣಿಕೆಯ ಅಪ್ಡೇಟ್ಸ್‌ ಲಭ್ಯವಿದೆ. ಇದನ್ನು ಟ್ರ್ಯಾಕ್‌ ಮಾಡುವುದು ಹೇಗೆ ಇಲ್ಲಿದೆ ವಿವರ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.