ಕನ್ನಡ ಸುದ್ದಿ  /  Nation And-world  /  Bjp Workers Attacked: Two Bjp Workers Attacked In Palakkad Kerala Police Register Case

BJP workers attacked:‌ ಕೇರಳದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ತಾಯಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ದುಷ್ಕರ್ಮಿಗಳು

BJP workers attacked: ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿ ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿರುವ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪಾಲಕ್ಕಾಡ್ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಬಿಜೆಪಿ
ಬಿಜೆಪಿ

ಪಾಲಕ್ಕಾಡ್:‌ ಕೇರಳದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದುಷ್ಕರ್ಮಿಗಳು ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಇಬ್ಬರು ಕಾರ್ಯಕರ್ತರು ಮತ್ತು ಒಬ್ಬರು ಮಹಿಳೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಈ ದಾಳಿ ನಡೆದಿತ್ತು. ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರನ್ನು ವಿಷ್ಣು ಮತ್ತು ದಿನೇಶ್‌ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಹಲ್ಲೆ ನಡೆಸುವ ವೇಳೆ ವಿಷ್ಣುವಿನ ತಾಯಿ ಸ್ಥಳದಲ್ಲಿದ್ದು, ದಾಳಿ ತಡೆಯಲು ಮುಂದಾಗಿದ್ದರು. ಆಗ ಅವರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೂವರನ್ನು ಕೂಡ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಡೆದಿದೆ. ಆಲತ್ತೂರ್‌ ಪೊಲೀಸರು ಕೇಸ್‌ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ. ಘಟನೆ ಕುರಿತ ಇನ್ನಷ್ಟು ವಿವರಗಳು ಬಹಿರಂಗವಾಗಬೇಕಷ್ಟೆ ಎಂದು ವರದಿ ತಿಳಿಸಿದೆ.

ಗಮನಿಸಬಹುದಾದ ಸುದ್ದಿಗಳು

ಮಹಿಳೆಯರಿಗೂ ಆರ್‌ಎಸ್‌ಎಸ್‌ ಶಾಖೆಗಳಲ್ಲಿ ಭಾಗವಹಿಸಲು ಅವಕಾಶ?

ಹರಿಯಾಣದ ಪಾಣಿಪತ್‌ನ ಸಮಾಲ್ಕದಲ್ಲಿ ಮೂರು ದಿನಗಳಿಂದ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆ ಮಂಗಳವಾರ ಸಂಪನ್ನವಾಗಿದೆ. 2023-24ನೇ ಸಾಲಿನ ಸಂಘದ ವಾರ್ಷಿಕ ಕಾರ್ಯದ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಹರಿಯಾಣದ ಪಾಣಿಪತ್‌ನ ಸಮಾಲ್ಕದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇಂದು ಸಮಾಪ್ತಿಗೊಳ್ಳಲಿದೆ. 2023-24ನೇ ಸಾಲಿನ ಸಂಘದ ವಾರ್ಷಿಕ ಕಾರ್ಯದ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಐಟಿ ಕಾಯ್ದೆ 2000ದ ಸ್ಥಾನಕ್ಕೆ ಡಿಜಿಟಲ್‌ ಇಂಡಿಯಾ ಕಾಯ್ದೆ; ಕಾನೂನು ರಚನೆಗೆ ಮೊದಲ ಸಾರ್ವಜನಿಕ ಸಮಾಲೋಚನೆ ಬೆಂಗಳೂರಲ್ಲಿ

ಇಂಟರ್‌ನೆಟ್‌ ಯುಗ ಆರಂಭದಲ್ಲಿ ರಚಿಸಲಾದ ಐಟಿ ಕಾಯ್ದೆ 2000 ಹಳೆಯದಾಗಿದ್ದು, ಅದರ ಜಾಗದಲ್ಲಿ ಡಿಜಿಟಲ್‌ ಇಂಡಿಯಾ ಕಾಯ್ದೆಯನ್ನು ಜಾರಿಗೊಳಿಸುವ ಪ್ರಯತ್ನದಲ್ಲಿದೆ ಕೇಂದ್ರ ಸರ್ಕಾರ. ಇದೇ ಮೊದಲ ಬಾರಿಗೆ ಕಾನೂನು ರಚಿಸುವಲ್ಲಿ ಸಾರ್ವಜನಿಕ ಸಮಾಲೋಚನೆಯನ್ನು ಸರ್ಕಾರ ಆರಂಭಿಸಿದೆ.

ಭಾರತದ ಇತಿಹಾಸದಲ್ಲಿ ಮೊದಲ ಸಲ ಹೊಸ ಕಾನೂನಿಗೆ ಸಾರ್ವಜನಿಕ ಸಮಾಲೋಚನೆ ನಡೆದಿದೆ. ಕಾಯ್ದೆಯ ಗುರಿ, ವಿನ್ಯಾಸ ತತ್ತ್ವಗಳ ಸಂವಾದದ ಜತೆಗೆ ಈ ಸಮಾಲೋಚನೆ ಶುರುವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕಾನೂನುಗಳ ವಿನ್ಯಾಸ, ಜಾರಿಯಲ್ಲಿ ನಾಗರಿಕರ ಸಂಪೂರ್ಣ ಒಳಗೊಳ್ಳುವಿಕೆ ಬಯಸುತ್ತಾರೆ ಎಂದು ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಆರೋಗ್ಯ ಪೂರಕ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆ ತಪಾಸಣೆಗೆ ವಿಶೇಷ ಅಭಿಯಾನಕ್ಕೆ ಎಫ್‌ಎಸ್‌ಎಸ್‌ಎಐ ಸೂಚನೆ

ಎಲ್ಲ ಆಹಾರ ಆಯುಕ್ತರು ತಾವು ತೆಗೆದುಕೊಂಡ ಕ್ರಮಗಳ ಕುರಿತ ವರದಿಗಳನ್ನು ಮಾರ್ಚ್ ಅಂತ್ಯದೊಳಗೆ ಅಂದರೆ ಇದೇ ತಿಂಗಳ ಒಳಗೆ ಸಲ್ಲಿಸುವಂತೆ ಭಾರತೀಯ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಸೂಚಿಸಿದೆ. ಆರೋಗ್ಯ ಪೂರಕ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಅದರಲ್ಲಿನ ನ್ಯೂಟ್ರಾಸ್ಯುಟಿಕಲ್ಸ್‌ ಆರೋಗ್ಯ ಪೂರಕ ಅಂಶಗಳ ತಪಾಸಣೆ ನಡೆಸಲು ಎಫ್‌ಎಸ್‌ಎಸ್‌ಎಐ ನಿರ್ದೇಶನ ನೀಡಿದೆ. ಭಾರತೀಯ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈ ಕುರಿತು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಆಯುಕ್ತರಿಗೆ ಸುತ್ತೋಲೆ ಕಳುಹಿಸಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point