ಕನ್ನಡ ಸುದ್ದಿ  /  Nation And-world  /  Border Row: Pawar Gives 24 Hours To Bommai; Maharashtra Stops Bus Services To Karnataka

Border row: ಬೊಮ್ಮಾಯಿಗೆ 24 ಗಂಟೆಯ ಗಡು ನೀಡಿದ ಶರದ್‌ ಪವಾರ್‌, ಕರ್ನಾಟಕಕ್ಕೆ ಬಸ್‌ ಸೇವೆ ನಿಲ್ಲಿಸಿದ ಮಹಾರಾಷ್ಟ್ರ

Border row: ಶರದ್‌ ಪವಾರ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ "ಕರ್ನಾಟಕದಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಆಕ್ರಮಣ ನಿಲ್ಲಿಸಲು 24 ಗಂಟೆಗಳ ಗಡು" ನೀಡಿದ್ದಾರೆ.

Border row: ಬೊಮ್ಮಾಯಿಗೆ 24 ಗಂಟೆಯ ಗಡು ನೀಡಿದ ಶರದ್‌ ಪವಾರ್‌
Border row: ಬೊಮ್ಮಾಯಿಗೆ 24 ಗಂಟೆಯ ಗಡು ನೀಡಿದ ಶರದ್‌ ಪವಾರ್‌

ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ, ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಶರದ್‌ ಪವಾರ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ "ಕರ್ನಾಟಕದಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಆಕ್ರಮಣ ನಿಲ್ಲಿಸಲು 24 ಗಂಟೆಗಳ ಗಡು" ನೀಡಿದ್ದಾರೆ. ಎಲ್ಲಾದರೂ, ಈ ರೀತಿ ಮಾಡಲು ಸಾಧ್ಯವಾಗದೆ ಹೋದರೆ "ನಾವು ತಾಳ್ಮೆಯಿಂದ ಇರಲು ಸಾಧ್ಯವಿಲ್ಲ" ಎಂದು ಎಚ್ಚರಿಸಿದ್ದಾರೆ.

ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಮಹಾರಾಷ್ಟ್ರ ನೋಂದಣಿ ಹೊಂದಿದ್ದ ವಾಹನಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಲಾರಿಗಳ ಗಾಜು ಪುಡಿಪುಡಿಯಾಗಿದೆ. ಅಲ್ಲದೆ ಮಹಾರಾಷ್ಟ್ರ ನೋಂದಣಿಯ ಹಲವು ವಾಹನಗಳನ್ನು ತಡೆದು ನಂಬರ್ ಪ್ಲೇಟ್ ಮೇಲೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಮ್ಮ ತಾಳ್ಮೆಗೂ ಮಿತಿ ಇದೆ. ಎಲ್ಲಾದರೂ ಮಹಾರಾಷ್ಟ್ರದ ವಾಹನಗಳ ಮೇಲಿನ ದಾಳಿಯನ್ನು ನಿಲ್ಲಿಸಲು ನಿಮ್ಮಿಂದ ಸಾಧ್ಯವಾಗದೆ ಹೋದರೆ ನಮ್ಮಿಂದ ತಾಳ್ಮೆಯಿಂದ ಇರಲು ಸಾಧ್ಯವಿಲ್ಲʼʼ ಎಂದು ಶರದ್‌ ಪವಾರ್‌ ಎಚ್ಚರಿಕೆ ನೀಡಿದ್ದಾರೆ.

ಇದೇ ಸಮಯದಲ್ಲಿ ಬೊಮ್ಮಾಯಿ ಅವರು ಮಹಾರಾಷ್ಟ್ರ ವಿರೋಧಿ ಹೋರಾಟಕ್ಕೆ ಪ್ರೊತ್ಸಾಹ ನೀಡುತ್ತಿದ್ದಾರೆ ಎಂದು ಪವಾರ್‌ ಆಪಾದಿಸಿದ್ದಾರೆ.

"ಕರ್ನಾಟಕದ ಮುಖ್ಯಮಂತ್ರಿಯು ಮಹಾರಾಷ್ಟ್ರ ವಿರೋಧಿ ಹೋರಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕೇಂದ್ರ ಸರಕಾರವು ಇದನ್ನು ನಿಲ್ಲಿಸಲು ಮಧ್ಯಪ್ರವೇಶಿಸಬೇಕು. ಇದು ದೇಶದ ಏಕತೆಗೆ ಅಪಾಯಕಾರಿ. ಮರಾಠಿ ಮಾತನಾಡುವ ಜನರು ಭಯದಿಂದ ನನಗೆ ಕರೆ ಮಾಡುತ್ತಿದ್ದಾರೆʼʼ ಎಂದು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥರಾದ ಶರದ್‌ ಪವಾರ್‌ ಹೇಳಿದ್ದಾರೆ.

ಮಹಾರಾಷ್ಟ್ರದ ಗಡಿ ಕ್ಯಾತೆ ಈಗ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿದೆ. ಮಹಾರಾಷ್ಟ್ರ ನಾಯಕರು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಿರುವ ಬೃಹತ್ ಬಹಿರಂಗ ಸಭೆಯನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಕರವೇ ನಾಯಕರ ಬೆಳಗಾವಿ ನಗರ ಪ್ರವೇಶಕ್ಕೂ ತಡೆಯೊಡ್ಡಲಾಗಿದೆ.

ಬಹಿರಂಗ ಸಭೆ ನಡೆಸಲು ಕರವೇ ಕಾರ್ಯಕರ್ತರು ಬೆಳಗಾವಿಯತ್ತ ಮುನ್ನುಗುತ್ತಿದ್ದು, ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್‌ಗೇಟ್‌ ಬಳಿ ಅವರನ್ನು ಪೊಲೀಸರು ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಲ್ ಗೇಟ್ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಮಹಾರಾಷ್ಟ್ರವು 1960 ರಲ್ಲಿ ಪ್ರಾರಂಭವಾದಾಗಿನಿಂದ, ಬೆಳಗಾವಿ ಜಿಲ್ಲೆ ಮತ್ತು ದಕ್ಷಿಣ ರಾಜ್ಯದ ನಿಯಂತ್ರಣದಲ್ಲಿರುವ ಇತರ 80 ಮರಾಠಿ ಮಾತನಾಡುವ ಹಳ್ಳಿಗಳ ಸ್ಥಾನಮಾನದ ಕುರಿತು ಕರ್ನಾಟಕದೊಂದಿಗೆ ವಿವಾದದಲ್ಲಿ ಸಿಲುಕಿಕೊಂಡಿದೆ. ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಮತ್ತೆ ಗಡಿ ವಿವಾದ ಭುಗಿಲೆದ್ದಿದೆ.

IPL_Entry_Point