ದೆಹಲಿ ಗದ್ದುಗೆ ಬಿಜೆಪಿಗೆ; ಮತದಾರರಿಗೆ ಬಿಜೆಪಿ ಕೊಟ್ಟಿರುವ ಗ್ಯಾರೆಂಟಿಗಳಿವು, ಆರೋಗ್ಯ, ಶಿಕ್ಷಣ, ಸಿಲಿಂಡರ್ ಇನ್ನೂ ಎಷ್ಟೋ ಫ್ರೀ ಫ್ರೀ ಫ್ರೀ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಗದ್ದುಗೆ ಬಿಜೆಪಿಗೆ; ಮತದಾರರಿಗೆ ಬಿಜೆಪಿ ಕೊಟ್ಟಿರುವ ಗ್ಯಾರೆಂಟಿಗಳಿವು, ಆರೋಗ್ಯ, ಶಿಕ್ಷಣ, ಸಿಲಿಂಡರ್ ಇನ್ನೂ ಎಷ್ಟೋ ಫ್ರೀ ಫ್ರೀ ಫ್ರೀ

ದೆಹಲಿ ಗದ್ದುಗೆ ಬಿಜೆಪಿಗೆ; ಮತದಾರರಿಗೆ ಬಿಜೆಪಿ ಕೊಟ್ಟಿರುವ ಗ್ಯಾರೆಂಟಿಗಳಿವು, ಆರೋಗ್ಯ, ಶಿಕ್ಷಣ, ಸಿಲಿಂಡರ್ ಇನ್ನೂ ಎಷ್ಟೋ ಫ್ರೀ ಫ್ರೀ ಫ್ರೀ

ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 40ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿರುವ ಬಿಜೆಪಿ, ತಾನು ನೀಡಿದ ಚುನಾವಣಾ ಭರವಸೆಗಳನ್ನು ಈಡೇರಿಸುವ ಕಡೆಗೆ ಗಮನಹರಿಸಬೇಕಾಗಿದೆ. ದೆಹಲಿ ಮತದಾರರಿಗೆ ಆರೋಗ್ಯ, ಶಿಕ್ಷಣ, ಸಿಲಿಂಡರ್ ಇನ್ನೂ ಎಷ್ಟೋ ಗ್ಯಾರೆಂಟಿಗಳನ್ನು ಘೋಷಿಸಿತ್ತು. ಅವುಗಳ ಕಡೆಗೊಂದು ನೋಟ ಇಲ್ಲಿದೆ.

ದೆಹಲಿ ಮತದಾರರಿಗೆ ಬಿಜೆಪಿ ಕೊಟ್ಟಿರುವ ಗ್ಯಾರೆಂಟಿಗಳ ಪೈಕಿ ಆರೋಗ್ಯ, ಶಿಕ್ಷಣ, ಸಿಲಿಂಡರ್ ಇನ್ನೂ ಎಷ್ಟೋ ಫ್ರೀ ಫ್ರೀ ಫ್ರೀ. (ಸಾಂಕೇತಿಕ ಚಿತ್ರ)
ದೆಹಲಿ ಮತದಾರರಿಗೆ ಬಿಜೆಪಿ ಕೊಟ್ಟಿರುವ ಗ್ಯಾರೆಂಟಿಗಳ ಪೈಕಿ ಆರೋಗ್ಯ, ಶಿಕ್ಷಣ, ಸಿಲಿಂಡರ್ ಇನ್ನೂ ಎಷ್ಟೋ ಫ್ರೀ ಫ್ರೀ ಫ್ರೀ. (ಸಾಂಕೇತಿಕ ಚಿತ್ರ)

ನವದಹಲಿ: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 70 ಸ್ಥಾನಗಳ ಪೈಕಿ 40 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿರುವ ಬಿಜೆಪಿ, ತಾನು ನೀಡಿದ ಚುನಾವಣಾ ಭರವಸೆಗಳನ್ನು ಈಡೇರಿಸುವ ಕಡೆಗೆ ಗಮನಹರಿಸಬೇಕಾಗಿದೆ. ದೆಹಲಿ ಮತದಾರರಿಗೆ ಬಿಜೆಪಿ, ಆರೋಗ್ಯ, ಶಿಕ್ಷಣ, ಎಲ್‌ಪಿಜಿ ಸಿಲಿಂಡರ್ ಸೇರಿ ಹತ್ತಾರು ಉಚಿತ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಅವುಗಳನ್ನು ದಾಖಲಿಸಿದ್ದು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಫ್ರೀ ಫ್ರೀ ಫ್ರೀ ಎಂದು ಬಿಜೆಪಿ ದೆಹಲಿಯಲ್ಲಿ ಮತದಾರರನ್ನು ಓಲೈಸಲು ಘೋಷಿಸಿತ್ತು.

ದೆಹಲಿ ಮತದಾರರಿಗೆ ಬಿಜೆಪಿ ಕೊಟ್ಟಿರುವ ಗ್ಯಾರೆಂಟಿ- 16 ಸಂಕಲ್ಪಗಳು

ದೆಹಲಿ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ “ವಿಕಸಿತ ದೆಹಲಿ ಸಂಕಲ್ಪ ಪತ್ರ- 2025" ಎಂಬ ಶೀರ್ಷಿಕೆಯ ಪ್ರಣಾಳಿಕೆಯನ್ನು ಬಿಜೆಪಿ ಪ್ರಕಟಿಸಿದೆ. ಅದರಲ್ಲಿ ವಿಕಸಿತ ದೆಹಲಿಗಾಗಿ 16 ಸಂಕಲ್ಪಗಳನ್ನು ಅದು ಉಲ್ಲೇಖಿಸಿದೆ. ಈ ಸಂಕಲ್ಪ ಪತ್ರದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಪಟ್ಟಿಯನ್ನೂ ಒದಗಿಸಿದೆ. ಅಷ್ಟೇ ಅಲ್ಲ, ದೆಹಲಿಗೂ ಅನ್ವಯಿಸುವ ಕೇಂದ್ರದ ಯೋಜನೆಗಳ ವಿವರಗಳನ್ನೂ ಒದಗಿಸಿತ್ತು.

ಇದಾದ ಬಳಿಕ ದೆಹಲಿಯಲ್ಲಿ ಕಳೆದ 10 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಎಎಪಿ ದುರಾಡಳಿತ ನಡೆಸಿದ ಎಂದು ದೂರಿರುವ ಬಿಜೆಪಿ, ಅವುಗಳನ್ನು ಹೈಲೈಟ್ ಮಾಡಿ ಸಂಕಲ್ಪ ಪತ್ರದಲ್ಲಿ ತೋರಿಸಿತ್ತು. ಅದಾಗಿ ನಂತರದ ಪುಟಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕಿರುಪರಿಚಯವನ್ನು ನೀಡಿತ್ತು.

ದೆಹಲಿಗರಿಗೆ ಆರೋಗ್ಯ, ಶಿಕ್ಷಣ, ಸಿಲಿಂಡರ್ ಇನ್ನೂ ಎಷ್ಟೋ ಫ್ರೀ ಫ್ರೀ ಫ್ರೀ

1) ಮಹಿಳಾ ಸಮೃದ್ಧಿ ಯೋಜನೆ - ಬಡ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಹಣಕಾಸಿನ ನೆರವು

2) ಮುಖ್ಯಮಂತ್ರಿ ಮಾತೃತ್ವ ಸುರಕ್ಷಾ ಯೋಜನೆ - ಪ್ರತಿ ಗರ್ಭಿಣಿ ಮಹಿಳೆಗೆ 6 ಪೌಷ್ಠಿಕ ಆಹಾರಗಳ ಕಿಟ್ ಮತ್ತು 21,000 ರೂಪಾಯಿ ನೆರವು

3) ಎಲ್‌ಪಿಜಿ ಸಿಲಿಂಡರ್ - ಬಡ ಕುಟುಂಬದ ಮಹಿಳೆಗೆ ಎಲ್‌ಪಿಜಿ ಸಿಲಿಂಡರ್ ಖರೀದಿಗೆ 500 ರೂಪಾಯಿ, ಹೋಲಿ ಮತ್ತು ದೀಪಾವಳಿಗೆ ತಲಾ ಒಂದು ಉಚಿತ ಸಿಲಿಂಡರ್‌

4) ಆಯುಷ್ಮಾನ್ ಭಾರತ್ ಯೋಜನೆ- ಬಡವರಿಗೆ ಅನುಕೂಲವಾಗುವಂತೆ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಅನುಮೋದನೆ.

5) ಆಯುಷ್ಮಾನ್‌ ಭಾರತ್‌ ಯೋಜನೆ- ಇದರಲ್ಲಿ 5 ಲಕ್ಷ ರೂ ತನಕ ಉಚಿತ ಆರೋಗ್ಯ ಸೇವೆ ಸಿಗಲಿದ್ದು, ರಾಜ್ಯ ಸರ್ಕಾರ ಇನ್ನೂ 5 ಲಕ್ಷ ರೂಪಾಯಿಯ ಆರೋಗ್ಯ ಸೇವೆಯನ್ನು ಸೇರಿಸಲಿದೆ. 70+ ಮೇಲ್ಪಟ್ಟ ವರ್ಷದವರಿಗೆ ಉಚಿತ ಒಪಿಡಿ ಮತ್ತು ಡಯಾಗ್ನಾಸ್ಟಿಕ್ಸ್ ಸೇವೆ.

6) ವೃದ್ಧಾಪ್ಯ ಪಿಂಚಣಿ ಏರಿಕೆ - 60- 70 ವರ್ಷದೊಳಗಿನವರ ಪಿಂಚಣಿಯನ್ನು 2000 ರೂನಿಂದ 2500 ರೂಪಾಯಿಗೆ ಏರಿಸುವುದು, 70+ ವರ್ಷ ಮೇಲ್ಪಟ್ಟವರು, ವಿಧವೆಯರು, ಅಂಗವಿಕಲರ ಪಿಂಚಣಿಯನ್ನು 2500 ರೂಪಾಯಿಯಿಂದ 3000 ರೂಪಾಯಿಗೆ ಏರಿಸುವುದು.

7) ಅಟಲ್ ಕ್ಯಾಂಟೀನ್: ಜೆಜೆ ಕ್ಲಸ್ಟರ್‌ಗಳಲ್ಲಿ ಅಟಲ್ ಕ್ಯಾಂಟೀನ್ ಸ್ಥಾಪನೆ, 5 ರೂಪಾಯಿಗೆ ಪೌಷ್ಟಿಕಾಂಶಯುತ ಊಟ, ಉಪಾಹಾರ ಪೂರೈಕೆ

8) ಸಮಸ್ಯೆಗಳಿಗೆ ಪರಿಹಾರ: ಆರೋಗ್ಯ ಶಿಕ್ಷಣ,ವಿದ್ಯುತ್, ನೀರು, ಸಾರಿಗೆ ಸಮಸ್ಯೆಗಳಿಗೆ ನೆರೆ ರಾಜ್ಯಗಳೊಂದಿಗೆ ಸಮಾಲೋಚಿಸಿ ಸೂಕ್ತ ಪರಿಹಾರ

9) ಉಚಿತ ಶಿಕ್ಷಣ: ದೆಹಲಿ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಬಡವರಿಗೆ ಉಚಿತ ಶಿಕ್ಷಣ

10) ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ನೆರವು- ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಎದುರಿಸುವ ಯುವಜನರಿಗೆ 15,000 ರೂಪಾಯಿ ಏಕ ಕಂತಿನ ನೆರವು. ಎರಡು ಸಲ ಪರೀಕ್ಷೆ ಬರೆದ ಹೋಗುವುದಕ್ಕೆ ಸಾರಿಗೆ ಮತ್ತು ಅರ್ಜಿ ಶುಲ್ಕ ಭರಿಸುವ ಭರವಸೆ.

11) ಎಸ್‌ಸಿ ವಿದ್ಯಾರ್ಥಿಗಳಿಗೆ ಸ್ಟೈಫೆಂಡ್ - ಟೆಕ್ನಿಕಲ್, ವೊಕೇಶನಲ್ ಶಿಕ್ಷಣ ಪಡೆಯುವ ಎಸ್‌ಸಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 1000 ರೂಪಾಯಿ ಸ್ಪೈಫೆಂಡ್ ಒದಗಿಸುವ ಡಾ ಬಿ ಆರ್ ಅಂಬೇಡ್ಕರ್ ಸ್ಟೈಫೆಂಡ್ ಸ್ಕೀಮ್

12) ಸಾಮಾನ್ಯರಿಗೆ ಸ್ಪಂದನೆ: ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಮನೆಗೆಲಸದವರ ಕಲ್ಯಾಣ ಮಂಡಳಿ ಸ್ಥಾಪನೆ. 10 ಲಕ್ಷ ರೂ ಜೀವ ವಿಮೆ, 5 ಲಕ್ಷ ರೂ ಅಪಘಾತ ವಿಮೆ. ಅವರ ಮಕ್ಕಳಿಗೆ ಸ್ಕಾಲರ್‌ಶಿಪ್‌, ಮನೆಗೆಲಸದವರಿಗೆ ವೇತನ ಸಹಿತ ಪ್ರಸವ ರಜೆ 6 ತಿಂಗಳು.

13) ಸ್ವನಿಧಿ ಯೋಜನೆ - ದೆಹಲಿಯಲ್ಲಿ ಸ್ವನಿಧಿ ಯೋಜನೆ ಫಲಾನುಭವಿಗಳ ಸಂಖ್ಯೆ ದುಪ್ಪಟ್ಟುಗೊಳಿಸುವುದು

14) ಪಿಎಂ ಕಿಸಾನ್ ಯೋಜನೆ - ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜ ನೆಗೆ ಶೇಕಡ 100 ನೋಂದಣಿ ಖಾತರಿ ಮಾಡುವುದು

15) ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆ - ಇದುವರೆಗಿನ ದುರಾಡಳಿತದ ವಿರುದ್ಧ ಕ್ರಮ, ಆಡಳಿತ ವ್ಯವಸ್ಥೆ ಸರಿಪಡಿಸುವುದು

16) ಹಾಲಿ ಯೋಜನೆ ಮುಂದುವರಿಕೆ - ಎಎಪಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಪರಿಷ್ಕರಿಸಿ, ಭ್ರಷ್ಟಾಚಾರ ಮುಕ್ತವಾಗಿ ಮುಂದುವರಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.

ಬಿಜೆಪಿಯ ವಿಕಸಿತ ದೆಹಲಿ ಸಂಕಲ್ಪ ಪತ್ರ- 2025ದ ಪಿಡಿಎಫ್ ಪ್ರತಿ ಇಲ್ಲಿದೆ

https://www.bjp.org/files/election-manifesto-documents/Delhi-Manifesto_25-01-2025_English_0.pdf

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.