ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಟೀಕಿಸಿದ ಮಾಲ್ಡೀವ್ಸ್ 'ಬೈಕಾಟ್ ಮಾಲ್ಡೀವ್ಸ್' ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್; ಏನಿದು ಪ್ರಕರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಟೀಕಿಸಿದ ಮಾಲ್ಡೀವ್ಸ್ 'ಬೈಕಾಟ್ ಮಾಲ್ಡೀವ್ಸ್' ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್; ಏನಿದು ಪ್ರಕರಣ

ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಟೀಕಿಸಿದ ಮಾಲ್ಡೀವ್ಸ್ 'ಬೈಕಾಟ್ ಮಾಲ್ಡೀವ್ಸ್' ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್; ಏನಿದು ಪ್ರಕರಣ

ಪ್ರಧಾನಿ ಮೋದಿ ಲಕ್ಷ್ಮದ್ವೀಪಕ್ಕೆ ಭೇಟಿಯನ್ನು ಟೀಕಿಸಿದ್ದ ಮಾಲ್ಡೀವ್ಸ್ ಸಂಸದರು, ಸಚಿವರಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ. ಬೈಕಾಟ್ ಮಾಲ್ಡೀವ್ಸ್ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.

ಇತ್ತೀಚೆಗೆ ಲಕ್ಷ್ಮದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ
ಇತ್ತೀಚೆಗೆ ಲಕ್ಷ್ಮದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಸುಂದರ ಕಡಲ ತೀರದ ಮರಳಿನ ಮೇಲೆ ವಾಕಿಂಗ್, ಸ್ನಾರ್ಕೆಲಿಂಗ್ ಹಾಗೂ ಸಮುದ್ರ ತಟದಲ್ಲಿ ಕುರ್ಚಿ ಮೇಲೆ ಕುಳಿತು ವಿಶ್ರಾಂತಿ ಪಡೆದಿದ್ದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ಸಾಹಸ ಪ್ರಿಯರಿಗೆ ಇದು ಪ್ರಶಸ್ತ ಸ್ಥಳ ಎಂದು ಬರೆದುಕೊಂಡಿದ್ದರು. ಈ ಫೋಟೊಗಳನ್ನು ನೋಡಿದ ಅದೆಷ್ಟೋ ಭಾರತೀಯರಿಗೆ ಲಕ್ಷ್ಮದ್ವೀಪಕ್ಕೂ ಒಮ್ಮೆ ಭೇಟಿ ನೀಡಬೇಕೆಂದು ಅನಿಸಿದೆ.

ನಮೋ ಭೇಟಿ ಬಳಿಕ ಲಕ್ಷ್ಮದ್ವೀಪ ಭಾರಿ ಸುದ್ದಿಯಲ್ಲಿದ್ದು, ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ. ಇದರ ಬೆನ್ನಲ್ಲೇ 'ಬಾಯ್ಕಾಟ್ ಮಾಲ್ಡೀವ್ಸ್' ಹ್ಯಾಶ್‌ಟ್ಯಾಗ್ ಜಾಲತಾಣ ಎಕ್ಸ್‌ನಲ್ಲಿ ( ಈ ಹಿಂದೆ ಟ್ವಿಟರ್) ಸಖತ್ ಟ್ರೆಂಡ್ ಆಗಿದೆ. ಮಾಲ್ಡೀವ್ಸ್ ಸಂಸದರು, ಸಚಿವರ ಟ್ವಿಟರ್ ಪೋಸ್ಟ್‌ಗಳಿಗೆ ತಿರುಗೇಟಿ ನೀಡಿದ್ದು, ಬೈಕಾಟ್ ಮಾಲ್ಡೀವ್ಸ್ (#BycottMaldives) ಎಂಬ ಹ್ಯಾಸ್‌ಟ್ಯಾಗ್ ಇವತ್ತು (ಜನವರಿಗೆ 7, ಭಾನುವಾರ) ಟ್ರೆಂಡಿಂಗ್‌ ಆಗಿದೆ.

ಲಕ್ಷ್ಮದ್ವೀಪ ಭಾರತೀಯರನ್ನು ಆಕರ್ಷಿಸುತ್ತಿರುವುದು ಮಾಲ್ಡೀವ್ಸ್ ಸಂಸದರೊಬ್ಬರಿಗೆ ಹೊಟ್ಟೆಯಲ್ಲಿ ಬೆಂಕಿ ಹಾಕಿಕೊಂಡಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯ ಪೋಸ್ಟ್‌ ಬಗ್ಗೆ ಪ್ರತಿಕ್ರಿಯಿಸಿರುವ ಎಂಪಿ ಜಾಹೀದ್ ರಮೀಜ್, ಮಾಲ್ಡೀವ್ಸ್‌ನೊಂದಿಗೆ ಸ್ಪರ್ಧಿಸುವ ಕಲ್ಪನೆ ಭ್ರಮೆಯಾಗಿದೆ ಎಂದು ಹೇಳುವ ಮೂಲಕ ವಿವಾದಾತ್ಮಕ ಕಾಮೆಂಟ್ ಮಾಡಿದ್ದಾರೆ. ಇದಷ್ಟೇ ಅಲ್ಲ, ಕೋಣೆಗಳಲ್ಲಿ ಶಾಶ್ವತ ವಾಸನೆಯುವ ಭಾರತದ ದೊಡ್ಡ ಅವನತಿಯಾಗಿದೆ ಎಂದಿದ್ದಾರೆ.

ಸಂಸದನಷ್ಟೇ ಅಲ್ಲ, ಮಾಲ್ಡೀವ್ಸ್ ಸರ್ಕಾರದ ಉಪ ಸಚಿವೆ ಮರಿಯಮ್ ಶಿಯುನಾ ಅವರು ಪ್ರಧಾನಿ ಮೋದಿ ಅವರ ಲಕ್ಷ್ಮದ್ವೀಪ್ ಫೋಟೊಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದಾರೆ. ಮಾಲ್ಡೀವ್ಸ್ ಜನಪ್ರತಿನಿಧಿಗಳಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ. ಅಂಜ್ನಾ ಎಂಬುವರ ಈ ಬಗ್ಗೆ ಟ್ವೀಟ್ ಮಾಡಿದ್ದು, ಮಾಲ್ಡೀವ್ಸ್ ಸರ್ಕಾರದ ಸಚಿವೆ ಮರಿಯಮ್ ಶಿಯುನಾ ಅವರು ಪ್ರಧಾನಿ ಮೋದಿ ಅವರ ವಿರುದ್ಧ ಅಮಾನಕರ ಕಾಮೆಂಟ್ ಮಾಡಿದ್ದಾರೆ. ಈ ಪುಟ್ಟ ದೇಶಕ್ಕೆ ಯಾವಾಗಲೂ ಸಹಾಯ ಮಾಡಿದ ರಾಷ್ಟ್ರದ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪ್ರಧಾನಿಯನ್ನು ಅಪಹಾಸ್ಯ ಮಾಡುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಾಲ್ಡೀವ್ಸ್‌ಗೆ ಹೋಗದೆ ಲಕ್ಷದ್ವೀಪದಂತಹ ಸ್ಥಳಗಳಿಗೆ ಭೇಟಿ ನೀಡಿ ಎಂದು ಕರೆ ನೀಡಿದ್ದಾರೆ.

ಲಕ್ಷ್ಮದ್ವೀಪ ಮಾಲ್ಡೀವ್ಸ್‌ಗಿಂತ ತುಂಬಾ ಸುಂದರವಾದ ಬೀಚ್‌ಗಳನ್ನು ಹೊಂದಿದೆ. ಹೀಗಾಗಿ ನಾನು ವಿದೇಶಕ್ಕೆ ಹೋಗುವ ಅಗತ್ಯವಿಲ್ಲ. ನಾನು ಕುಟುಂಬ ಸಮೇತ ಹೋಗಲು ಪ್ಲಾನ್ ಮಾಡಿಕೊಂಡಿದ್ದ ಮಾಲ್ಡೀಲ್ಸ್ ಪ್ರವಾಸವನ್ನು ರದ್ದು ಮಾಡಿದ್ದೇನೆ ಎಂದು ಅಮಿತ್ಜಿ ಎಂಬ ಸೆರಿನ ಎಕ್ಸ್‌ ಖಾತೆ ಬಳಕೆದಾರರು ಬರೆದುಕೊಂಡಿದ್ದಾರೆ.

ನಾವು ಕೌಟುಂಬಿಕ ಕಾರಣಗಳಿಗಾಗಿ ಯುಕೆಯಿಂದ ಭಾರತಕ್ಕೆ ಬರುತ್ತಿದ್ದೇವೆ. ಮಾಲ್ಡೀವ್ಸ್‌ಗೆ ಭೇಟಿ ನೀಡಲು ಪ್ಲಾನ್ ಮಾಡಿಕೊಂಡಿದ್ದೇವು. ಆದರೆ ಆ ತಾಣಕ್ಕೆ ಹೋಗುವುದಿಲ್ಲ. ಮಾಲ್ಡೀವ್ಸ್‌ನಲ್ಲಿ ಬುಕ್ ಮಾಡಿದ ಹೋಟೆಲ್ ಸಹ ಕ್ಯಾನ್ಸಲ್ ಮಾಡಿದ್ದೇವೆ ಎಂದು ಮತ್ತೊಬ್ಬ ನೆಟ್ಟಿಗರು ಮಾಹಿತಿ ಹಂಚಿಕೊಡಂದಿದ್ದಾರೆ.

ನನ್ನ ಹುಟ್ಟುಹಬ್ಬ ಫೆಬ್ರವರಿ 2 ರಂದು ಇದೆ. ಇದನ್ನು ನಾನು ಮಾಲ್ಡೀವ್ಸ್‌ನಲ್ಲಿ ಆಚರಿಸಲು ಪ್ಲಾನ್ ಮಾಡುತ್ತಿದ್ದೆ. ಟ್ರಾವೆಲ್ ಏಜೆಂಟ್ ಮೂಲಕ ಟ್ರಿಪ್ ಕೂಡ ಬಹುತೇಕ ಕನ್ಫರ್ಮ್ ಆಗಿತ್ತು. ಆದರೆ ಮಾಲ್ಡೀವ್ಸ್ ಸಚಿವರ ಟ್ವೀಟ್ ನೋಡಿದ ನಂತರ ನನ್ನ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದೇನೆ ಎಂದು ಡಾ ಫಾಲಕ್ ಜೋಶಿಪುರ ಎಂಬುವರು ಪ್ರತಿಕ್ರಿಯಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಬೈಕಾಟ್ ಮಾಲ್ಡೀವ್ಸ್‌ಗೆ ಸಾಥ್ ನೀಡಿದ್ದು, ನೀವು ಆಯ್ಕೆ ಮಾಡಿಕೊಳ್ಳುವಾಗ ಯೋಜಿಸಿ ಎಂದಿದ್ದಾರೆ. ಪ್ರಧಾನಿ ಮೋದಿ ಅವರ ಕುರಿತು ಮಾಲ್ಡೀವ್ಸ್ ಸಚಿವರ ಹುಚ್ಚುತನದ ಹೇಳಿಕೆ, ಕಾಮೆಂಟ್ಸ್ ಹಾಗೂ ಪೋಸ್ಟ್‌ಗಳಿಗೆ ಭಾರತೀಯರು ಸಿಡಿದೆದಿದ್ದಾರೆ.

ಭಾರತೀಯ ಸೇನೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಮಾಲ್ಡೀವ್ಸ್ ನೂತನ ಪ್ರಧಾನಿ ಅಬ್ದುಲ್ಲಾ ಮಹಜೂಮ್ ಮಜೀದ್ ಅವರು ಭಾರತವನ್ನು ಒತ್ತಾಯಿಸಿದ ಬಳಿಕ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಪರಿಸ್ಥಿತಿ ಬಿಗಡಾಯಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.